
ಟಿ20 ವಿಶ್ವಕಪ್ನಲ್ಲಿಂದು (ICC T20 World Cup) ಮಹತ್ವದ ಪಂದ್ಯ ನಡೆಯಲಿದೆ. ಸೂಪರ್ 12ನಲ್ಲಿ (Super 12) ತಲಾ ಒಂದು ಜಯ ಸಾಧಿಸಿ ಗೆಲುವಿನ ಲಯದಲ್ಲಿರುವ ಆ್ಯರೋನ್ ಫಿಂಚ್ (Aaron Finch) ನಾಯಕತ್ವದ ಆಸ್ಟ್ರೇಲಿಯಾ ಹಾಗೂ ಡಸನ್ ಶನಕಾ (Dasun Shanaka ನೇತೃತ್ವದ ಶ್ರೀಲಂಕಾ (Australia vs Sri Lanka) ತಂಡಗಳು ಮುಖಾಮುಖಿ ಆಗುತ್ತಿದೆ. ಲಂಕನ್ನರು ಬಾಂಗ್ಲಾವನ್ನು ಮಣಿಸಿದ್ದರೆ, ಆಸ್ಟ್ರೇಲಿಯನ್ನರು ಸೌತ್ ಆಫ್ರಿಕಾವನ್ನು ಪರಾಭವಗೊಳಿಸಿದ್ದರು. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ (Dubai International Stadium) ಈ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ.
ಕಾಂಗರೂ ಪಡೆಗೆ ಡೇವಿಡ್ ವಾರ್ನರ್ ಫಾರ್ಮ್ನದ್ದೇ ದೊಡ್ಡ ಸಮಸ್ಯೆಯಾಗಿದೆ. ವಾರ್ನರ್ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲೂ ರನ್ ಗಳಿಸಲು ವಿಫಲರಾಗಿದ್ದರು. ನಾಯಕ ಆ್ಯರನ್ ಫಿಂಚ್ ಕೂಡ ಬೇಗ ಔಟಾಗಿದ್ದರು. ಇದರ ನಡುವೆ ಸ್ಟೀವ್ ಸ್ಮಿತ್ ಲಯಕ್ಕೆ ಮರಳಿರುವುದು ತಂಡದಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಮಿಚಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್ರಂತಹ ಅಪಾಯಕಾರಿ ಬ್ಯಾಟರ್ಗಳು ಎದುರಾಳಿಗೆ ಮಾರಕವಾಗಿದ್ದಾರೆ.
ಮ್ಯಾಕ್ಸ್‌ವೇಲ್ ಕೇವಲ ಬ್ಯಾಟಿಂಗ್ನಲ್ಲಿ ಮಾತ್ರವಲ್ಲದೆ ಕಳೆದ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿ ಒಂದು ವಿಕೆಟ್ ಉರುಳಿಸಿ ಬೌಲಿಂಗ್ನಲ್ಲೂ ನೆರವಾಗಿದ್ದರು. ಇನ್ನು ಮಿಚೆಲ್ ಸ್ಟಾರ್ಕ್, ಆ್ಯಂಡಮ್ ಜಂಪಾ, ಹೇಜಲ್‌ವುಡ್ ಆಸ್ಪ್ರೇಲಿಯಾದ ಪ್ರಮುಖ ಬೌಲಿಂಗ್ ಅಸ್ತ್ರಗಳಾಗಿದ್ದಾರೆ.
ಇತ್ತ ಗಾಯದ ಸಮಸ್ಯೆಯಿಂದಾಗಿ ಹಿಂದಿನ ಪಂದ್ಯದಲ್ಲಿ ಆಡದೇ ಇದ್ದ ಶ್ರೀಲಂಕಾದ ಸ್ಪಿನ್ನರ್ ಮಹೀಶ್ ತೀಕ್ಷಣ ಈ ಪಂದ್ಯಕ್ಕೆ ಲಭ್ಯವಿದ್ದಾರೆ. ಇದು ತಂಡದಲ್ಲಿ ಭರವಸೆ ತಂದಿದೆ. ಲೆಗ್ ಸ್ಪಿನ್ನರ್ ಆಲ್‌ರೌಂಡರ್ ವಾನಿಂದು ಹಸರಂಗ ಅವರ ಮೇಲೆಯೂ ತಂಡ ನಿರೀಕ್ಷೆ ಇದೆ. ಚರಿತ್ ಅಸಲಂಕ, ಪಥುಮ್ ನಿಸಾಂಕ ಮತ್ತು ಆವಿಷ್ಕಾ ಫರ್ನಾಂಡೊ ಅವರನ್ನು ಒಳಗೊಂಡ ಲಂಕಾ ಬ್ಯಾಟಿಂಗ್ ವಿಭಾಗ ಬಲಿಷ್ಠದಿಂದ ಕೂಡಿದೆ.
ಟಿ20 ಕ್ರಿಕೆಟ್ನಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 16 ಸಲ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಲಾ 8 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿವೆ. ಟಿ20 ವಿಶ್ವಕಪ್ನಲ್ಲಿ 3 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, ಕಾಂಗರೂ ಪಡೆ 2 ಸಲ ಹಾಗೂ ಶ್ರೀಲಂಕಾ 1 ಪಂದ್ಯದಲ್ಲಿ ಗೆಲುವು ಪಡೆದಿವೆ.
ಪಂದ್ಯ ಸಮಯ: ಸಂಜೆ 7.30 (ಭಾರತೀಯ ಕಾಲಮಾನ)
ಸ್ಥಳ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂ, ದುಬೈ
Scotland vs Namibia: ನಮೀಬಿಯಾ ಐತಿಹಾಸಿಕ ಜಯ ಕಂಡು ಟೀಮ್ ಇಂಡಿಯಾಕ್ಕೆ ಶುರುವಾಯ್ತು ಮತ್ತೊಂದು ಟೆನ್ಶನ್
(Australia will take on Sri Lanka in match 22 at the Dubai International Stadium on Thursday)