
2025 ರ ಏಷ್ಯಾಕಪ್‌ನ (Asia Cup 2025) ನಾಲ್ಕನೇ ಪಂದ್ಯ ಪಾಕಿಸ್ತಾನ ಮತ್ತು ಒಮಾನ್ (Pakistan vs Oman) ನಡುವೆ ನಡೆಯುತ್ತಿದೆ. ಇದು ಎರಡೂ ತಂಡಗಳಿಗೆ ಪ್ರಸ್ತುತ ಟೂರ್ನಿಯ ಮೊದಲ ಪಂದ್ಯವಾಗಿದ್ದು, ಗೆಲುವಿನೊಂದಿಗೆ ಟೂರ್ನಿ ಆರಂಭಿಸುವ ಇರಾದೆಯಲ್ಲಿ ಉಭಯ ತಂಡಗಳಿವೆ. ಆದಾಗ್ಯೂ ಪಾಕ್ ತಂಡಕ್ಕೆ ಹೊಲಿಸಿದರೆ, ಒಮಾನ್ ತಂಡ ಅಷ್ಟು ಬಲಿಷ್ಠವಾಗಿ ಕಾಣುತ್ತಿಲ್ಲ. ಹಾಗಂತ ಈ ತಂಡವನ್ನು ಕಡೆಗಣಿಸುವುದಕ್ಕೂ ಆಗುವುದಿಲ್ಲ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಆದರೆ ನಾಯಕನ ಈ ನಿರ್ಧಾರವನ್ನು ತಂಡದ ಆರಂಭಿಕರು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾಗಿದ್ದ್ದಾರೆ.
ಮೇಲೆ ಹೇಳಿದಂತೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಪಾಕಿಸ್ತಾನ ಕೆಟ್ಟ ಆರಂಭವನ್ನು ಪಡೆದುಕೊಂಡಿದೆ. ಮೊದಲ ಓವರ್‌ನ ಎರಡನೇ ಎಸೆತದಲ್ಲಿ, ಆರಂಭಿಕ ಆಟಗಾರ ಸೈಮ್ ಅಯೂಬ್ ಅವರನ್ನು ಶಾ ಫೈಸಲ್ ಎಲ್‌ಬಿಡಬ್ಲ್ಯೂ ಮೂಲಕ ಔಟ್ ಮಾಡಿದ್ದಾರೆ. ಸೈಮ್ ಅಯೂಬ್ಗೆ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ಹೀಗಾಗಿ ತಂಡ ಕೇವಲ 2 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
Oman open their account at #DPWorldAsiaCup2025 with a bang 💥
Watch #PAKvOMAN, LIVE NOW on the Sony Sports Network TV channels & Sony LIV.#SonySportsNetwork #DPWorldAsiaCup2025 pic.twitter.com/XF7LqIAJ4y
— Sony Sports Network (@SonySportsNetwk) September 12, 2025
ವಾಸ್ತವವಾಗಿ ಟಾಸ್ ಗೆದ್ದ ಬಳಿಕ ಮಾತನಾಡಿದ್ದ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ತಮ್ಮ ತಂಡವು ಸ್ಕೋರ್‌ಬೋರ್ಡ್‌ನಲ್ಲಿ ಉತ್ತಮ ಮೊತ್ತವನ್ನು ಗಳಿಸುತ್ತದೆ ಎಂದು ಆಶಿಸುವುದಾಗಿ ಹೇಳಿದರು. ‘ನಾವು ಮೊದಲು ಬ್ಯಾಟಿಂಗ್ ಮಾಡುತ್ತೇವೆ. ಪಿಚ್ ಚೆನ್ನಾಗಿ ಕಾಣುತ್ತಿದೆ. ಹೀಗಾಗಿ ನಾವು ಮೊದಲು ಬ್ಯಾಟ್ ಮಾಡಿ ಸ್ಕೋರ್‌ಬೋರ್ಡ್‌ನಲ್ಲಿ ಹೆಚ್ಚು ರನ್ ಕಲೆಹಾಕಿ ಎದುರಾಳಿ ಮೇಲೆ ಒತ್ತಡ ಹೇರಲು ಬಯಸುತ್ತೇವೆ. ಕಳೆದ 2-3 ತಿಂಗಳುಗಳಿಂದ ನಾವು ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆ, ತಂಡವು ಒಗ್ಗಟ್ಟಾಗಿದ್ದು ಅದನ್ನು ಮುಂದುವರಿಸಲು ನಾವು ಬಯಸುತ್ತೇವೆ. ನಮ್ಮಲ್ಲಿ ಮೂವರು ಉತ್ತಮ ಸ್ಪಿನ್ನರ್‌ಗಳು ಮತ್ತು ಮೂವರು ಆಲ್‌ರೌಂಡರ್‌ಗಳಿದ್ದಾರೆ. ಮೊದಲು ಬ್ಯಾಟಿಂಗ್ ಮಾಡುವ ಮೂಲಕ, ನಾವು ನಿರೀಕ್ಷೆಗಿಂತ ಹೆಚ್ಚಿನ ಸ್ಕೋರ್ ಗಳಿಸಲು ಬಯಸುತ್ತೇವೆ’ ಎಂದರು.
ಪಾಕಿಸ್ತಾನ ತಂಡ: ಸೈಮ್ ಅಯೂಬ್, ಸಾಹಿಬ್‌ಜಾದಾ ಫರ್ಹಾನ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಫಖರ್ ಜಮಾನ್, ಸಲ್ಮಾನ್ ಆಘಾ (ನಾಯಕ), ಹಸನ್ ನವಾಜ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಸುಫಿಯಾನ್ ಮುಕೀಮ್, ಅಬ್ರಾರ್ ಅಹ್ಮದ್.
ಒಮಾನ್ ತಂಡ: ಜತಿಂದರ್ ಸಿಂಗ್ (ನಾಯಕ), ಆಮಿರ್ ಕಲೀಮ್, ಹಮ್ಮದ್ ಮಿರ್ಜಾ, ವಿನಾಯಕ ಶುಕ್ಲಾ (ವಿಕೆಟ್ ಕೀಪರ್), ಶಾ ಫೈಸಲ್, ಹಸ್ನೈನ್ ಶಾ, ಮೊಹಮ್ಮದ್ ನದೀಮ್, ಜಿಕ್ರಿಯಾ ಇಸ್ಲಾಂ, ಸುಫಿಯಾನ್ ಮಹಮೂದ್, ಶಕೀಲ್ ಅಹ್ಮದ್, ಸಮಯ್ ಶ್ರೀವಾಸ್ತವ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ