ಮೊದಲ ಏಷ್ಯಾಕಪ್ ಪಂದ್ಯಕ್ಕೆ ಪ್ಲೇಯಿಂಗ್-11 ಪ್ರಕಟಿಸಿದ ಪಾಕಿಸ್ತಾನ..! ತಂಡದಲ್ಲಿ ಯಾರಿಗೆಲ್ಲ ಸ್ಥಾನ?

|

Updated on: Aug 30, 2023 | 7:07 AM

Asia Cup 2023: ಆಗಸ್ಟ್ 30 ರ ಬುಧವಾರದಿಂದ ಅಂದರೆ ಇಂದಿನಿಂದ ಏಕದಿನ ಏಷ್ಯಾಕಪ್ ಆರಂಭವಾಗಲಿದೆ. ಇಂದಿನ ಉದ್ಘಾಟನಾ ಪಂಡ್ಯದಲ್ಲಿ ಆತಿಥೇಯ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಪಂದ್ಯ ಪಾಕಿಸ್ತಾನದ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಉದ್ಘಾಟನಾ ಪಂದ್ಯವನ್ನು ಗೆಲ್ಲುವುದರೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡುವ ತವಕದಲ್ಲಿರುವ ಬಾಬರ್ ಪಡೆ, ನೇಪಾಳ ವಿರುದ್ಧದ ಮೊದಲ ಪಂದ್ಯದಕ್ಕೆ ತನ್ನ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದೆ.

ಮೊದಲ ಏಷ್ಯಾಕಪ್ ಪಂದ್ಯಕ್ಕೆ ಪ್ಲೇಯಿಂಗ್-11 ಪ್ರಕಟಿಸಿದ ಪಾಕಿಸ್ತಾನ..! ತಂಡದಲ್ಲಿ ಯಾರಿಗೆಲ್ಲ ಸ್ಥಾನ?
ಪಾಕಿಸ್ತಾನ ತಂಡ
Follow us on

ಆಗಸ್ಟ್ 30 ರ ಬುಧವಾರದಿಂದ ಅಂದರೆ ಇಂದಿನಿಂದ ಏಕದಿನ ಏಷ್ಯಾಕಪ್ (Asia Cup 2023) ಆರಂಭವಾಗಲಿದೆ. ಇಂದಿನ ಉದ್ಘಾಟನಾ ಪಂಡ್ಯದಲ್ಲಿ ಆತಿಥೇಯ ಪಾಕಿಸ್ತಾನ ಹಾಗೂ ನೇಪಾಳ (Nepal vs Pakistan) ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಪಂದ್ಯ ಪಾಕಿಸ್ತಾನದ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಉದ್ಘಾಟನಾ ಪಂದ್ಯವನ್ನು ಗೆಲ್ಲುವುದರೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡುವ ತವಕದಲ್ಲಿರುವ ಬಾಬರ್ (Babar Azam) ಪಡೆ, ನೇಪಾಳ ವಿರುದ್ಧದ ಮೊದಲ ಪಂದ್ಯದಕ್ಕೆ ತನ್ನ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದೆ. ನೇಪಾಳ ಅಂತಹ ಬಲಿಷ್ಠ ತಂಡವಾಗಿಲ್ಲದ ಕಾರಣ ಈ ಪಂದ್ಯದಿಂದ ಪ್ರಮುಖ ಆಟಗಾರರು ವಿಶ್ರಾಂತಿ ಪಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಪಂದ್ಯಕ್ಕೆ ಪಾಕಿಸ್ತಾನವು (Pakistan Cricket team) ತನ್ನ ಎಲ್ಲಾ ಸ್ಟಾರ್ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿದೆ.

ಸಾಮಾನ್ಯವಾಗಿ ಪಾಕಿಸ್ತಾನ ತಂಡ ತನ್ನ ಪ್ಲೇಯಿಂಗ್-11 ಅನ್ನು ಒಂದು ದಿನ ಮೊದಲು ಪ್ರಕಟಿಸುವುದಿಲ್ಲ. ಆದರೆ ಈ ಬಾರಿ ಆ ಕೆಲಸಕ್ಕೆ ಪಾಕಿಸ್ತಾನ ಕೈಹಾಕಿದೆ. 2012ರ ನಂತರ ಪಾಕಿಸ್ತಾನ ಏಷ್ಯಾಕಪ್ ಗೆದ್ದಿಲ್ಲ. ಕಳೆದ ವರ್ಷವೂ ಈ ತಂಡ ಫೈನಲ್ ತಲುಪಿದ್ದರೂ ಗೆಲ್ಲಲು ಸಾಧ್ಯವಾಗದೆ ಶ್ರೀಲಂಕಾ ವಿರುದ್ಧ ಸೋತಿತ್ತು. ಹೀಗಾಗಿ ಈ ವರ್ಷ ಏಷ್ಯಾಕಪ್ ಮೇಲೆ ಕಣ್ಣಿಟ್ಟಿರುವ ಪಾಕ್, ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸುತ್ತಿದೆ.

ಒಡಿಐ ಏಷ್ಯಾಕಪ್​ನಲ್ಲಿ ಹೆಚ್ಚು ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಬಾರಿಸಿದ ಬ್ಯಾಟರ್​ಗಳಿವರು

ತಂಡದಲ್ಲಿ ಮೂವರು ವೇಗದ ಬೌಲರ್‌ಗಳು

ಪಾಕಿಸ್ತಾನ ತಂಡ ಪ್ರಸ್ತುತ ಕ್ರಿಕೆಟ್​ನಲ್ಲಿ ಅತ್ಯುತ್ತಮ ವೇಗದ ಬೌಲಿಂಗ್ ದಾಳಿಯನ್ನು ಹೊಂದಿದೆ. ಈ ತಂಡದ ವೇಗದ ವಿಭಾಗದಲ್ಲಿ ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ ಅವರಂತಹ ಮಾರಕ ವೇಗಿಗಳಿದ್ದಾರೆ. ಈ ಮೂವರೂ ನೇಪಾಳ ವಿರುದ್ಧದ ಪ್ಲೇಯಿಂಗ್-11 ರ ಭಾಗವಾಗಿದ್ದಾರೆ. ಈ ಮೂವರನ್ನು ನೇಪಾಳದ ಬ್ಯಾಟ್ಸ್‌ಮನ್‌ಗಳು ಹೇಗೆ ಎದುರಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ನಸೀಮ್ ಮತ್ತು ಹ್ಯಾರಿಸ್ ತಮ್ಮ ಬಿರುಗಾಳಿಯ ಬೌಲಿಂಗ್‌ಗೆ ಪ್ರಸಿದ್ಧರಾಗಿದ್ದರೆ, ಎಡಗೈ ಬೌಲರ್ ಶಾಹೀನ್ ತಮ್ಮ ಸ್ವಿಂಗ್‌ಗೆ ಪ್ರಸಿದ್ಧರಾಗಿದ್ದಾರೆ. ಈ ಮೂವರ ಜೊತೆ ಮೊಹಮ್ಮದ್ ನವಾಜ್ ಮತ್ತು ಉಪನಾಯಕ ಶಾದಾಬ್ ಖಾನ್ ತಂಡದಲ್ಲಿ ಸ್ಥಾನ ಪಡೆದಿರುವ ಇಬ್ಬರು ಸ್ಪಿನ್ನರ್‌ಗಳಿದ್ದಾರೆ.

ಇದು ಬ್ಯಾಟಿಂಗ್ ಕ್ರಮಾಂಕ

ಮತ್ತೊಂದೆಡೆ ಪಾಕಿಸ್ತಾನದ ಬ್ಯಾಟಿಂಗ್ ಕ್ರಮಾಂಕ ನೋಡಿದರೆ ಎಲ್ಲರ ಕಣ್ಣು ಕ್ಯಾಪ್ಟನ್ ಬಾಬರ್ ಅಜಂ ಮೇಲೆ ನೆಟ್ಟಿದೆ. ಫಖರ್ ಜಮಾನ್ ಮತ್ತು ಇಮಾಮ್ ಉಲ್ ಹಕ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಬಾಬರ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು. ಅವರ ನಂತರ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಬರಲಿದ್ದಾರೆ. ಇಫ್ತಿಕರ್ ಅಹ್ಮದ್, ಸಲ್ಮಾನ್ ಅಲಿ ಅಘಾ ಮತ್ತು ಶಾದಾಬ್ ಮಧ್ಯಮ ಕ್ರಮಾಂಕ ಮತ್ತು ಕೆಳ ಕ್ರಮಾಂಕವನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ನೇಪಾಳ ವಿರುದ್ಧ ಪಾಕ್ ತಂಡ: ಬಾಬರ್ ಆಝಮ್ (ನಾಯಕ), ಶಾದಾಬ್ ಖಾನ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:05 am, Wed, 30 August 23