Asia Cup 2025: ಟಾಸ್ ಗೆದ್ದು ಅಚ್ಚರಿಯ ನಿರ್ಧಾರ ತೆಗೆದುಕೊಂಡ ಸೂರ್ಯ; ಹೀಗಿದೆ ಪ್ಲೇಯಿಂಗ್ 11
IND vs UAE Playing 11: ಏಷ್ಯಾಕಪ್ ಟಿ20 ಟೂರ್ನಮೆಂಟ್‌ನಲ್ಲಿ ಭಾರತ ತಂಡ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡುತ್ತಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿರುವ ಭಾರತ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ದುಬೈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಅನುಕೂಲವಿದ್ದರೂ, ಸೂರ್ಯಕುಮಾರ್ ಅವರ ತಂತ್ರಗಾರಿಕೆ ಕುತೂಹಲಕಾರಿಯಾಗಿದೆ. ಎರಡೂ ತಂಡಗಳ ಪ್ಲೇಯಿಂಗ್ XI ಮತ್ತು ಪಂದ್ಯದ ಮುಖ್ಯಾಂಶಗಳನ್ನು ಲೇಖನದಲ್ಲಿ ತಿಳಿಸಲಾಗಿದೆ.

ಏಷ್ಯಾಕಪ್ (Asia Cup 2025) ಟಿ20 ಟೂರ್ನಮೆಂಟ್‌ನ ಎರಡನೇ ಪಂದ್ಯ ಭಾರತ ಹಾಗೂ ಯುಎಇ (India vs UAE) ನಡುವೆ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಎರಡೂ ತಂಡಗಳಿಗೆ ಇದು ಮೊದಲ ಪಂದ್ಯವಾಗಿದೆ. ಸೂರ್ಯಕುಮಾರ್ ಯಾದವ್ (SuryaKumar Yadav) ಭಾರತೀಯ ತಂಡವನ್ನು ಮುನ್ನಡೆಸುತ್ತಿದ್ದರೆ, ಮುಹಮ್ಮದ್ ವಾಸಿಮ್ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದ ನಾಯಕರಾಗಿದ್ದಾರೆ. ಏಷ್ಯಾಕಪ್‌ನಲ್ಲಿ ನಾಯಕನಾಗಿ ಸೂರ್ಯ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಯುಎಇ ವಿರುದ್ಧ ಭಾರತ ಇದುವರೆಗಿನ ಎಲ್ಲಾ ಅಂತರರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿದೆ. ಆದ್ದರಿಂದ, ಸೂರ್ಯನ ನಾಯಕತ್ವದಲ್ಲಿ ಭಾರತ ತಂಡವು ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಬೇಕು ಎಂಬುದು ಅಭಿಮಾನಿಗಳ ಆಶಯವಾಗಿದೆ.
ಟಾಸ್ ಗೆದ್ದ ಟೀಂ ಇಂಡಿಯಾ
ಇನ್ನು 2025 ರ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದಿದೆ. ಟಾಸ್ ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ಯುಎಇ ವಿರುದ್ಧ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಯುಎಇ ತಂಡವು ಮೊದಲು ಬ್ಯಾಟಿಂಗ್ ಮಾಡಲಿದೆ. ಅಚ್ಚರಿಯ ಸಂಗತಿಯೆಂದರೆ ದುಬೈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ನೆರವು ಸಿಗಲಿದೆ. ಇದಕ್ಕೆ ಪೂರಕವೆಂಬಂತೆ, ಈ ಮೈದಾನದಲ್ಲಿ ನಡೆದಿರುವ ಕಳೆದ 7 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಯಾರೇ ಟಾಸ್ ಗೆದ್ದರೂ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಬಹುದು ಎನ್ನಲಾಗುತ್ತಿತ್ತು. ಆದರೆ ನಾಯಕ ಸೂರ್ಯ ವಿಭಿನ್ನವಾಗಿ ಯೋಚಿಸಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
🚨 Toss Update 🚨
Captain Surya Kumar Yadav has won the toss & #TeamIndia have elected to bowl against the UAE.
Follow The Match ▶️ https://t.co/Bmq1j2LGnG#AsiaCup2025 | #INDvUAE | @surya_14kumar pic.twitter.com/mbbzEmvSn8
— BCCI (@BCCI) September 10, 2025
ಈ ನಾಲ್ವರಿಗೆ ಅವಕಾಶ ಸಿಕ್ಕಿಲ್ಲ
ಅರ್ಷದೀಪ್ ಸಿಂಗ್, ರಿಂಕು ಸಿಂಗ್, ಜಿತೇಶ್ ಶರ್ಮಾ ಮತ್ತು ಹರ್ಷಿತ್ ರಾಣಾ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ. ಇಲ್ಲಿ ಅಚ್ಚರಿಯ ವಿಷಯವೆಂದರೆ ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಲಾಗಿದೆ. ಅಭಿಷೇಕ್ ಶರ್ಮಾ ಮತ್ತು ಶುಭ್ಮನ್ ಗಿಲ್ ಆರಂಭಿಕರಾಗಿ ಆಡಲಿದ್ದಾರೆ. ಬ್ಯಾಟಿಂಗ್ ಮಾಡಬಲ್ಲ ಒಟ್ಟು 8 ಆಟಗಾರರನ್ನು ಆಟಗಾರರು ಆಡುವ ಹನ್ನೊಂದರ ಬಳಗದಲ್ಲಿದ್ದಾರೆ.
ಉಭಯ ತಂಡಗಳು
ಭಾರತ ತಂಡ: ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ಜಸ್ಪ್ರೀತ್ ಬುಮ್ರಾ.
ಯುನೈಟೆಡ್ ಅರಬ್ ಎಮಿರೇಟ್ಸ್: ಮುಹಮ್ಮದ್ ವಾಸಿಮ್ (ನಾಯಕ), ಅಲಿಶನ್ ಶರಾಫು, ಮುಹಮ್ಮದ್ ಜೊಹೈಬ್, ರಾಹುಲ್ ಚೋಪ್ರಾ (ವಿಕೆಟ್ ಕೀಪರ್), ಆಸಿಫ್ ಖಾನ್, ಹರ್ಷಿತ್ ಕೌಶಿಕ್, ಹೈದರ್ ಅಲಿ, ಧ್ರುವ ಪರಾಶರ್, ಮುಹಮ್ಮದ್ ರೋಹಿದ್ ಖಾನ್, ಜುನೈದ್ ಸಿದ್ದಿಕಿ, ಸಿಮ್ರಂಜೀತ್ ಸಿಂಗ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:50 pm, Wed, 10 September 25
