
2025 ರ ಏಷ್ಯಾಕಪ್‌ನಲ್ಲಿ ಭಾರತ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿ, ಪ್ರಸ್ತುತ ಟೂರ್ನಿಯಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡವು 13.1 ಓವರ್‌ಗಳಲ್ಲಿ ಕೇವಲ 57 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಇದಕ್ಕೆ ಉತ್ತರವಾಗಿ, ಭಾರತ ತಂಡವು 4.3 ಓವರ್‌ಗಳಲ್ಲಿ ಅಂದರೆ ಕೇವಲ 27 ಎಸೆತಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 60 ರನ್‌ಗಳನ್ನು ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಭಾರತದ ಪರ ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ 30 ರನ್ ಗಳಿಸಿದರೆ, ಶುಭ್ಮನ್ ಗಿಲ್ (20) ಮತ್ತು ಸೂರ್ಯಕುಮಾರ್ ಯಾದವ್ (7) ಅಜೇಯರಾಗಿ ಉಳಿದರು. ಯುಎಇ ಪರ ಜುನೈದ್ ಸಿದ್ದಿಕಿ ಒಂದು ವಿಕೆಟ್ ಪಡೆದರು. ಇದಕ್ಕೂ ಮೊದಲು, ಭಾರತ ತಂಡದ ಪರ ಕುಲ್ದೀಪ್ ಯಾದವ್ ನಾಲ್ಕು ಮತ್ತು ಶಿವಂ ದುಬೆ ಮೂರು ವಿಕೆಟ್ ಪಡೆದರು. ಇವರಲ್ಲದೆ, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.
ಭಾರತ ತಂಡವು 27 ಎಸೆತಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. 4.3 ಓವರ್‌ಗಳಲ್ಲಿ 58 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಟೀಮ್ ಇಂಡಿಯಾ ಕೇವಲ 1 ವಿಕೆಟ್ ಕಳೆದುಕೊಂಡು ಈ ಗುರಿಯನ್ನು ತಲುಪಿತು. ಐದನೇ ಓವರ್‌ನ ಮೂರನೇ ಎಸೆತದಲ್ಲಿ ಗಿಲ್ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಗಿಲ್ 9 ಎಸೆತಗಳಲ್ಲಿ 20 ರನ್ ಗಳಿಸಿದರೆ, ಅಭಿಷೇಕ್ ಶರ್ಮಾ ಕೇವಲ 16 ಎಸೆತಗಳಲ್ಲಿ 30 ರನ್ ಗಳಿಸಿದರು. ನಾಯಕ ಸೂರ್ಯಕುಮಾರ್ ಯಾದವ್ 2 ಎಸೆತಗಳಲ್ಲಿ 7 ರನ್ ಗಳಿಸಿ ಅಜೇಯರಾಗಿ ಮರಳಿದರು.
ಅಭಿಷೇಕ್ ಶರ್ಮಾ ಔಟ್. ದೊಡ್ಡ ಹೊಡೆತ ಹೊಡೆಯಲು ಪ್ರಯತ್ನಿಸುವಾಗ ಜುನೈದ್ ಸಿದ್ದಿಕಿಗೆ ವಿಕೆಟ್ ನೀಡಿದರು. 48 ರನ್‌ಗಳಿಗೆ ಒಂದು ವಿಕೆಟ್.
ಅಭಿಷೇಕ್ ಶರ್ಮಾ ಮತ್ತೊಂದು ಸಿಕ್ಸರ್ ಬಾರಿಸಿದರು. ಭಾರತ 3 ಓವರ್‌ಗಳಲ್ಲಿ 38 ರನ್ ಗಳಿಸಿದೆ. ಅಭಿಷೇಕ್ ಶರ್ಮಾ 13 ಎಸೆತಗಳಲ್ಲಿ 23 ರನ್ ಗಳಿಸಿದ್ದಾರೆ.
ಕುಲfದೀಪ್ ಯಾದವ್ ನಾಲ್ಕನೇ ವಿಕೆಟ್ ಪಡೆದು ಯುಎಇ ತಂಡವನ್ನು 57 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತದ ಅದ್ಭುತ ಬೌಲಿಂಗ್ ಮುಂದೆ ಯುಎಇಯ 9 ಬ್ಯಾಟ್ಸ್‌ಮನ್‌ಗಳಿಗೆ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ಪವರ್ ಪ್ಲೇ ನಂತರ, ಯುಎಇ ತಂಡವು ಕೇವಲ 16 ರನ್ ಗಳಿಸಿ 8 ವಿಕೆಟ್‌ಗಳನ್ನು ಕಳೆದುಕೊಂಡಿತು. ಕುಲ್ದೀಪ್ ಯಾದವ್ ಹೊರತುಪಡಿಸಿ, ಶಿವಂ ದುಬೆ 3 ವಿಕೆಟ್‌ಗಳನ್ನು ಪಡೆದರು.
ಯುಎಇಯ 7ನೇ ವಿಕೆಟ್ ಕೂಡ ಪತನಗೊಂಡಿದೆ. ಅಕ್ಷರ್ ಪಟೇಲ್ ಎಸೆತದಲ್ಲಿ ಸಿಮ್ರನ್‌ಜೀತ್ ಸಿಂಗ್ ಎಲ್‌ಬಿಡಬ್ಲ್ಯೂ ಆಗಿ ಔಟ್ ಆದರು. ಈ ಪಂದ್ಯವನ್ನು ಭಾರತ ಸುಲಭವಾಗಿ ಗೆಲ್ಲುವ ಸಾಧ್ಯತೆ ಇದೆ.
ಕುಲ್ದೀಪ್ ಯಾದವ್ ತಮ್ಮ ಎರಡನೇ ಓವರ್‌ನಲ್ಲಿ ಮೂರು ವಿಕೆಟ್ ಪಡೆದರು. ರಾಹುಲ್ ಚೋಪ್ರಾ, ಮೊಹಮ್ಮದ್ ವಾಸಿಮ್ ಮತ್ತು ಹರ್ಷಿತ್ ಕೌಶಿಕ್ ಔಟಾದರು. ಅದ್ಭುತ ಬೌಲಿಂಗ್. ಯುಎಇ 50 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡಿದೆ.
ಜಸ್ಪ್ರೀತ್ ಬುಮ್ರಾ ಅವರ ಮೂರನೇ ಓವರ್ ತುಂಬಾ ದುಬಾರಿಯಾಗಿತ್ತು. ಯುಎಇ ನಾಯಕ ಮುಹಮ್ಮದ್ ವಾಸಿಮ್ ಮೂರು ಬೌಂಡರಿಗಳನ್ನು ಬಾರಿಸಿದರು. ಆ ಓವರ್‌ನಲ್ಲಿ 12 ರನ್‌ಗಳು ಬಂದವು. ಪವರ್‌ಪ್ಲೇನಲ್ಲಿ ಯುಎಇ 41 ರನ್‌ಗಳನ್ನು ಗಳಿಸಿತು.
ಜಸ್ಪ್ರೀತ್ ಬುಮ್ರಾ ತಮ್ಮ ಎರಡನೇ ಓವರ್ ನಲ್ಲಿ ಅದ್ಭುತ ಬೌಲಿಂಗ್ ಮಾಡಿ ಭಾರತಕ್ಕೆ ಮೊದಲ ಯಶಸ್ಸನ್ನು ತಂದುಕೊಟ್ಟರು. ವೇಗದ ಬ್ಯಾಟಿಂಗ್ ಮಾಡುತ್ತಿದ್ದ ಶರಫು ಅವರನ್ನು ಬುಮ್ರಾ ಯಾರ್ಕರ್ ಮೂಲಕ ಕ್ಲೀನ್ ಬೌಲ್ಡ್ ಮಾಡಿದರು
ಯುಎಇ ತಂಡದ ಬ್ಯಾಟಿಂಗ್ ಆರಂಭವಾಗಿದೆ. ಟೀಮ್ ಇಂಡಿಯಾದಿಂದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮೊದಲ ಓವರ್ ಬೌಲಿಂಗ್ ಮಾಡಿ 10 ರನ್ ನೀಡಿದರು.
ಮುಹಮ್ಮದ್ ವಾಸಿಮ್ (ನಾಯಕ), ಅಲಿಶನ್ ಶರಾಫು, ಮುಹಮ್ಮದ್ ಜೊಹೈಬ್, ರಾಹುಲ್ ಚೋಪ್ರಾ (ವಿಕೆಟ್ ಕೀಪರ್), ಆಸಿಫ್ ಖಾನ್, ಹರ್ಷಿತ್ ಕೌಶಿಕ್, ಹೈದರ್ ಅಲಿ, ಧ್ರುವ ಪರಾಶರ್, ಮುಹಮ್ಮದ್ ರೋಹಿದ್ ಖಾನ್, ಜುನೈದ್ ಸಿದ್ದಿಕಿ, ಸಿಮ್ರಂಜೀತ್ ಸಿಂಗ್.
ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ಜಸ್ಪ್ರೀತ್ ಬುಮ್ರಾ.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - 6:50 pm, Wed, 10 September 25