
2025 ರ ಏಷ್ಯಾಕಪ್ನಲ್ಲಿ (Asia Cup 2025) ಯುಎಇ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಇದೀಗ ಪಾಕಿಸ್ತಾನ (India vs Pakistan) ವಿರುದ್ಧದ ಹೈ ವೋಲ್ಟೇಜ್ ಪಂದ್ಯಕ್ಕಾಗಿ ಕಾಯುತ್ತಿದೆ. ಸೂಪರ್ ಸಂಡೇಯಂದು ನಡೆಯಲಿರುವ ಉಭಯ ತಂಡಗಳ ಕದನಕ್ಕೆ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಸೆಪ್ಟೆಂಬರ್ 14 ರಂದು ನಡೆಯಲಿರುವ ಈ ಪಂದ್ಯಕ್ಕಾಗಿ, ಟೀಂ ಇಂಡಿಯಾದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಬದ್ಧವೈರಿಯ ವಿರುದ್ಧ ಟೀಂ ಇಂಡಿಯಾ ಐವರು ಬ್ಯಾಟ್ಸ್‌ಮನ್‌ಗಳು, ಮೂವರು ಆಲ್‌ರೌಂಡರ್‌ಗಳು ಮತ್ತು ಮೂವರು ಬೌಲರ್‌ಗಳೊಂದಿಗೆ ಕಣಕ್ಕಿಳಿಯಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಹೇಳಿದ್ದಾರೆ.
ಅಜಯ್ ಜಡೇಜಾ ಅವರ ಪ್ರಕಾರ, ಯುಎಇ ವಿರುದ್ಧ ಆಡಿದ ಅದೇ ತಂಡವು ಪಾಕಿಸ್ತಾನದ ವಿರುದ್ಧವೂ ಆಡುವುದನ್ನು ಕಾಣಬಹುದು. ಅಂದರೆ, ತಂಡದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಯುಎಇ ವಿರುದ್ಧದ ಪಂದ್ಯ ಪ್ರಾರಂಭವಾಗುವ ಸ್ವಲ್ಪ ಮೊದಲು ಏಷ್ಯಾಕಪ್ ಪ್ರಸಾರ ಚಾನೆಲ್ ಸೋನಿ ನೆಟ್‌ವರ್ಕ್‌ನಲ್ಲಿ ಅಜಯ್ ಜಡೇಜಾ ಈ ವಿಷಯವನ್ನು ಹೇಳಿದ್ದರು.
ಯುಎಇ ವಿರುದ್ಧ ಭಾರತದ ಆಡುವ ಹನ್ನೊಂದರ ಬಳಗದ ಬಗ್ಗೆ ಚರ್ಚಿಸುವಾಗ ಅಜಯ್ ಜಡೇಜಾ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು. ಯುಎಇ ವಿರುದ್ಧ ಭಾರತ 8 ಬ್ಯಾಟ್ಸ್‌ಮನ್‌ಗಳನ್ನು ಆಡಿಸಬಾರದಿತ್ತು. ಆದಾಗ್ಯೂ ತಂಡದಲ್ಲಿ 8 ಬ್ಯಾಟ್ಸ್‌ಮನ್‌ಗಳನ್ನು ಕಣಕ್ಕಿಳಿಸಿರುವುದರಿಂದ ಇದೇ ತಂಡವೇ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ. ಅಂದರೆ, ಯುಎಇ ವಿರುದ್ಧ ಆಡಿದ ಅದೇ ತಂಡ ಪಾಕಿಸ್ತಾನದ ವಿರುದ್ಧವೂ ಆಡುತ್ತದೆ ಎಂಬುದು ಅಜಯ್ ಜಡೇಜಾ ಅಭಿಪ್ರಾಯವಾಗಿದೆ.
Asia Cup 2025: 4 ವಿಕೆಟ್ ಉರುಳಿಸಿದ ಕುಲ್ದೀಪ್ಗೆ ಪಾಕ್ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶವಿಲ್ಲ
ಬ್ಯಾಟ್ಸ್‌ಮನ್‌ಗಳು- ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
ಆಲ್‌ರೌಂಡರ್‌ಗಳು- ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್
ಬೌಲರ್‌ಗಳು- ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ