AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

U19 World Cup 2024 Final: ಭಾರತದ ವಿಶ್ವಕಪ್ ಕನಸಿಗೆ ಕೊಳ್ಳಿ ಇಟ್ಟ ಭಾರತ ಮೂಲದ ಹರ್ಜಾಸ್ ಸಿಂಗ್..!

U19 World Cup 2024 Final: ಫೈನಲ್ ಪಂದ್ಯದಲ್ಲಿ ಅರ್ಧಶತಕದ ಗೆಲುವಿನ ಇನ್ನಿಂಗ್ಸ್ ಅಡಿದ ಹರ್ಜಾಸ್ 2005 ರಲ್ಲಿ ಸಿಡ್ನಿಯಲ್ಲಿ ಜನಿಸಿದರು. ಆದರೆ ಅವರ ತಂದೆ ಭಾರತದ ಚಂಡೀಗಢದಿಂದ ಬಂದವರು. ರ್ಜಾಸ್‌ ಅವರ ತಂದೆ ಇಂದರ್‌ಜಿತ್ ಸಿಂಗ್, ಪಂಜಾಬ್‌ನ ಚಂಡೀಗಢದಲ್ಲಿ ರಾಜ್ಯ ಬಾಕ್ಸಿಂಗ್ ಚಾಂಪಿಯನ್ ಆಗಿದ್ದರೆ, ಅವರ ತಾಯಿ ಅವಿಂದರ್ ಕೌರ್ ರಾಜ್ಯ ಮಟ್ಟದ ಲಾಂಗ್ ಜಂಪ್ ಆಟಗಾರ್ತಿಯಾಗಿದ್ದರು.

U19 World Cup 2024 Final: ಭಾರತದ ವಿಶ್ವಕಪ್ ಕನಸಿಗೆ ಕೊಳ್ಳಿ ಇಟ್ಟ ಭಾರತ ಮೂಲದ ಹರ್ಜಾಸ್ ಸಿಂಗ್..!
ಹರ್ಜಾಸ್ ಸಿಂಗ್
ಪೃಥ್ವಿಶಂಕರ
|

Updated on: Feb 11, 2024 | 10:04 PM

Share

ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ನಡೆದ ಅಂಡರ್ 19 ವಿಶ್ವಕಪ್ (Under-19 World Cup 2024) ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಭಾರತ (Australia vs India) ಯುವ ಪಡೆ 79 ರನ್​ಗಳ ಹೀನಾಯ ಸೋಲನ್ನು ಎದುರಿಸಿದೆ. ಇಡೀ ಟೂರ್ನಿಯಲ್ಲಿ ಒಂದೇ ಒಂದು ಸೋಲನ್ನು ಕಾಣದ ಭಾರತ ತಂಡ ಫೈನಲ್​ನಲ್ಲಿ ಈ ರೀತಿಯ ಕಳಪೆ ಪ್ರದರ್ಶನ ನೀಡಿದ್ದು, ಟೀಂ ಇಂಡಿಯಾ ಅಭಿಮಾನಿಗಳು ಆಘಾತಕ್ಕೊಳಗಾಗುವಂತೆ ಮಾಡಿದೆ. ಇದಕ್ಕೆ ಕಾರಣವೂ ಇದೆ. ಲೀಗ್​ನ ಮೊದಲ ಪಂದ್ಯದಿಂದ ಹಿಡಿದು ಸೆಮಿಫೈನಲ್ ಪಂದ್ಯದವರೆಗೂ ಬಲಿಷ್ಠ ತಂಡಗಳನ್ನು ಟೀಂ ಇಂಡಿಯಾ ಭಾರೀ ಅಂತರದಿಂದ ಮಣಿಸಿತ್ತು. ಆದರೆ ಫೈನಲ್​ನಲ್ಲಿ ಮಾತ್ರ ಹಿರಿಯರ ತಂಡದಂತೆ ಕಿರಿಯರ ತಂಡವೂ ಮುಗ್ಗರಿಸಿತು. ಇದು ಟೀಂ ಇಂಡಿಯಾ ಅಭಿಮಾನಿಗಳನ್ನು ಬೇಸರಗೊಳ್ಳುವಂತೆ ಮಾಡಿದೆ. ಈ ಎಲ್ಲದರ ನಡುವೆ ಭಾರತ ವಿಶ್ವಕಪ್ ಗೆಲ್ಲುವ ಹಾದಿಗೆ ಮುಳ್ಳಾಗಿದ್ದು, ಭಾರತ ಮೂಲದ ಆಸ್ಟ್ರೇಲಿಯಾ ಕ್ರಿಕೆಟರ್ ಹರ್ಜಾಸ್ ಸಿಂಗ್ (Harjas Singh) ಎಂಬುದು ಅರಗಿಸಿಕೊಳ್ಳಲಾಗದ ಸತ್ಯವಾಗಿದೆ.

ಆಸೀಸ್​ಗೆ ಕಳಪೆ ಆರಂಭ

ವಾಸ್ತವವಾಗಿ ಭಾರತದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಅಂತಹ ಹೇಳಿಕೊಳ್ಳುವಂತಹ ಆರಂಭ ಸಿಗಲಿಲ್ಲ. ಏಕೆಂದರೆ ತಂಡದ ಮೊತ್ತ 16 ರನ್​ ಇರುವಾಗಲೇ ಆರಂಭಿಕ ಸ್ಯಾಮ್ ಕಾನ್ಸ್ಟಾಸ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ಹ್ಯಾರಿ ಡಿಕ್ಸನ್ 42 ಹಾಗೂ ಹಗ್ ವೈಬ್ಜೆನ್ 48 ರನ್ ಕಲೆಹಾಕುವ ಮೂಲಕ ಅರ್ಧಶತಕದ ಜೊತೆಯಾಟವನ್ನು ನೀಡಿದರು. ಆದರೆ ಈ ಇಬ್ಬರು ಸೆಟಲ್ಡ್ ಬ್ಯಾಟರ್ಸ್​ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್​ಗಟ್ಟುವಲ್ಲಿ ಭಾರತದ ಬೌಲರ್​ಗಳು ಯಶಸ್ವಿಯಾದರು.

U19 World Cup 2024 Final: ವಿಶ್ವಕಪ್ ಗೆಲ್ಲುವ ಭಾರತದ ಕನಸು ಭಗ್ನ..! ಆಸೀಸ್​ಗೆ ಚಾಂಪಿಯನ್ ಕಿರೀಟ

6 ಇನ್ನಿಂಗ್ಸ್​ಗಳಲ್ಲಿ ಕೇವಲ 49 ರನ್

ಆದರೆ ನಾಲ್ಕನೇ ಕ್ರಮಾಂಕದಲ್ಲಿ ಬಂದ ಹರ್ಜಾಸ್ ಸಿಂಗ್, ಟೀಂ ಇಂಡಿಯಾದ ಯೋಜನೆಯನ್ನೇ ಬುಡಮೇಲು ಮಾಡಿದರು. ಇಡೀ ಟೂರ್ನಿಯಲ್ಲಿ ಸೈಲೆಂಟಾಗಿದ್ದ ಹರ್ಜಾಸ್​ರನ್ನು ಸುಲಭವಾಗಿ ಕಟ್ಟಿಹಾಕಬಹುದು ಎಂದುಕೊಂಡಿದ್ದ ಭಾರತಕ್ಕೆ ಹರ್ಜಾಸ್ ಸಿಂಗ್ ನೀಡಿದ ಶಾಕ್ ಅಂತಿಂತದಲ್ಲ. ಈ ವಿಶ್ವಕಪ್​ನಲ್ಲಿ ಆಡಿದ 6 ಇನ್ನಿಂಗ್ಸ್​ಗಳಲ್ಲಿ ಕೇವಲ 49 ರನ್ ಸಿಡಿಸಿದ್ದ ಹರ್ಜಾಸ್, ಭಾರತದ ವಿರುದ್ಧ ಮಾತ್ರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು.

55 ರನ್​ಗಳ ಮ್ಯಾಚ್ ಟರ್ನಿಂಗ್ ಇನ್ನಿಂಗ್ಸ್

ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾ ತಂಡಕ್ಕೆ ಹರ್ಜಾಸ್ ಬ್ಯಾಟಿಂಗ್ ಮತ್ತೆ ಬೂಸ್ಟ್ ನೀಡಿತು. ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಲ್ಲದೆ ಹರ್ಜಾಸ್ ತಂಡದ ಇನ್ನಿಂಗ್ಸ್​ಗೂ ವೇಗ ನೀಡಿದರು. ಹೀಗಾಗಿ ಆಸೀಸ್ ಪಡೆಯ ವಿಕೆಟ್​ಗಳ ಪತನದ ನಡುವೆಯೂ ತಂಡದ ರನ್​ರೇಟ್​ ಬೀಳಲಿಲ್ಲ. ಇದು ತಂಡವನ್ನು 200 ರ ಗಡಿ ದಾಟಲು ಸಹಾಯ ಮಾಡಿತು. ಪಂದ್ಯದಲ್ಲಿ 65 ಎಸೆತಗಳನ್ನು ಎದುರಿಸಿದ ಹರ್ಜಾಸ್, 3 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಸಹಿತ 55 ರನ್​ಗಳ ಮ್ಯಾಚ್ ಟರ್ನಿಂಗ್ ಇನ್ನಿಂಗ್ಸ್ ಆಡಿದರು. ಹರ್ಜಾಸ್ ಆಡಿದ ಈ ಇನ್ನಿಂಗ್ಸ್ ಭಾರತಕ್ಕೆ ಬಲು ಭಾರವಾಯಿತು.

ಹರ್ಜಾಸ್ ಸಿಂಗ್ ಯಾರು?

ಅಷ್ಟಕ್ಕೂ ನೋಡಲು ಭಾರತೀಯ ಮೂಲದವರಂತೆ ಕಾಣುವ ಹಾಗೂ ಭಾರತದ ಸಿಖ್ ಸಮುದಾಯಕ್ಕೆ ಸೇರಿದವರಂತೆ ಕಾಣುವ ಈ ಹರ್ಜಾಸ್ ಸಿಂಗ್ ಯಾರು ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಕಾಡಬಹುದು. ಒಂದು ವೇಳೆ ಹರ್ಜಾಸ್ ಭಾರತ ಮೂಲದವರು ಎಂದು ನೀವು ಅಂದುಕೊಂಡರೆ ನಿಮ್ಮ ಊಹೆ ಖಂಡಿತವಾಗಿಯೂ ನಿಜ. ಫೈನಲ್ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಅಡಿದ ಹರ್ಜಾಸ್ 2005 ರಲ್ಲಿ ಸಿಡ್ನಿಯಲ್ಲಿ ಜನಿಸಿದರು. ಆದರೆ ಅವರ ತಂದೆ ಭಾರತದ ಚಂಡೀಗಢದಿಂದ ಬಂದವರು. ಹರ್ಜಾಸ್‌ ಅವರ ತಂದೆ ಇಂದರ್‌ಜಿತ್ ಸಿಂಗ್, ಪಂಜಾಬ್‌ನ ಚಂಡೀಗಢದಲ್ಲಿ ರಾಜ್ಯ ಬಾಕ್ಸಿಂಗ್ ಚಾಂಪಿಯನ್ ಆಗಿದ್ದರೆ, ಅವರ ತಾಯಿ ಅವಿಂದರ್ ಕೌರ್ ರಾಜ್ಯ ಮಟ್ಟದ ಲಾಂಗ್ ಜಂಪ್ ಆಟಗಾರ್ತಿಯಾಗಿದ್ದರು. ತಮ್ಮ ಎಂಟನೇ ವಯಸ್ಸಿನಲ್ಲಿ ರೆವೆಸ್ಬಿ ವರ್ಕರ್ಸ್ ಕ್ರಿಕೆಟ್ ಕ್ಲಬ್ನೊಂದಿಗೆ ತಮ್ಮ ಕ್ರಿಕೆಟ್ ಪ್ರಯಾಣವನ್ನು ಪ್ರಾರಂಭಿಸಿದ ಹರ್ಜಾಸ್‌, ಭಾರತದ ವಿಶ್ವಕಪ್ ಕನಸಿಗೆ ಬೇಲಿಯಾದರು.

ಈಗಲೂ ಚಂಡೀಗಢದಲ್ಲಿ ಮನೆ ಇದೆ

ವಿಶ್ವಕಪ್‌ಗೆ ಮುಂಚಿತವಾಗಿ ತಾನು ಭಾರತದ ಮೂಲದವ ಎಂಬುದನ್ನು ಬಹಿರಂಗಪಡಿಸಿದ್ದ ಹರ್ಜಾಸ್, ತನ್ನ ಕುಟುಂಬ ಇನ್ನೂ ಭಾರತದಲ್ಲಿದೆ. ನಾನು ಕೊನೆಯದಾಗಿ 2015 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದೆ. ನನ್ನ ಕುಟುಂಬ ಇನ್ನೂ ಚಂಡೀಗಢ ಮತ್ತು ಅಮೃತಸರದಲ್ಲಿದೆ. ನಮಗೆ ಸೆಕ್ಟರ್ 44-ಡಿಯಲ್ಲಿ ಮನೆ ಇದೆ. ಕ್ರಿಕೆಟ್ ಅಭ್ಯಾಸಕ್ಕಿಳಿದ ಬಳಿಕ ನಾನು ಮತ್ತೆ ಭಾರತಕ್ಕೆ ಹೋಗಿಲ್ಲ. ಆದರೆ ನನ್ನ ಚಿಕ್ಕಪ್ಪ ಇನ್ನೂ ಅಲ್ಲಿ ವಾಸಿಸುತ್ತಿದ್ದಾರೆ ಎಂದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ