
ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ (Australia vs West Indies) ನಡುವೆ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟರ್ ಮ್ಯಾಕ್ಸ್‌ವೆಲ್ (Glenn Maxwell) ಅವರ ವಿಶ್ವ ದಾಖಲೆಯ ಶತಕದ ಆಧಾರದ ಮೇಲೆ ಪ್ರವಾಸಿ ವೆಸ್ಟ್ ಇಂಡೀಸ್ ತಂಡವನ್ನು 34 ರನ್ಗಳಿಂದ ಮಣಿಸಿ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದೆ. ಹಾಗೆಯೇ ಸರಣಿಯನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ, ವೆಸ್ಟ್ ಇಂಡೀಸ್ ಮುಂದೆ 241 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೆ ಪೂರ್ಣ 20 ಓವರ್ಗಳನ್ನು ಆಡಿ 9 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಲಷ್ಟೇ ಶಕ್ತವಾಗಿ 34 ರನ್ಗಳಿಂದ ಸೋಲೊಪ್ಪಿಕೊಂಡಿತು.
ಇನ್ನು ಈ ಪಂದ್ಯದಲ್ಲಿ ದಾಖಲೆಯ ಐದನೇ ಟಿ20 ಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ವಿಂಡೀಸ್ ಬೌಲರ್ಗಳ ಬೆವರಿಳಿಸಿದರು. ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಗ್ಲೆನ್, ಮೊದಲು ಮಾರ್ಕಸ್ ಸ್ಟೊಯಿನಿಸ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 42 ಎಸೆತಗಳಲ್ಲಿ 82 ರನ್‌ಗಳ ಪಾಲುದಾರಿಕೆ ಹಂಚಿಕೊಂಡರು. ನಂತರ ಐದನೇ ವಿಕೆಟ್‌ಗೆ ಟಿಮ್ ಡೇವಿಡ್ ಅವರೊಂದಿಗೆ 39 ಎಸೆತಗಳಲ್ಲಿ 95 ರನ್‌ಗಳ ಜೊತೆಯಾಟವನ್ನಾಡಿದರು. ಇದೇ ವೇಳೆ 12 ಬೌಂಡರಿ ಮತ್ತು 8 ಸಿಕ್ಸರ್ ಸಹಿತ ಅಜೇಯ 121 ರನ್‌ಗಳ ಗೆಲುವಿನ ಇನ್ನಿಂಗ್ಸ್ ಆಡಿದರು. ಇದೇ ವೇಳೆ ಮ್ಯಾಕ್ಸ್‌ವೆಲ್ ಪಂದ್ಯದ ಅತೀ ಉದ್ದದ ಸಿಕ್ಸರ್ ಅಂದರೆ 109 ಮೀಟರ್ ಉದ್ಧದ ಭರ್ಜರಿ ಸಿಕ್ಸರ್ ಸಿಡಿಸಿ ಮೈದಾನದಲ್ಲಿ ನೆರೆದಿದ್ದವರು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
AUS vs WI: ಮ್ಯಾಕ್ಸ್‌ವೆಲ್ ಶತಕ; ಟಿ20 ಸರಣಿ ಸೋತ ವೆಸ್ಟ್ ಇಂಡೀಸ್
ಆಸ್ಟ್ರೇಲಿಯಾ ಇನ್ನಿಂಗ್ಸ್ನ 12ನೇ ಓವರ್ನಲ್ಲಿ ಈ ಪ್ರಸಂಗ ನಡೆಯಿತು. ವಿಂಡೀಸ್ ಬೌಲರ್ಗಳ ಎದುರು ಬೆಂಕಿ ಉಗುಳುತ್ತಿದ್ದ ಮ್ಯಾಕ್ಸ್ವೆಲ್ಗೆ ವೇಗಿ ಅಲ್ಜಾರಿ ಜೋಸೆಫ್ ಎದುರಾದರು. ಅಂದರೆ 12ನೇ ಓವರ್ ಬೌಲ್ ಮಾಡುವ ಜವಬ್ದಾರಿ ಅಲ್ಜಾರಿ ಜೋಸೆಫ್ಗೆ ಸಿಕ್ಕಿತ್ತು. ಜೋಸೆಫ್ ಬೌಲ್ ಮಾಡಿದ ಓವರ್ನ ಎರಡನೇ ಎಸೆತವನ್ನು ಮ್ಯಾಕ್ಸ್‌ವೆಲ್ ಸೀದಾ ಸಿಕ್ಸರ್ಗಟ್ಟಿದರು. ಈ ಸಿಕ್ಸರ್ ಬರೋಬ್ಬರಿ 109 ಮೀಟರ್ ದೂರ ಹೋಗಿ ಬಿದ್ದಿತ್ತು.
ಇಲ್ಲಿ ಗಮಿಸಿಬೇಕಾದ ಅಂಶವೆಂದರೆ ಮ್ಯಾಕ್ಸ್‌ವೆಲ್ ಎದುರು ಅತೀ ಉದ್ದದ ಸಿಕ್ಸರ್ ಹೊಡೆಸಿಕೊಂಡ ಅಲ್ಜಾರಿ ಜೋಸೆಫ್ ಹಾಗೂ ಭರ್ಜರಿ ಸಿಕ್ಸರ್ ಸಿಡಿಸಿದ ಮ್ಯಾಕ್ಸ್‌ವೆಲ್ ಇಬ್ಬರು ಐಪಿಎಲ್ನಲ್ಲಿ ಒಂದೇ ತಂಡದ ಪರವಾಗಿ ಕಣಕ್ಕಿಳಿಯಲ್ಲಿದ್ದಾರೆ. ಅಂದರೆ ಈ ಇಬ್ಬರು ಆಟಗಾರರು ಮುಂದಿನ ಐಪಿಎಲ್ನಲ್ಲಿ ಆರ್ಸಿಬಿ ಪರ ಕಣಕ್ಕಿಳಿಯಲ್ಲಿದ್ದಾರೆ. ಈ ವರ್ಷ ನಡೆದ ಮಿನಿ ಹರಾಜಿನಲ್ಲಿ ಅಲ್ಜಾರಿ ಜೋಸೆಫ್ ಅವರನ್ನು ಆರ್ಸಿಬಿ ಖರೀದಿಸಿದ್ದರೆ, ಮ್ಯಾಕ್ಸ್‌ವೆಲ್ ಕಳೆದ ಕೆಲವು ವರ್ಷಗಳಿಂದ ಆರ್ಸಿಬಿಯ ಬ್ಯಾಟಿಂಗ್ ಬೆನ್ನೇಲುಬಾಗಿದ್ದಾರೆ.
109 metres!
Massive from Maxwell #AUSvWI pic.twitter.com/BFtUxWClEl
— cricket.com.au (@cricketcomau) February 11, 2024
242 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ಗೆ ಟಾಪ್ ಆರ್ಡರ್ ಕೈಕೊಟ್ಟಿತು. ತಂಡದ ಪರ ರಸೆಲ್ (37 ರನ್) ಹಾಗೂ ಏಕಾಂಗಿ ಹೋರಾಟ ನಡೆಸಿದ ರೋವ್‌ಮನ್ ಪೊವೆಲ್ (36 ಎಸೆತಗಳಲ್ಲಿ 63 ರನ್) ಅವರನ್ನು ಹೊರತುಪಡಿಸಿ ಮಿಕ್ಕವರಿಂದ ಗೆಲುವಿನ ಇನ್ನಿಂಗ್ಸ್ ಮೂಡಿ ಬರಲಿಲ್ಲ. ಹೀಗಾಗಿ ತಂಡ ಪಂದ್ಯವನ್ನು ಸೋತಿದಲ್ಲದೆ ಸರಣಿಯನ್ನು ಕಳೆದುಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ