ಏಕದಿನ ವಿಶ್ವಕಪ್ನ 10ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ ಸಾಧಿಸಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತರೂ ಸೌತ್ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಕ್ವಿಂಟನ್ ಡಿಕಾಕ್ (109) ಅವರ ಶತಕದ ನೆರವಿನಿಂದ ಸೌತ್ ಆಫ್ರಿಕಾ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 311 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 40.5 ಓವರ್ಗಳಲ್ಲಿ 177 ರನ್ಗಳಿಗೆ ಸರ್ವಪತನ ಕಂಡು, 134 ರನ್ಗಳಿಮದ ಸೋಲೊಪ್ಪಿಕೊಂಡಿದೆ.
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆ್ಯಂಡ ಝಂಪಾ, ಜೋಶ್ ಹ್ಯಾಝಲ್‌ವುಡ್.
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ, ತಬ್ರೇಝ್ ಶಂಸಿ.
177 ರನ್ಗಳಿಗೆ ಆಸ್ಟ್ರೇಲಿಯಾ ತಂಡ ಆಲೌಟ್.
ಸೌತ್ ಆಫ್ರಿಕಾ ತಂಡಕ್ಕೆ 134 ರನ್ಗಳ ಭರ್ಜರಿ ಜಯ.
ಸತತ 2ನೇ ಪಂದ್ಯದಲ್ಲೂ ಸೋತ ಬಲಿಷ್ಠ ಆಸ್ಟ್ರೇಲಿಯಾ ತಂಡ. ಇದಕ್ಕೂ ಮುನ್ನ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿದ್ದರು. ಇದೀಗ ಸೌತ್ ಆಫ್ರಿಕಾ ವಿರುದ್ಧ ಪರಾಜಯಗೊಂಡಿದೆ.
ತಬ್ರೇಝ್ ಶಂಸಿ ಎಸೆದ 41ನೇ ಓವರ್ನ ಮೂರನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ಗೆ ಕ್ಯಾಚ್ ನೀಡಿದ ಪ್ಯಾಟ್ ಕಮಿನ್ಸ್.
21 ಎಸೆತಗಳಲ್ಲಿ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕಮಿನ್ಸ್.
ಕ್ರೀಸ್ನಲ್ಲಿ ಜೋಶ್ ಹ್ಯಾಝಲ್‌ವುಡ್ ಹಾಗೂ ಝಂಪಾ ಬ್ಯಾಟಿಂಗ್.
ಮಾರ್ಕೊ ಯಾನ್ಸನ್ ಎಸೆದ 46ನೇ ಓವರ್ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ಪ್ಯಾಟ್ ಕಮಿನ್ಸ್.
ಕ್ರೀಸ್ನಲ್ಲಿ ಆ್ಯಡಂ ಝಂಪಾ ಹಾಗೂ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್.
ಆಸ್ಟ್ರೇಲಿಯಾ ತಂಡಕ್ಕೆ 14 ಓವರ್ಗಳಲ್ಲಿ 156 ರನ್ಗಳ ಅವಶ್ಯಕತೆ.
ಕೇಶವ್ ಮಹಾರಾಜ್ ಎಸೆದ 35ನೇ ಓವರ್ನ 3ನೇ ಎಸೆತದಲ್ಲಿ ಟೆಂಬಾ ಬವುಮಾಗೆ ಕ್ಯಾಚ್ ನೀಡಿದ ಮಾರ್ನಸ್ ಲಾಬುಶೇನ್.
74 ಎಸೆತಗಳಲ್ಲಿ 46 ರನ್ ಬಾರಿಸಿ ನಿರ್ಗಮಿಸಿದ ಲಾಬುಶೇನ್.
ಕ್ರೀಸ್ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ಆ್ಯಡಂ ಝಂಪಾ ಬ್ಯಾಟಿಂಗ್
ಮಾರ್ಕೊ ಯಾನ್ಸನ್ ಎಸೆದ 34ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಮಿಚೆಲ್ ಸ್ಟಾರ್ಕ್.
51 ಎಸೆತಗಳಲ್ಲಿ 27 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮಿಚೆಲ್ ಸ್ಟಾರ್ಕ್.
ಕ್ರೀಸ್ನಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್.
ಮಾರ್ಕೊ ಯಾನ್ಸನ್ ಎಸೆದ 32ನೇ ಓವರ್ನ 3ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಮಾರ್ನಸ್ ಲಾಬುಶೇನ್.
ಕ್ರೀಸ್ನಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್.
30 ಓವರ್ಗಳ ಮುಕ್ತಾಯದ ವೇಳೆಗೆ 125 ರನ್ ಮಾತ್ರ ಕಲೆಹಾಕಿದ ಆಸ್ಟ್ರೇಲಿಯಾ.
6 ವಿಕೆಟ್ ಪಡೆದಿರುವ ಸೌತ್ ಆಫ್ರಿಕಾ ತಂಡ.
ಆಸ್ಟ್ರೇಲಿಯಾಗೆ ಗೆಲ್ಲಲು 20 ಓವರ್ಗಳಲ್ಲಿ 187 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಮಾರ್ನಸ್ ಲಾಬುಶೇನ್ (38) ಹಾಗೂ ಮಿಚೆಲ್ ಸ್ಟಾರ್ಕ್ (20) ಬ್ಯಾಟಿಂಗ್.
ತಬ್ರೇಝ್ ಶಂಸಿ ಎಸೆದ 26ನೇ ಓವರ್ನ ಮೊದಲ ಎಸೆತವನ್ನು ಆಫ್ ಸೈಡ್ನತ್ತ ಬಾರಿಸಿ ಬೌಂಡರಿಗಿಟ್ಟಿಸಿಕೊಂಡ ಮಿಚೆಲ್ ಸ್ಟಾರ್ಕ್.
ಕ್ರೀಸ್ನಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್.
25 ಓವರ್ಗಳ ಮುಕ್ತಾಯದ ವೇಳೆಗೆ 95 ರನ್ ಕಲೆಹಾಕಿದ ಆಸ್ಟ್ರೇಲಿಯಾ.
6 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಸೌತ್ ಆಫ್ರಿಕಾ ಬೌಲರ್ಗಳು.
ಕ್ರೀಸ್ನಲ್ಲಿ ಮಾರ್ನಸ್ ಲಾಬುಶೇನ್ (22) ಹಾಗೂ ಮಿಚೆಲ್ ಸ್ಟಾರ್ಕ್ (8).
ಆಸ್ಟ್ರೇಲಿಯಾ ತಂಡಕ್ಕೆ ಮಾರ್ನಸ್ ಲಾಬುಶೇನ್ ಹಾಗೂ ಮಿಚೆಲ್ ಸ್ಟಾರ್ಕ್ ಆಸರೆ.
23 ಓವರ್ಗಳ ಮುಕ್ತಾಯಕ್ಕೆ 90 ರನ್ ಕಲೆಹಾಕಿದ ಆಸ್ಟ್ರೇಲಿಯಾ.
6 ವಿಕೆಟ್ ಕಬಳಿಸಿರುವ ಸೌತ್ ಆಫ್ರಿಕಾ ಬೌಲರ್ಗಳು.
ಕಗಿಸೊ ರಬಾಡ ಎಸೆದ 20ನೇ ಓವರ್ನ ಮೊದಲ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಮಿಚೆಲ್ ಸ್ಟಾರ್ಕ್.
20 ಓವರ್ಗಳ ಮುಕ್ತಾಯದ ವೇಳೆಗೆ 80 ರನ್ ಕಲೆಹಾಕಿದ ಆಸ್ಟ್ರೇಲಿಯಾ.
6 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್.
ಕಗಿಸೊ ರಬಾಡ ಎಸೆದ 18ನೇ ಓವರ್ನ 2ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಮಾರ್ಕಸ್ ಸ್ಟೋಯಿನಿಸ್.
4 ಎಸೆತಗಳಲ್ಲಿ 5 ರನ್ ಬಾರಿಸಿ ನಿರ್ಗಮಿಸಿದ ಹೊಡಿಬಡಿ ದಾಂಡಿಗ ಸ್ಟೋಯಿನಿಸ್.
ಕ್ರೀಸ್ನಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್.
ಕೇಶವ್ ಮಹಾರಾಜ್ ಎಸೆದ 17ನೇ ಓವರ್ನ ಮೊದಲ ಎಸೆತದಲ್ಲೇ ಬೌಲರ್ಗೆ ಕ್ಯಾಚ್ ನೀಡಿದ ಗ್ಲೆನ್ ಮ್ಯಾಕ್ಸ್‌ವೆಲ್.
17 ಎಸೆತಗಳಲ್ಲಿ ಕೇವಲ 3 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮ್ಯಾಕ್ಸ್‌ವೆಲ್.
ಕ್ರೀಸ್ನಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ಮಾರ್ಕಸ್ ಸ್ಟೋಯಿನಿಸ್ ಬ್ಯಾಟಿಂಗ್.
15 ಓವರ್ಗಳ ಮುಕ್ತಾಯದ ವೇಳೆಗೆ 61 ರನ್ ಕಲೆಹಾಕಿದ ಆಸ್ಟ್ರೇಲಿಯಾ.
4 ವಿಕೆಟ್ ಕಬಳಿಸಿ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್.
ಕಗಿಸೊ ರಬಾಡ ಎಸೆದ 12ನೇ ಓವರ್ನ ಮೊದಲ ಎಸೆತದಲ್ಲೇ ಜೋಶ್ ಇಂಗ್ಲಿಸ್ ಕ್ಲೀನ್ ಬೌಲ್ಡ್.
ಆಸ್ಟ್ರೇಲಿಯಾ ತಂಡದ 4ನೇ ವಿಕೆಟ್ ಪತನ.
4 ಎಸೆತಗಳಲ್ಲಿ 5 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಇಂಗ್ಲಿಸ್.
ಕೇಶವ್ ಮಹಾರಾಜ್ ಎಸೆದ 11ನೇ ಓವರ್ನ 5ನೇ ಎಸೆತದಲ್ಲಿ ಸ್ಕ್ವೇರ್ನತ್ತ ಫೋರ್ ಬಾರಿಸಿದ ಜೋಶ್ ಇಂಗ್ಲಿಸ್.
ಕ್ರೀಸ್ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
ಕಗಿಸೊ ರಬಾಡ ಎಸೆದ 10ನೇ ಓವರ್ನ 5ನೇ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ವಿಕೆಟ್ ಒಪ್ಪಿಸಿದ ಸ್ಟೀವ್ ಸ್ಮಿತ್.
16 ಎಸೆತಗಳಲ್ಲಿ 19 ಬಾರಿಸಿ ನಿರ್ಗಮಿಸಿದ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಸ್ಮಿತ್.
ಕ್ರೀಸ್ನಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ಜೋಶ್ ಇಂಗ್ಲಿಸ್ ಬ್ಯಾಟಿಂಗ್.
ಲುಂಗಿ ಎನ್ಗಿಡಿ ಎಸೆದ 7ನೇ ಓವರ್ನ ಕೊನೆಯ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿದ ಡೇವಿಡ್ ವಾರ್ನರ್.
27 ಎಸೆತಗಳಲ್ಲಿ 15 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಎಡಗೈ ದಾಂಡಿಗ ವಾರ್ನರ್.
ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
ಮಾರ್ಕೊ ಯಾನ್ಸನ್ ಎಸೆದ 6ನೇ ಓವರ್ನ 5ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಮಿಚೆಲ್ ಮಾರ್ಷ್.
15 ಎಸೆತಗಳಲ್ಲಿ 7 ರನ್ ಬಾರಿಸಿ ನಿರ್ಗಮಿಸಿದ ಮಾರ್ಷ್.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್.
6 ಓವರ್ಗಳ ಮುಕ್ತಾಯದ ವೇಳೆಗೆ ಕೇವಲ 16 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಬ್ಯಾಟಿಂಗ್.
ಸೌತ್ ಆಫ್ರಿಕಾ ತಂಡದಿಂದ ಉತ್ತಮ ಬೌಲಿಂಗ್.
ಮಾರ್ಕೊ ಯಾನ್ಸನ್ ಎಸೆದ 4ನೇ ಓವರ್ನ ಮೊದಲ ಎಸೆತವನ್ನು ಆಫ್ ಸೈಡ್ನತ್ತ ಬಾರಿಸಿ ಬೌಂಡರಿಗಿಟ್ಟಿಸಿಕೊಂಡ ಡೇವಿಡ್ ವಾರ್ನರ್.
ಇದು ಆಸ್ಟ್ರೇಲಿಯಾ ಇನಿಂಗ್ಸ್ನ ಮೊದಲ ಫೋರ್.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್.
3ನೇ ಓವರ್ ಅನ್ನು ಮೇಡನ್ ಮಾಡಿದ ಬಲಗೈ ವೇಗಿ ಲುಂಗಿ ಎನ್ಗಿಡಿ.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್.
ಸೌತ್ ಆಫ್ರಿಕಾ ಬೌಲರ್ಗಳಿಂದ ಕರಾರುವಾಕ್ ದಾಳಿ.
ಮೊದಲ ಓವರ್ನಲ್ಲೇ ಕರಾರುವಾಕ್ ದಾಳಿ ಸಂಘಟಿಸಿದ ಲುಂಗಿ ಎನ್ಗಿಡಿ.
ಕೇವಲ ಮೂರು ರನ್ ಮಾತ್ರ ಕಲೆಹಾಕಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್.
ಕೊನೆಯ ಓವರ್ನಲ್ಲಿ ಕೇವಲ 1 ರನ್ ನೀಡಿ 2 ವಿಕೆಟ್ ಕಬಳಿಸಿದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್.
50 ಓವರ್ಗಳ ಮುಕ್ತಾಯಕ್ಕೆ 7 ವಿಕೆಟ್ ಕಳೆದುಕೊಂಡು 311 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 312 ರನ್ಗಳ ಗುರಿ.
ಪ್ಯಾಟ್ ಕಮಿನ್ಸ್ ಎಸೆದ 4ನೇ ಎಸೆತದಲ್ಲಿ ಹಿಂಬದಿಯತ್ತ ಫೋರ್ ಬಾರಿಸಿದ ಯಾನ್ಸನ್.
ಐದನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಸಿಡಿಸಿದ ಡೇವಿಡ್ ಮಿಲ್ಲರ್.
300 ರನ್ಗಳ ಗಡಿದಾಟಿದ ಸೌತ್ ಆಫ್ರಿಕಾ ತಂಡದ ಸ್ಕೋರ್.
ಕ್ರೀಸ್ನಲ್ಲಿ ಯಾನ್ಸನ್ ಹಾಗೂ ಮಿಲ್ಲರ್ ಬ್ಯಾಟಿಂಗ್.
ಮಿಚೆಲ್ ಸ್ಟಾರ್ಕ್ ಎಸೆದ 48ನೇ ಓವರ್ನ 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಮಾರ್ಕೊ ಯಾನ್ಸನ್.
ಕ್ರೀಸ್ನಲ್ಲಿ ಮಾರ್ಕೊ ಯಾನ್ಸನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
ಜೋಶ್ ಹ್ಯಾಝಲ್‌ವುಡ್ ಎಸೆದ 45ನೇ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಹೆನ್ರಿಕ್ ಕ್ಲಾಸೆನ್.
27 ಎಸೆತಗಳಲ್ಲಿ 29 ರನ್ ಬಾರಿಸಿದ್ದ ಹೆನ್ರಿಕ್ ಕ್ಲಾಸೆನ್ ಇನಿಂಗ್ಸ್ ಅಂತ್ಯ.
ಕ್ರೀಸ್ನಲ್ಲಿ ಮಾರ್ಕೊ ಯಾನ್ಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
ಪ್ಯಾಟ್ ಕಮಿನ್ಸ್ ಎಸೆದ 44ನೇ ಓವರ್ನ ಮೊದಲ ಎಸೆತದಲ್ಲೇ ಲಾಂಗ್ ಆನ್ ಫೀಲ್ಡರ್ಗೆ ಕ್ಯಾಚ್ ನೀಡಿದ ಐಡೆನ್ ಮಾರ್ಕ್ರಾಮ್.
44 ಎಸೆತಗಳಲ್ಲಿ 56 ರನ್ ಬಾರಿಸಿ ನಿರ್ಗಮಿಸಿದ ಮಾರ್ಕ್ರಾಮ್.
ಕ್ರೀಸ್ನಲ್ಲಿ ಡೇವಿಡ್ ಮಿಲ್ಲರ್ ಹಾಗೂ ಹೆನ್ರಿಕ್ ಕ್ಲಾಸೆನ್ ಬ್ಯಾಟಿಂಗ್.
ಆ್ಯಡಂ ಝಂಪಾ ಎಸೆದ 43ನೇ ಓವರ್ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ಐಡೆನ್ ಮಾರ್ಕ್ರಾಮ್.
3,4ನೇ ಮತ್ತು 5ನೇ ಎಸೆತಗಳಲ್ಲಿ ಚೆಂಡನ್ನು ಬೌಂಡರಿಗಟ್ಟಿ 41 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮಾರ್ಕ್ರಾಮ್.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಮಾರ್ಕ್ರಾಮ್ ಬ್ಯಾಟಿಂಗ್
ಹೆನ್ರಿಕ್ ಕ್ಲಾಸೆನ್ – ಐಡೆನ್ ಮಾರ್ಕ್ರಾಮ್ ಅರ್ಧಶತಕದ ಜೊತೆಯಾಟ.
42 ಓವರ್ಗಳಲ್ಲಿ 249 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಕೊನೆಯ 8 ಓವರ್ಗಳು ಬಾಕಿ, 300 ರನ್ಗಳ ನಿರೀಕ್ಷೆಯಲ್ಲಿ ಸೌತ್ ಆಫ್ರಿಕಾ.
40 ಓವರ್ಗಳಲ್ಲಿ 232 ರನ್ ಕಲೆಹಾಕಿದ ಸೌತ್ ಆಫ್ರಿಕಾ ತಂಡ.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್.
ಕೊನೆಯ 10 ಓವರ್ಗಳಲ್ಲಿ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿ ಸೌತ್ ಆಫ್ರಿಕಾ
ಜೋಶ್ ಹ್ಯಾಝಲ್‌ವುಡ್ ಎಸೆದ 38ನೇ ಓವರ್ನಲ್ಲಿ 3 ಆಕರ್ಷಕ ಬೌಂಡರಿ ಬಾರಿಸಿದ ಐಡೆನ್ ಮಾರ್ಕ್ರಾಮ್.
ಕ್ರೀಸ್ನಲ್ಲಿ ಐಡೆನ್ ಮಾರ್ಕ್ರಾಮ್ ಹಾಗೂ ಹೆನ್ರಿಕ್ ಕ್ಲಾಸೆನ್ ಬ್ಯಾಟಿಂಗ್.
ಟೆಂಬಾ ಬವುಮಾ, ಕ್ವಿಂಟನ್ ಡಿಕಾಕ್, ರಸ್ಸಿ ವಂಡರ್ ಡಸ್ಸೆನ್…ಔಟ್.
ಗ್ಲೆನ್ ಮ್ಯಾಕ್ಸ್‌ವೆಲ್ ಎಸೆದ 35ನೇ ಓವರ್ನ 5ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಡಿಕಾಕ್.
106 ಎಸೆತಗಳಲ್ಲಿ 109 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕ್ವಿಂಟನ್ ಡಿಕಾಕ್.
35 ಓವರ್ಗಳ ಮುಕ್ತಾಯದ ವೇಳೆಗೆ 197 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಪ್ಯಾಟ್ ಕಮಿನ್ಸ್ ಎಸೆದ 30ನೇ ಓವರ್ನ 4ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಡಿಕಾಕ್.
ಈ ಸಿಕ್ಸ್ನೊಂದಿಗೆ 90 ಎಸೆತಗಳಲ್ಲಿ ಶತಕ ಪೂರೈಸಿದ ಎಡಗೈ ದಾಂಡಿ ಡಿಕಾಕ್.
30 ಓವರ್ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 171 ರನ್ಗಳು.
ಆ್ಯಡಂ ಝಂಪಾ ಎಸೆದ 29ನೇ ಓವರ್ನ 3ನೇ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ರಸ್ಸಿ ವಂಡರ್ ಡಸ್ಸೆನ್.
30 ಎಸೆತಗಳಲ್ಲಿ 26 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಡಸ್ಸೆನ್.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ – ಏಡನ್ ಮಾರ್ಕ್ರಾಮ್ ಬ್ಯಾಟಿಂಗ್.
ಮಿಚೆಲ್ ಸ್ಟಾರ್ಕ್ ಎಸೆದ 28ನೇ ಓವರ್ನ ಮೊದಲ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ರಸ್ಸಿ ವಂಡರ್ ಡಸ್ಸೆನ್.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ರಸ್ಸಿ ವಂಡರ್ ಡಸ್ಸೆನ್ ಬ್ಯಾಟಿಂಗ್.
25 ಓವರ್ಗಳ ಮುಕ್ತಾಯದ ವೇಳೆಗೆ 136 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ (81) ಹಾಗೂ ರಸ್ಸಿ ವಂಡರ್ ಡಸ್ಸೆನ್ (11) ಬ್ಯಾಟಿಂಗ್.
ಟೆಂಬಾ ಬವುಮಾ (35) ಔಟ್.
ಜೋಶ್ ಹ್ಯಾಝಲ್‌ವುಡ್ ಎಸೆದ 23ನೇ ಓವರ್ನ 5ನೇ ಮತ್ತು 6ನೇ ಎಸೆತಗಳಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕ್ವಿಂಟನ್ ಡಿಕಾಕ್.
23 ಓವರ್ಗಳ ಮುಕ್ತಾಯದ ವೇಳೆಗೆ 126 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ರಸ್ಸಿ ವಂಡರ್ ಡಸ್ಸೆನ್ ಬ್ಯಾಟಿಂಗ್.
ಗ್ಲೆನ್ ಮ್ಯಾಕ್ಸ್‌ವೆಲ್ ಎಸೆದ 20ನೇ ಓವರ್ನ 4ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಟೆಂಬಾ ಬವುಮಾ.
55 ಎಸೆತಗಳಲ್ಲಿ 35 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಟೆಂಬಾ ಬವುಮಾ.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ರಸ್ಸಿ ವಂಡೆರ್ ಡಸ್ಸನ್ ಬ್ಯಾಟಿಂಗ್.
18 ಓವರ್ಗಳಲ್ಲಿ 100 ರನ್ ಕಲೆಹಾಕಿದ ಸೌತ್ ಆಫ್ರಿಕಾ ತಂಡ.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ (61) ಹಾಗೂ ಟೆಂಬಾ ಬವುಮಾ (33) ಬ್ಯಾಟಿಂಗ್.
ಸೌತ್ ಆಫ್ರಿಕಾ ತಂಡದಿಂದ ಉತ್ತಮ ಬ್ಯಾಟಿಂಗ್. ವಿಕೆಟ್ಗಾಗಿ ಆಸೀಸ್ ಬೌಲರ್ಗಳ ಪರದಾಟ.
ಆ್ಯಡಂ ಝಂಪಾ ಎಸೆದ 17ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಆಫ್ ಸೈಡ್ನತ್ತ ಆಕರ್ಷಕ 2 ಫೋರ್ಗಳನ್ನು ಬಾರಿಸಿದ ಕ್ವಿಂಟನ್ ಡಿಕಾಕ್.
17 ಓವರ್ ಮುಕ್ತಾಯದ ವೇಳೆಗೆ 97 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಟೆಂಬಾ ಬವುಮಾ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
51 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕ್ವಿಂಟನ್ ಡಿಕಾಕ್.
ಮಾರ್ಕಸ್ ಸ್ಟೋಯಿನಿಸ್ ಎಸೆದ 16ನೇ ಓವರ್ನ ಮೊದಲ ಎಸೆತದಲ್ಲೇ ಫೋರ್ ಬಾರಿಸಿದ ಟೆಂಬಾ ಬವುಮಾ.
ಕ್ರೀಸ್ನಲ್ಲಿ ಟೆಂಬಾ ಬವುಮಾ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
ಆ್ಯಡಂ ಝಂಪಾ ಎಸೆದ 15ನೇ ಓವರ್ನ ಕೊನೆಯ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಕ್ವಿಂಟನ್ ಡಿಕಾಕ್.
15 ಓವರ್ಗಳ ಮುಕ್ತಾಯದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 80 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಟೆಂಬಾ ಬವುಮಾ (25) ಹಾಗೂ ಕ್ವಿಂಟನ್ ಡಿಕಾಕ್ (49) ಬ್ಯಾಟಿಂಗ್.
ಪ್ಯಾಟ್ ಕಮಿನ್ಸ್ ಎಸೆದ 12ನೇ ಓವರ್ನ ಮೊದಲ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕ್ವಿಂಟನ್ ಡಿಕಾಕ್.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ (41) ಹಾಗೂ ಟೆಂಬಾ ಬವುಮಾ (19) ಬ್ಯಾಟಿಂಗ್.
ಪ್ಯಾಟ್ ಕಮಿನ್ಸ್ ಎಸೆದ 10ನೇ ಓವರ್ನ ಕೊನೆಯ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ಕ್ವಿಂಟನ್ ಡಿಕಾಕ್.
10 ಓವರ್ಗಳ ಮುಕ್ತಾಯದ ವೇಳೆಗೆ 53 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಟೆಂಬಾ ಬವುಮಾ ಬ್ಯಾಟಿಂಗ್.
ಪ್ಯಾಟ್ ಕಮಿನ್ಸ್ ಎಸೆದ 8ನೇ ಓವರ್ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ಟೆಂಬಾ ಬವುಮಾ.
8 ಓವರ್ಗಳ ಮುಕ್ತಾಯದ ವೇಳೆಗೆ 45 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಟೆಂಬಾ ಬವುಮಾ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
ಜೋಶ್ ಹ್ಯಾಝಲ್‌ವುಡ್ ಎಸೆದ 6ನೇ ಓವರ್ನ ಮೊದಲ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಕ್ವಿಂಟನ್ ಡಿಕಾಕ್.
5ನೇ ಎಸೆತದಲ್ಲಿ ಸ್ಕ್ವೇರ್ ಕಟ್ ಮೂಲಕ ಮತ್ತೊಂದು ಫೋರ್ ಸಿಡಿಸಿದ ಡಿಕಾಕ್.
ಕ್ರೀಸ್ನಲ್ಲಿ ಕ್ವಿಂಟನ್ ಹಾಗೂ ಟೆಂಬಾ ಬವುಮಾ ಬ್ಯಾಟಿಂಗ್.
ಮಿಚೆಲ್ ಸ್ಟಾರ್ಕ್ ಎಸೆದ 5ನೇ ಓವರ್ನ 4ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕ್ವಿಂಟನ್ ಡಿಕಾಕ್.
5 ಓವರ್ಗಳ ಮುಕ್ತಾಯದ ವೇಳೆಗೆ 19 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಟೆಂಬಾ ಬವುಮಾ ಹಾಗೂ ಡಿಕಾಕ್ ಬ್ಯಾಟಿಂಗ್.
ಜೋಶ್ ಹ್ಯಾಝಲ್‌ವುಡ್ ಎಸೆದ 4ನೇ ಓವರ್ನ 4ನೇ ಎಸೆತದಲ್ಲಿ ಹಿಂಬದಿಯತ್ತ ಫೋರ್ ಬಾರಿಸಿದ ಕ್ವಿಂಟನ್ ಡಿಕಾಕ್.
4 ಓವರ್ಗಳ ಮುಕ್ತಾಯದ ವೇಳೆಗೆ 11 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಟೆಂಬಾ ಬವುಮಾ ಬ್ಯಾಟಿಂಗ್.
2ನೇ ಓವರ್ನಲ್ಲಿ ಕೇವಲ 2 ರನ್ ನೀಡಿದ ಬಲಗೈ ಜೋಶ್ ಹ್ಯಾಝಲ್‌ವುಡ್.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಟೆಂಬಾ ಬವುಮಾ ಬ್ಯಾಟಿಂಗ್.
2 ಓವರ್ ಮುಕ್ತಾಯದ ವೇಳೆಗೆ 6 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಮೊದಲ ಓವರ್ನಲ್ಲಿ ಕೇವಲ 4 ರನ್ ನೀಡಿದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್.
ಕ್ರೀಸ್ನಲ್ಲಿ ಟೆಂಬಾ ಬವುಮಾ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್.
2ನೇ ಓವರ್ ಎಸೆಯಲು ಸಿದ್ದರಾಗುತ್ತಿರುವ ಜೋಶ್ ಹ್ಯಾಝಲ್‌ವುಡ್.
ಸೌತ್ ಆಫ್ರಿಕಾ ಪರ ಆರಂಭಿಕರು: ಕ್ವಿಂಟನ್ ಡಿಕಾಕ್ ಹಾಗೂ ಟೆಂಬಾ ಬವುಮಾ.
ಆಸ್ಟ್ರೇಲಿಯಾ ಪರ ಮೊದಲ ಓವರ್: ಮಿಚೆಲ್ ಸ್ಟಾರ್ಕ್.
ಸೌತ್ ಆಫ್ರಿಕಾ ಬ್ಯಾಟಿಂಗ್ ಲೈನಪ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್.
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ, ತಬ್ರೇಝ್ ಶಂಸಿ.
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆ್ಯಂಡ ಝಂಪಾ, ಜೋಶ್ ಹ್ಯಾಝಲ್‌ವುಡ್.
ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
Published On - 1:33 pm, Thu, 12 October 23