IND A vs AUS A: ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ಎ ತಂಡ ಪ್ರಕಟ; ಕೊಹ್ಲಿ ಜೊತೆ ಜಗಳ ಮಾಡಿದ್ದ ಆಟಗಾರನಿಗೆ ಸ್ಥಾನ
Australia A Squad Announced: ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳ ನಡುವಿನ ಸರಣಿಗೆ ಆಸ್ಟ್ರೇಲಿಯಾ ಎ ತಂಡವನ್ನು ಪ್ರಕಟಿಸಲಾಗಿದೆ. ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 5 ರವರೆಗೆ ನಡೆಯುವ ಈ ಸರಣಿಯಲ್ಲಿ ಎರಡು ನಾಲ್ಕು ದಿನಗಳ ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳು ಲಕ್ನೋದಲ್ಲಿ ನಡೆಯಲಿವೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಡಿದ್ದ ಸ್ಯಾಮ್ ಕಾನ್ಸ್ಟಾಸ್ ಆಸ್ಟ್ರೇಲಿಯಾ A ತಂಡದಲ್ಲಿದ್ದಾರೆ.

ಭಾರತ ಎ ಹಾಗೂ ಆಸ್ಟ್ರೇಲಿಯಾ ಎ (Australia A vs India A) ತಂಡಗಳ ನಡುವೆ ಇದೇ ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 5 ರವರೆಗೆ ನಾಲ್ಕು ದಿನಗಳ 2 ಪಂದ್ಯಗಳು ಹಾಗೂ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಗೆ ಭಾರತ ಆತಿಥ್ಯವಹಿಸುತ್ತಿದ್ದು ಎಲ್ಲಾ ಪಂದ್ಯಗಳು ಲಕ್ನೋದಲ್ಲಿ ನಡೆಯಲಿವೆ. ಇದೀಗ ಈ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಈ ವರ್ಷ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಸ್ಯಾಮ್ ಕೊನ್ಸ್ಟಾಸ್ (Sam Konstas) ಮತ್ತು ನಾಥಮ್ ಮೆಕ್‌ಸ್ವೀನಿ ಕೂಡ ಆಸ್ಟ್ರೇಲಿಯಾ ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಸ್ಯಾಮ್ ಕೊನ್ಸ್ಟಾಸ್ಗೆ ತಂಡದಲ್ಲಿ ಸ್ಥಾನ
ವಾಸ್ತವವಾಗಿ ಭಾರತದ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಡಿದ್ದ ಕೊನ್ಸ್ಟಾಸ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದಾಗ್ಯೂ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಕೊನ್ಸ್ಟಾಸ್, ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುವ ಮೂಲಕ ಅರ್ಧಶತಕ ಬಾರಿಸಿದ್ದರು. ಅಲ್ಲದೆ ಅದೇ ಪಂದ್ಯದಲ್ಲಿ ಅವರು ವಿರಾಟ್ ಕೊಹ್ಲಿಯೊಂದಿಗೆ ಜಗಳ ಕೂಡ ಮಾಡಿಕೊಂಡಿದ್ದರು. ಇವರಿಬ್ಬರ ವಾಗ್ವಾದ ಕೂಡ ನಡೆದಿತ್ತು. ಇನ್ನು ಭಾರತ ಎ ವಿರುದ್ಧದ ಸರಣಿಗೆ ಕೊನ್ಸ್ಟಾಸ್ ಜೊತೆಗೆ ಮೆಕ್‌ಸ್ವೀನಿ, ಕೂಪರ್ ಕಾನೊಲಿ ಮತ್ತು ಸ್ಪಿನ್ನರ್ ಟಾಡ್ ಮರ್ಫಿ ಕೂಡ ತಂಡದಲ್ಲಿ ಆಯ್ಕೆಯಾಗಿದ್ದಾರೆ.
ಮರ್ಫಿ ಇಲ್ಲಿಯವರೆಗೆ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನಾಲ್ಕು ಪಂದ್ಯಗಳನ್ನು 2022-23ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಡಿದ್ದರು. ಆ ಸರಣಿಯಲ್ಲಿ ಮರ್ಫಿ 14 ವಿಕೆಟ್‌ಗಳನ್ನು ಕಬಳಿಸಿದ್ದರು, ಆದಾಗ್ಯೂ ಆಸ್ಟ್ರೇಲಿಯಾ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತ್ತು.
ಭಾರತ ಮತ್ತು ಆಸ್ಟ್ರೇಲಿಯಾ ಎ ತಂಡಗಳು ಸೆಪ್ಟೆಂಬರ್ 16 ರಿಂದ 19 ರವರೆಗೆ ಮತ್ತು ಸೆಪ್ಟೆಂಬರ್ 23 ರಿಂದ 26 ರವರೆಗೆ ಲಕ್ನೋದಲ್ಲಿ ಎರಡು, ನಾಲ್ಕು ದಿನಗಳ ಪಂದ್ಯಗಳನ್ನು ಆಡಲಿದ್ದು, ಆ ನಂತರ ಸೆಪ್ಟೆಂಬರ್ 30, ಅಕ್ಟೋಬರ್ 3 ಮತ್ತು ಅಕ್ಟೋಬರ್ 5 ರಂದು ಮೂರು ಏಕದಿನ ಪಂದ್ಯಗಳನ್ನು ಆಡಲಿವೆ.
With an eye on the 2027 Border-Gavaskar Trophy, here’s the Australia A squads set to head to India next month: https://t.co/BJX47tv8M8 pic.twitter.com/7ULs4CG6vq
— cricket.com.au (@cricketcomau) August 7, 2025
ಆಸ್ಟ್ರೇಲಿಯಾ ಎ ತಂಡ ಇಂತಿದೆ
ನಾಲ್ಕು ದಿನಗಳ ಪಂದ್ಯ: ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕಾನೊಲಿ, ಜ್ಯಾಕ್ ಎಡ್ವರ್ಡ್ಸ್, ಆರನ್ ಹಾರ್ಡಿ, ಕ್ಯಾಂಪ್‌ಬೆಲ್ ಕೆಲ್ಲಾವೇ, ಸ್ಯಾಮ್ ಕೊನ್ಸ್ಟಾಸ್, ನಾಥನ್ ಮೆಕ್‌ಸ್ವೀನಿ, ಲ್ಯಾನ್ಸ್ ಮಾರಿಸ್, ಟಾಡ್ ಮರ್ಫಿ, ಫರ್ಗಸ್ ಓ’ನೀಲ್, ಆಲಿವರ್ ಪೀಕ್, ಜೋಶ್ ಫಿಲಿಪ್, ಕೋರಿ ರೊಚ್ಚಿಯೋಲಿ, ಲಿಯಾಮ್ ಸ್ಕಾಟ್.
ಏಕದಿನ ತಂಡ: ಕೂಪರ್ ಕಾನೊಲಿ, ಹ್ಯಾರಿ ಡಿಕ್ಸನ್, ಜ್ಯಾಕ್ ಎಡ್ವರ್ಡ್ಸ್, ಸ್ಯಾಮ್ ಎಲಿಯಟ್, ಜ್ಯಾಕ್ ಫ್ರೇಸರ್-ಮೆಕ್‌ಗುರ್ಕ್, ಆರನ್ ಹಾರ್ಡಿ, ಮೆಕೆಂಜಿ ಹಾರ್ವೆ, ಟಾಡ್ ಮರ್ಫಿ, ತನ್ವೀರ್ ಸಂಘ, ಲಿಯಾಮ್ ಸ್ಕಾಟ್, ಲಾಚಿ ಶಾ, ಟಾಮ್ ಸ್ಟ್ರಾಕರ್, ವಿಲ್ ಸದರ್ಲ್ಯಾಂಡ್, ಕ್ಯಾಲಮ್ ವಿಡ್ಲರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
