ಆಸ್ಟ್ರೇಲಿಯಾಗೆ ಭಾರೀ ಮುಖಭಂಗ: ಬಾಂಗ್ಲಾದೇಶ್ ತಂಡಕ್ಕೆ ಐತಿಹಾಸಿಕ ಜಯ

Australia vs Bangladesh, 1st Test: ಬಾಂಗ್ಲಾದೇಶ್ ಹಾಗೂ ಆಸ್ಟ್ರೇಲಿಯಾ ತಂಡಗಳು ಟೆಸ್ಟ್ ಕ್ರಿಕೆಟ್​ನಲ್ಲಿ ಇವರೆಗೆ 7 ಬಾರಿ ಮುಖಾಮುಖಿಯಾಗಿವೆ. ಈ ವೇಳೆ 5 ಪಂದ್ಯಗಳಲ್ಲಿ ಆಸೀಸ್ ಪಡೆ ಗೆಲುವು ದಾಖಲಿಸಿದರೆ, 2 ಮ್ಯಾಚ್​ಗಳಲ್ಲಿ ಬಾಂಗ್ಲಾದೇಶ್ ತಂಡ ಜಯಭೇರಿ ಬಾರಿಸಿದೆ. ಆದರೆ ಈ ಬಾರಿ ಗೆದ್ದಿರುವುದು ಆಸ್ಟ್ರೇಲಿಯಾ ಪಿಚ್​ನಲ್ಲಿ ಎಂಬುದು ವಿಶೇಷ.

ಆಸ್ಟ್ರೇಲಿಯಾಗೆ ಭಾರೀ ಮುಖಭಂಗ: ಬಾಂಗ್ಲಾದೇಶ್ ತಂಡಕ್ಕೆ ಐತಿಹಾಸಿಕ ಜಯ
Aus Vs Ban, 1st Test
Image Credit source: GettyImages

Updated on: Aug 16, 2026 | 10:37 AM

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡ ಐತಿಹಾಸಿಕ ಜಯ ಸಾಧಿಸಿದೆ. ಡಾರ್ವಿನ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 198 ರನ್​ಗಳಿಸಿ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಬಾಂಗ್ಲಾದೇಶ್ ಪರ ಆರಂಭಿಕ ದಾಂಡಿಗ ತಂಝಿದ್ ಹಸನ್ ತಮೀಮ್ 101 ರನ್​ಗಳ ಭರ್ಜರಿ ಇನಿಂಗ್ಸ್ ಆಡಿದರು. ಈ ಸೆಂಚುರಿ ನೆರವಿನೊಂದಿಗೆ ಬಾಂಗ್ಲಾದೇಶ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 426 ರನ್​ ಕಲೆಹಾಕಿತು.

ಕೇವಲ 57 ರನ್​ಗಳ ಗುರಿ:

228 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಬಾಂಗ್ಲಾದೇಶ್ ಬೌಲರ್​ಗಳ ಸಂಘಟಿತ ದಾಳಿಯಿಂದಾಗಿ ಆರಂಭಿಕ ಆಘಾತಕ್ಕೆ ಒಳಗಾಯಿತು. ಇದಾಗ್ಯೂ ಕ್ಯಾಮರೋನ್ ಗ್ರೀನ್ (104) ಆಕರ್ಷಕ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿ ನಿಂತರು. ಈ ಶತಕದ ಹೊರತಾಗಿಯೂ ಆಸ್ಟ್ರೇಲಿಯಾ ತಂಡ ದ್ವಿತೀಯ ಇನಿಂಗ್ಸ್​ನಲ್ಲಿ ಕಲೆಹಾಕಿದ್ದು ಕೇವಲ 284 ರನ್​ಗಳು ಮಾತ್ರ.

ಇತ್ತ ಆಸ್ಟ್ರೇಲಿಯಾ 284 ರನ್​ಗಳಿಸಿದರೂ ಅತ್ತ ಬಾಂಗ್ಲಾದೇಶ್ ತಂಡವು ಮೊದಲ ಇನಿಂಗ್ಸ್​ನಲ್ಲಿನ 228 ರನ್​ಗಳ ಮುನ್ನಡೆಯೊಂದಿಗೆ ಗೆಲುವಿಗೆ ಕೇವಲ 57 ರನ್​ಗಳ ಗುರಿ ಪಡೆಯಿತು. ಈ ಗುರಿಯನ್ನು 14.2 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ ಬಾಂಗ್ಲಾದೇಶ್  ತಂಡ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

  • ಆಸ್ಟ್ರೇಲಿಯಾ ಮೊದಲ ಇನಿಂಗ್ಸ್​ – 198/10
  • ಬಾಂಗ್ಲಾದೇಶ್ ಮೊದಲ ಇನಿಂಗ್ಸ್- 426/10
  • ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್- 284/10
  • ಬಾಂಗ್ಲಾದೇಶ್ ದ್ವಿತೀಯ ಇನಿಂಗ್ಸ್- 57/1
  • ಬಾಂಗ್ಲಾದೇಶ್ ತಂಡಕ್ಕೆ 9 ವಿಕೆಟ್​ಗಳ ಜಯ

ಐತಿಹಾಸಿಕ ಜಯ:

ಈ ಗೆಲುವಿನೊಂದಿಗೆ ಬಾಂಗ್ಲಾದೇಶ್ ತಂಡವು ಆಸ್ಟ್ರೇಲಿಯಾವನ್ನು ಆಸ್ಟ್ರೇಲಿಯಾದಲ್ಲೇ ಸೋಲಿಸಿದ ಐತಿಹಾಸಿಕ ಸಾಧನೆ ಮಾಡಿದೆ. ಅಂದರೆ ಬಾಂಗ್ಲಾ ಪಡೆ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿದೆ. ಹಾಗೆಯೇ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ್ ತಂಡಕ್ಕೆ ದೊರಕಿದ 2ನೇ ಗೆಲುವು ಇದಾಗಿದೆ.

  • 2017 ರಲ್ಲಿ ಆಸ್ಟ್ರೇಲಿಯಾ ತಂಡ ಬಾಂಗ್ಲಾದೇಶ್ ಪ್ರವಾಸ ಕೈಗೊಂಡಿದ್ದಾಗ, ಢಾಕಾದ ಮೀರ್‌ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ್ 20 ರನ್‌ಗಳ ರೋಚಕ ಜಯ ಸಾಧಿಸಿ ಇತಿಹಾಸ ನಿರ್ಮಿಸಿತ್ತು.
  • 9 ವರ್ಷಗಳ ಬಳಿಕ ಇದೀಗ ಆಸ್ಟ್ರೇಲಿಯಾ ತಂಡವನ್ನು ಆಸ್ಟ್ರೇಲಿಯಾದಲ್ಲೇ ಸೋಲಿಸಿ ಬಾಂಗ್ಲಾದೇಶ್ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.

ಬಾಂಗ್ಲಾದೇಶ್ ಗೆಲುವಿನ ರೂವಾರಿಗಳು:

  • ಹಸನ್ ಮಹಮೂದ್- 55 ರನ್​ಗೆ 6 ವಿಕೆಟ್ (ಮೊದಲ ಇನಿಂಗ್ಸ್​)
  • ತಂಝಿದ್ ಹಸನ್ ತಮೀಮ್- 101 ರನ್​ಗಳ ಶತಕ (ಮೊದಲ ಇನಿಂಗ್ಸ್​)
  • ಮೆಹದಿ ಹಸನ್ ಮಿರಾಝ್- 66 ರನ್​ಗೆ 5 ವಿಕೆಟ್ (ದ್ವಿತೀಯ ಇನಿಂಗ್ಸ್​)

ಆಸ್ಟ್ರೇಲಿಯಾ ಪ್ಲೇಯಿಂಗ್ 11:  ಜೇಕ್ ವೆದರಾಲ್ಡ್ , ಟ್ರಾವಿಸ್ ಹೆಡ್ , ಮಾರ್ನಸ್ ಲಾಬುಶೇನ್ , ಸ್ಟೀವ್ ಸ್ಮಿತ್ , ಕ್ಯಾಮರೋನ್ ಗ್ರೀನ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಬ್ಯೂ ವೆಬ್‌ಸ್ಟರ್ , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ನಾಥನ್ ಲಿಯಾನ್ , ಜೋಶ್ ಹೇಝಲ್​ವುಡ್​.

ಇದನ್ನೂ ಓದಿ: ಕೊಹ್ಲಿ, ದ್ರಾವಿಡ್ ಅಲ್ಲ! ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್​ನ ಹೆಸರಿಸಿದ ಅಖ್ತರ್!

ಬಾಂಗ್ಲಾದೇಶ್ ಪ್ಲೇಯಿಂಗ್ 11: ಶಾದ್ಮನ್ ಇಸ್ಲಾಂ , ತಂಝಿದ್ ಹಸನ್ ತಮೀಮ್ , ಮೋಮಿನುಲ್ ಹಕ್ , ನಜ್ಮುಲ್ ಹೊಸೇನ್ ಶಾಂತೊ (ನಾಯಕ) , ಲಿಟ್ಟನ್ ದಾಸ್ (ವಿಕೆಟ್ ಕೀಪರ್), ಮುಷ್ಫಿಕರ್ ರಹೀಮ್ , ಮೆಹಿದಿ ಹಸನ್ ಮಿರಾಝ್, ತೈಜುಲ್ ಇಸ್ಲಾಂ , ತಸ್ಕಿನ್ ಅಹ್ಮದ್ , ಹಸನ್ ಮಹಮೂದ್, ಎಬಾದತ್ ಹೊಸೇನ್.

Published On - 10:36 am, Sun, 16 August 26

Loading...
Unable to load recommendations.
Follow Us