ಆಸ್ಟ್ರೇಲಿಯಾದ ಐಕಾನಿಕ್ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ (David Warner) ಟೆಸ್ಟ್ ಕ್ರಿಕೆಟ್‌ನೊಂದಿಗೆ ಏಕದಿನ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುವುದರೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸಿದ್ದಾರೆ. ಪಾಕಿಸ್ತಾನದ ವಿರುದ್ಧ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಅಂತಿಮ ಟೆಸ್ಟ್ ಆಡಲಿರುವ ವಾರ್ನರ್, ಇದೀಗ ನಾನು 50 ಓವರ್‌ಗಳ ಮಾದರಿಯಿಂದಲೂ ಹಿಂದೆ ಸರಿಯುತ್ತಿದ್ದೇನೆ ಎಂದು ಹೇಳಿದ್ದಾರೆ. ಹಾಗೆಯೆ ಅಗತ್ಯವಿದ್ದರೆ ಚಾಂಪಿಯನ್ಸ್ ಟ್ರೋಫಿಗೆ ಲಭ್ಯವಿರುತ್ತೇನೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
“ನಾನು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ. ವಿಶ್ವಕಪ್ ನನ್ನ ಕೊನೆಯ ಪಂದ್ಯವಾಗಿದೆ. ಆ ಗೆಲುವನ್ನು ಸಾಧಿಸಿದ್ದೇನೆ ಮತ್ತು ಭಾರತದಲ್ಲಿ ಅದನ್ನು ಗೆದ್ದುಕೊಂಡಿದ್ದೇನೆ, ಇದು ಒಂದು ದೊಡ್ಡ ಸಾಧನೆ ಎಂದು ನಾನು ಭಾವಿಸುತ್ತೇನೆ,” ಎಂದು ವಾರ್ನರ್ ಸೋಮವಾರ ಹೇಳಿದ್ದಾರೆ. ವಾರ್ನರ್ ಅವರು SCG ಅಲ್ಲಿ ತಮ್ಮ ಕೊನೆಯ ಟೆಸ್ಟ್ ಆಡಲು ನಿರ್ಧರಿಸಿದ್ದಾರೆ.
INDW vs AUSW 2nd ODI: ಭಾರತ-ಆಸೀಸ್ ಏಕದಿನ ಪಂದ್ಯದಲ್ಲಿ ಭಾರೀ ಅವಘಡ: ಸ್ನೇಹ್ ರಾಣಗೆ ಮೈದಾನದಲ್ಲೇ ಅನಾರೋಗ್ಯ
”ನಾನು ಕುಟುಂಬದ ಜೊತೆ ಸಮಯ ಕಳೆಯಬೇಕಿದೆ. ಆದ್ದರಿಂದ ನಾನು ಇಂದು ಆ ಫಾರ್ಮ್ಟ್ನಿಂದ ನಿವೃತ್ತಿ ಹೊಂದಲು ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ, ಇದು ನನಗೆ ಪ್ರಪಂಚದಾದ್ಯಂತ ಕೆಲವು ಇತರ ಲೀಗ್ ಪಂದ್ಯಗಳಲ್ಲಿ ಆಡಲು ಸಹಾಯ ಮಾಡುತ್ತಿದೆ. ಎರಡು ವರ್ಷಗಳಿಂದ ನಾನು ಉತ್ತಮ ಕ್ರಿಕೆಟ್ ಆಡುತ್ತಿದ್ದೇನೆ. ನಾನು ಜೊತೆಗೆ ಇರುತ್ತೇನೆ. ಹಾಗೆಯೆ ಅವರಿಗೆ ನನ್ನ ಅಗತ್ಯವಿದ್ದರೆ, ನಾನು ಲಭ್ಯವಾಗಲಿದ್ದೇನೆ,” ಎಂದು ವಾರ್ನರ್ ಹೇಳಿದರು.
JUST IN: David Warner confirms his ODI retirement at Sydney press conference | @LouisDBCameron #AUSvPAKhttps://t.co/VQJgMZbC51
— cricket.com.au (@cricketcomau) January 1, 2024
161 ಏಕದಿನ ಇನ್ನಿಂಗ್ಸ್‌ಗಳಲ್ಲಿ, ವಾರ್ನರ್ 45.01 ರ ಸರಾಸರಿಯಲ್ಲಿ 6,932 ರನ್ ಗಳಿಸಿದ್ದಾರೆ. ಇದರಲ್ಲಿ 22 ಶತಕ ಮತ್ತು 33 ಅರ್ಧಶತಕಗಳಿವೆ. ಗರಿಷ್ಠ ಸ್ಕೋರ್ 179 ರನ್ ಆಗಿದೆ. ವಾರ್ನರ್ ಜನವರಿ 2009 ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಇದು ಒಂದು ದಶಕದ ವೃತ್ತಿಜೀವನದ ಸಾಧನೆ ಆಗಿದೆ. ಸಿಡ್ನಿಯಲ್ಲಿ ಪಾಕಿಸ್ತಾನ-ಆಸ್ಟ್ರೇಲಿಯಾ 3ನೇ ಟೆಸ್ಟ್ ಪಂದ್ಯದಲ್ಲಿ ವಾರ್ನರ್ ತನ್ನ ಕೊನೆಯ ಟೆಸ್ಟ್ ಆಡುವುದನ್ನು ನೋಡಲು ನಿರೀಕ್ಷಿಸುತ್ತಿದ್ದ ಅಭಿಮಾನಿಗಳು ಮತ್ತು ಕ್ರಿಕೆಟಿಗರಿಗೆ ಏಕದಿನಗಳಿಂದ ಕೂಡ ನಿವೃತ್ತಿ ಘೋಷಿಸಿರುವುದು ಆಶ್ಚರ್ಯ ತಂದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 am, Mon, 1 January 24