INDW vs AUSW 2nd ODI: ಭಾರತ-ಆಸೀಸ್ ಏಕದಿನ ಪಂದ್ಯದಲ್ಲಿ ಭಾರೀ ಅವಘಡ: ಸ್ನೇಹ್ ರಾಣಗೆ ಮೈದಾನದಲ್ಲೇ ಅನಾರೋಗ್ಯ
Sneh Rana suffers injury to head: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಪಂದ್ಯದಲ್ಲಿ ಸ್ಟಾರ್ ಆಲ್ರೌಂಡರ್ ಸ್ನೇಹ್ ರಾಣ ಗಂಭೀರ ಇಂಜುರಿಗೆ ತುತ್ತಾಗಿದ್ದಾರೆ. ಅವರನ್ನು ಸ್ಕ್ಯಾನ್ಗೆ ಕರೆದುಕೊಂಡು ಹೋಗಲಾಗಿದೆ. ಇಂಜುರಿ ಬಳಿಕ ಅವರು ಮೈದಾನಕ್ಕೆ ಮರಳಲಿಲ್ಲ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಭಾರತ ಮಹಿಳಾ ಕ್ರಿಕೆಟ್ ತಂಡ (India Women vs Australia Women) ಸೋಲು ಕಂಡಿದೆ. ಕೊನೆಯ ಎಸೆತದ ವರೆಗೂ ನಡೆದ ರೋಚಕ ಪಂದ್ಯದಲ್ಲಿ ಆಸೀಸ್ 3 ರನ್‌ಗಳ ಗೆಲುವು ಸಾಧಿಸಿತು. ಸೋಲಿನ ಜೊತೆಗೆ ಟೀಮ್ ಇಂಡಿಯಾಕ್ಕೆ ಈ ಪಂದ್ಯದಲ್ಲಿ ಮತ್ತೊಂದು ಆಘಾತ ಉಂಟಾಯಿತು. ಭಾರತದ ಆಟಗಾರ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ನೇಹ್ ರಾಣಾ ಫೀಲ್ಡಿಂಗ್ ಮಾಡುವಾಗ ಸಹ ಆಟಗಾರ್ತಿಗೆ ಡಿಕ್ಕಿ ಹೊಡೆದಿದ್ದಿ, ಕೆಲ ಸಮಯದ ಬಳಿಕ ಅವರಿಗೆ ತಲೆನೋವು ಕಾಣಿಸಿಕೊಂಡಿದೆ. ಇದನ್ನು ತಂಡದ ನಾಯಕಿ ಹರ್ಮನ್ಪ್ರಿತ್ ಕೌರ್ಗೆ ಅವರು ತಿಳಿಸಿದ್ದಾರೆ.
ಸ್ನೇಹ್ ರಾಣಾ ಮೈದಾನ ತೊರೆಯುತ್ತಿದ್ದಂತೆ ಹರ್ಲೀನ್ ಡಿಯೋಲ್ ಅವರನ್ನು ಕನ್ಕ್ಯುಶನ್ ಆಟಗಾರ್ತಿಯಾಗಿ ಮೈದಾನಕ್ಕೆ ಕಳುಹಿಸಲಾಯಿತು. ತಕ್ಷಣವೇ ರಾಣಾ ಅವರನ್ನು ಸ್ಕ್ಯಾನಿಂಗ್‌ಗೆ ಕರೆದೊಯ್ಯಲಾಗಿದೆ. ಬಳಿಕ ಪಂದ್ಯದಲ್ಲಿ ಅವರು ಭಾಗವಹಿಸುವುದಿಲ್ಲ. ಬಿಸಿಸಿಐ ಟ್ವೀಟ್ ಮೂಲಕ ಈ ಮಾಹಿತಿ ನೀಡಿದೆ. ”ರಾಣಾ ಫೀಲ್ಡಿಂಗ್ ವೇಳೆ ಗಾಯಗೊಂಡು ಮೈದಾನದಿಂದ ಹೊರ ಹೋಗಿದ್ದಾರೆ. ಇಂಜುರಿಯಾಗಿ ಸ್ವಲ್ಪ ಸಮಯದ ನಂತರ ಮೈದಾನಕ್ಕೆ ಮರಳಿ ಬೌಲಿಂಗ್ ಮಾಡಿದರು. ಆದರೆ ನಂತರ ಅವರು ತಲೆನೋವಿನ ಬಗ್ಗೆ ದೂರು ನೀಡಿದ್ದಾರೆ,” ಎಂದು ಬರೆದುಕೊಂಡಿದೆ.
𝗨𝗣𝗗𝗔𝗧𝗘: Sneh Rana complained of headache after a collision while fielding during the second ODI against Australia.
She has been taken for scans and she will not take any further part in the ongoing ODI.
Harleen Deol has been named as a concussion substitute.#INDvAUS pic.twitter.com/iD5aECuigD
— BCCI Women (@BCCIWomen) December 30, 2023
ಆಸ್ಟ್ರೇಲಿಯ ಇನ್ನಿಂಗ್ಸ್‌ನ 25ನೇ ಓವರ್ ಅನ್ನು ಶ್ರೇಯಾಂಕ ಪಾಟೀಲ್ ಬೌಲಿಂಗ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬೆತ್ ಮೂನಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕ್ಯಾಚ್ ಅವಕಾಶವಿತ್ತು.ಪೂಜಾ ವಸ್ತ್ರಕರ್ ಮತ್ತು ಸ್ನೇಹ್ ರಾಣಾ ಕ್ಯಾಚ್ ತೆಗೆದುಕೊಳ್ಳಲು ಓಡಿದರು. ಕ್ಯಾಚ್ ಹಿಡಿಯಲು ಯತ್ನಿಸಿದಾಗ ಇಬ್ಬರೂ ಡಿಕ್ಕಿ ಹೊಡೆದಿದ್ದಾರೆ. ಆಗ ರಾಣಾ ತೀವ್ರವಾಗಿ ಗಾಯಗೊಂಡರು. ತಕ್ಷಣವೆ ಫಿಸಿಯೋ ಮೈದಾನಕ್ಕೆ ಆಗಮಿಸಿ ಅವರನ್ನು ಪರೀಕ್ಷಿಸಿ ಡ್ರೆಸ್ಸಿಂಗ್ ರೂಮ್ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ರಾಣಾ 33ನೇ ಓವರ್‌ನಲ್ಲಿ ಬೌಲಿಂಗ್ ಮೂಲಕ ಮರಳಿದರು. ತಮ್ಮ 10 ಓವರ್‌ಗಳ ಕೋಟಾದಲ್ಲಿ 59 ರನ್‌ಗಳಿಗೆ ಒಂದು ವಿಕೆಟ್ ಪಡೆದರು. ಬಳಿಕ ಇವರಿಗೆ ತಲೆನೋವು ಕಾಣಿಸಿಕೊಂಡಿದೆ.
Ranji Trophy 2024: ಸ್ಪರ್ಧಾತ್ಮಕ ಕ್ರಿಕೆಟ್ಗೆ ಮೊಹಮ್ಮದ್ ಶಮಿ ಸಹೋದರ ಎಂಟ್ರಿ..!
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಎಂಟು ವಿಕೆಟ್ ಕಳೆದುಕೊಂಡು 258 ರನ್ ಗಳಿಸಿತ್ತು. ಫೋಬೆ ಲಿಚ್‌ಫೀಲ್ಡ್ 63 ರನ್‌ಗಳ ಇನ್ನಿಂಗ್ಸ್ ಆಡಿದರು. ಅವರ ಹೊರತಾಗಿ, ಅಲಿಸ್ಸಾ ಪೆರ್ರಿ 47 ಎಸೆತಗಳಲ್ಲಿ 50 ರನ್ ಗಳಿಸಿದರು. ಕೆಳ ಕ್ರಮಾಂಕ ತಂಡವನ್ನು 250ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಟಾರ್ಗೆಟ್ ಬೆನ್ನಟ್ಟಿದ ಭಾರತ ಪರ ರಿಚ್ಚಾ ಘೋಷ್ 96 ರನ್‌ಗಳ ಹೋರಾಟ ನಡೆಸಿದರು. ಜೆಮಿಮಾ 44 ರನ್ ಸಿಡಿಸಿದರು. ಆದರೆ, ಕೊನೆಯ ಹಂತದಲ್ಲಿ ಸತತವಾಗಿ ವಿಕೆಟ್ ಕಳೆದುಕೊಂಡ ಪರಿಣಾಮ ಭಾರತ 255 ರನ್ ಗಳಿಸಲಷ್ಟೆ ಶಕ್ತವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ