- Kannada News Photo gallery Cricket photos IPL 2024 AB de Villiers hints at return to Royal Challengers Bangalore
‘ನನ್ನ ಹೃದಯ ಅಲ್ಲೆ ಇದೆ’; ಆರ್ಸಿಬಿ ಸೇರುವ ಇಂಗಿತ ವ್ಯಕ್ತಪಡಿಸಿದ ಎಬಿ ಡಿವಿಲಿಯರ್ಸ್
AB de Villiers: ಐಪಿಎಲ್ ತಂಡದ ಕೋಚ್ ಆಗುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಎಬಿ ಡಿವಿಲಿಯರ್ಸ್, ‘ಮುಂದೆ ಏನಾಗಲಿದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ಆರ್ಸಿಬಿಯೊಂದಿಗಿನ ಒಡನಾಟ ಅವಿಸ್ಮರಣೀಯವಾಗಿದೆ. ಇದರಿಂದ ಆರ್ಸಿಬಿ ಕೋಚ್ ಆಗುವ ಅವಕಾಶ ಸಿಕ್ಕರೆ ನಿರಾಕರಿಸುವುದಿಲ್ಲ ಎಂದು ಎಬಿ ಡಿವಿಲಿಯರ್ಸ್ ಸ್ಪಷ್ಟಪಡಿಸಿದ್ದಾರೆ.
Updated on: Dec 03, 2023 | 4:35 PM

ಎಲ್ಲಾ ತಂಡಗಳು 2024 ರ ಐಪಿಎಲ್ಗೆ ತಮ್ಮ ತಯಾರಿಯನ್ನು ಪ್ರಾರಂಭಿಸಿವೆ. ಒಮ್ಮೆಯೂ ಪ್ರಶಸ್ತಿ ಗೆದ್ದಿರದ ಆರ್ಸಿಬಿ ಕೂಡ ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಮಿನಿ ಹರಾಜಿಗೂ ಮುನ್ನ ಬಲಿಷ್ಠ ತಂಡವನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಇದಲ್ಲದೆ ಮಿನಿ ಹರಾಜಿನಲ್ಲಿ ತಂಡಕ್ಕೆ ಅವಶ್ಯಕವಿರುವ ಆಟಗಾರರ ಖರೀದಿಗೆ ತಯಾರಿ ಮಾಡಿಕೊಂಡಿದೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಬಗ್ಗೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದ್ದು, ಆರ್‌ಸಿಬಿ ಕೋಚ್ ಆಗುವ ಬಗ್ಗೆ ಎಬಿಡಿ ಭರ್ಜರಿ ಸುಳಿವು ನೀಡಿದ್ದಾರೆ.

ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾದಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಎಷ್ಟೇ ದೊಡ್ಡ ಟಾರ್ಗೆಟ್ ಇದ್ದರೂ ಎಬಿಡಿ ಮೈದಾನಕ್ಕಿಳಿದರೆ ಆರ್ಸಿಬಿ ಗೆಲುವು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಎಬಿಡಿ ತಂಡದಲ್ಲಿರುವಾಗ ಆರ್ಸಿಬಿ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ.

ಪ್ರಸ್ತುತ ಅಂತರಾಷ್ಟ್ರೀಯ ಕ್ರಿಕೆಟ್ ಅಲ್ಲದೆ ಐಪಿಎಲ್ನಿಂದಲೂ ಎಬಿಡಿ ನಿವೃತ್ತಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಭಿಮಾನಿಗಳು ಎಬಿಡಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಆರ್ಸಿಬಿ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದ್ದು, ಆರ್ಸಿಬಿ ತಂಡವನ್ನು ಮತ್ತೊಮ್ಮೆ ಸೇರಿಕೊಳ್ಳುವ ಇಂಗಿತವನ್ನು ಎಬಿಡಿ ಹೊರಹಾಕಿದ್ದಾರೆ.

ಐಪಿಎಲ್ ತಂಡದ ಕೋಚ್ ಆಗುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಎಬಿ ಡಿವಿಲಿಯರ್ಸ್, ‘ಮುಂದೆ ಏನಾಗಲಿದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ಆರ್ಸಿಬಿಯೊಂದಿಗಿನ ಒಡನಾಟ ಅವಿಸ್ಮರಣೀಯವಾಗಿದೆ. ಇದರಿಂದ ಆರ್ಸಿಬಿ ಕೋಚ್ ಆಗುವ ಅವಕಾಶ ಸಿಕ್ಕರೆ ನಿರಾಕರಿಸುವುದಿಲ್ಲ ಎಂದು ಎಬಿ ಡಿವಿಲಿಯರ್ಸ್ ಸ್ಪಷ್ಟಪಡಿಸಿದ್ದಾರೆ.

ನನ್ನ ಹೃದಯ ಆರ್ಸಿಬಿ ಜೊತೆಗಿದೆ, ಹಲವು ವರ್ಷಗಳಿಂದ ನಾನು ಅಲ್ಲಿ ಆಡಿದ್ದೇನೆ. ಬೆಂಗಳೂರಿನ ಅಭಿಮಾನಿಗಳೊಂದಿಗೆ ನನಗೆ ಉತ್ತಮ ಭಾಂದವ್ಯವಿದೆ. ನಾನು ಯಾವುದನ್ನೂ ಖಚಿತಪಡಿಸಲಾರೆ. ಆದರೆ ಭವಿಷ್ಯದಲ್ಲಿ ನನ್ನನ್ನು ಆರ್ಸಿಬಿ ತಂಡದಲ್ಲಿ ನೋಡಲು ನಾನು ಸಂಪೂರ್ಣವಾಗಿ ಇಷ್ಟಪಡುತ್ತೇನೆ ಎಂದಿದ್ದಾರೆ.

ಆರ್ಸಿಬಿ ಪರ 11 ಐಪಿಎಲ್ ಆವೃತ್ತಿಗಳನ್ನು ಆಡಿದ ಎಬಿ ಡಿವಿಲಿಯರ್ಸ್ ತಂಡದ ಪರವಾಗಿ 184 ಪಂದ್ಯಗಳನ್ನು ಆಡಿದ್ದರು. ಇದರಲ್ಲಿ 151 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಹಾಗೂ 40 ಕ್ಕಿಂತ ಅಧಿಕ ಸರಾಸರಿಯಲ್ಲಿ 5000 ರನ್ ಕಲೆಹಾಕಿದ್ದರು.



















