WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಯಾವಾಗ? ಇಲ್ಲಿದೆ ಮಾಹಿತಿ
WPL Auction 2024: ಡೆಲ್ಲಿ ಕ್ಯಾಪಿಟಲ್ಸ್ 15 ಆಟಗಾರರನ್ನು ಉಳಿಸಿಕೊಂಡಿದ್ದಾರೆ. ಅದರಂತೆ 2.25 ಕೋಟಿ ರೂ. ಹರಾಜು ಮೊತ್ತ ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ಆಟಗಾರರನ್ನು ಉಳಿಸಿಕೊಂಡಿದೆ. ಹೀಗಾಗಿ ಆರ್ಸಿಬಿ 3.35 ಕೋಟಿ ರೂ.ನೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ (WPL Auction 2024) ಸೀಸನ್-2 ಆಟಗಾರ್ತಿಯರ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ಡಿಸೆಂಬರ್ 9 ರಂದು ನಡೆಯಲಿರುವ ಹರಾಜು ಪ್ರಕ್ರಿಯೆಗಾಗಿ ಒಟ್ಟು 165 ಆಟಗಾರ್ತಿಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಹರಾಜಿಗೂ ಮುನ್ನ ಐದು ಫ್ರಾಂಚೈಸಿಗಳು ಒಟ್ಟು 60 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, 29 ಮಂದಿಯನ್ನು ರಿಲೀಸ್ ಮಾಡಿದೆ. ಅದರಂತೆ ಖಾಲಿಯಿರುವ 30 ಸ್ಲಾಟ್ಗಳಿಗಾಗಿ ಬಿಡ್ಡಿಂಗ್ ನಡೆಯಲಿದೆ. ಈ ಹರಾಜು ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
WPL ಹರಾಜು ಎಲ್ಲಿ ಮತ್ತು ಯಾವಾಗ? ಡಿಸೆಂಬರ್ 9 ರಂದು, ಮುಂಬೈನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆ ನಡೆಯಲಿದೆ.
ಎಷ್ಟು ಗಂಟೆಗೆ ಬಿಡ್ಡಿಂಗ್ ಪ್ರಾರಂಭ?
ಮಧ್ಯಾಹ್ನ 2.30 ರಿಂದ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಶುರುವಾಗಲಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಸ್ಪೋರ್ಟ್ಸ್-18 ಚಾನೆಲ್ನಲ್ಲಿ ಈ ಬಿಡ್ಡಿಂಗ್ ಅನ್ನು ವೀಕ್ಷಿಸಬಹುದು.
ಲೈವ್ ಸ್ಟ್ರೀಮಿಂಗ್ ವೀಕ್ಷಿಸುವುದು ಹೇಗೆ?
ಜಿಯೋ ಸಿನಿಮಾ ಆ್ಯಪ್ನಲ್ಲಿ ಮತ್ತು ವೆಬ್ಸೈಟ್ನಲ್ಲಿ ಈ ಹರಾಜು ಪ್ರಕ್ರಿಯೆಯ ಲೈವ್ ಇರಲಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿರುವ ತಂಡಗಳಾವುವು?
- ಮುಂಬೈ ಇಂಡಿಯನ್ಸ್
- ಡೆಲ್ಲಿ ಕ್ಯಾಪಿಟಲ್ಸ್
- ಯುಪಿ ವಾರಿಯರ್ಸ್
- ಗುಜರಾತ್ ಜೈಂಟ್ಸ್
- ರಾಯಲ್ ಚಾಲೆಂಜರ್ಸ್ ಬೆಂಗಳೂರು
ಒಂದು ತಂಡದಲ್ಲಿ ಎಷ್ಟು ಆಟಗಾರ್ತಿಯರಿಗೆ ಅವಕಾಶ?
ವುಮೆನ್ಸ್ ಪ್ರೀಮಿಯರ್ ಲೀಗ್ನ ಒಂದು ತಂಡದಲ್ಲಿ ಒಟ್ಟು 18 ಆಟಗಾರ್ತಿಯರಿಗೆ ಅವಕಾಶವಿದೆ.
ಇದನ್ನೂ ಓದಿ: Virat Kohli: ಈ ಒಂದು ದಾಖಲೆ ಮುರಿಯುವುದು ಕೊಹ್ಲಿಯಿಂದಲೂ ಅಸಾಧ್ಯ..!
ಪ್ರತಿ ತಂಡಗಳ ಬಳಿ ಎಷ್ಟು ಹರಾಜು ಮೊತ್ತವಿದೆ?
- ಗುಜರಾತ್ ಜೈಂಟ್ಸ್ ಗರಿಷ್ಠ 11 ಆಟಗಾರರನ್ನು ಬಿಡುಗಡೆ ಮಾಡಿದೆ. ಇದೀಗ ಗುಜರಾತ್ ಜೈಂಟ್ಸ್ ಬಳಿ 5.95 ಕೋಟಿ ರೂ. ಹರಾಜು ಮೊತ್ತವಿದೆ.
- ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 13 ಆಟಗಾರರನ್ನು ಉಳಿಸಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡ ತನ್ನ 4 ಆಟಗಾರರನ್ನು ಬಿಡುಗಡೆ ಮಾಡಿದೆ. ಮುಂಬೈ ಬಳಿಯಿರುವ ಹರಾಜು ಮೊತ್ತ ರೂ. 2.1 ಕೋಟಿ ರೂ.
- ಯುಪಿ ವಾರಿಯರ್ಸ್ 5 ಆಟಗಾರರನ್ನು ಬಿಡುಗಡೆ ಮಾಡಿದೆ. ಇದೀಗ 4 ಕೋಟಿ ರೂ.ನೊಂದಿಗೆ ಯುಪಿ ಫ್ರಾಂಚೈಸಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.
- ಡೆಲ್ಲಿ ಕ್ಯಾಪಿಟಲ್ಸ್ 15 ಆಟಗಾರರನ್ನು ಉಳಿಸಿಕೊಂಡಿದ್ದಾರೆ. ಅದರಂತೆ 2.25 ಕೋಟಿ ರೂ. ಹರಾಜು ಮೊತ್ತ ಹೊಂದಿದೆ.
- ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ಆಟಗಾರರನ್ನು ಉಳಿಸಿಕೊಂಡಿದೆ. ಹೀಗಾಗಿ ಆರ್ಸಿಬಿ 3.35 ಕೋಟಿ ರೂ.ನೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.