ಮಳೆ ಬೀಳುವುದು ಖಚಿತ; ಭಾರತ- ನೇಪಾಳ ನಡುವಿನ ಪಂದ್ಯ ನಡೆಯುವುದು ಡೌಟ್..!

|

Updated on: Sep 03, 2023 | 8:34 AM

India vs Nepal Asia Cup 2023 Weather Forecast: ಭಾರತದ ಬ್ಯಾಟಿಂಗ್​ಗೆ ಅವಕಾಶ ಮಾಡಿಕೊಟ್ಟ ವರುಣ, ಪಾಕ್ ಬ್ಯಾಟರ್​ಗಳನ್ನು ಮೈದಾನಕ್ಕಿಳಿದಂತೆ ಮಾಡಿದನು. ಇದರಿಂದ ಪಂದ್ಯ ರದ್ದಾಗಿದ್ದು, ಉಭಯ ತಂಡಗಳಿಗೂ ತಲಾ ಒಂದೊಂದು ಅಂಕವನ್ನು ನೀಡಲಾಗಿದೆ. ಇದೀಗ ಭಾರತ ಸೂಪರ್​ 4ಗೆ ಅರ್ಹತೆ ಪಡೆಯಬೇಕೆಂದರೆ ನೇಪಾಳ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಬೇಕಿದೆ. ಆದರೆ ಈ ಪಂದ್ಯಕ್ಕೂ ಮಳೆ ಕಾಟ ನೀಡುವ ಸಾಧ್ಯತೆ ಹೆಚ್ಚಿದೆ.

ಮಳೆ ಬೀಳುವುದು ಖಚಿತ; ಭಾರತ- ನೇಪಾಳ ನಡುವಿನ ಪಂದ್ಯ ನಡೆಯುವುದು ಡೌಟ್..!
ಪಲ್ಲೆಕೆಲೆ ಹವಾಮಾನ ವರದಿ
Follow us on

ಏಷ್ಯಾಕಪ್​ನಲ್ಲಿ (Asia Cup 2023) ನಡೆದ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಮೆಗಾ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಟೀಂ ಇಂಡಿಯಾ (Team India) ತನ್ನ ಮೊದಲ ಪಂದ್ಯದಲ್ಲೇ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದರೆ, ಇತ್ತ ಪಾಕಿಸ್ತಾನ ಒಂದು ಎಸೆತವನ್ನೂ ಆಡದೆ ಸೂಪರ್-ಫೋರ್‌ಗೆ ಅರ್ಹತೆ ಪಡೆದಿದೆ. ಪಂದ್ಯ ಆರಂಭಕ್ಕೂ ಮುನ್ನವೇ ಕ್ಯಾಂಡಿಯಲ್ಲಿ ಮಳೆ ಸುರಿಯುವುದು ಪಕ್ಕ ಆಗಿತ್ತು. ಹೀಗಾಗಿ ಈ ಉಭಯ ತಂಡಗಳ ನಡುವೆ ಒಂದು ಎಸೆತವನ್ನೂ ಆಡಲು ಸಾಧ್ಯವಾಗುವುದಿಲ್ಲವೇನೋ ಎಂದು ಅಭಿಮಾನಿಗಳು ನಿರಾಶೆಗೊಂಡಿದ್ದರು. ಆದರೆ ಭಾರತದ ಬ್ಯಾಟಿಂಗ್​ಗೆ ಅವಕಾಶ ಮಾಡಿಕೊಟ್ಟ ವರುಣ, ಪಾಕ್ ಬ್ಯಾಟರ್​ಗಳನ್ನು ಮೈದಾನಕ್ಕಿಳಿಯದಂತೆ ಮಾಡಿದನು. ಇದರಿಂದ ಪಂದ್ಯ ರದ್ದಾಗಿದ್ದು, ಉಭಯ ತಂಡಗಳಿಗೂ ತಲಾ ಒಂದೊಂದು ಅಂಕವನ್ನು ನೀಡಲಾಗಿದೆ. ಇದೀಗ ಭಾರತ ಸೂಪರ್​ 4ಗೆ ಅರ್ಹತೆ ಪಡೆಯಬೇಕೆಂದರೆ ನೇಪಾಳ (India vs Nepal) ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಬೇಕಿದೆ. ಆದರೆ ಈ ಪಂದ್ಯಕ್ಕೂ ಮಳೆ ಕಾಟ ನೀಡುವ ಸಾಧ್ಯತೆ ಹೆಚ್ಚಿದೆ.

ಸುಮಾರು 60% ಮಳೆಯಾಗುವ ಸಾಧ್ಯತೆ

ಭಾರತ ಹಾಗೂ ನೇಪಾಳ ನಡುವಿನ ಏಷ್ಯಾಕಪ್‌ ಪಂದ್ಯವು ನಾಳೆ ಅಂದರೆ, ಸೆಪ್ಟಂಬರ್ 4 ರಂದು ಇದೇ ಪಲ್ಲೆಕೆಲೆಯ ಮೈದಾನದಲ್ಲಿ ನಡೆಯಲ್ಲಿದೆ. ಆದರೆ ಪ್ರಸ್ತುತ ಪಲ್ಲೆಕೆಲೆ ಹವಾಮಾನ ವರದಿ ಪ್ರಕಾರ ಸೋಮವಾರ ಬೆಳಿಗ್ಗೆ ಸುಮಾರು 60% ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದ್ದರಿಂದ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಚಿಸಲು ಸಾಧ್ಯವಾಗದಿರಬಹುದು. ಆದಾಗ್ಯೂ, ಟಾಸ್ ಸಮಯದಲ್ಲಿ (ಮಧ್ಯಾಹ್ನ2:30) ಮಳೆಯಾಗುವ ಸಾಧ್ಯತೆ ತೀರ ಕಡಿಮೆ ಇದ್ದು, ಈ ಸಮಯದಲ್ಲಿ ಶೇಕಡ 22ರಷ್ಟು ಮಳೆಯಾಗಲಿದೆ.

‘ಆತನನ್ನು ಎದುರಿಸುವ ಸಾಮರ್ಥ್ಯ ಇವರಿಗಿಲ್ಲ’; ಟೀಂ ಇಂಡಿಯಾ ಆಟಗಾರರ ಕಾಲೆಳೆದ ಪಾಕ್ ಮಾಜಿ ಪ್ರಧಾನಿ

ಇದು ಸಂಜೆ 6 ಗಂಟೆಯವರೆಗೆ ಹಾಗೆಯೇ ಮುಂದುವರೆಯಲ್ಲಿದೆ. ಆದರೆ ಪಂದ್ಯದ ದ್ವಿತೀಯಾರ್ಧದಲ್ಲಿ ಅಂದರೆ ಸಂಜೆಯಾಗುವ ವೇಳೆಗೆ ಮಳೆಯಾಗುವ ಸಾಧ್ಯತೆ ಶೇಕಡ 66 ರಷ್ಟು ಹೆಚ್ಚಾಗಲಿದೆ. ಹೀಗಾಗಿ ಈ ಪಂದ್ಯವೂ ನಡೆಯುವುದು ಅನುಮಾನವಾಗಿದೆ. ಆದಾಗ್ಯೂ, ನೇಪಾಳ ವಿರುದ್ಧದ ಭಾರತದ ಮುಂದಿನ ಪಂದ್ಯ ಮಳೆಯಿಂದ ರದ್ದಾದರೂ ರೋಹಿತ್ ಪಡೆ 2 ಅಂಕಗಳೊಂದಿಗೆ ಸೂಪರ್ 4 ಗೆ ಅರ್ಹತೆ ಪಡೆಯುತ್ತದೆ. ಅಲ್ಲಿ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಏಷ್ಯಾಕಪ್​ಗೆ ಉಭಯ ತಂಡಗಳು

ಏಷ್ಯಾಕಪ್​ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ, ಕೆಎಲ್ ರಾಹುಲ್ (ಗಾಯದ ಕಾರಣದಿಂದ ಹೊರಗುಳಿದಿದ್ದಾರೆ)

ನೇಪಾಳ ತಂಡ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ಭೀಮ್ ಶಾರ್ಕಿ, ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಮಲ್ಲ, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಸೋಂಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಮಿಚಾನೆ, ಲಲಿತ್ ರಾಜಬಂಶಿ, ಸಂದೀಪ್ ಜೋರಾ, ಪ್ರತಿಸ್ ಜಿಸಿ, ಅರ್ಜುನ್ ಸೌದ್, ಮೌಸಮ್ ಧಕಲ್, ಕಿಶೋರ್ ಮಹತೋ, ಆರಿಫ್ ಶೇಖ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:31 am, Sun, 3 September 23