ಬಹುನಿರೀಕ್ಷಿತ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಶ್ರೀಲಂಕಾದ ಪಲ್ಲೆಕೆಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 266 ರನ್ಗಳಿಸಿ ಆಲೌಟ್ ಆಗಿತ್ತು. 267 ರನ್ಗಳ ಸುಲಭ ಗುರಿ ಪಡೆದ ಪಾಕಿಸ್ತಾನ್ ತಂಡದ ಇನಿಂಗ್ಸ್ ಆರಂಭಕ್ಕೂ ಮುನ್ನ ಧಾರಾಕಾರ ಮಳೆಯಾಗಿದ್ದು, ಇದರಿಂದ ಪಂದ್ಯವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಅಲ್ಲದೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕಗಳನ್ನು ಹಂಚಲಾಗಿದೆ.
ಏಕದಿನ ಕ್ರಿಕೆಟ್ನಲ್ಲಿ ಭಾರತ-ಪಾಕಿಸ್ತಾನ್ ಇದುವರೆಗೆ 133 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಭಾರತ ತಂಡವು ಕೇವಲ 55 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಮತ್ತೊಂದೆಡೆ ಪಾಕಿಸ್ತಾನ್ ತಂಡವು 73 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಇದಾಗ್ಯೂ ಕೊನೆಯ 5 ಏಕದಿನ ಪಂದ್ಯಗಳಲ್ಲಿ ಭಾರತ ತಂಡವು 4 ಬಾರಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.
ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಸಲ್ಮಾನ್ ಅಲಿ ಅಘಾ, ಸೌದ್ ಶಕೀಲ್, ಶಾಹೀನ್ ಅಫ್ರಿದಿ ಮತ್ತು ಉಸಾಮಾ ಮಿರ್, ತಯ್ಯಬ್ ತಾಹಿರ್ (ಮೀಸಲು ಆಟಗಾರ).
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).
ಮಳೆಯ ಕಾರಣ ಭಾರತ – ಪಾಕಿಸ್ತಾನ್ ನಡುವಣ ಪಂದ್ಯವನ್ನು ರದ್ದುಪಡಿಸಲಾಗಿದೆ. ಮ್ಯಾಚ್ ಕ್ಯಾನ್ಸಲ್ ಆಗಿರುವ ಕಾರಣ ಉಭಯ ತಂಡಗಳು ತಲಾ ಒಂದೊಂದು ಅಂಕ ಪಡೆಯಲಿದೆ. ಅತ್ತ ಪಾಕಿಸ್ತಾನ್ ತಂಡವು ಒಟ್ಟು 3 ಅಂಕಗಳೊಂದಿಗೆ ಸೂಪರ್-4 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.
ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ಕಟ್ ಆಫ್ ಟೈಮ್ 10.27. ಇದರೊಳಗೆ ಪಂದ್ಯ ಆರಂಭಿಸಲು ಸಾಧ್ಯವಾದರೆ 20 ಓವರ್ಗಳ ಮ್ಯಾಚ್ ನಡೆಯಲಿದೆ.
20 ಓವರ್ಗಳ ಪಂದ್ಯ ನಡೆದರೆ ಪಾಕಿಸ್ತಾನ್ ತಂಡಕ್ಕೆ 155 ರನ್ಗಳ ಟಾರ್ಗೆಟ್ ಇರಲಿದೆ. ಹೀಗಾಗಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಮಳೆಯ ಕಾರಣ ಇನ್ನೂ ಕೂಡ ಪಂದ್ಯ ಆರಂಭವಾಗಿಲ್ಲ. ಕ್ಯಾಂಡಿಯಲ್ಲಿ ಸದ್ಯ ತುಂತುರು ಮಳೆಯಾಗುತ್ತಿದ್ದು, ಹೀಗಾಗಿ ಪಂದ್ಯ ಆರಂಭವಾದರೆ ಓವರ್ ಕಡಿತವಾಗುವುದು ಖಚಿತ. ಒಂದು ವೇಳೆ ಓವರ್ಗಳ ಕಡಿತವಾದರೆ ಪಾಕ್ ತಂಡ ಮುಂದಿರುವ ಟಾರ್ಗೆಟ್ ಎಷ್ಟಿರಲಿದೆ?
ಮಳೆಯ ಕಾರಣ ಪಾಕಿಸ್ತಾನ್ ತಂಡದ ಇನಿಂಗ್ಸ್ ಇನ್ನೂ ಕೂಡ ಆರಂಭವಾಗಿಲ್ಲ. ಇದೀಗ ಮಳೆ ಕಡಿಮೆಯಾಗಿದ್ದು, ಇನ್ನಷ್ಟೇ ಅಂಪೈರ್ ಮೈದಾವನ್ನು ಪರಿಶೀಲಿಸಲಿದ್ದಾರೆ. ಒಂದು ವೇಳೆ ಪಂದ್ಯ ನಡೆಸಲು ಯೋಗ್ಯವಾಗಿದ್ದರೆ ಓವರ್ಗಳ ಕಡಿತದೊಂದಿಗೆ ಮ್ಯಾಚ್ ನಡೆಯಲಿದೆ. ಅಂದರೆ ಓವರ್ಗಳ ಕಡಿತದೊಂದಿಗೆ ಪಾಕಿಸ್ತಾನ್ ತಂಡದ ಗುರಿ ಕೂಡ ಬದಲಾಗಲಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 48.5 ಓವರ್ಗಳಲ್ಲಿ 266 ರನ್ಗಳಿಸಿ ಆಲೌಟ್ ಆಗಿದೆ. ಇದೀಗ ದ್ವಿತೀಯ ಇನಿಂಗ್ಸ್ನಲ್ಲಿ ಪಾಕಿಸ್ತಾನ್ ತಂಡವು 267 ರನ್ಗಳಿಸಿದರೆ ಜಯ ಸಾಧಿಸಬಹುದು.
All 1️⃣0️⃣ wickets by the pace trio! 🔥
Superb bowling in the death overs to dismiss India for 266 in 48.5 overs 🎯#PAKvIND | #AsiaCup2023 pic.twitter.com/RuGPkSPmEH
— Pakistan Cricket (@TheRealPCB) September 2, 2023
ನಸೀಮ್ ಶಾ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಜಸ್ಪ್ರೀತ್ ಬುಮ್ರಾ. ಇದರೊಂದಿಗೆ ಟೀಮ್ ಇಂಡಿಯಾ ಆಲೌಟ್. ಪಾಕಿಸ್ತಾನ್ ತಂಡಕ್ಕೆ 267 ರನ್ಗಳ ಸುಲಭ ಗುರಿ ನೀಡಿದ ಟೀಮ್ ಇಂಡಿಯಾ. ಭಾರತದ ಪರ ಇಶಾನ್ ಕಿಶನ್ (82) ಹಾಗೂ ಹಾರ್ದಿಕ್ ಪಾಂಡ್ಯ (87) ಗರಿಷ್ಠ ಸ್ಕೋರರ್.
ನಸೀಮ್ ಶಾ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಕುಲ್ದೀಪ್ ಯಾದವ್ (4). ಪಾಕಿಸ್ತಾನ್ ತಂಡಕ್ಕೆ 9ನೇ ಯಶಸ್ಸು. ಕೊನೆಯ 10 ಎಸೆತಗಳು ಮಾತ್ರ ಬಾಕಿ. ಕ್ರೀಸ್ನಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಬ್ಯಾಟಿಂಗ್.
10 ಓವರ್ಗಳಲ್ಲಿ 35 ರನ್ ನೀಡಿ 4 ವಿಕೆಟ್ ಕಬಳಿಸಿದ ಶಾಹೀನ್ ಅಫ್ರಿದಿ. ಕೊನೆಯ ಎರಡು ಓವರ್ಗಳು ಬಾಕಿ. 48 ಓವರ್ಗಳ ಮುಕ್ತಾಯದ ವೇಳೆಗೆ 261 ರನ್ ಗಳಿಸಿದ ಟೀಮ್ ಇಂಡಿಯಾ. ಕ್ರೀಸ್ನಲ್ಲಿ ಕುಲ್ದೀಪ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್.
ಹ್ಯಾರಿಸ್ ರೌಫ್ ಎಸೆತದಲ್ಲಿ ಡೀಪ್ ಕವರ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಜಸ್ಪ್ರೀತ್ ಬುಮ್ರಾ. ಕ್ರೀಸ್ನಲ್ಲಿ ಕುಲ್ದೀಪ್ ಯಾದವ್ ಹಾಗೂ ಬುಮ್ರಾ ಬ್ಯಾಟಿಂಗ್. ಸ್ಪರ್ಧಾತ್ಮಕ ಮೊತ್ತದತ್ತ ಟೀಮ್ ಇಂಡಿಯಾ.
ಶಾಹೀನ್ ಶಾ ಅಫ್ರಿದಿ ಎಸೆತದಲ್ಲಿ ಲಾಂಗ್ ಆನ್ನತ್ತ ಫೋರ್ ಬಾರಿಸಿದ ಜಸ್ಪ್ರೀತ್ ಬುಮ್ರಾ. ಈ ಫೋರ್ನೊಂದಿಗೆ 250 ರನ್ಗಳ ಗಡಿದಾಟಿದ ಟೀಮ್ ಇಂಡಿಯಾ. ಕ್ರೀಸ್ನಲ್ಲಿ ಕುಲ್ದೀಪ್ ಯಾದವ್ ಹಾಗೂ ಬುಮ್ರಾ ಬ್ಯಾಟಿಂಗ್.
ನಸೀಮ್ ಶಾ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದ ಶಾರ್ದೂಲ್ ಠಾಕೂರ್ (3). 7 ಎಸೆತಗಳಲ್ಲಿ ಟೀಮ್ ಇಂಡಿಯಾದ 3 ವಿಕೆಟ್ ಪತನ. 44ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಜಡೇಜಾರನ್ನು ಔಟ್ ಮಾಡಿದ್ದ ಶಾಹೀನ್ ಅಫ್ರಿದಿ. ಇದೀಗ ಶಾರ್ದೂಲ್ ಕೂಡ ಔಟ್.
ಕ್ರೀಸ್ನಲ್ಲಿ ಕುಲ್ದೀಪ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್.
ಶಾಹೀನ್ ಅಫ್ರಿದಿ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಔಟ್. ಕೊನೆಯ ಎಸೆತದಲ್ಲಿ ರವೀಂದ್ರ ಜಡೇಜಾ ಔಟ್. ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ ರವೀಂದ್ರ ಜಡೇಜಾ (11). ಒಂದೇ ಓವರ್ನಲ್ಲಿ 2 ವಿಕೆಟ್ ಕಬಳಿಸಿದ ಶಾಹೀನ್ ಅಫ್ರಿದಿ.
ಶಾಹೀನ್ ಅಫ್ರಿದಿ ಸ್ಲೋ ಎಸೆತವನ್ನು ಗುರುತಿಸುವಲ್ಲಿ ಎಡವಿದ ಹಾರ್ದಿಕ್ ಪಾಂಡ್ಯ. ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್. 90 ಎಸೆತಗಳಲ್ಲಿ 87 ರನ್ ಬಾರಿಸಿ ನಿರ್ಗಮಿಸಿದ ಹಾರ್ದಿಕ್ ಪಾಂಡ್ಯ. ಕ್ರೀಸ್ನಲ್ಲಿ ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ಬ್ಯಾಟಿಂಗ್.
ಹ್ಯಾರಿಸ್ ರೌಫ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಹಾರ್ದಿಕ್ ಪಾಂಡ್ಯ. ಮೊದಲ ಫೋರ್ ಸ್ಕ್ವೇರ್ ಲೆಗ್ನತ್ತ…2ನೇ ಫೋರ್ ಥರ್ಡ್ಮ್ಯಾನ್ ಬೌಂಡರಿ ಫೀಲ್ಡರ್ನತ್ತ. 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಮತ್ತೊಂದು ಫೋರ್.ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಹಾರ್ದಿಕ್ ಪಾಂಡ್ಯ
ಹ್ಯಾರಿಸ್ ರೌಫ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…30 ಯಾರ್ಡ್ ಸರ್ಕಲ್ನಲ್ಲಿ ಚಿಮ್ಮಿದ ಚೆಂಡು…ಉತ್ತಮ ಕ್ಯಾಚ್ ಹಿಡಿದ ಬಾಬರ್ ಆಝಂ…ಇಶಾನ್ ಕಿಶನ್ ಔಟ್.
81 ಎಸೆತಗಳಲ್ಲಿ 82 ರನ್ ಬಾರಿಸಿ ನಿರ್ಗಮಿಸಿದ ಇಶಾನ್ ಕಿಶನ್. ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್.
37 ಓವರ್ಗಳಲ್ಲಿ ದ್ವಿಶತಕ ಪೂರೈಸಿದ ಟೀಮ್ ಇಂಡಿಯಾ. 5ನೇ ವಿಕೆಟ್ಗೆ ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ನಡುವೆ 136 ರನ್ಗಳ ಜೊತೆಯಾಟ. ಭಾರತ ತಂಡದ ಉತ್ತಮ ಬ್ಯಾಟಿಂಗ್. ಬೃಹತ್ ಮೊತ್ತದತ್ತ ಟೀಮ್ ಇಂಡಿಯಾ.
ಮೊಹಮ್ಮದ್ ನವಾಝ್ ಎಸೆತದಲ್ಲಿ ಲೆಗ್ ಸೈಡ್ನತ್ತ ರಾಕೆಟ್ ಶಾಟ್ ಬಾರಿಸಿದ ಇಶಾನ್ ಕಿಶನ್…ಫೋರ್. ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್.
ನವಾಝ್ ಎಸೆದ 3ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹಾರ್ದಿಕ್ ಪಾಂಡ್ಯ. ಕ್ರೀಸ್ನಲ್ಲಿ ಪಾಂಡ್ಯ-ಇಶಾನ್ ಉತ್ತಮ ಜೊತೆಯಾಟ.
ಮೊಹಮ್ಮದ್ ನವಾಝ್ ಎಸೆತದಲ್ಲಿ ಲೆಗ್ ಸೈಡ್ನತ್ತ ರಾಕೆಟ್ ಶಾಟ್ ಬಾರಿಸಿದ ಇಶಾನ್ ಕಿಶನ್…ಫೋರ್. ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್. ಕ್ರೀಸ್ನಲ್ಲಿ ಪಾಂಡ್ಯ-ಇಶಾನ್ ಉತ್ತಮ ಜೊತೆಯಾಟ.
35 ಓವರ್ಗಳ ಮುಕ್ತಾಯದ ವೇಳೆಗೆ 183 ರನ್ ಕಲೆಹಾಕಿದ ಟೀಮ್ ಇಂಡಿಯಾ. ಇನ್ನು 15 ಓವರ್ಗಳು ಬಾಕಿ. ಕ್ರೀಸ್ನಲ್ಲಿ ಅರ್ಧಶತಕ ಪೂರೈಸಿರುವ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್. ಅಂತಿಮ ಓವರ್ಗಳ ಮೂಲಕ ಬೃಹತ್ ಮೊತ್ತ ಪೇರಿಸಲಿದೆಯಾ ಟೀಮ್ ಇಂಡಿಯಾ?
62 ಎಸೆತಗಳಲ್ಲಿ 3 ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ. ಇದರ ಜೊತೆಗೆ ಇಶಾನ್ ಕಿಶನ್ ಜೊತೆಗೂಡಿ 5ನೇ ವಿಕೆಟ್ ಶತಕದ ಜೊತೆಯಾಟ. ಸುಸ್ಥಿತಿಯಲ್ಲಿ ಟೀಮ್ ಇಂಡಿಯಾ. ಇನ್ನು 16 ಓವರ್ಗಳು ಬಾಕಿ. ಬೃಹತ್ ಮೊತ್ತ ಪೇರಿಸಲು ಕೊನೆಯ 10 ಓವರ್ಗಳು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ.
ಮೊಹಮ್ಮದ್ ನವಾಝ್ ಎಸೆತದಲ್ಲಿ ಸ್ಟೈಟ್ ಹಿಟ್ ಸಿಕ್ಸ್ ಸಿಡಿಸಿದ ಇಶಾನ್ ಕಿಶನ್. ಇದು ಇಶಾನ್ ಬ್ಯಾಟ್ನಿಂದ ಮೂಡಿಬಂದ 2ನೇ ಸಿಕ್ಸರ್. 68 ಎಸೆತಗಳಲ್ಲಿ 65 ರನ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಯುವ ಎಡಗೈ ದಾಂಡಿಗ.
30 ಓವರ್ಗಳ ಮುಕ್ತಾಯದ ವೇಳೆಗೆ 149 ರನ್ ಕಲೆಹಾಕಿದ ಟೀಮ್ ಇಂಡಿಯಾ. 5ನೇ ವಿಕೆಟ್ಗೆ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ 83 ರನ್ಗಳ ಜೊತೆಯಾಟ. ಆರಂಭಿಕ ಆಘಾತದಿಂದ ಪಾರಾದ ಟೀಮ್ ಇಂಡಿಯಾ.
ಸದ್ಯ ಕ್ರೀಸ್ನಲ್ಲಿ ಇಶಾನ್ ಕಿಶನ್ (56) ಹಾಗೂ ಹಾರ್ದಿಕ್ ಪಾಂಡ್ಯ (40) ಬ್ಯಾಟಿಂಗ್. ಇನ್ನುಳಿದ 20 ಓವರ್ಗಳಲ್ಲಿ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆ.
ಶಾದಾಬ್ ಖಾನ್ ಎಸೆತದಲ್ಲಿ ಸಿಂಗಲ್ ರನ್ ತೆಗೆಯುವ ಮೂಲಕ ಅರ್ಧಶತಕ ಪೂರೈಸಿದ ಇಶಾನ್ ಕಿಶನ್. 54 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ ಇಶಾನ್.
ಶಾದಾಬ್ ಖಾನ್ 5ನೇ ಎಸೆತದಲ್ಲಿ ಮಿಡ್ ಆನ್ನತ್ತ ಬೌಂಡರಿ ಬಾರಿಸಿದ ಇಶಾನ್ ಕಿಶನ್.
5ನೇ ವಿಕೆಟ್ಗೆ ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ಜೊತೆ 80 ರನ್ಗಳ ಜೊತೆಯಾಟ. ಉತ್ತಮ ಸ್ಥಿತಿಯಲ್ಲಿ ಟೀಮ್ ಇಂಡಿಯಾ.
ಶಾಹೀನ್ ಅಫ್ರಿದಿ ಅವರ 4ನೇ ಎಸೆತದಲ್ಲಿ ಡೀಪ್ ಲಾಂಗ್ ಆನ್ನತ್ತ ಆಕರ್ಷಕ ಫೋರ್ ಬಾರಿಸಿದ ಹಾರ್ದಿಕ್ ಪಾಂಡ್ಯ. 15 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 127 ರನ್ಗಳು. ಕ್ರೀಸ್ನಲ್ಲಿ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್.
5ನೇ ವಿಕೆಟ್ಗೆ ಅರ್ಧಶತಕ ಜೊತೆಯಾಟವಾಡಿದ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ. 52 ಎಸೆತಗಳಲ್ಲಿ 50 ರನ್ಗಳ ಜೊತೆಗಾರಿಕೆ ಪ್ರದರ್ಶಿಸಿದ ಟೀಮ್ ಇಂಡಿಯಾ ದಾಂಡಿಗರು. ಕ್ರೀಸ್ನಲ್ಲಿ ಇಶಾನ್ ಕಿಶನ್ (41) ಹಾಗೂ ಹಾರ್ದಿಕ್ ಪಾಂಡ್ಯ (22) ಬ್ಯಾಟಿಂಗ್.
20 ಓವರ್ಗಳ ಮುಕ್ತಾಯದ ವೇಳೆಗೆ 102 ರನ್ ಕಲೆಹಾಕಿದ ಟೀಮ್ ಇಂಡಿಯಾ. 4 ವಿಕೆಟ್ ಕಬಳಿಸಿದ ಪಾಕಿಸ್ತಾನ್ ತಂಡ. ಕ್ರೀಸ್ನಲ್ಲಿ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್.
ರೋಹಿತ್ ಶರ್ಮಾ (11), ವಿರಾಟ್ ಕೊಹ್ಲಿ (4), ಶ್ರೇಯಸ್ ಅಯ್ಯರ್ (14) ಹಾಗೂ ಶುಭ್ಮನ್ ಗಿಲ್ (6) ಔಟ್.
ಶಾದಾಬ್ ಖಾನ್ ಎಸೆತದಲ್ಲಿ ಸ್ಟೈಟ್ ಹಿಟ್ ಬೌಂಡರಿ ಬಾರಿಸಿದ ಇಶಾನ್ ಕಿಶನ್. 4ನೇ ಎಸೆತದಲ್ಲಿ ಲಾಂಗ್ ಆಫ್ನತ್ತ ಮತ್ತೊಂದು ಬಾರಿಸಿದ ಕಿಶನ್. ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್
ಹ್ಯಾರಿಸ್ ರೌಫ್ ಎಸೆತದಲ್ಲಿ ಬ್ಯಾಟ್ ಇನ್ ಸೈಡ್ ಎಡ್ಜ್ ಆಗಿ ಬೌಲ್ಡ್ ಆದ ಶುಭ್ಮನ್ ಗಿಲ್. 32 ಎಸೆತಗಳಲ್ಲಿ 10 ರನ್ಗಳಿಸಿ ನಿರ್ಗಮಿಸಿದ ಶುಭ್ಮನ್ ಗಿಲ್. ಟೀಮ್ ಇಂಡಿಯಾದ 4ನೇ ವಿಕೆಟ್ ಪತನ. ಪಂದ್ಯದ ಮೇಲೆ ಹಿಡಿತ ಸಾಧಿಸುವತ್ತ ಪಾಕಿಸ್ತಾನ್.
ಮಳೆ ಸ್ಥಗಿತ…ಪಂದ್ಯ ಶುರು. ಹ್ಯಾರಿಸ್ ರೌಫ್ ಎಸೆತದಲ್ಲಿ ಸಿಕ್ಸ್ ಸಿಡಿಸುವ ಮೂಲಕ ಶುಭಾರಂಭ ಮಾಡಿದ ಇಶಾನ್ ಕಿಶನ್. ಆಫ್ ಸೈಡ್ನತ್ತ ಆಕರ್ಷಕ ಸಿಕ್ಸ್ ಸಿಡಿಸಿದ ಎಡಗೈ ದಾಂಡಿಗ. ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್.
ಕ್ಯಾಂಡಿಯಲ್ಲಿ ಮಳೆ ಸ್ಥಗಿತಗೊಂಡಿದ್ದು, ಸದ್ಯ ಮೈದಾನದಲ್ಲಿನ ಕವರ್ಗಳನ್ನು ತೆಗೆಯಲಾಗಿದೆ. ಹೀಗಾಗಿ ಶ್ರೀಘ್ರದಲ್ಲೇ ಪಂದ್ಯ ಮತ್ತೆ ಶುರುವಾಗಲಿದೆ.
Another rain interruption as India are 51-3 after 11.2 overs.@HarisRauf14 took the third wicket to fall ☄️#PAKvIND | #AsiaCup2023 pic.twitter.com/qMokx2nero
— Pakistan Cricket (@TheRealPCB) September 2, 2023
12ನೇ ಓವರ್ ವೇಳೆ ಮತ್ತೆ ಶುರುವಾದ ಮಳೆ. ಪಂದ್ಯವನ್ನು ಸ್ಥಗಿತಗೊಳಿಸಿದ ಅಂಪೈರ್. ಡ್ರೆಸ್ಸಿಂಗ್ ರೂಮ್ನತ್ತ ಮುಖ ಮಾಡಿದ ಉಭಯ ತಂಡಗಳ ಆಟಗಾರರು. ಸದ್ಯ ಕ್ರೀಸ್ನಲ್ಲಿ ಶುಭ್ಮನ್ ಗಿಲ್ (6) ಹಾಗೂ ಇಶಾನ್ ಕಿಶನ್ (2) ಬ್ಯಾಟಿಂಗ್.
ವಿರಾಟ್ ಕೊಹ್ಲಿ (4), ರೋಹಿತ್ ಶರ್ಮಾ (11) ಹಾಗೂ ಶ್ರೇಯಸ್ ಅಯ್ಯರ್ (14) ಔಟ್.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ವಿಕೆಟ್ ಪಡೆದ ಶಾಹೀನ್ ಅಫ್ರಿದಿ
ಶ್ರೇಯಸ್ ಅಯ್ಯರ್ ವಿಕೆಟ್ ಕಬಳಿಸಿದ ಹ್ಯಾರಿಸ್ ರೌಫ್
11 ಓವರ್ಗಳ ಮುಕ್ತಾಯದ ವೇಳೆ ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ. 3 ವಿಕೆಟ್ ಕಬಳಿಸಿದ ಪಾಕಿಸ್ತಾನ್ ತಂಡ. ಸದ್ಯ ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ಎಡಗೈ ದಾಂಡಿಗ ಇಶಾನ್ ಕಿಶನ್ ಬ್ಯಾಟಿಂಗ್.
ರೋಹಿತ್ ಶರ್ಮಾ (11), ವಿರಾಟ್ ಕೊಹ್ಲಿ (4), ಶ್ರೇಯಸ್ ಅಯ್ಯರ್ (14) ಔಟ್.
ಹ್ಯಾರಿಸ್ ರೌಫ್ ಎಸೆತದಲ್ಲಿ ಪುಲ್ ಶಾಟ್ಗೆ ಯತ್ನ…ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿದ ಶ್ರೇಯಸ್ ಅಯ್ಯರ್. 9 ಎಸೆತಗಳಲ್ಲಿ 14 ರನ್ಗಳಿಸಿ ನಿರ್ಗಮಿಸಿದ ಅಯ್ಯರ್. 48 ರನ್ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ.
ರೋಹಿತ್ ಶರ್ಮಾ (11), ವಿರಾಟ್ ಕೊಹ್ಲಿ (4) ಹಾಗೂ ಶ್ರೇಯಸ್ ಅಯ್ಯರ್ (14) ಔಟ್
9ನೇ ಓವರ್ನಲ್ಲಿ ಯಾವುದೇ ರನ್ ಇಲ್ಲ. ಶಾಹೀನ್ ಅಫ್ರಿದಿ ಎಸೆತಗಳಿಗೆ ದಂಗಾಗಿ ನಿಂತ ಶುಭ್ಮನ್ ಗಿಲ್. ರನ್ ಗಳಿಸಲು ಪರದಾಡುತ್ತಿರುವ ಗಿಲ್ 18 ಎಸೆತಗಳಲ್ಲಿ ಕಲೆಹಾಕಿರುವುದು ಕೇವಲ 1 ರನ್ ಮಾತ್ರ. ಪಂದ್ಯದ ಮೊದಲ ಮೇಡನ್ ಓವರ್ ಎಸೆದ ಶಾಹೀನ್ ಅಫ್ರಿದಿ.
ಹ್ಯಾರಿಸ್ ರೌಫ್ ಒಂದೇ ಓವರ್ನಲ್ಲಿ 2 ಫೋರ್ ಬಾರಿಸಿದ ಶ್ರೇಯಸ್ ಅಯ್ಯರ್. 8ನೇ ಓವರ್ನಲ್ಲಿ ನಾಲ್ಕನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಅಯ್ಯರ್, 6ನೇ ಎಸೆತದಲ್ಲಿ ಮಿಡ್ ಆಫ್ನತ್ತ ಬೌಂಡರಿ ಸಿಡಿಸಿದರು. ಈ ಮೂಲಕ ಹ್ಯಾರಿಸ್ ರೌಫ್ ಓವರ್ನಲ್ಲಿ 12 ರನ್ ಕಲೆಹಾಕಿದರು.
7 ಓವರ್ ಮುಕ್ತಾಯದ ವೇಳೆಗೆ 30 ರನ್ ಕಲೆಹಾಕಿದ ಟೀಮ್ ಇಂಡಿಯಾ. 2 ವಿಕೆಟ್ ಕಬಳಿಸಿ ಮೇಲುಗೈ ಸಾಧಿಸಿದ ಪಾಕಿಸ್ತಾನ್. ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್.
ಭಾರತ ತಂಡದ 2ನೇ ವಿಕೆಟ್ ಪತನ. ವಿರಾಟ್ ಕೊಹ್ಲಿ ಔಟ್. ಶಾಹೀನ್ ಅಫ್ರಿದಿ ಎಸೆತದಲ್ಲಿ ಬ್ಯಾಟ್ ಎಡ್ಜ್ ಆಗಿ ಬೌಲ್ಡ್ ಆದ ಕೊಹ್ಲಿ. 7 ಎಸೆತಗಳಲ್ಲಿ 4 ರನ್ಗಳಿಸಿ ಹೊರನಡೆದ ವಿರಾಟ್.
ನಸೀಮ್ ಶಾ ಎಸೆದ 6ನೇ ಓವರ್ನ 5ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ. ಫೋರ್ನೊಂದಿಗೆ ರನ್ ಖಾತೆ ತೆರೆದ ಕಿಂಗ್ ಕೊಹ್ಲಿ. ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
ಟೀಮ್ ಇಂಡಿಯಾದ ಮೊದಲ ವಿಕೆಟ್ ಪತನ. ಶಾಹೀನ್ ಅಫ್ರಿದಿ ಇನ್ಸ್ವಿಂಗ್ ಎಸೆತ. ರೋಹಿತ್ ಶರ್ಮಾ ಕ್ಲೀನ್ ಬೌಲ್ಡ್. 22 ಎಸೆತಗಳಲ್ಲಿ 11 ರನ್ಗಳಿಸಿ ನಿರ್ಗಮಿಸಿದ ರೋಹಿತ್ ಶರ್ಮಾ. 5ನೇ ಓವರ್ನ ಕೊನೆಯ ಎಸೆತದಲ್ಲಿ ಪಾಕಿಸ್ತಾನ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟ ಶಾಹೀನ್ ಅಫ್ರಿದಿ.
ಮಳೆ ಸ್ಥಗಿತಗೊಂಡಿದೆ. ಪಂದ್ಯ ಶುರುವಾಗಿದೆ. ಯಾವುದೇ ಓವರ್ ಕಡಿತವಿಲ್ಲದೆ ಪಂದ್ಯ ಮುಂದುವರೆಯಲಿದೆ. ಅದರಂತೆ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಮಳೆ ಸ್ಥಗಿತಗೊಂಡಿದೆ. ಆದರೆ ಕವರ್‌ಗಳು ಇನ್ನೂ ಮೈದಾನದಲ್ಲೇ ಇದೆ. ಮೈದಾನದ ಸಿಬ್ಬಂದಿ ಔಟ್‌ಫೀಲ್ಡ್‌ನಲ್ಲಿದ್ದಾರೆ. ಇತ್ತ ರೋಹಿತ್ ಶರ್ಮಾ ಡಗೌಟ್‌ನಲ್ಲಿ ಸಿದ್ಧತೆಯಲ್ಲಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಪಂದ್ಯ ಶುರುವಾಗುವ ನಿರೀಕ್ಷೆಯಿದೆ.
The players walk off as the covers come on 🌧️
⚠️ Play is interrupted due to rain with India 15-0 after 4.2 overs 🏏#PAKvIND | #AsiaCup2023 pic.twitter.com/4zVVA9ONVo
— Pakistan Cricket (@TheRealPCB) September 2, 2023
ಮಳೆಯ ಕಾರಣ ಮೈದಾನದ ತೊರೆದ ಆಟಗಾರರು. ಮಳೆ ನಿಂತ ಬಳಿಕ ಓವರ್ಗಳ ಕಡಿತವಿಲ್ಲದೆ ಪಂದ್ಯ ಮುಂದುವರೆಯಲಿದೆ. ಕಟ್ ಆಫ್ ಟೈಮ್ ಬಳಿಕ ಪಂದ್ಯ ಶುರುವಾದರೆ ಓವರ್ಗಳ ಕಡಿತ ಮಾಡಲಾಗುತ್ತದೆ.
5ನೇ ಓವರ್ ವೇಳೆ ಶುರುವಾದ ಮಳೆ. ಮಳೆ ಹೆಚ್ಚಾಗುತ್ತಿದ್ದಂತೆ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ಪಿಚ್ನಲ್ಲಿ ಕವರ್ ಹೊದಿಸಲಾಗಿದ್ದು, ಆಟಗಾರರು ಡ್ರೆಸ್ಸಿಂಗ್ ರೂಮ್ನತ್ತ ಮರಳಿದ್ದಾರೆ. ಇನ್ನು ಮಳೆ ನಿಂತ ಬಳಿಕ ಪಂದ್ಯ ಮುಂದುವರೆಯಬಹುದು.
ಕ್ರೀಸ್ನಲ್ಲಿ ರೋಹಿತ್ ಶರ್ಮಾ (11) ಹಾಗೂ ಶುಭ್ಮನ್ ಗಿಲ್ (0) ಬ್ಯಾಟಿಂಗ್.
4ನೇ ಓವರ್ನಲ್ಲಿ ವೈಡ್ ಮೂಲಕ ಕೇವಲ 1 ರನ್ ನೀಡಿದ ನಸೀಮ್ ಶಾ. 8 ಎಸೆತಗಳನ್ನು ಎದುರಿಸಿದ ಬಳಿಕ ಕೂಡ ಖಾತೆ ತೆರೆಯದ ಶುಭ್ಮನ್ ಗಿಲ್. ಮತ್ತೊಂದೆಡೆ 16 ಎಸೆತಗಳಲ್ಲಿ 11 ರನ್ ಬಾರಿಸಿದ ರೋಹಿತ್ ಶರ್ಮಾ.
ಶಾಹೀನ್ ಅಫ್ರಿದಿಯ 3ನೇ ಓವರ್ನ 2ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫ್ಲಿಕ್ ಶಾಟ್ ಬಾರಿಸಿದ ರೋಹಿತ್ ಶರ್ಮಾ. ಹಿಟ್ಮ್ಯಾನ್ ಬ್ಯಾಟ್ನಿಂದ ಮತ್ತೊಂದು ಫೋರ್. ಟೀಮ್ ಇಂಡಿಯಾ ಮೊತ್ತ 14 ಕ್ಕೆ ಏರಿಕೆ.
ಮೊದಲ 2 ಓವರ್ಗಳಲ್ಲಿ ಕೇವಲ 9 ರನ್ ನೀಡಿದ ಪಾಕಿಸ್ತಾನ್. ಮೊದಲ ಓವರ್ನಲ್ಲಿ ಶಾಹೀನ್ ಅಫ್ರಿದಿ 6 ರನ್ ನೀಡಿದರೆ, 2ನೇ ಓವರ್ನಲ್ಲಿ ನಸೀಮ್ ಶಾ ಕೇವಲ 3 ರನ್ ನೀಡಿದರು. ಟೀಮ್ ಇಂಡಿಯಾ ಪರ ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
ಮೊದಲ ಓವರ್ನಲ್ಲಿ ಕೇವಲ 6 ರನ್ ನೀಡಿದ ಶಾಹೀನ್ ಅಫ್ರಿದಿ. ಒಂದು ಫೋರ್ನೊಂದಿಗೆ ಖಾತೆ ತೆರೆದ ರೋಹಿತ್ ಶರ್ಮ. ಟೀಮ್ ಇಂಡಿಯಾ ಪರ ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.
ಮೊದಲ ಓವರ್ನ ಮೊದಲ ಎಸೆತವೇ ಯಾರ್ಕರ್..ಶಾಹೀನ್ ಎಸೆತವನ್ನು ರಕ್ಷಣಾತ್ಮಕವಾಗಿ ಆಡಿದ ರೋಹಿತ್ ಶರ್ಮಾ
ಎರಡನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ರೋಹಿತ್ ಶರ್ಮಾ. ಫೋರ್ನೊಂದಿಗೆ ಟೀಮ್ ಇಂಡಿಯಾದ ಖಾತೆ ತೆರೆದ ಹಿಟ್ಮ್ಯಾನ್
🚨 Toss & Team Update 🚨
Captain @ImRo45 has won the toss & #TeamIndia have elected to bat against Pakistan. #INDvPAK
A look at our Playing XI 🔽
Follow the match ▶️ https://t.co/hPVV0wT83S#AsiaCup2023 pic.twitter.com/onUyEVBwvA
— BCCI (@BCCI) September 2, 2023
ಮೊಹಮ್ಮದ್ ಶಮಿ ಬದಲಿಗೆ ಶಾರ್ದೂಲ್ ಠಾಕೂರ್ಗೆ ಅವಕಾಶ. ಕೆಎಲ್ ರಾಹುಲ್ ಬದಲಿಗೆ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದ ಇಶಾನ್ ಕಿಶನ್.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಬಹುನಿರೀಕ್ಷಿತ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯ ಶುರುವಾಗಿದೆ. ಕ್ಯಾಂಡಿಯ (ಶ್ರೀಲಂಕಾ) ಪಲ್ಲೆಕೆಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Pakistan and India players meet up ahead of Saturday’s #PAKvIND match in Kandy ✨#AsiaCup2023 pic.twitter.com/iP94wjsX6G
— Pakistan Cricket (@TheRealPCB) September 1, 2023
ಭಾರತ-ಪಾಕಿಸ್ತಾನ್ ಆಟಗಾರರ ನಡುವಣ ಮುಖಾಮುಖಿ. ಕೊನೆಯ ದಿನದ ಅಭ್ಯಾಸದ ವೇಳೆ ಭೇಟಿಯಾದ ಪಾಕ್ ವೇಗಿ ಹ್ಯಾರಿಸ್ ರೌಫ್- ಟೀಮ್ ಇಂಡಿಯಾ ಮಾಸ್ಟರ್ ವಿರಾಟ್ ಕೊಹ್ಲಿ. ಹಿಟ್ಮ್ಯಾನ್ ರೋಹಿತ್ ಶರ್ಮಾ ಜೊತೆ ಪಾಕ್ ನಾಯಕ ಬಾಬರ್ ಆಝಂ ಹಾಗೂ ಇಮಾಮ್ ಉಲ್ ಹಕ್ ಕುಶಲೋಪರಿ. ವಿರಾಟ್ ಕೊಹ್ಲಿ ಕಾಣಿಸಿಕೊಂಡ ಶಾದಾಬ್ ಖಾನ್ ಹಾಗೂ ಶಾಹೀನ್ ಅಫ್ರಿದಿ.
𝗠𝗔𝗧𝗖𝗛 𝗗𝗔𝗬! 🏟️
India 🆚 Pakistan
📍 Kandy, Sri Lanka
𝘼𝙇𝙇 𝙄𝙉 𝙍𝙀𝘼𝘿𝙄𝙉𝙀𝙎𝙎 for our first game of #AsiaCup23! 👏 👏#TeamIndia pic.twitter.com/LrRbeQjTH3
— BCCI (@BCCI) September 2, 2023
ಪಾಕಿಸ್ತಾನ್ ವಿರುದ್ಧದ ಪಂದ್ಯಕ್ಕಾಗಿ ಟೀಮ್ ಇಂಡಿಯಾ ನಡೆಸಿದ ಕೊನೆಯ ತಯಾರಿಯ ಸಣ್ಣ ಝಲಕ್ ಇಲ್ಲಿದೆ.
ಕೊನೆಯ ಬಾರಿ ಭಾರತ-ಪಾಕ್ ಏಕದಿನ ಪಂದ್ಯವಾಡಿರುವುದು 2019 ರಲ್ಲಿ. ಕಳೆದ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಎದುರು 89 ರನ್ಗಳ ಸೋಲುಂಡ ಬಳಿಕ ಪಾಕಿಸ್ತಾನ್ ತಂಡ 50 ಓವರ್ಗಳ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಿಲ್ಲ. ಇದೀಗ ಮೂರು ವರ್ಷಗಳ ಉಭಯ ತಂಡಗಳ ಮುಖಾಮುಖಿಯಾಗುತ್ತಿರುವುದು ವಿಶೇಷ.
Published On - 1:39 pm, Sat, 2 September 23