IND vs NEP: ಭಾರತ- ನೇಪಾಳ ಪಂದ್ಯಕ್ಕೂ ಮಳೆ ಕಾಟ; ಪಂದ್ಯ ರದ್ದಾದರೆ ಯಾರಿಗೆ ಲಾಭ?
Asia Cup 2023: ಅಕ್ಯುವೆದರ್‌ನ ಭಾನುವಾರದ ವರದಿ ಪ್ರಕಾರ, ಸೋಮವಾರ ಬೆಳಗ್ಗೆ ಪಲ್ಲೆಕೆಲೆಯಲ್ಲಿ ಶೇ.60 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ, ಪಂದ್ಯದ ಆರಂಭಕ್ಕೂ ಮುನ್ನ ಪಿಚ್ ಒದ್ದೆಯಾಗುವ ಸಾಧ್ಯತೆಯಿದೆ. ಸಂಜೆ 6ರವರೆಗೂ ಇದು ಮುಂದುವರೆಯಲ್ಲಿದೆ. ಆದರೆ ಸಂಜೆಯಿಂದ ಮಳೆ ಬರುವ ಸಾಧ್ಯತೆ ಶೇ.66 ರಷ್ಟು ಹೆಚ್ಚಾಗಲಿದೆ.
ಏಷ್ಯಾಕಪ್ 2023 ರ (Asia Cup 2023) ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಪಂದ್ಯವು ಮಳೆಯಿಂದಾಗಿ ಪೂರ್ಣಗೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಎರಡೂ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಳ್ಳಬೇಕಾಗಿತ್ತು. ಪಲ್ಲೆಕೆಲೆಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಇನಿಂಗ್ಸ್ ಬಳಿಕ ಪಂದ್ಯವನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ. ಪಂದ್ಯ ಆರಂಭಕ್ಕೂ ಮುನ್ನ ಮಳೆ ಸುರಿದಿದ್ದು , ಭಾರತದ ಇನ್ನಿಂಗ್ಸ್‌ನಲ್ಲೂ ಮಳೆ ಸುರಿಯಿತು. ಭಾರತದ ಇನ್ನಿಂಗ್ಸ್ ಅಂತ್ಯಗೊಂಡ ತಕ್ಷಣ, ಮತ್ತೆ ಮಳೆ ಸುರಿಯಲಾರಂಭಿಸಿತು. ಎಷ್ಟು ಹೊತ್ತಾದರೂ ಮಳೆ ನಿಲ್ಲಲಿಲ್ಲ. ಪಂದ್ಯವನ್ನು ಆಡಲು ಹವಾಮಾನ (Weather Report) ಪ್ರತಿಕೂಲ ಪರಿಸ್ಥಿತಿ ಮಾಡಿಕೊಡದ ಕಾರಣ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್‌ಗಳು ನಿರ್ಧರಿಸಿದ್ದರು. ಇದೀಗ ಭಾರತ ಹಾಗೂ ನೇಪಾಳ (India vs Nepal) ನಡುವಿನ ಪಂದ್ಯವೂ ಮಳೆಗಾಹುತಿಯಾಗುವ ಸಾಧ್ಯತೆಗಳು ಹೆಚ್ಚಿವೆ.
2023ರ ಏಷ್ಯಾಕಪ್‌ನಲ್ಲಿ ಭಾರತದ ಮುಂದಿನ ಪಂದ್ಯ ಸೋಮವಾರ ನೇಪಾಳ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲೂ ಎಲ್ಲರ ಕಣ್ಣು ವಾತಾವರಣದ ಮೇಲಿದೆ. ಏಕೆಂದರೆ ಇಂದು ಪಂದ್ಯದ ದಿನ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ.
ಭಾರತ- ಪಾಕ್ ಏಷ್ಯಾಕಪ್ ಕದನದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಂಡಿಗ ಯಾರು ಗೊತ್ತಾ?
60ರಷ್ಟು ಮಳೆಯಾಗುವ ಸಾಧ್ಯತೆ
ಅಕ್ಯುವೆದರ್‌ನ ವರದಿ ಪ್ರಕಾರ, ಸೋಮವಾರ ಬೆಳಗ್ಗೆ ಪಲ್ಲೆಕೆಲೆಯಲ್ಲಿ ಶೇ.60 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ, ಪಂದ್ಯದ ಆರಂಭಕ್ಕೂ ಮುನ್ನ ಪಿಚ್ ಒದ್ದೆಯಾಗುವ ಸಾಧ್ಯತೆಯಿದೆ. ಸಂಜೆ 6ರವರೆಗೂ ಇದು ಮುಂದುವರೆಯಲ್ಲಿದೆ. ಆದರೆ ಸಂಜೆಯಿಂದ ಮಳೆ ಬರುವ ಸಾಧ್ಯತೆ ಶೇ.66 ರಷ್ಟು ಹೆಚ್ಚಾಗಲಿದೆ. ಅಂದರೆ ಪಾಕಿಸ್ತಾನ ವಿರುದ್ಧದ ಪಂದ್ಯದಂತೆ ಈ ಪಂದ್ಯದಲ್ಲೂ ಎರಡನೇ ಇನಿಂಗ್ಸ್ ವೇಳೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮಳೆಯಿಂದಾಗಿ ಈ ಪಂದ್ಯವೂ ರದ್ದಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಪಂದ್ಯ ರದ್ಧಾದರೆ ಭಾರತಕ್ಕೆ ಲಾಭ
ಭಾರತ ತಂಡ ಈ ಪಂದ್ಯವನ್ನು ಗೆದ್ದರೇ ಸುಲಭವಾಗಿ ಸೂಪರ್-4 ಗೆ ಪ್ರವೇಶಿಸಲಿದೆ. ಆದರೆ, ಪಂದ್ಯ ಗೆಲ್ಲುವ ಟೀಂ ಇಂಡಿಯಾದ ಆಸೆಗೆ ಮಳೆ ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಮಳೆ ಬಂದರೂ ಟೀಂ ಇಂಡಿಯಾ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ಭಾರತ ಮತ್ತು ನೇಪಾಳ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿ ಎರಡೂ ತಂಡಗಳು ತಲಾ ಒಂದು ಅಂಕ ಪಡೆದರೂ ಟೀಂ ಇಂಡಿಯಾ ಸೂಪರ್-4ಗೆ ಅರ್ಹತೆ ಪಡೆಯಲಿದೆ. ಏಕೆಂದರೆ ಪಾಕ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದರಿಂದ ಭಾರತಕ್ಕೆ ಒಂದು ಅಂಕ ಸಿಕ್ಕಿತ್ತು. ಇದೀಗ ಎರಡನೇ ಪಂದ್ಯವೂ ರದ್ದಾದರೆ ಮತ್ತೊಂದು ಅಂಕ ಸಿಗಲಿದೆ. ಒಟ್ಟಾರೆ ಭಾರತದ ಬಳಿ ಎರಡು ಅಂಕಗಳಿದ್ದರೆ, ನೇಪಾಳಕ್ಕೆ ಕೇವಲ ಒಂದು ಅಂಕ ಮಾತ್ರ ಸಿಗುತ್ತದೆ. ಅಲ್ಲದೆ ಮೊದಲ ಪಂದ್ಯದಲ್ಲಿ ನೇಪಾಳವು ಪಾಕಿಸ್ತಾನದ ಎದುರು ಸೋಲು ಕಂಡಿದ್ದರಿಂದ ನೇಪಾಳದ ಸೂಪರ್ 4 ಕನಸಿಗೆ ಬ್ರೇಕ್ ಬೀಳಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:08 am, Mon, 4 September 23