Scotland vs Namibia: ನಮೀಬಿಯಾ ಐತಿಹಾಸಿಕ ಜಯ ಕಂಡು ಟೀಮ್ ಇಂಡಿಯಾಕ್ಕೆ ಶುರುವಾಯ್ತು ಮತ್ತೊಂದು ಟೆನ್ಶನ್

Namibia beat Scotland, T20 World Cup 2021: ಟಿ20 ವಿಶ್ವಕಪ್​ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ನಮೀಬಿಯಾ ನಾಲ್ಕು ವಿಕೆಟ್ ಅಂತರದ ಗೆಲುವು ದಾಖಲಿಸಿ ಕ್ರಿಕೆಟ್ ಜಗತ್ತನ್ನು ಮತ್ತೆ ಬೆರಗಾಗಿಸಿದೆ. ಇದರಿಂದ ಸದ್ಯ ಇದೀಗ ವಿರಾಟ್ ಕೊಹ್ಲಿ ಪಡೆಯ ಟೀಮ್ ಇಂಡಿಯಾಕ್ಕೂ ಚಿಂತೆ ಶುರುವಾಗಿದೆ.

Scotland vs Namibia: ನಮೀಬಿಯಾ ಐತಿಹಾಸಿಕ ಜಯ ಕಂಡು ಟೀಮ್ ಇಂಡಿಯಾಕ್ಕೆ ಶುರುವಾಯ್ತು ಮತ್ತೊಂದು ಟೆನ್ಶನ್
Namibia beat Scotland Team India
Follow us
TV9 Web
| Updated By: Vinay Bhat

Updated on: Oct 28, 2021 | 7:27 AM

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup) ಬುಧವಾರ ಅಬುಧಾಬಿಯಲ್ಲಿ ನಡೆದ ಸೂಪರ್-12 ಹಂತದ (Super 12) ಎರಡನೇ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ನಮೀಬಿಯಾ (Scotland vs Namibia) ನಾಲ್ಕು ವಿಕೆಟ್ ಅಂತರದ ಗೆಲುವು ದಾಖಲಿಸಿ ಕ್ರಿಕೆಟ್ ಜಗತ್ತನ್ನು ಮತ್ತೆ ಬೆರಗಾಗಿಸಿದೆ. ಅನೇಕ ವರ್ಷಗಳ ಬಳಿಕ ವಿಶ್ವಕಪ್​ವೊಂದರಲ್ಲಿ ಆಡುವ ಅವಕಾಶ ಪಡೆದ ನಮೀಬಿಯಾ ಮೊದಲ ಬಾರಿಗೆ ಸೂಪರ್ 12 ಹಂತಕ್ಕೆ ಆಯ್ಕೆಯಾಗಿ ಆಡುತ್ತಿದೆ. ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಗೆಲುವಿನ ಸಂಭ್ರಮ ಪಡೆದು ಭಾರೀ ಅಚ್ಚರಿ ಹುಟ್ಟಿಸಿದೆ. ಇದರಿಂದ ವಿರಾಟ್ ಕೊಹ್ಲಿ (Virat Kohli) ಪಡೆಯ ಟೀಮ್ ಇಂಡಿಯಾಕ್ಕೂ (Team India) ಚಿಂತೆ ಶುರುವಾಗಿದೆ. ಯಾಕಂದ್ರೆ ಭಾರತ ಮುಂದೆ ನಮೀಬಿಯಾ (India vs Namibia) ವಿರುದ್ಧ ಆಡಬೇಕಿದೆ. ಮೊದಲ ಪಂದ್ಯ ಸೋತಿರುವ ಟೀಮ್ ಇಂಡಿಯಾಕ್ಕೆ ಮುಂದಿರುವ ಪಂದ್ಯ ಮುಖ್ಯವಾಗಿದ್ದರಿಂದ ನಮೀಬಿಯಾ ಗೆಲುವು ಆಘಾತ ಉಂಟುಮಾಡಿದೆ.

ಇನ್ನಿಂಗ್ಸ್‌ನ ಪ್ರಥಮ ಓವರ್‌ನಲ್ಲೇ ಮೂರು ವಿಕೆಟ್ ಕಬಳಿಸಿದ ನಮೀಬಿಯಾ ವೇಗಿ ಟ್ರಂಪಲ್‌ಮನ್, ಸ್ಕಾಟ್ಲೆಂಡ್‌ ಮೇಲೆ ಸವಾರಿ ಮಾಡಿದರು. ಪರಿಣಾಮ ಕೇವಲ ಎರಡು ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಇಲ್ಲಿಂದ ಬಳಿಕವೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. 57 ರನ್​ಗೆ ಸ್ಕಾಟ್ಲೆಂಡ್ ತನ್ನ ಐದು ವಿಕೆಟ್ ಕಳೆದುಕೊಂಡಿತು.

ನಂತರ ಚೇತರಿಸಿಕೊಳ್ಳಲಾಗದೇ ಸ್ಕಾಟ್ಲೆಂಡ್ 20 ಓವರ್​ನಲ್ಲಿ ಕೇವಲ 109 ರನ್​ಗೆ ಇನ್ನಿಂಗ್ಸ್ ಅಂತ್ಯಗೊಳಿಸಿತು. ಮೈಕೇಲ್ ಲೀಸ್ಕ್ ಮತ್ತು ಕ್ರಿಸ್ ಗ್ರೀವ್ಸ್ 6ನೇ ವಿಕೆಟ್​ಗೆ 39 ರನ್ ಜೊತೆಯಾಟ ಆಡದೇ ಹೋಗಿದ್ದರೆ ಸ್ಕಾಟ್ಲೆಂಡ್ ನೂರು ರನ್ ಗಡಿ ಮುಟ್ಟುವುದೂ ಕಷ್ಟವಾಗುತ್ತಿತ್ತು.

ನಮೀಬಿಯಾ ತಂಡ ಈ ಅಲ್ಪಮೊತ್ತವನ್ನು ಸುಲಭವಾಗಿ ಚೇಸ್ ಮಾಡಬಹುದು ಎಂಬ ನಿರೀಕ್ಷೆ ಇದ್ದರೂ ಕೊನೆ ಕೊನೆಯಲ್ಲಿ ಅಲ್ಲಲ್ಲಿ ಚೇಸಿಂಗ್​ನಲ್ಲಿ ಎಡವಿತು. ಆದರೆ, ಜೋನಾಥನ್ ಸ್ಮಿಟ್ ಅವರ ಅಮೋಘ ಬ್ಯಾಟಿಂಗ್​ನಿಂದಾಗಿ ನಮೀಬಿಯಾ ಐತಿಹಾಸಿಕ ಗೆಲುವು ಪಡೆಯುವಲ್ಲಿ ಯಶಸ್ವಿಯಾಯಿತು.

ಕ್ರೇಗ್‌ ವಿಲಿಯಮ್ಸ್ (23), ಮೈಕೆಲ್ ವಾನ್‌ ಲಿಂಗೆನ್‌ (18), ಡೇವಿಡ್ ವೀಸ್ (16) ಹಾಗೂ ಜೆಜೆ ಸ್ಮಿಟ್‌ (32*) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 19.1 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಐತಿಹಾಸಿಕ ಗೆಲುವು ದಾಖಲಿಸಿತು. ಟಿ20 ವಿಶ್ವಕಪ್ ಇತಿಹಾಸದ ಸೂಪರ್ 12 ನಲ್ಲಿ ಸಿಕ್ಕ ಮೊದಲ ಜಯ ಇದಾಗಿದೆ. 23 ಎಸೆತಗಳನ್ನು ಎದುರಿಸಿದ ಸ್ಮಿಟ್ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 32 ರನ್ ಗಳಿಸಿ ಔಟಾಗದೆ ಉಳಿದರು. ಸ್ಕಾಟ್ಲೆಂಡ್ ಪರ ಮೈಕಲ್ ಲೀಸ್ಕ್ ಎರಡು ವಿಕೆಟ್ ಕಬಳಿಸಿದರು. ರುಬೆನ್ ಟ್ರಂಪೆಲ್ಮನ್ ಪಂದ್ಯಶ್ರೇಷ್ಟ ಗೌರವವನ್ನು ಪಡೆದರು.

T20 World Cup 2021: ಆಸ್ಟ್ರೇಲಿಯಾದ ಪ್ರಮುಖ ವೇಗಿಗೆ ಗಾಯ: ಮುಂದಿನ ಪಂದ್ಯಕ್ಕೆ ಅನುಮಾನ

(T20 World Cup 2021 Another tension started for Team India Namibia beat Scotland by four wickets edge to historic victory)

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ