ಆಸೀಸ್ ತಂಡದ ಸ್ಟಾರ್ ಓಪನರ್ ಡೇವಿಡ್ ವಾರ್ನರ್ (David Warner) ತವರಿನಲ್ಲಿ ನಡೆಯಲ್ಲಿರುವ ಪಾಕಿಸ್ತಾನ (Australia vs Pakistan) ವಿರುದ್ಧದ ಟೆಸ್ಟ್ ಸರಣಿಯ ನಂತರ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ಗೆ ಪ್ರಕಟವಾಗಿರುವ 14 ಸದಸ್ಯರ ಪೈಕಿ ಡೇವಿಡ್ ವಾರ್ನರ್ ಅವರಿಗೂ ಆಸೀಸ್ ಕ್ರಿಕೆಟ್ ಮಂಡಳಿ ಅವಕಾಶ ನೀಡಿದೆ. ವಾಸ್ತವವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಬಹಳ ದಿನಗಳಿಂದಲೂ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ವಾರ್ನರ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಬೇಕೆಂಬ ಕೂಗು ಜೋರಾಗಿ ಕೇಳಿಬರುತ್ತಿತ್ತು. ಆದರೂ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ವಾರ್ನರ್ ಅವರನ್ನು ಆಯ್ಕೆ ಮಾಡಲಾಗಿದೆ. ಇದೀಗ ವಾರ್ನರ್ ಅವರನ್ನು ಆಯ್ಕೆಯನ್ನು ಟೀಕಿಸಿರುವ ಆಸ್ಟ್ರೇಲಿಯಾ ತಂಡದ ಮಾಜಿ ವೇಗದ ಬೌಲರ್ ಮಿಚೆಲ್ ಜಾನ್ಸನ್ (Mitchell Johnson), ವಾರ್ನರ್ ಹಾಗೂ ಆಯ್ಕೆ ಮಂಡಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಾರ್ನರ್‌ಗೆ ವಿದಾಯದ ಪಂದ್ಯವನ್ನಾಡಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಅಸಮಾಧಾನಗೊಂಡಿರುವ ಜಾನ್ಸನ್,‘ಟೆಸ್ಟ್ ಮಾದರಿಯಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಆಟಗಾರನಿಗೆ ವಿದಾಯದ ಪಂದ್ಯವನ್ನು ಆಡಲು ಅವಕಾಶ ಮಾಡಿಕೊಡುವ ಅವಶ್ಯಕತೆ ಏನಿತ್ತು. ಆಸ್ಟ್ರೇಲಿಯನ್ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಹಗರಣಗಳಲ್ಲಿ ಭಾಗಿಯಾಗಿದ್ದ ಆಟಗಾರನಿಗೆ ವಿದಾಯದ ಪಂದ್ಯವನ್ನಾಡುವ ಅವಕಾಶ ನೀಡುವ ಅಗತ್ಯವೆನಿತ್ತು ಎಂದು ಪ್ರಶ್ನಿಸಿದ್ದಾರೆ.
ಅತಿ ಬುದ್ಧಿವಂತಿಕೆ ತೋರಿದ ಡೇವಿಡ್ ವಾರ್ನರ್‌ಗೆ ತಕ್ಕ ಪಾಠ ಕಲಿಸಿದ ಅಶ್ವಿನ್; ವಿಡಿಯೋ ನೋಡಿ
ವಾಸ್ತವವಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಸ್ಯಾಂಡ್ ಪೇಪರ್ ಗೇಟ್ ಹಗರಣದಲ್ಲಿ (ಚೆಂಡನ್ನು ವಿರೂಪಗೊಳಿಸಿದ ಆರೋಪ) ವಾರ್ನರ್ ವಾಗ್ದಂಡನೆಗೆ ಒಳಗಾಗಿದ್ದಲ್ಲದೆ, ತಂಡದ ಇತರ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಕೂಡ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಶಿಕ್ಷೆಗೆ ಒಳಗಾಗಿದ್ದರು. ಅದರ ಪ್ರಕಾರ ಈ ಮೂವರು ಆಟಗಾರರಿಗೆ ಅಮಾನತು ಶಿಕ್ಷೆ ನೀಡಲಾಗಿತ್ತು. ಆ ಬಳಿಕ ಅಮಾನತು ಅವದಿ ಮುಗಿದ ನಂತರವೂ ಸ್ಮಿತ್ ಮತ್ತು ವಾರ್ನರ್ ಅವರನ್ನು ನಾಯಕತ್ವದಿಂದ ನಿರ್ಬಂಧಿಸಲಾಗಿತ್ತು.
ಇನ್ನು ವಾರ್ನರ್ ಅವರ ಕಳ್ಳಾಟದ ಬಗ್ಗೆ ಬರೆದುಕೊಂಡಿರುವ ಜಾನ್ಸನ್, ‘ಸ್ಯಾಂಡ್‌ಪೇಪರ್‌ಗೇಟ್ ಆರೋಪದಲ್ಲಿ ವಾರ್ನರ್ ಒಬ್ಬಂಟಿಯಾಗಿಲ್ಲದಿದ್ದರೂ, ಅವರು ಆ ಸಮಯದಲ್ಲಿ ತಂಡದ ಹಿರಿಯ ಸದಸ್ಯರಾಗಿದ್ದರು ಅಲ್ಲದೆ ತಂಡದ ನಾಯಕರೂ ಆಗಿದ್ದರು. ಇದೆಲ್ಲದರ ನಂತರವೂ ವಾರ್ನರ್‌ಗೆ ಈ ರೀತಯ ವಿದಾಯ ಸಿಗುತ್ತದೆ ಎಂಬುದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಅಂತರಾಷ್ಟ್ರೀಯ ಕ್ರಿಕೆಟ್ ಎಂದರೆ ಕೇವಲ ಬ್ಯಾಟ್ ಅಥವಾ ಬಾಲ್‌ನಲ್ಲಿನ ನಿಮ್ಮ ಸಾಧನೆಗಳಲ್ಲ. ನೀವು ನಿಮ್ಮನ್ನು ಹೇಗೆ ನಿಭಾಯಿಸಿದ್ದೀರಿ ಮತ್ತು ನೀವು ಆಟವನ್ನು ಹೇಗೆ ಆಡಿದ್ದೀರಿ ಎಂಬುದು ನೀವು ಹೋದ ನಂತರವೂ ಉಳಿಯುತ್ತದೆ‘ ಎಂದು ಜಾನ್ಸನ್ ಬರೆದುಕೊಂಡಿದ್ದಾರೆ.
ವರದಿಯ ಪ್ರಕಾರ, ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯು ವಾರ್ನರ್ ಅವರ ಟೆಸ್ಟ್ ವೃತ್ತಿಜೀವನದ ಕೊನೆಯ ಸರಣಿ ಎಂಬ ಮಾತು ಕೇಳಿಬರುತ್ತಿದೆ. ವಾರ್ನರ್ ಇನ್ನೂ ಈ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ ಅಥವಾ ಖಚಿತಪಡಿಸಿಲ್ಲವಾದರೂ, ಈ ಸರಣಿಯು ವಾರ್ನರ್ ವೃತ್ತಿಜೀವನದ ಕೊನೆಯ ಟೆಸ್ಟ್ ಸರಣಿಯಾಗಲಿದೆ ಎಂಬ ಊಹಾಪೋಹವಿದೆ. ಇನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಾಕಿಸ್ತಾನ ತಂಡ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 14 ರಂದು ಆರಂಭವಾಗಲಿದೆ. ಈ ಮೊದಲ ಟೆಸ್ಟ್ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ.
ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ಗೆ ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಲ್ಯಾನ್ಸ್ ಮೋರಿಸ್, ಸ್ಟೀವ್ ಸ್ಮಿತ್, ಮಿಚ್ ಸ್ಟಾರ್ಕ್, ಡೇವಿಡ್ ವಾರ್ನರ್ (ಮೊದಲ ಟೆಸ್ಟ್‌ಗೆ ಮಾತ್ರ).
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Sun, 3 December 23