U-19 Asia Cup: ಅಂಡರ್-19 ಏಷ್ಯಾಕಪ್ ಟೂರ್ನಿಗೆ ಇಂದು ಚಾಲನೆ: ಮೊದಲ ದಿನವೇ ಭಾರತದ ಪಂದ್ಯ, ಎದುರಾಳಿ ಯಾರು?
India U-19 vs Afghanistan U-19: ಭಾರತ U-19 vs ಅಫ್ಘಾನಿಸ್ತಾನ U-19 ಏಷ್ಯಾಕಪ್ ಪಂದ್ಯ ದುಬೈನ ಐಸಿಸಿ ಅಕಾಡೆಮಿ ಓವಲ್-1 ಮೈದಾನದಲ್ಲಿ ನಡೆಯಲಿದ್ದು, ಬೆಳಗ್ಗೆ 11:00 ಗಂಟೆಗೆ ಪ್ರಾರಂಭವಾಗಲಿದೆ. ಆದರೆ, ಈ ಪಂದ್ಯ ಭಾರತದಲ್ಲಿ ಪ್ರಸಾರವಾಗುವುದಿಲ್ಲ.
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಶುಕ್ರವಾರ (ಡಿಸೆಂಬರ್ 8) ಇಂದು ಬಹುನಿರೀಕ್ಷಿತ ಅಂಡರ್-19 ಏಷ್ಯಾಕಪ್ 2023 ಆವೃತ್ತಿಗೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲೇ ಭಾರತ U-19 ತಂಡ 2017 ರ ಚಾಂಪಿಯನ್ ಅಫ್ಘಾನಿಸ್ತಾನ (India U19 vs Afghanistan U19) ವಿರುದ್ಧ ಆಡುವ ಮೂಲಕ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ. ದುಬೈನಲ್ಲಿರುವ ಐಸಿಸಿ ಅಕಾಡೆಮಿ ಓವಲ್-1 ನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ. ದಾಖಲೆಯ ಒಂಬತ್ತನೇ ಬಾರಿಗೆ ಪ್ರಶಸ್ತಿ ಗೆಲ್ಲುವ ತವಕದೊಂದಿಗೆ ಯಂಗ್ ಇಂಡಿಯಾ ಕಣಕ್ಕಿಳಿಯುತ್ತಿದೆ.
ಭಾರತವು ಇತಿಹಾಸದಲ್ಲಿ ಇಲ್ಲಿಯವರೆಗೆ ಸ್ಪರ್ಧೆಯ ಒಂಬತ್ತು ಆವೃತ್ತಿಗಳಲ್ಲಿ ಎಂಟನ್ನು ಗೆದ್ದಿದೆ, 1989, 2003, 2012, 2013/14, 2016, 2018, 2019 ಮತ್ತು 2021 ರಲ್ಲಿ ಪ್ರಶಸ್ತಿಯನ್ನು ಎತ್ತಿಹಿಡಿದಿದೆ. ಭಾರತ ಬಿಟ್ಟು ಚಾಂಪಿಯನ್ ಆಗಿರುವ ಮತ್ತೊಂದು ಏಕೈಕ ತಂಡವೆಂದರೆ ಅದು ಅಫ್ಘಾನಿಸ್ತಾನ (2017 ರಲ್ಲಿ). ಹೀಗಾಗಿ ಇಂದಿನ ಇಂಡೋ-ಅಫ್ಘಾನ್ ನಡುವಣ ಕಾದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
Jos Buttler: ವಿಶೇಷ ದಾಖಲೆ ಬರೆದ ಜೋಸ್ ಬಟ್ಲರ್
ಅಂಡರ್-19 ಏಷ್ಯಾಕಪ್ 2023 ಟೂರ್ನಿಯಲ್ಲಿ ಒಟ್ಟು 8 ತಂಡಗಳ ನಡುವೆ ಕಾದಾಟ ನಡೆಯಲಿದೆ. 8 ತಂಡಗಳನ್ನು ತಲಾ ನಾಲ್ಕರಂತೆ ಎರಡು ಗುಂಪುಗಳಲ್ಲಿ ಇರಿಸಲಾಗಿದೆ. ಪಾಕಿಸ್ತಾನ, ಭಾರತ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಶ್ರೀಲಂಕಾ, ಜಪಾನ್, ಯುಎಇ ಮತ್ತು ಬಾಂಗ್ಲಾದೇಶ ಬಿ ಗುಂಪಿನಲ್ಲಿದೆ. U-19 ಏಷ್ಯಾಕಪ್‌ನಲ್ಲಿ ಟೀಮ್ ಇಂಡಿಯಾ ಅತ್ಯಂತ ಯಶಸ್ವಿ ತಂಡವಾಗಿದ್ದು, ಕಳೆದ ಬಾರಿ 2021ರಲ್ಲಿ ಶ್ರೀಲಂಕಾವನ್ನು ಸೋಲಿಸಿ ಟ್ರೋಫಿ ಗೆದ್ದಿತ್ತು.
ಪಂದ್ಯ ಎಲ್ಲಿ-ಎಷ್ಟು ಗಂಟೆಗೆ?
ಭಾರತ U-19 vs ಅಫ್ಘಾನಿಸ್ತಾನ U-19 ಏಷ್ಯಾಕಪ್ ಪಂದ್ಯ ದುಬೈನ ಐಸಿಸಿ ಅಕಾಡೆಮಿ ಓವಲ್-1 ಮೈದಾನದಲ್ಲಿ ನಡೆಯಲಿದ್ದು, ಬೆಳಗ್ಗೆ 11:00 ಗಂಟೆಗೆ ಪ್ರಾರಂಭವಾಗಲಿದೆ. ಆದರೆ, ಈ ಪಂದ್ಯ ಭಾರತದಲ್ಲಿ ಪ್ರಸಾರವಾಗುವುದಿಲ್ಲ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಯೂಟ್ಯೂಬ್ ಪೇಜ್ ಮೂಲಕ ಆನ್‌ಲೈನ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.
ಅಂಡರ್ 19 ಏಷ್ಯಾಕಪ್ 2023 ರಲ್ಲಿ ಭಾರತೀಯ ತಂಡದ ವೇಳಾಪಟ್ಟಿ:
- ಶುಕ್ರವಾರ, ಡಿಸೆಂಬರ್ 8- ಭಾರತ U19 vs ಅಫ್ಘಾನಿಸ್ತಾನ್ U19, ಗುಂಪು A, ICC ಅಕಾಡೆಮಿ ಗ್ರೌಂಡ್, ದುಬೈ, 11:00 AM
- ಭಾನುವಾರ, ಡಿಸೆಂಬರ್ 10- ಭಾರತ U19 vs ಪಾಕಿಸ್ತಾನ U19, ಗುಂಪು A, ICC ಅಕಾಡೆಮಿ ಮೈದಾನ, ದುಬೈ, 11:00 AM
- ಮಂಗಳವಾರ, ಡಿಸೆಂಬರ್ 12- ಭಾರತ U19 vs ನೇಪಾಳ U19, ಗುಂಪು A, ICC ಅಕಾಡೆಮಿ ಗ್ರೌಂಡ್ ನಂ. 2, ದುಬೈ, 11:00 AM
ಭಾರತೀಯ ಅಂಡರ್ 19 ತಂಡ:
ಉದಯ್ ಸಹರನ್ (ನಾಯಕ), ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ, ಅರವೇಲಿ ಅವನೀಶ್ ರಾವ್ (ವಿಕೆಟ್-ಕೀಪರ್), ಸೌಮ್ಯ ಕುಮಾರ್ ಪಾಂಡೆ, ಮುರುಗನ್ ಅಭಿಷೇಕ್, ಇನೇಶ್ ಮಹಾಜನ್ (ವಿಕೆಟ್-ಕೀಪರ್), ಧನುಷ್ ಗೌಡ.
ಸ್ಟ್ಯಾಂಡ್‌ಬೈ ಆಟಗಾರರು: ಪ್ರೇಮ್ ದೇವ್ಕರ್, ಅಂಶ್ ಗೋಸಾಯಿ, ಮೊಹಮ್ಮದ್ ಅಮನ್.
ಮೀಸಲು ಆಟಗಾರರು: ದಿಗ್ವಿಜಯ್ ಪಾಟೀಲ್, ಜಯಂತ್ ಗೋಯತ್, ಪಿ ವಿಘ್ನೇಶ್, ಕಿರಣ್ ಚೋರ್ಮಲೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 am, Fri, 8 December 23