ಏಷ್ಯಾಕಪ್ನ ಸೂಪರ್ ಫೋರ್ ಹಂತದ 5ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಶ್ರೀಲಂಕಾ ತಂಡವು 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಮಳೆಯಿಂದಾಗಿ 42 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 7 ವಿಕೆಟ್ ನಷ್ಟಕ್ಕೆ 252 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವು ಅಂತಿಮ ಹಂತದಲ್ಲಿ ದಿಢೀರ್ ಕುಸಿತಕ್ಕೊಳಗಾಯಿತು. ಪರಿಣಾಮ ಕೊನೆಯ ಓವರ್ನಲ್ಲಿ 8 ರನ್ಗಳ ಗುರಿ ಪಡೆಯಿತು. ಈ ಹಂತದಲ್ಲಿ ಫೋರ್ ಬಾರಿಸಿದ ಚರಿತ್ ಅಸಲಂಕಾ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಅಲ್ಲದೆ ಅಂತಿಮ ಎಸೆತದಲ್ಲಿ 2 ರನ್ ಓಡುವ ಮೂಲಕ ಅಸಲಂಕಾ ಶ್ರೀಲಂಕಾ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡವು ಏಷ್ಯಾಕಪ್ ಫೈನಲ್ಗೆ ಪ್ರವೇಶಿಸಿದೆ. ಸೆಪ್ಟೆಂಬರ್ 17 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ-ಶ್ರೀಲಂಕಾ ಮುಖಾಮುಖಿಯಾಗಲಿದೆ.
ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್, ಅಬ್ದುಲ್ಲಾ ಶಫೀಕ್, ಬಾಬರ್ ಆಝಮ್ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ಹ್ಯಾರಿಸ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್ ಜೂನಿಯರ್, ಝಮಾನ್ ಖಾನ್
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಪ್ರಮೋದ್ ಮದುಶನ್, ಮತೀಶ ಪತಿರಾಣ.
ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಹೀಮ್ ಅಶ್ರಫ್, ಫಖರ್ ಝಮಾನ್, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ಸಲ್ಮಾನ್ ಅಲಿ ಅಘಾ, ಸೌದ್ ಶಕೀಲ್, ಶಾಹೀನ್ ಅಫ್ರಿದಿ ಮತ್ತು ಉಸಾಮಾ ಮಿರ್, ಮೊಹಮ್ಮದ್ ವಾಸಿಂ ಜೂನಿಯರ್, ಝಮಾನ್ ಖಾನ್, ತಯ್ಯಬ್ ತಾಹಿರ್ (ಮೀಸಲು ಆಟಗಾರ).
ಕೊನೆಯ ಓವರ್ನಲ್ಲಿ 8 ರನ್ಗಳ ಗುರಿ ಪಡೆದ ಶ್ರೀಲಂಕಾ ತಂಡಕ್ಕೆ ಜಯ ತಂದುಕೊಟ್ಟ ಚರಿತ್ ಅಸಲಂಕಾ.
ಅಂತಿಮ ಎಸೆತದಲ್ಲಿ 2 ರನ್ ಗಳಿಸಿ ಪಂದ್ಯ ಗೆದ್ದ ಶ್ರೀಲಂಕಾ. ಈ ಗೆಲುವಿನೊಂದಿಗೆ ಏಷ್ಯಾಕಪ್ ಫೈನಲ್ಗೆ ಪ್ರವೇಶಿಸಿದ ಶ್ರೀಲಂಕಾ.
ಸೆಪ್ಟೆಂಬರ್ 17 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ – ಪಾಕಿಸ್ತಾನ್ ಮುಖಾಮುಖಿ.
ಕೊನೆಯ ಓವರ್ನಲ್ಲಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 8 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಪ್ರಮೋದ್ ಮಧುಶಂಕ ಹಾಗೂ ಚರಿತ್ ಅಸಲಂಕಾ ಬ್ಯಾಟಿಂಗ್.
ಅಂತಿಮ ಓವರ್ ಎಸೆಯಲು ಝಮಾನ್ ಖಾನ್ ಸಜ್ಜು.
ಶಾಹೀನ್ ಶಾ ಅಫ್ರಿದಿ ಎಸೆದ 41ನೇ ಓವರ್ನ 4ನೇ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಧನಂಜಯ ಡಿ ಸಿಲ್ವಾ.
5ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚಿತ್ತ ದುನಿತ್ ವೆಲ್ಲಾಲಗೆ
ಶ್ರೀಲಂಕಾಗೆ 7 ಎಸೆತಗಳಲ್ಲಿ 9 ರನ್ಗಳ ಅವಶ್ಯಕತೆ
12 ಎಸೆತಗಳಲ್ಲಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 12 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಧನಂಜಯ ಡಿ ಸಿಲ್ವಾ ಹಾಗೂ ಚರಿತ್ ಅಸಲಂಕಾ ಬ್ಯಾಟಿಂಗ್
ಇಫ್ತಿಕರ್ ಅಹ್ಮದ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ದಸುನ್ ಶಾನಕ.
4 ಎಸೆತಗಳಲ್ಲಿ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ.
42 ಓವರ್ಗಳ ಪಂದ್ಯ
ಇಫ್ತಿಕರ್ ಅಹ್ಮದ್ ಎಸೆತದಲ್ಲಿ ಕುಸಾಲ್ ಮೆಂಡಿಸ್ ಬ್ಯಾಟ್ ಎಡ್ಜ್ ಆಗಿ ಗಾಳಿಯಲ್ಲಿ ಚಿಮ್ಮಿದ ಚೆಂಡು…ಫ್ರಂಟ್ ಫೀಲ್ಡರ್ ಹ್ಯಾರಿಸ್ ಅದ್ಭುತ ಡೈವಿಂಗ್ ಕ್ಯಾಚ್…ಔಟ್.
87 ಎಸೆತಗಳಲ್ಲಿ 91 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕುಸಾಲ್ ಮೆಂಡಿಸ್.
42 ಓವರ್ಗಳ ಪಂದ್ಯ
ಇಫ್ತಿಕರ್ ಅಹ್ಮದ್ ಎಸೆದ 34ನೇ ಓವರ್ನ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕುಸಾಲ್ ಮೆಂಡಿಸ್.
ಶ್ರೀಲಂಕಾ ತಂಡಕ್ಕೆ ಗಲ್ಲಲು 48 ಎಸೆತಗಳಲ್ಲಿ 43 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
ಇಫ್ತಿಕರ್ ಅಹ್ಮದ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ನಿರ್ಗಮಿಸಿದ ಸದೀರ ಸಮರ ವಿಕ್ರಮ.
51 ಎಸೆತಗಳಲ್ಲಿ 48 ರನ್ ಬಾರಿಸಿ ಅರ್ಧಶತಕ ವಂಚಿತರಾಗಿ ಹೊರ ನಡೆದ ಸದೀರ.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಚರಿತ್ ಅಸಲಂಕಾ ಬ್ಯಾಟಿಂಗ್.
28 ಓವರ್ಗಳ ಮುಕ್ತಾಯದ ವೇಳೆಗೆ 167 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ (72) ಹಾಗೂ ಸದೀರ ಸಮರ ವಿಕ್ರಮ (41) ಬ್ಯಾಟಿಂಗ್.
ಶ್ರೀಲಂಕಾ ತಂಡಕ್ಕೆ ಗೆಲ್ಲಲು 84 ಎಸೆತಗಳಲ್ಲಿ 85 ರನ್ ಗಳ ಅವಶ್ಯಕತೆ.
42 ಓವರ್ ಗಳ ಪಂದ್ಯ
47 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ಕುಸಾಲ್ ಮೆಂಡಿಸ್.
ಶ್ರೀಲಂಕಾಗೆ ಗೆಲ್ಲಲು 120 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಸದೀರ ಸಮರ ವಿಕ್ರಮ ಬ್ಯಾಟಿಂಗ್.
ಶಾದಾಬ್ ಖಾನ್ ಎಸೆತದಲ್ಲಿ ಪಾಯಿಂಟ್ ಫೀಲ್ಡರ್ ಮೂಲಕ ಫೋರ್ ಬಾರಿಸಿದ ಸದೀರ ಸಮರ ವಿಕ್ರಮ.
ಈ ಫೋರ್ನೊಂದಿಗೆ ಶತಕ ಪೂರೈಸಿದ ಶ್ರೀಲಂಕಾ.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಸದೀರ ಸಮರ ವಿಕ್ರಮ ಬ್ಯಾಟಿಂಗ್.
42 ಓವರ್ಗಳ ಪಂದ್ಯ
15 ಓವರ್ ಮುಕ್ತಾಯದ ವೇಳೆ 2 ವಿಕೆಟ್ ಕಳೆದುಕೊಂಡು 89 ರನ್ ಕಲೆಹಾಕಿದ ಶ್ರೀಲಂಕಾ.
ಶಾದಾಬ್ ಖಾನ್ ಎಸೆತದಲ್ಲಿ ಬೌಲರ್ಗೆ ನೇರವಾಗಿ ಕ್ಯಾಚ್ ನೀಡಿದ ಪಾತುಮ್ ನಿಸ್ಸಂಕಾ.
44 ಎಸೆತಗಳಲ್ಲಿ 29 ರನ್ ಗಳಿಸಿ ನಿರ್ಗಮಿಸಿದ ಪಾತುಮ್ ನಿಸ್ಸಂಕಾ.
42 ಓವರ್ಗಳ ಪಂದ್ಯ.
10 ಓವರ್ಗಳು ಮುಕ್ತಾಯದ ವೇಳೆ 62 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
ಕುಸಾಲ್ ಪೆರೇರಾರನ್ನು ರನೌಟ್ ಮಾಡಿ ಪಾಕ್ಗೆ ಮೊದಲ ಯಶಸ್ಸು ತಂದುಕೊಟ್ಟ ಶಾದಾಬ್ ಖಾನ್
42 ಓವರ್ಗಳ ಪಂದ್ಯ.
42 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಕಲೆಹಾಕಿದ ಪಾಕಿಸ್ತಾನ್.
ಪಾಕ್ ಪರ ಮೊಹಮ್ಮದ್ ರಿಝ್ವಾನ್ (86) ಗರಿಷ್ಠ ಸ್ಕೋರರ್.
ಮಥೀಶ ಪತಿರಾಣ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಇಫ್ತಿಕರ್ ಅಹ್ಮದ್.
ದ್ವಿಶತಕ ಪೂರೈಸಿದ ಪಾಕಿಸ್ತಾನ್.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಇಫ್ತಿಕರ್ ಅಹ್ಮದ್ ಬ್ಯಾಟಿಂಗ್.
42 ಓವರ್ಗಳ ಪಂದ್ಯ
36 ಓವರ್ಗಳ ಮುಕ್ತಾಯದ ವೇಳೆಗೆ 192 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.
ಕ್ರೀಸ್ನಲ್ಲಿ 56 ಎಸೆತಗಳಲ್ಲಿ 57 ರನ್ ಬಾರಿಸಿದ ರಿಝ್ವಾನ್ ಹಾಗೂ ಇಫ್ತಿಕರ್ ಅಹ್ಮದ್ (23) ಬ್ಯಾಟಿಂಗ್.
42 ಓವರ್ಗಳ ಪಂದ್ಯ.
ಮಹೀಶ್ ತೀಕ್ಷಣ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಮೊಹಮ್ಮದ್ ನವಾಝ್.
12 ಎಸೆತಗಳಲ್ಲಿ 12 ರನ್ ಬಾರಿಸಿ ಹೊರ ನಡೆದ ಎಡಗೈ ದಾಂಡಿಗ ಮೊಹಮ್ಮದ್ ನವಾಝ್.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಇಫ್ತಿಕರ್ ಅಹ್ಮದ್ ಬ್ಯಾಟಿಂಗ್.
45 ಓವರ್ಗಳ ಪಂದ್ಯ…ಮಳೆಯ ಕಾರಣ ಪಂದ್ಯ ಸ್ಥಗಿತ.
ಮಥೀಶ ಪತಿರಾಣ ಎಸೆತದಲ್ಲಿ ನೇರವಾಗಿ ಬೌಲರ್ಗೆ ಕ್ಯಾಚ್ ನೀಡಿದ ಮೊಹಮ್ಮದ್ ಹ್ಯಾರಿಸ್.
9 ಎಸೆತಗಳಲ್ಲಿ ಕೇವಲ 3 ರನ್ಗಳಿಸಿ ನಿರ್ಗಮಿಸಿದ ಹ್ಯಾರಿಸ್. ಶ್ರೀಲಂಕಾ ತಂಡಕ್ಕೆ 4ನೇ ಯಶಸ್ಸು.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಮೊಹಮ್ಮದ್ ನವಾಝ್ ಬ್ಯಾಟಿಂಗ್.
ಮಥೀಶ ಪತಿರಾಣ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಅಬ್ದುಲ್ಲ ಶಫೀಕ್.
69 ಎಸೆತಗಳಲ್ಲಿ 52 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಆರಂಭಿಕ ಆಟಗಾರ ಅಬ್ದುಲ್ಲ ಶಫೀಕ್.
45 ಓವರ್ ಗಳ ಪಂದ್ಯ
ಧನಂಜಯ ಡಿ ಸಿಲ್ವಾ ಎಸೆದ 21ನೇ ಓವರ್ನ 2ನೇ ಎಸೆತದಲ್ಲಿ ಮುನ್ನುಗ್ಗಿ ಬಂದು ಲಾಂಗ್ ಆನ್ನತ್ತ ಸಿಕ್ಸ್ ಸಿಡಿಸಿದ ಅಬ್ದುಲ್ಲ ಶಫೀಕ್.
65 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಬ್ದುಲ್ಲ ಶಫೀಕ್.
ಕ್ರೀಸ್ನಲ್ಲಿ ರಿಝ್ವಾನ್-ಶಫೀಕ್ ಬ್ಯಾಟಿಂಗ್.
20 ಓವರ್ಗಳ ಮುಕ್ತಾಯದ ವೇಳೆಗೆ 88 ರನ್ ಕಲೆಹಾಕಿದ ಪಾಕಿಸ್ತಾನ್.
ಶ್ರೀಲಂಕಾ ತಂಡಕ್ಕೆ 2 ಯಶಸ್ಸು. ಮೊದಲ ವಿಕೆಟ್ ಪಡೆದ ಪ್ರಮೋದ್ ಮಧುಶಂಕ. 2ನೇ ವಿಕೆಟ್ ದುನಿತ್ ವೆಲ್ಲಾಲಗೆಗೆ.
ಕ್ರೀಸ್ನಲ್ಲಿ ಅಬ್ದುಲ್ಲ ಶಫೀಕ್ (43) ಹಾಗೂ ಮೊಹಮ್ಮದ್ ರಿಝ್ವಾನ್ (9) ಬ್ಯಾಟಿಂಗ್.
45 ಓವರ್ಗಳ ಪಂದ್ಯ.
ದುನಿಲ್ ವೆಲ್ಲಾಲಗೆ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ಹೊರ ನಡೆದ ಬಾಬರ್ ಆಝಂ.
35 ಎಸೆತಗಳಲ್ಲಿ 29 ರನ್ ಬಾರಿಸಿದ ವಿಕೆಟ್ ಒಪ್ಪಿಸಿದ ಪಾಕ್ ತಂಡದ ನಾಯಕ ಬಾಬರ್.
ಕ್ರೀಸ್ನಲ್ಲಿ ಅಬ್ದುಲ್ಲ ಶಫೀಕ್ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.
45 ಓವರ್ಗಳ ಪಂದ್ಯ
ಮಥೀಶ ಪತಿರಾಣ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಅಬ್ದುಲ್ಲ ಶಫೀಕ್
53 ಎಸೆತಗಳಲ್ಲಿ ಅರ್ಧ ಶತಕದ ಜೊತೆಯಾಟವಾಡಿದ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್.
ಪಾಕ್ ಬ್ಯಾಟರ್ಗಳಿಂದ ಉತ್ತಮ ಪ್ರದರ್ಶನ.
45 ಓವರ್ ಗಳ ಪಂದ್ಯ.
ದುನಿತ್ ವೆಲ್ಲಾಲಗೆ ಎಸೆದ 11ನೇ ಓವರ್ನ 3ನೇ ಎಸೆತದಲ್ಲಿ ಮುನ್ನುಗ್ಗಿ ಬಂದು ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಬ್ದುಲ್ಲ ಶಫೀಕ್.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.
45 ಓವರ್ಗಳ ಪಂದ್ಯ
10 ಓವರ್ ಗಳಲ್ಲಿ 40 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.
ಕ್ರೀಸ್ ನಲ್ಲಿ ಬಾಬರ್ ಆಝಂ (18) ಹಾಗೂ ಅಬ್ದುಲ್ಲ ಶಫೀಕ್ (16) ಬ್ಯಾಟಿಂಗ್.
ಒಂದು ವಿಕೆಟ್ ಪಡೆದ ಶ್ರೀಲಂಕಾ ವೇಗಿ ಪ್ರಮೋದ್ ಮಧುಶನ್.
ಇದು 45 ಓವರ್ಗಳ ಪಂದ್ಯ.
ದಸುನ್ ಶಾನಕ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಬಾಬರ್ ಆಝಂ.
ಕ್ರೀಸ್ನಲ್ಲಿ ಅಬ್ದುಲ್ಲ ಶಫೀಕ್ ಹಾಗೂ ಬಾಬರ್ ಆಝಂ ಬ್ಯಾಟಿಂಗ್.
ಮಧುಶಂಕ ಓವರ್ ನಲ್ಲಿ ವಿಕೆಟ್ ಒಪ್ಪಿಸಿದ ಫಖರ್ ಝಮಾನ್.
ಪ್ರಮೋದ್ ಮಧುಶನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಫಖರ್ ಝಮಾನ್.
11 ಎಸೆತಗಳಲ್ಲಿ 4 ರನ್ಗಳಿಸಿ ವಿಕೆಟ್ ಒಪ್ಪಿಸಿದ ಆರಂಭಿಕ ಆಟಗಾರ ಫಖರ್ ಝಮಾನ್.
ಕ್ರೀಸ್ನಲ್ಲಿ ಅಬ್ದುಲ್ಲ ಶಫೀಕ್ ಹಾಗೂ ಬಾಬರ್ ಆಝಂ ಬ್ಯಾಟಿಂಗ್
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಪ್ರಮೋದ್ ಮದುಶನ್, ಮತೀಥ ಪತಿರಾಣ.
ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್, ಅಬ್ದುಲ್ಲಾ ಶಫೀಕ್, ಬಾಬರ್ ಆಝಮ್ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ಹ್ಯಾರಿಸ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್ ಜೂನಿಯರ್, ಝಮಾನ್ ಖಾನ್
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಸಂಜೆ 5 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, 5.15 ರಿಂದ ಮ್ಯಾಚ್ ಆರಂಭವಾಗಲಿದೆ.
ಇನ್ನು ಮಳೆಯಿಂದ ತಡವಾಗಿರುವ ಕಾರಣ 45 ಓವರ್ಗಳ ಪಂದ್ಯವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಕೊಲಂಬೊದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹೀಗಾಗಿ ಪಾಕಿಸ್ತಾನ್ ಹಾಗೂ ಶ್ರೀಲಂಕಾ ನಡುವಣ ಪಂದ್ಯ ಆರಂಭವಾಗುವುದು ಮತ್ತಷ್ಟು ತಡವಾಗಲಿದೆ. ಸಂಜೆ 4.30 ರಿಂದ ಓವರ್ ಕಡಿತ ಪ್ರಾರಂಭವಾಗಲಿದ್ದು, ಹೀಗಾಗಿ 50 ಓವರ್ಗಳ ಮ್ಯಾಚ್ ನಡೆಯುವುದು ಅನುಮಾನ.
ಇನ್ನು ಕಟ್ ಆಫ್ ಟೈಮ್ ರಾತ್ರಿ 9.02 ಗಂಟೆ. ಈ ವೇಳೆಗೆ ಪಂದ್ಯ ಆಯೋಜಿಸಲು ಮೈದಾನ ಸೂಕ್ತವಾಗಿದ್ದರೆ ಮಾತ್ರ 20 ಓವರ್ಗಳ ಮ್ಯಾಚ್ ನಡೆಯಲಿದೆ.
ಪಾಕಿಸ್ತಾನ್ ಹಾಗೂ ಶ್ರೀಲಂಕಾ ನಡುವಣ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಕೊಲಂಬೊದಲ್ಲಿ ಬೆಳಿಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಹೀಗಾಗಿ ಪ್ರೇಮದಾಸ ಮೈದಾನವನ್ನು ಟರ್ಪಲ್ಗಳಿಂದ ಕವರ್ ಮಾಡಲಾಗಿದೆ. ಹೀಗಾಗಿ ಇಂದಿನ ಪಂದ್ಯ ತಡವಾಗಿ ಶುರುವಾಗಲಿದೆ. ಒಂದು ವೇಳೆ ಈ ಪಂದ್ಯವು ಮಳೆಯಿಂದ ರದ್ದಾದರೆ ಶ್ರೀಲಂಕಾ ತಂಡವು ಫೈನಲ್ಗೆ ಅರ್ಹತೆ ಪಡೆಯಲಿದೆ.
The stage is set for yet another massive clash! The co-hosts of the tournament, lock horns today, in a must win encounter. The winner of today’s match will face India in the finals!#AsiaCup2023 #PAKvsSL pic.twitter.com/LWgmkPHr7l
— AsianCricketCouncil (@ACCMedia1) September 14, 2023
ಪಾಕಿಸ್ತಾನ್ ಹಾಗೂ ಶ್ರೀಲಂಕಾ ನಡುವೆ ಮಾಡು ಇಲ್ಲವೇ ಮಡಿ ಪಂದ್ಯ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ಗೆ ಎಂಟ್ರಿಯಾಗಲಿದೆ. ಹೀಗಾಗಿ ಕೊಲಂಬೊ ಮೈದಾನದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
Published On - 2:26 pm, Thu, 14 September 23