Asia cup 2023 PAK vs IND Live Score: ಪಾಕ್ ವಿರುದ್ಧ ಟೀಮ್ ಇಂಡಿಯಾಗೆ ಭರ್ಜರಿ ಜಯ
Asia cup 2023 Pakistan vs India Live Score in Kannada: ಏಕದಿನ ಕ್ರಿಕೆಟ್ನಲ್ಲಿ ಭಾರತ-ಪಾಕಿಸ್ತಾನ್ ಇದುವರೆಗೆ 134 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಭಾರತ ತಂಡವು ಕೇವಲ 56 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಮತ್ತೊಂದೆಡೆ ಪಾಕಿಸ್ತಾನ್ ತಂಡವು 73 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಇನ್ನು 5 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿದೆ.
ಭಾರತ-ಪಾಕಿಸ್ತಾನ್ ನಡುವಣ ಸೂಪರ್ ಫೋರ್ ಹಂತದ 3ನೇ ಪಂದ್ಯದಲ್ಲಿ ಟೀಮ್ ಇಂಡಿಯಾ 228 ರನ್ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (111) ಹಾಗೂ ವಿರಾಟ್ ಕೊಹ್ಲಿ (122) ಭರ್ಜರಿ ಶತಕ ಸಿಡಿಸಿದರು. ಪರಿಣಾಮ 50 ಓವರ್ಗಳಲ್ಲಿ ಟೀಮ್ ಇಂಡಿಯಾ 2 ವಿಕೆಟ್ ನಷ್ಟಕ್ಕೆ 356 ರನ್ ಕಲೆಹಾಕಿತು. 357 ರನ್ಗಳ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವು 128 ರನ್ಗಳಿಗೆ ಸರ್ವಪತನ ಕಾಣುವ 228 ರನ್ಗಳಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿತು.
ಏಕದಿನ ಮುಖಾಮುಖಿ:
ಏಕದಿನ ಕ್ರಿಕೆಟ್ನಲ್ಲಿ ಭಾರತ-ಪಾಕಿಸ್ತಾನ್ ಇದುವರೆಗೆ 134 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಭಾರತ ತಂಡವು ಕೇವಲ 56 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಮತ್ತೊಂದೆಡೆ ಪಾಕಿಸ್ತಾನ್ ತಂಡವು 73 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಇನ್ನು 5 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಭಾರತ-ಪಾಕ್ ನಡುವಣ ಕೊನೆಯ 6 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ 5 ಬಾರಿ ಗೆಲುವಿನ ನಗೆ ಬೀರಿದೆ.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್, ಇಮಾಮ್ ಉಲ್ ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸಲ್ಮಾನ್ ಆಘಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.
ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಸಲ್ಮಾನ್ ಅಲಿ ಅಘಾ, ಸೌದ್ ಶಕೀಲ್, ಶಾಹೀನ್ ಅಫ್ರಿದಿ ಮತ್ತು ಉಸಾಮಾ ಮಿರ್, ತಯ್ಯಬ್ ತಾಹಿರ್ (ಮೀಸಲು ಆಟಗಾರ).
ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಮುರಿದ ಡೇವಿಡ್ ವಾರ್ನರ್
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ.
LIVE Cricket Score & Updates
-
Asia cup 2023 PAK vs IND Live Score: 228 ರನ್ಗಳ ಅಮೋಘ ಜಯ
FIFER for Kuldeep Yadav 👏 👏
A resounding 228-run win for #TeamIndia – the biggest win for India in the ODIs against Pakistan (by runs) 🙌 🙌
Scorecard ▶️ https://t.co/kg7Sh2t5pM#AsiaCup2023 | #INDvPAK pic.twitter.com/cl2q5I7j1p
— BCCI (@BCCI) September 11, 2023
ಪಾಕಿಸ್ತಾನ್ ವಿರುದ್ಧ 5 ವಿಕೆಟ್ ಕಬಳಿಸಿದ ಕುಲ್ದೀಪ್ ಯಾದವ್
📸📸
The two centurions for #TeamIndia 💪💪 pic.twitter.com/mdMg5lNYHP
— BCCI (@BCCI) September 11, 2023
ಭರ್ಜರಿ ಶತಕ ಸಿಡಿಸಿದ ಕೆಎಲ್ ರಾಹುಲ್ (111) ಹಾಗೂ ವಿರಾಟ್ ಕೊಹ್ಲಿ (122)
ಪಾಕಿಸ್ತಾನ್ ವಿರುದ್ಧ 228 ರನ್ಗಳಿಂದ ಗೆದ್ದು ಬೀಗಿದ ಟೀಮ್ ಇಂಡಿಯಾ
-
Asia cup 2023 PAK vs IND Live Score: ಟೀಮ್ ಇಂಡಿಯಾಗೆ ಅಮೋಘ ಗೆಲುವು
IND 356/2 (50)
PAK 128 (32)
(ಗಾಯದ ಹಿನ್ನಲೆ ಹ್ಯಾರಿಸ್ ರೌಫ್ ಹಾಗೂ ನಸೀಮ್ ಶಾ ಬ್ಯಾಟಿಂಗ್ಗೆ ಇಳಿದಿಲ್ಲ)
ಟೀಮ್ ಇಂಡಿಯಾಗೆ 228 ರನ್ಗಳ ಅಮೋಘ ಜಯ
-
Asia cup 2023 PAK vs IND Live Score: ಪಾಕಿಸ್ತಾನ್ ತಂಡದ 7ನೇ ವಿಕೆಟ್ ಪತನ
ಕುಲ್ದೀಪ್ ಯಾದವ್ ಎಸೆತದಲ್ಲಿ ನೇರವಾಗಿ ಕ್ಯಾಚ್ ನೀಡಿದ ಇಫ್ತಕರ್ ಅಹ್ಮದ್. ಪಾಕ್ ತಂಡದ 7ನೇ ವಿಕೆಟ್ ಪತನ
30 ಓವರ್ ಮುಕ್ತಾಯದ ವೇಳೆಗೆ ಕೇವಲ 119 ರನ್ ಕಲೆಹಾಕಿರುವ ಪಾಕಿಸ್ತಾನ್.
ಇನ್ನು 20 ಓವರ್ಗಳಲ್ಲಿ 238 ರನ್ಗಳ ಅವಶ್ಯಕತೆ
PAK 119/7 (30)
Asia cup 2023 PAK vs IND Live Score: ಪಾಕಿಸ್ತಾನ್ ತಂಡದ 6ನೇ ವಿಕೆಟ್ ಪತನ
ಕುಲ್ದೀಪ್ ಯಾದವ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಶಾದಾಬ್ ಖಾನ್. ಬೌಂಡರಿ ಲೈನ್ನಲ್ಲಿ ಶಾರ್ದೂಲ್ ಠಾಕೂರ್ ಉತ್ತಮ ಕ್ಯಾಚ್. ಪಾಕಿಸ್ತಾನ್ ತಂಡದ 6ನೇ ವಿಕೆಟ್ ಪತನ.
ಕ್ರೀಸ್ನಲ್ಲಿ ಇಫ್ತಿಕರ್ ಅಹ್ಮದ್ ಹಾಗೂ ಫಹೀಮ್ ಅಶ್ರಫ್ ಬ್ಯಾಟಿಂಗ್
PAK 110/6 (27.4)
Asia cup 2023 PAK vs IND Live Score: ಪಾಕಿಸ್ತಾನ್ ತಂಡದ 5ನೇ ವಿಕೆಟ್ ಪತನ
ಕುಲ್ದೀಪ್ ಯಾದವ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದ ಸಲ್ಮಾನ್ ಆಘಾ.
32 ಎಸೆತಗಳಲ್ಲಿ 23 ರನ್ಗಳಿಸಿ ವಿಕೆಟ್ ಒಪ್ಪಿಸಿದ ಬಲಗೈ ಬ್ಯಾಟರ್ ಸಲ್ಮಾನ್ ಆಘಾ.
ಕ್ರೀಸ್ನಲ್ಲಿ ಇಫ್ತಿಕರ್ ಅಹ್ಮದ್ ಬ್ಯಾಟಿಂಗ್
PAK 96/5 (24)
ಪಾಕಿಸ್ತಾನಕ್ಕೆ ಗೆಲ್ಲಲು 26 ಓವರ್ಗಳಲ್ಲಿ 261 ರನ್ ಗಳ ಅವಶ್ಯಕತೆ.
Asia cup 2023 PAK vs IND Live Score: ಪಾಕಿಸ್ತಾನ್ ತಂಡದ 4ನೇ ವಿಕೆಟ್ ಪತನ
ಕುಲ್ದೀಪ್ ಯಾದವ್ ಎಸೆತದಲ್ಲಿ ಫಖರ್ ಝಮಾನ್ ಕ್ಲೀನ್ ಬೌಲ್ಡ್.
50 ಎಸೆತಗಳಲ್ಲಿ 27 ರನ್ಗಳಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಫಖರ್ ಝಮಾನ್.
ಟೀಮ್ ಇಂಡಿಯಾಗೆ 4ನೇ ಯಶಸ್ಸು ತಂದು ಕೊಟ್ಟ ಸ್ಪಿನ್ನರ್ ಕುಲ್ದೀಪ್ ಯಾದವ್.
PAK 77/4 (19.2)
Asia cup 2023 PAK vs IND Live Score: 15 ಓವರ್ ಮುಕ್ತಾಯ: ಭಾರತ ಉತ್ತಮ ಬೌಲಿಂಗ್
15 ಓವರ್‌ಗಳ ಮುಕ್ತಾಯದ ವೇಳೆಗೆ
ಕ್ರೀಸ್ನಲ್ಲಿ ಸಲ್ಮಾನ್ ಆಘಾ (9) ಹಾಗೂ ಫಖರ್ ಝಮಾನ್ (18) ಬ್ಯಾಟಿಂಗ್.
IND 356/2 (50)
PAK 65/3 (15)
35 ಓವರ್ಗಳಲ್ಲಿ ಪಾಕಿಸ್ತಾನ್ ತಂಡಕ್ಕೆ ಗೆಲ್ಲಲು 292 ರನ್ಗಳ ಅವಶ್ಯಕತೆ.
Asia cup 2023 PAK vs IND Live Score: ಪಾಕಿಸ್ತಾನ್ ತಂಡದ 3ನೇ ವಿಕೆಟ್ ಪತನ
ಶಾರ್ದೂಲ್ ಠಾಕೂರ್ ಎಸೆತದಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿದ ಮೊಹಮ್ಮದ್ ರಿಝ್ವಾನ್.
5 ಎಸೆತಗಳಲ್ಲಿ 2 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದ ಮೊಹಮ್ಮದ್ ರಿಝ್ವಾನ್.
ಟೀಮ್ ಇಂಡಿಯಾಗೆ ಮೂರನೇ ಯಶಸ್ಸು ತಂದುಕೊಟ್ಟ ಶಾರ್ದೂಲ್.
PAK 47/3 (11.4)
Asia cup 2023 PAK vs IND Live Score: ಓವರ್‌ಗಳ ಕಡಿತ ಮಾಡಿದರೆ ಪಾಕ್ ತಂಡದ ಗುರಿ ಎಷ್ಟು?
20 ಓವರ್‌ಗಳ ಪಂದ್ಯ ನಡೆದರೆ ಪಾಕಿಸ್ತಾನ್ ತಂಡಕ್ಕೆ 200 ರನ್ಗಳ ಗುರಿ ನೀಡಲಾಗುತ್ತದೆ.
22 ಓವರ್‌ಗಳ ಪಂದ್ಯ ನಡೆದರೆ ಪಾಕಿಸ್ತಾನ್ ತಂಡಕ್ಕೆ 216 ರನ್ಗಳ ಗುರಿ ನೀಡಲಾಗುತ್ತದೆ.
24 ಓವರ್‌ಗಳ ಪಂದ್ಯ ನಡೆದರೆ ಪಾಕಿಸ್ತಾನ್ ತಂಡಕ್ಕೆ 230 ರನ್ಗಳ ಗುರಿ ನೀಡಲಾಗುತ್ತದೆ.
26 ಓವರ್‌ಗಳ ಪಂದ್ಯ ನಡೆದರೆ ಪಾಕಿಸ್ತಾನ್ ತಂಡಕ್ಕೆ 244 ರನ್ಗಳ ಗುರಿ ನೀಡಲಾಗುತ್ತದೆ.
ಭಾರತ- 356/2 (50)
ಪಾಕಿಸ್ತಾನ್- 44/2 (11)
Asia cup 2023 PAK vs IND Live Score: ಮಳೆಯಿಂದಾಗಿ ಪಂದ್ಯ ಸ್ಥಗಿತ
12ನೇ ಓವರ್ ಆರಂಭಕ್ಕೂ ಮುನ್ನ ಮಳೆ ಬಂದಿದ್ದರಿಂದ ಇದೀಗ ಪಾಕಿಸ್ತಾನ್ ತಂಡದ ಇನಿಂಗ್ಸ್ ಅನ್ನು ಸ್ಥಗಿತಗೊಳಿಸಲಾಗಿದೆ.
IND 356/2 (50)
PAK 44/2 (11)
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ (1) ಹಾಗೂ ಫಖರ್ ಝಮಾನ್ (14) ಬ್ಯಾಟಿಂಗ್ ಮಾಡುತ್ತಿದ್ದಾರೆ.
Asia cup 2023 PAK vs IND Live Score: ಪಾಕಿಸ್ತಾನ್ ತಂಡದ 2ನೇ ವಿಕೆಟ್ ಪತನ
ಹಾರ್ದಿಕ್ ಪಾಂಡ್ಯ ಇನ್ ಸ್ವಿಂಗ್ ಎಸೆತದಲ್ಲಿ ಬಾಬರ್ ಆಝಂ ಕ್ಲೀನ್ ಬೌಲ್ಡ್.
24 ಎಸೆತಗಳಲ್ಲಿ 10 ರನ್ಗಳಿಸಿ ಹೊರ ನಡೆದ ಪಾಕ್ ತಂಡದ ನಾಯಕ ಬಾಬರ್.
PAK 43/2 (10.4)
ಟೀಮ್ ಇಂಡಿಯಾಗೆ 2ನೇ ಯಶಸ್ಸು ತಂದುಕೊಟ್ಟ ಹಾರ್ದಿಕ್ ಪಾಂಡ್ಯ.
PAK vs IND Live Score: 10 ಓವರ್ ಮುಕ್ತಾಯ: ಟೀಮ್ ಇಂಡಿಯಾ ಉತ್ತಮ ಬೌಲಿಂಗ್
ಮೊಹಮ್ಮದ್ ಸಿರಾಜ್ ಎಸೆದ 10ನೇ ಓವರ್ನ 4ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಬಾಬರ್ ಆಝಂ.
10 ಓವರ್ ಮುಕ್ತಾಯದ ವೇಳೆಗೆ 43 ರನ್ ಕಲೆಹಾಕಿದ ಪಾಕಿಸ್ತಾನ್.
ಮೊದಲ 10 ಓವರ್ಗಳಲ್ಲಿ ಏಕೈಕ ವಿಕೆಟ್ ಪಡೆದ ಟೀಮ್ ಇಂಡಿಯಾ.
PAK 43/1 (10)
Asia cup 2023 PAK vs IND Live Score: ಪಾಕಿಸ್ತಾನ್ ತಂಡದ ಮೊದಲ ವಿಕೆಟ್ ಪತನ
ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಸ್ಲಿಪ್ನಲ್ಲಿ ಶುಭ್ಮನ್ ಗಿಲ್ಗೆ ಕ್ಯಾಚ್ ನೀಡಿದ ಇಮಾಮ್ ಉಲ್ ಹಕ್.
18 ಎಸೆತಗಳಲ್ಲಿ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಇಮಾಮ್ ಉಲ್ ಹಕ್.
ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟ ಬುಮ್ರಾ
PAK 17/1 (4.2)
Asia cup 2023 PAK vs IND Live Score: ಆಕರ್ಷಕ ಬೌಂಡರಿ ಬಾರಿಸಿದ ಇಮಾಮ್
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಎಡಗೈ ದಾಂಡಿಗ ಇಮಾಮ್ ಉಲ್ ಹಕ್.
ಕ್ರೀಸ್ನಲ್ಲಿ ಫಖರ್ ಝಮಾನ್ ಹಾಗೂ ಇಮಾಮ್ ಉಲ್ ಹಕ್ ಬ್ಯಾಟಿಂಗ್
PAK 10/0 (1.3)
ಪಾಕ್ ತಂಡಕ್ಕೆ 357 ರನ್ಗಳ ಗುರಿ ನೀಡಿದ ಟೀಮ್ ಇಂಡಿಯಾ.
Asia cup 2023 PAK vs IND Live Score: ಪಾಕ್ಗೆ ಕಠಿಣ ಗುರಿ ನೀಡಿದ ಟೀಮ್ ಇಂಡಿಯಾ
ಫಹೀಮ್ ಅಶ್ರಫ್ ಎಸೆದ ಕೊನೆಯ ಓವರ್ನ ಅಂತಿಮ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸುವ ಮೂಲಕ ಇನಿಂಗ್ಸ್ ಅಂತ್ಯಗೊಳಿಸಿದ ವಿರಾಟ್ ಕೊಹ್ಲಿ.
IND 356/2 (50)
ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ (122) ಹಾಗೂ ಕೆಎಲ್ ರಾಹುಲ್ (111) ಅಜೇಯ ಶತಕ.
ಪಾಕಿಸ್ತಾನ್ ತಂಡಕ್ಕೆ 357 ರನ್ಗಳ ಕಠಿಣ ಗುರಿ ನೀಡಿದ ಭಾರತ
Asia cup 2023 PAK vs IND Live Score: ಕಿಂಗ್ ಕೊಹ್ಲಿ ಬ್ಯಾಟ್ನಿಂದ ಭರ್ಜರಿ ಸೆಂಚುರಿ
84 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಶತಕ ಪೂರೈಸಿದ ವಿರಾಟ್ ಕೊಹ್ಲಿ
ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ 13 ಸಾವಿರ ರನ್ ಕಲೆಹಾಕಿದ ಕಿಂಗ್ ಕೊಹ್ಲಿ.
ಇದು ವಿರಾಟ್ ಕೊಹ್ಲಿಯ ಏಕದಿನ ಕ್ರಿಕೆಟ್ನ 47ನೇ ಶತಕ
IND 322/2 (47.3)
Asia cup 2023 PAK vs IND Live Score: ಭರ್ಜರಿ ಶತಕ ಸಿಡಿಸಿದ ಕೆಎಲ್ ರಾಹುಲ್
100 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ ಶತಕ ಸಿಡಿಸಿದ ಕೆಎಲ್ ರಾಹುಲ್.
IND 319/2 (47)
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ (97) ಹಾಗೂ ಕೆಎಲ್ ರಾಹುಲ್ (100) ಬ್ಯಾಟಿಂಗ್.
.@klrahul marks his comeback in style!
Brings up a splendid CENTURY 👏👏
His 6th ton in ODIs.
Live – https://t.co/kg7Sh2t5pM… #INDvPAK pic.twitter.com/yFzdVHjmaA
— BCCI (@BCCI) September 11, 2023
Asia cup 2023 PAK vs IND Live Score: 45 ಓವರ್ಗಳು ಮುಕ್ತಾಯ
ಫಹೀಮ್ ಅಶ್ರಫ್ ಎಸೆದ 45ನೇ ಓವರ್ನ 3ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಕೆಎಲ್ ರಾಹುಲ್.
5ನೇ ಎಸೆತದಲ್ಲಿ ಸ್ಕ್ವೇರ್ ಕಟ್ ಮೂಲಕ ಮತ್ತೊಂದು ಫೋರ್ ಸಿಡಿಸಿದ ಕೆಎಲ್ಆರ್
45 ಓವರ್ ಮುಕ್ತಾಯದ ವೇಳೆಗೆ 300 ರನ್ ಕಲೆಹಾಕಿದ ಟೀಮ್ ಇಂಡಿಯಾ
ಕ್ರೀಸ್ನಲ್ಲಿ ಕೆಎಲ್ ರಾಹುಲ್ (95) ಹಾಗೂ ವಿರಾಟ್ ಕೊಹ್ಲಿ (83) ಬ್ಯಾಟಿಂಗ್
IND 300/2 (45)
Asia cup 2023 PAK vs IND Live Score: ಭರ್ಜರಿ ಸಿಕ್ಸ್ ಸಿಡಿಸಿದ ಕಿಂಗ್ ಕೊಹ್ಲಿ
ಇಫ್ತಿಕರ್ ಅಹ್ಮದ್ ಎಸೆದ 43ನೇ ಓವರ್ನ ಮೊದಲ ಎಸೆತದಲ್ಲೇ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸರ್ ಸಿಡಿಸಿದ ಕೊಹ್ಲಿ
3ನೇ ಎಸೆತದಲ್ಲಿ ಕೊಹ್ಲಿ ಬ್ಯಾಟ್ನಿಂದ ಡೀಪ್ ಮಿಡ್ ವಿಕೆಟ್ನತ್ತ ಫೋರ್.
ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 280/2 (43)
Asia cup 2023 PAK vs IND Live Score: ಆಕರ್ಷಕ ಫೋರ್ ಬಾರಿಸಿದ ವಿರಾಟ್ ಕೊಹ್ಲಿ
ಫಹೀಮ್ ಅಶ್ರಫ್ ಎಸೆದ 40ನೇ ಓವರ್ನ ಮೊದಲ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ವಿರಾಟ್ ಕೊಹ್ಲಿ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ (57) ಹಾಗೂ ಕೆಎಲ್ ರಾಹುಲ್ (71) ಬ್ಯಾಟಿಂಗ್.
IND 251/2 (40)
ರೋಹಿತ್ ಶರ್ಮಾ (56) ಹಾಗೂ ಶುಭ್ಮನ್ ಗಿಲ್ (58) ಔಟ್.
Asia cup 2023 PAK vs IND Live Score: ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ
55 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ.
ಏಕದಿನ ಕ್ರಿಕೆಟ್ನಲ್ಲಿ 66ನೇ ಹಾಫ್ ಸೆಂಚುರಿ ಸಿಡಿಸಿದ ಕಿಂಗ್ ಕೊಹ್ಲಿ
ಕೆಎಲ್ ರಾಹುಲ್ ಜೊತೆಗೂಡಿ 3ನೇ ವಿಕೆಟ್ಗೆ ಶತಕದ ಜೊತೆಯಾಟ.
ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿರುವ ಟೀಮ್ ಇಂಡಿಯಾ.
IND 239/2 (38.4)
PAK vs IND Live Score: 35 ಓವರ್ಗಳು ಮುಕ್ತಾಯ: ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್
ಶಾದಾಬ್ ಖಾನ್ ಎಸೆದ 35ನೇ ಓವರ್ನ ಮೊದಲ ಎಸೆತದಲ್ಲಿ ಫೋರ್ ಬಾರಿಸಿದ ಕೆಎಲ್ ರಾಹುಲ್ 2ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು.
35 ಓವರ್‌ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 225 ರನ್ ಕಲೆಹಾಕಿದೆ.
ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
IND 225/2 (35)
Asia cup 2023 PAK vs IND Live Score: ಕೆಎಲ್ ರಾಹುಲ್ ಭರ್ಜರಿ ಕಂಬ್ಯಾಕ್
ಗಾಯದಿಂದ ಚೇತರಿಸಿಕೊಂಡು ಬಂದಿರುವ ಕೆಎಲ್ ರಾಹುಲ್ ಮೊದಲ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್.
60 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕೆಎಲ್ ರಾಹುಲ್.
ಏಕದಿನ ಕ್ರಿಕೆಟ್ನಲ್ಲಿ ಇದು ಕೆಎಲ್ ರಾಹುಲ್ ಅವರ 14ನೇ ಅರ್ಧಶತಕ.
IND 205/2 (33.2)
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
Asia cup 2023 PAK vs IND Live Score: ದ್ವಿಶತಕ ಪೂರೈಸಿದ ಟೀಮ್ ಇಂಡಿಯಾ
ಇಫ್ತಿಕರ್ ಅಹ್ಮದ್ ಓವರ್ನ 4ನೇ ಎಸೆತದಲ್ಲಿ ಫೋರ್ ಬಾರಿಸಿದ ಕೆಎಲ್ ರಾಹುಲ್.
5ನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಮತ್ತೊಂದು ಫೋರ್.
33 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ದ್ವಿಶತಕ ಪೂರೈಸಿದ ಟೀಮ್ ಇಂಡಿಯಾ.
IND 204/2 (33)
Asia cup 2023 PAK vs IND Live Score: ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್
ಇಫ್ತಿಕರ್ ಅಹ್ಮದ್ ಅವರ ಮೊದಲ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕೆಎಲ್ ರಾಹುಲ್.
2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಲೇಟ್ ಕಟ್ ಫೋರ್ ಬಾರಿಸಿದ ಕನ್ನಡಿಗ.
IND 186/2 (31)
42 ರನ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಕೆಎಲ್ ರಾಹುಲ್.
Asia cup 2023 PAK vs IND Live Score: 30 ಓವರ್ಗಳು ಮುಕ್ತಾಯ
ಶಾಹೀನ್ ಅಫ್ರಿದಿ ಎಸೆದ 30ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಕೆಎಲ್ ರಾಹುಲ್
30 ಓವರ್‌ಗಳ ಮುಕ್ತಾಯದ ವೇಳೆ 175 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ (22) ಹಾಗೂ ಕೆಎಲ್ ರಾಹುಲ್ (31) ಬ್ಯಾಟಿಂಗ್.
IND 175/2 (30)
Asia cup 2023 PAK vs IND Live Score: ಆಕರ್ಷಕ ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ
ನಸೀಮ್ ಶಾ ಎಸೆತದಲ್ಲಿ ಸ್ಲಿಪ್ ಮೂಲಕ ಆಕರ್ಷಕ ಫೋರ್ ಬಾರಿಸಿದ ವಿರಾಟ್ ಕೊಹ್ಲಿ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
IND 161/2 (27.3)
ಟೀಮ್ ಇಂಡಿಯಾದ ಉತ್ತಮ ಬ್ಯಾಟಿಂಗ್.
ಸ್ನಾಯು ಸೆಳೆತದ ಕಾರಣ ಈ ಪಂದ್ಯದಿಂದ ಹೊರಗುಳಿದ ಪಾಕ್ ವೇಗಿ ಹ್ಯಾರಿಸ್ ರೌಫ್
Asia cup 2023 PAK vs IND Live Score: ಟೀಮ್ ಇಂಡಿಯಾ ಇನಿಂಗ್ಸ್ ಆರಂಭ
ಶಾದಾಬ್ ಖಾನ್ ಎಸೆತದಲ್ಲಿ 1 ರನ್ ಬಾರಿಸುವ ಮೂಲಕ ಮೀಸಲು ದಿನದಾಟದಲ್ಲಿ ಮೊದಲ ರನ್ ಕಲೆಹಾಕಿದ ಕೆಎಲ್ ರಾಹುಲ್.
25 ಓವರ್‌ಗಳ ಮುಕ್ತಾಯದ ವೇಳೆಗೆ 150 ರನ್ ಗಳಿಸಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 150/2 (25)
Asia cup 2023 PAK vs IND Live Score: 4.40 ಗಂಟೆಯಿಂದ ಪಂದ್ಯ ಶುರು
ಸಂಜೆ 4.40 ರಿಂದ ಪಂದ್ಯ ಶುರುವಾಗಲಿದೆ. ಅದರಂತೆ 24.1 ಓವರ್ಗಳಿಂದ ಟೀಮ್ ಇಂಡಿಯಾ ಇನಿಂಗ್ಸ್ ಶುರುವಾಗಲಿದ್ದು, 50 ಓವರ್‌ಗಳ ಪಂದ್ಯ ಜರುಗಲಿದೆ.
ಸದ್ಯ ಕ್ರೀಸ್ನಲ್ಲಿ ಬ್ಯಾಟಿಂಗ್ ಕಾಯ್ದುಕೊಂಡಿರುವ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸಲಿದ್ದಾರೆ.
Asia cup 2023 PAK vs IND Live Score: ಸೂರ್ಯನ ಎಂಟ್ರಿ: ಶೀಘ್ರದಲ್ಲೇ ಪಂದ್ಯ ಶುರು
Good news: Sun is out in Colombo. pic.twitter.com/bwDgeEhDHb
— Johns. (@CricCrazyJohns) September 11, 2023
ಕೊಲಂಬೊದಲ್ಲಿ ಸಂಪೂರ್ಣ ಸ್ಥಗಿತವಾಗಿದ್ದು, ಇದೀಗ ಮೋಡದ ಮರೆಯಿಂದ ಸೂರ್ಯ ಪ್ರತ್ಯಕ್ಷವಾಗಿದೆ. ಹೀಗಾಗಿ ಶೀಘ್ರದಲ್ಲೇ ಪಂದ್ಯ ಶುರುವಾಗುವುದು ಖಚಿತ ಎನ್ನಬಹುದು.
Asia cup 2023 PAK vs IND Live Score: ಮಳೆ ಸ್ಥಗಿತ: ಪಂದ್ಯ ಆರಂಭ ವಿಳಂಬ
ಕೊಲಂಬೊದಲ್ಲಿ ಮಳೆ ಸ್ಥಗಿತವಾಗಿದ್ದು, ಇದಾಗ್ಯೂ ಪಂದ್ಯ ಆರಂಭವಾಗುವುದು ತಡವಾಗಲಿದೆ. ಏಕೆಂದರೆ ಮೈದಾನವನ್ನು ಕವರ್ಗಳಿಂದ ಮುಚ್ಚಲಾಗಿದ್ದು, ಇದೀಗ ಕವರ್ ಹಾಗೂ ನೀರನ್ನು ತೆರವುಗೊಳಿಸುವಲ್ಲಿ ಸಿಬ್ಬಂದಿಗಳು ನಿರತರಾಗಿದ್ದಾರೆ. ಹೀಗಾಗಿ ಪಂದ್ಯ ಆರಂಭವಾಗುವುದು ಮತ್ತಷ್ಟು ವಿಳಂಬವಾಗಲಿದೆ.
Asia cup 2023 PAK vs IND Live Score: ಮೀಸಲು ದಿನದಾಟದ ನಿಯಮಗಳೇನು?
- ಸ್ಥಗಿತದಿಂದ ಪುನರಾರಂಭ: ಭಾರತ-ಪಾಕಿಸ್ತಾನ್ ನಡುವಣ ಪಂದ್ಯವು ಭಾನುವಾರ ಎಷ್ಟು ಓವರ್ ವೇಳೆಗೆ ಸ್ಥಗಿತವಾಗಿತ್ತೊ ಅಲ್ಲಿಂದಲೇ ಮತ್ತೆ ಮ್ಯಾಚ್ ಶುರುವಾಗಲಿದೆ. ಅಂದರೆ ಟೀಮ್ ಇಂಡಿಯಾ 24.1 ಓವರ್ಗಳಲ್ಲಿ 147/2 ರನ್ಗಳಿಸಿದ್ದಾಗ ಪಂದ್ಯ ಸ್ಥಗಿತಗೊಂಡಿತ್ತು. ಅದರಂತೆ ಸೋಮವಾರ 24.1 ಓವರ್ಗಳಿಂದ ಮ್ಯಾಚ್ ಶುರುವಾಗಲಿದೆ.
- ಬ್ಯಾಟರ್ಗಳ ಬದಲಾವಣೆಯಿಲ್ಲ: 24.1 ಓವರ್‌ಗಳ ವೇಳೆ ಕ್ರೀಸ್ನಲ್ಲಿದ್ದ ಬ್ಯಾಟರ್ಗಳೇ ನಾಳೆ ಕೂಡ ಇನಿಂಗ್ಸ್ ಮುಂದುವರೆಸಲಿದ್ದಾರೆ. ಬದಲಾಗಿ ಹೊಸ ಬ್ಯಾಟರ್ಗಳು ಕಣಕ್ಕಿಳಿಯುವಂತಿಲ್ಲ. ಅದರಂತೆ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ.
- ಪ್ಲೇಯಿಂಗ್ ಇಲೆವೆನ್ನಲ್ಲೂ ನೋ ಚೇಂಜ್: ಭಾನುವಾರ ಪ್ರಕಟಿಸಿರುವ ಪ್ಲೇಯಿಂಗ್ ಇಲೆವೆನ್ ಅನ್ನೇ ಮೀಸಲು ದಿನದಾಟದಲ್ಲೂ ಮುಂದುವರೆಸಬೇಕಾಗುತ್ತದೆ. ಇಲ್ಲಿ ಯಾವುದೇ ಕಾರಣಕ್ಕೂ ಆಟಗಾರರ ಬದಲಾವಣೆಗೆ ಅವಕಾಶವಿಲ್ಲ.
- ಕನಿಷ್ಠ 20 ಓವರ್: ಈ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಎರಡೂ ಇನ್ನಿಂಗ್ಸ್‌ಗಳಲ್ಲಿ ಕನಿಷ್ಠ 20 ಓವರ್‌ಗಳನ್ನು ಬೌಲ್ ಮಾಡಬೇಕಾಗುತ್ತದೆ.
- 3 ಗಂಟೆಯಿಂದ ಪಂದ್ಯ: ಎಂದಿನಂತೆ ಸೋಮವಾರ ಕೂಡ ಮಧ್ಯಾಹ್ನ 3 ಗಂಟೆಯಿಂದ ಪಂದ್ಯ ಶುರುವಾಗಲಿದೆ.
Asia cup 2023 PAK vs IND Live Score: ಕೊಲಂಬೊದಲ್ಲಿ ಸತತ ಮಳೆ ಅಡ್ಡಿ
Pakistan team is in the house for the reserve day clash! But the situation getting worse in Colombo🌧️⛈️#INDvPAK #AsiaCup2023 pic.twitter.com/6bduWhNCJS
— RevSportz (@RevSportz) September 11, 2023
ಅರ್ಧಗಂಟೆಗೂ ಮುಂಚೆ ಕೊಲಂಬೊ ಮೈದಾನದ ಸುತ್ತ ಮುತ್ತ ಧಾರಾಕಾರ ಮಳೆಯಾಗಿದ್ದು, ಈ ವೇಳೆ ತೆಗೆದ ವಿಡಿಯೋ.
Asia cup 2023 PAK vs IND Live Score: ಭಾರತ-ಪಾಕಿಸ್ತಾನ್ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿ
ಭಾನುವಾರ ನಡೆಯಬೇಕಿದ್ದ ಭಾರತ-ಪಾಕಿಸ್ತಾನ್ ನಡುವಣ ಪಂದ್ಯವು ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಲಾಗಿದೆ. ಆದರೀಗ ಕೊಲಂಬೊದಲ್ಲಿ ಮಳೆಯಾಗುತ್ತಿದ್ದು, ಇಂದು ಕೂಡ ಪಂದ್ಯ ಶುರುವಾಗುವುದು ವಿಳಂಬವಾಗಲಿದೆ. ಸದ್ಯದ ಮಾಹಿತಿ ಪ್ರಕಾರ, ಕೊಲಂಬೊ ಸುತ್ತ ಮುತ್ತ ಧಾರಾಕಾರ ಮಳೆಯಾಗಿದ್ದು, ಹೀಗಾಗಿ ಮೈದಾನವನ್ನು ಟರ್ಪಲ್ಗಳಿಂದ ಕವರ್ ಮಾಡಲಾಗಿದೆ.
Published On - Sep 11,2023 2:24 PM