3 ಮಾದರಿಯ ಸರಣಿಗಾಗಿ ಭಾರತಕ್ಕೆ ಬರಲಿದೆ ಆಸ್ಟ್ರೇಲಿಯಾ; ತಂಡಕ್ಕೆ ನೂತನ ಕ್ಯಾಪ್ಟನ್ ನೇಮಕ

|

Updated on: Dec 09, 2023 | 1:16 PM

Australia Tour Of India: ಇಂಗ್ಲೆಂಡ್ ಬಳಿಕ ಆಸ್ಟ್ರೇಲಿಯಾ ಮಹಿಳಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಅವಧಿಯಲ್ಲಿ ಉಭಯ ತಂಡಗಳ ನಡುವೆ ಒಂದು ಟೆಸ್ಟ್, ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳು ನಡೆಯಲಿವೆ. ಈ ಪ್ರವಾಸಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದೆ.

3 ಮಾದರಿಯ ಸರಣಿಗಾಗಿ ಭಾರತಕ್ಕೆ ಬರಲಿದೆ ಆಸ್ಟ್ರೇಲಿಯಾ; ತಂಡಕ್ಕೆ ನೂತನ ಕ್ಯಾಪ್ಟನ್ ನೇಮಕ
ಆಸ್ಟ್ರೇಲಿಯಾ ವನಿತಾ ಪಡೆ
Follow us on

ಭಾರತ ಮಹಿಳಾ ತಂಡ (Indian Women Cricket Team) ಸದ್ಯ ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ನಿರತವಾಗಿದೆ. ಮೂರು ಟಿ20 ಪಂದ್ಯಗಳ ಹೊರತಾಗಿ ಉಭಯ ತಂಡಗಳು ಒಂದು ಟೆಸ್ಟ್ ಪಂದ್ಯವನ್ನೂ ಆಡಲಿವೆ. ಇದಾದ ನಂತರವೂ ಭಾರತ ತಂಡದ ವೇಳಾಪಟ್ಟಿ ತುಂಬಾ ಬಿಝಿಯಾಗಿರಲಿದೆ. ಇಂಗ್ಲೆಂಡ್ ಬಳಿಕ ಆಸ್ಟ್ರೇಲಿಯಾ ಮಹಿಳಾ ತಂಡ ಭಾರತ ಪ್ರವಾಸ (Australia Tour Of India) ಕೈಗೊಳ್ಳಲಿದೆ. ಈ ಅವಧಿಯಲ್ಲಿ ಉಭಯ ತಂಡಗಳ ನಡುವೆ ಒಂದು ಟೆಸ್ಟ್, ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳು ನಡೆಯಲಿವೆ. ಈ ಪ್ರವಾಸಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕಿ ಮತ್ತು ಸ್ಟಾರ್ ಬ್ಯಾಟರ್ ಮೆಗ್ ಲ್ಯಾನಿಂಗ್ ಕಳೆದ ತಿಂಗಳಷ್ಟೇ ಅಂತಾರಾಷ್ಟ್ರೀಯ ನಿವೃತ್ತಿ ಪಡೆದಿದ್ದರು. ಹೀಗಾಗಿ ಅವರ ಜಾಗಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಹೊಸ ನಾಯಕಿಯನ್ನೂ ಸಹ ಆಯ್ಕೆ ಮಾಡಿದೆ.

ಅಲಿಸ್ಸಾ ಹೀಲಿಗೆ ನಾಯಕತ್ವ

ಆಸ್ಟ್ರೇಲಿಯಾದ ಪುರುಷ ತಂಡದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ಪತ್ನಿ ಹಾಗೂ ಮಹಿಳಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಅಲಿಸ್ಸಾ ಹೀಲಿ ಅವರನ್ನು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಎಲ್ಲಾ ಮೂರು ಸ್ವರೂಪಗಳ ಹೊಸ ನಾಯಕಿಯಾಗಿ ನೇಮಕ ಮಾಡಲಾಗಿದೆ. ಏತನ್ಮಧ್ಯೆ, ಈ ಹಿಂದೆ ಹಲವು ಸರಣಿಗಳಲ್ಲಿ ಆಸೀಸ್ ತಂಡದ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸಿದ್ದ ಆಲ್‌ರೌಂಡರ್ ತಹಿಲಾ ಮೆಕ್‌ಗ್ರಾತ್ ಅವರನ್ನು ಉಪನಾಯಕಿಯಾಗಿ ಆಯ್ಕೆ ಮಾಡಲಾಗಿದೆ.

ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ: ಡಾರ್ಸಿ ಬ್ರೌನ್, ಲಾರೆನ್ ಚೀಟಲ್ (ಟೆಸ್ಟ್ ಮಾತ್ರ), ಹೀದರ್ ಗ್ರಹಾಂ, ಆಶ್ಲೇ ಗಾರ್ಡ್ನರ್, ಕಿಮ್ ಗಾರ್ತ್, ಗ್ರೇಸ್ ಹ್ಯಾರಿಸ್ (ಟಿ20 ಮಾತ್ರ), ಅಲಿಸ್ಸಾ ಹೀಲಿ, ಜೆಸ್ ಜೊನಾಸೆನ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ತಾಹಿಲಾ ಮೆಕ್‌ಗ್ರಾತ್, ಬೆತ್ ಮೂನಿ, ಎಲ್ಲಿಸ್ ಪೆರ್ರಿ, ಮೇಗನ್ ಶುಟ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೇರ್ಹ್ಯಾಮ್.

ಭಾರತ ಟೆಸ್ಟ್ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್‌ಕೀಪರ್), ರಿಚಾ ಘೋಷ್ (ವಿಕೆಟ್‌ಕೀಪರ್), ಸ್ನೇಹ ರಾಣಾ, ಶುಭಾ ಸತೀಶ್, ಹರ್ಲೀನ್ ಡಿಯೋಲ್, ಸೈಕಾ ಸಿಂಗ್, ಟಿಟಾಸ್ ಸಾಧು, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಕರ್.

ಆಸ್ಟ್ರೇಲಿಯಾದ ಭಾರತ ಪ್ರವಾಸದ ಸಂಪೂರ್ಣ ವೇಳಾಪಟ್ಟಿ

  • ಡಿಸೆಂಬರ್ 21 ರಿಂದ 24: ಟೆಸ್ಟ್ ಪಂದ್ಯ, ವಾಂಖೆಡೆ ಸ್ಟೇಡಿಯಂ, ಮುಂಬೈ
  • ಡಿಸೆಂಬರ್ 28: ಮೊದಲನೇ ಏಕದಿನ ಪಂದ್ಯ, ವಾಂಖೆಡೆ ಸ್ಟೇಡಿಯಂ, ಮುಂಬೈ
  • ಡಿಸೆಂಬರ್ 30: ಎರಡನೇ ಏಕದಿನ ಪಂದ್ಯ, ವಾಂಖೆಡೆ ಸ್ಟೇಡಿಯಂ, ಮುಂಬೈ
  • ಜನವರಿ 2: ಮೂರನೇ ಏಕದಿನ ಪಂದ್ಯ, ವಾಂಖೆಡೆ ಸ್ಟೇಡಿಯಂ, ಮುಂಬೈ
  • ಜನವರಿ 5: ಮೊದಲನೇ ಟಿ20ಪಂದ್ಯ, ಡಿವೈ ಪಾಟೀಲ್ ಸ್ಟೇಡಿಯಂ, ಮುಂಬೈ
  • ಜನವರಿ 7: ಎರಡನೇ ಟಿ20ಪಂದ್ಯ, ಡಿವೈ ಪಾಟೀಲ್ ಸ್ಟೇಡಿಯಂ, ಮುಂಬೈ
  • ಜನವರಿ 9: ಮೂರನೇ ಟಿ20ಪಂದ್ಯ, ಡಿವೈ ಪಾಟೀಲ್ ಸ್ಟೇಡಿಯಂ, ಮುಂಬೈ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Sat, 9 December 23