AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AUS vs WI: ಆರ್​ಸಿಬಿ ಬೌಲರ್​ಗೆ ಅತೀ ಉದ್ಧದ ಸಿಕ್ಸರ್ ಸಿಡಿಸಿದ ಆರ್​ಸಿಬಿ ಬ್ಯಾಟರ್..! ನೀವೇ ನೋಡಿ

AUS vs WI: ಜೋಸೆಫ್ ಬೌಲ್ ಮಾಡಿದ ಓವರ್​ನ ಎರಡನೇ ಎಸೆತವನ್ನು ಮ್ಯಾಕ್ಸ್​ವೆಲ್ ಸೀದಾ ಸಿಕ್ಸರ್​ಗಟ್ಟಿದರು. ಈ ಸಿಕ್ಸರ್​ ಬರೋಬ್ಬರಿ 109 ಮೀಟರ್ ದೂರ ಹೋಗಿ ಬಿದ್ದಿತ್ತು. ಇಲ್ಲಿ ಗಮಿಸಿಬೇಕಾದ ಅಂಶವೆಂದರೆ ಮ್ಯಾಕ್ಸ್​ವೆಲ್ ಎದುರು ಅತೀ ಉದ್ದದ ಸಿಕ್ಸರ್ ಹೊಡೆಸಿಕೊಂಡ ಅಲ್ಜಾರಿ ಜೋಸೆಫ್ ಹಾಗೂ ಭರ್ಜರಿ ಸಿಕ್ಸರ್ ಸಿಡಿಸಿದ ಮ್ಯಾಕ್ಸ್​ವೆಲ್ ಇಬ್ಬರು ಐಪಿಎಲ್​ನಲ್ಲಿ ಒಂದೇ ತಂಡದ ಪರವಾಗಿ ಕಣಕ್ಕಿಳಿಯಲ್ಲಿದ್ದಾರೆ.

AUS vs WI: ಆರ್​ಸಿಬಿ ಬೌಲರ್​ಗೆ ಅತೀ ಉದ್ಧದ ಸಿಕ್ಸರ್ ಸಿಡಿಸಿದ ಆರ್​ಸಿಬಿ ಬ್ಯಾಟರ್..! ನೀವೇ ನೋಡಿ
ಗ್ಲೆನ್ ಮ್ಯಾಕ್ಸ್​ವೆಲ್
ಪೃಥ್ವಿಶಂಕರ
|

Updated on: Feb 11, 2024 | 8:46 PM

Share

ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ (Australia vs West Indies) ನಡುವೆ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟರ್ ಮ್ಯಾಕ್ಸ್​ವೆಲ್ (Glenn Maxwell) ಅವರ ವಿಶ್ವ ದಾಖಲೆಯ ಶತಕದ ಆಧಾರದ ಮೇಲೆ ಪ್ರವಾಸಿ ವೆಸ್ಟ್ ಇಂಡೀಸ್​ ತಂಡವನ್ನು 34 ರನ್​ಗಳಿಂದ ಮಣಿಸಿ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದೆ. ಹಾಗೆಯೇ ಸರಣಿಯನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ, ವೆಸ್ಟ್ ಇಂಡೀಸ್ ಮುಂದೆ 241 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೆ ಪೂರ್ಣ 20 ಓವರ್​ಗಳನ್ನು ಆಡಿ 9 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಲಷ್ಟೇ ಶಕ್ತವಾಗಿ 34 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಇನ್ನು ಈ ಪಂದ್ಯದಲ್ಲಿ ದಾಖಲೆಯ ಐದನೇ ಟಿ20 ಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್​ ವಿಂಡೀಸ್ ಬೌಲರ್​ಗಳ ಬೆವರಿಳಿಸಿದರು. ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಗ್ಲೆನ್, ಮೊದಲು ಮಾರ್ಕಸ್ ಸ್ಟೊಯಿನಿಸ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 42 ಎಸೆತಗಳಲ್ಲಿ 82 ರನ್‌ಗಳ ಪಾಲುದಾರಿಕೆ ಹಂಚಿಕೊಂಡರು. ನಂತರ ಐದನೇ ವಿಕೆಟ್‌ಗೆ ಟಿಮ್ ಡೇವಿಡ್ ಅವರೊಂದಿಗೆ 39 ಎಸೆತಗಳಲ್ಲಿ 95 ರನ್​ಗಳ ಜೊತೆಯಾಟವನ್ನಾಡಿದರು. ಇದೇ ವೇಳೆ 12 ಬೌಂಡರಿ ಮತ್ತು 8 ಸಿಕ್ಸರ್‌ ಸಹಿತ ಅಜೇಯ 121 ರನ್​ಗಳ ಗೆಲುವಿನ ಇನ್ನಿಂಗ್ಸ್ ಆಡಿದರು. ಇದೇ ವೇಳೆ ಮ್ಯಾಕ್ಸ್​ವೆಲ್ ಪಂದ್ಯದ ಅತೀ ಉದ್ದದ ಸಿಕ್ಸರ್ ಅಂದರೆ 109 ಮೀಟರ್​ ಉದ್ಧದ ಭರ್ಜರಿ ಸಿಕ್ಸರ್ ಸಿಡಿಸಿ ಮೈದಾನದಲ್ಲಿ ನೆರೆದಿದ್ದವರು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

AUS vs WI: ಮ್ಯಾಕ್ಸ್‌ವೆಲ್ ಶತಕ; ಟಿ20 ಸರಣಿ ಸೋತ ವೆಸ್ಟ್ ಇಂಡೀಸ್

109 ಮೀ. ಉದ್ದದ ಸಿಕ್ಸರ್

ಆಸ್ಟ್ರೇಲಿಯಾ ಇನ್ನಿಂಗ್ಸ್​ನ 12ನೇ ಓವರ್​ನಲ್ಲಿ ಈ ಪ್ರಸಂಗ ನಡೆಯಿತು. ವಿಂಡೀಸ್ ಬೌಲರ್​ಗಳ ಎದುರು ಬೆಂಕಿ ಉಗುಳುತ್ತಿದ್ದ ಮ್ಯಾಕ್ಸ್​ವೆಲ್​ಗೆ ವೇಗಿ ಅಲ್ಜಾರಿ ಜೋಸೆಫ್ ಎದುರಾದರು. ಅಂದರೆ 12ನೇ ಓವರ್​ ಬೌಲ್ ಮಾಡುವ ಜವಬ್ದಾರಿ ಅಲ್ಜಾರಿ ಜೋಸೆಫ್​ಗೆ ಸಿಕ್ಕಿತ್ತು. ಜೋಸೆಫ್ ಬೌಲ್ ಮಾಡಿದ ಓವರ್​ನ ಎರಡನೇ ಎಸೆತವನ್ನು ಮ್ಯಾಕ್ಸ್​ವೆಲ್ ಸೀದಾ ಸಿಕ್ಸರ್​ಗಟ್ಟಿದರು. ಈ ಸಿಕ್ಸರ್​ ಬರೋಬ್ಬರಿ 109 ಮೀಟರ್ ದೂರ ಹೋಗಿ ಬಿದ್ದಿತ್ತು.

ಇಲ್ಲಿ ಗಮಿಸಿಬೇಕಾದ ಅಂಶವೆಂದರೆ ಮ್ಯಾಕ್ಸ್​ವೆಲ್ ಎದುರು ಅತೀ ಉದ್ದದ ಸಿಕ್ಸರ್ ಹೊಡೆಸಿಕೊಂಡ ಅಲ್ಜಾರಿ ಜೋಸೆಫ್ ಹಾಗೂ ಭರ್ಜರಿ ಸಿಕ್ಸರ್ ಸಿಡಿಸಿದ ಮ್ಯಾಕ್ಸ್​ವೆಲ್ ಇಬ್ಬರು ಐಪಿಎಲ್​ನಲ್ಲಿ ಒಂದೇ ತಂಡದ ಪರವಾಗಿ ಕಣಕ್ಕಿಳಿಯಲ್ಲಿದ್ದಾರೆ. ಅಂದರೆ ಈ ಇಬ್ಬರು ಆಟಗಾರರು ಮುಂದಿನ ಐಪಿಎಲ್​ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿಯಲ್ಲಿದ್ದಾರೆ. ಈ ವರ್ಷ ನಡೆದ ಮಿನಿ ಹರಾಜಿನಲ್ಲಿ ಅಲ್ಜಾರಿ ಜೋಸೆಫ್ ಅವರನ್ನು ಆರ್​ಸಿಬಿ ಖರೀದಿಸಿದ್ದರೆ, ಮ್ಯಾಕ್ಸ್​ವೆಲ್ ಕಳೆದ ಕೆಲವು ವರ್ಷಗಳಿಂದ ಆರ್​ಸಿಬಿಯ ಬ್ಯಾಟಿಂಗ್ ಬೆನ್ನೇಲುಬಾಗಿದ್ದಾರೆ.

ಮ್ಯಾಕ್ಸ್​ವೆಲ್ ಸಿಕ್ಸರ್ ಸಿಡಿಸಿದ ವಿಡಿಯೋ

ವಿಂಡೀಸ್​ಗೆ ಸೋಲು

242 ರನ್​ಗಳ ಬೃಹತ್ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್​ಗೆ ಟಾಪ್ ಆರ್ಡರ್ ಕೈಕೊಟ್ಟಿತು. ತಂಡದ ಪರ ರಸೆಲ್ (37 ರನ್‌) ಹಾಗೂ ಏಕಾಂಗಿ ಹೋರಾಟ ನಡೆಸಿದ ರೋವ್‌ಮನ್ ಪೊವೆಲ್ (36 ಎಸೆತಗಳಲ್ಲಿ 63 ರನ್‌) ಅವರನ್ನು ಹೊರತುಪಡಿಸಿ ಮಿಕ್ಕವರಿಂದ ಗೆಲುವಿನ ಇನ್ನಿಂಗ್ಸ್ ಮೂಡಿ ಬರಲಿಲ್ಲ. ಹೀಗಾಗಿ ತಂಡ ಪಂದ್ಯವನ್ನು ಸೋತಿದಲ್ಲದೆ ಸರಣಿಯನ್ನು ಕಳೆದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ