IND vs PAK: ನಾಳೆ ಭಾರತ- ಪಾಕ್ ಕ್ರಿಕೆಟ್ ಕದನ; ಪಂದ್ಯ ಎಷ್ಟು ಗಂಟೆಗೆ ಆರಂಭ? ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

U19 Asia Cup, India vs Pakistan: ಡಿಸೆಂಬರ್ 10 ರ ಭಾನುವಾರದಂದು ಏಷ್ಯಾಕಪ್​ನ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

IND vs PAK: ನಾಳೆ ಭಾರತ- ಪಾಕ್ ಕ್ರಿಕೆಟ್ ಕದನ; ಪಂದ್ಯ ಎಷ್ಟು ಗಂಟೆಗೆ ಆರಂಭ? ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?
ಭಾರತ- ಪಾಕಿಸ್ತಾನ
Follow us
ಪೃಥ್ವಿಶಂಕರ
|

Updated on: Dec 09, 2023 | 11:56 AM

ದುಬೈನಲ್ಲಿ ನಿನ್ನೆಯಿಂದ ಅಂದರೆ ಡಿಸೆಂಬರ್ 8 ರಿಂದ ಆರಂಭವಾಗಿರುವ 19 ವರ್ಷದೊಳಗಿನವರ ಏಷ್ಯಾಕಪ್​ನ (ACC U19 Asia Cup 2023) ಮೊದಲ ದಿನ ಎರಡು ಪಂದ್ಯಗಳು ನಡೆದವು. ಇದರಲ್ಲಿ ಅಫ್ಘಾನ್ ತಂಡವನ್ನು ಭಾರತ ಮಣಿಸಿದರೆ, ಇನ್ನೊಂದು ಪಂದ್ಯದಲ್ಲಿ ನೇಪಾಳ ತಂಡವನ್ನು ಮಣಿಸಿದ ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇದೀಗ ನಾಳೆ ಅಂದರೆ ಡಿಸೆಂಬರ್ 10 ರ ಭಾನುವಾರದಂದು ಏಷ್ಯಾಕಪ್​ನ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳು ಮುಖಾಮುಖಿಯಾಗಲಿವೆ.

ಡಿಸೆಂಬರ್ 17 ರಂದು ಫೈನಲ್

ಈ ಪಂದ್ಯಾವಳಿಯು ಡಿಸೆಂಬರ್ 8 ರಿಂದ ಪ್ರಾರಂಭವಾಗಿದ್ದು, ಇದರ ಅಂತಿಮ ಪಂದ್ಯ ಡಿಸೆಂಬರ್ 17 ರಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಅಂಡರ್-19 ಏಷ್ಯಾಕಪ್​ನಲ್ಲಿ 8 ತಂಡಗಳು ಬಾಗಿಯಾಗಿವೆ. ಇದರಲ್ಲಿ 8 ತಂಡಗಳನ್ನು ಎರಡು ಬಾಗಗಳಾಗಿ ವಿಂಗಡಿಸಲಾಗಿದ್ದು, ಪಾಕಿಸ್ತಾನ, ಭಾರತ, ಅಫ್ಘಾನಿಸ್ತಾನ ಮತ್ತು ನೇಪಾಳ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದರೆ, ಬಿ ಗುಂಪಿನಲ್ಲಿ ಶ್ರೀಲಂಕಾ, ಜಪಾನ್, ಯುಎಇ ಮತ್ತು ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ.

U19 Asia Cup 2023: ಅಫ್ಘಾನ್ ವಿರುದ್ಧ ಸುಲಭವಾಗಿ ಗೆದ್ದ ಭಾರತ; ಮೊದಲ ಪಂದ್ಯ ಗೆದ್ದ ಪಾಕ್

ಭಾರತ- ಪಾಕ್ ಪಂದ್ಯದ ಪೂರ್ಣ ವಿವರ

ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್-19 ಏಷ್ಯಾಕಪ್ ಪಂದ್ಯ ಯಾವಾಗ ನಡೆಯಲ್ಲಿದೆ?

ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್-19 ಏಷ್ಯಾಕಪ್ ಪಂದ್ಯವು ಡಿಸೆಂಬರ್ 10 ರಂದು ನಡೆಯಲ್ಲಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್-19 ಏಷ್ಯಾಕಪ್ ಪಂದ್ಯ ಎಲ್ಲಿ ನಡೆಯಲ್ಲಿದೆ?

ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್-19 ಏಷ್ಯಾಕಪ್ ಪಂದ್ಯವೂ ದುಬೈನ ಐಸಿಸಿ ಅಕಾಡೆಮಿ ಓವಲ್ 1 ಕ್ರೀಡಾಂಗಣದಲ್ಲಿ ನಡೆಯಲ್ಲಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್-19 ಏಷ್ಯಾಕಪ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್-19 ಏಷ್ಯಾಕಪ್ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುತ್ತದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್-19 ಏಷ್ಯಾಕಪ್ ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು?

ಅಂಡರ್-19 ಏಷ್ಯಾಕಪ್ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಯ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಉಭಯ ತಂಡಗಳು

ಭಾರತ: ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಉದಯ್ ಸಹರನ್ (ನಾಯಕ), ಅರವೆಲ್ಲಿ ಅವನೀಶ್ ರಾವ್, ಸೌಮ್ಯ ಕುಮಾರ್ ಪಾಂಡೆ, ಮುರುಗನ್ ಅಭಿಷೇಕ್, ಇನೇಶ್ ಮಹಾಜನ್, ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.

ಪಾಕಿಸ್ತಾನ: ಮಿರ್ಜಾ ಸಾದ್ ಬೇಗ್ (ನಾಯಕ), ಅಹ್ಮದ್ ಹುಸೇನ್, ಅಲಿ ಅಸ್ಫಂಡ್, ಅಮೀರ್ ಹಸನ್, ಅರಾಫತ್ ಅಹ್ಮದ್ ಮಿನ್ಹಾಸ್, ಅಜಾನ್ ಅವೈಸ್, ಖುಬೈಬ್ ಖಲೀಲ್, ನಜಾಬ್ ಖಾನ್, ನವೀದ್ ಅಹ್ಮದ್ ಖಾನ್, ಉಬೈದ್ ಶಾ, ಮುಹಮ್ಮದ್ ರಿಯಾಜುಲ್ಲಾ, ಮುಹಮ್ಮದ್ ತಯ್ಯಬ್ ಆರಿಫ್, ಮುಹಮ್ಮದ್ ಝೀಶನ್, ಶಹಜೇಬ್ ಖಾನ್, ಶಮೀಲ್ ಹುಸೇನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ