T20 World cup 2021: ನೋ ಸಿಕ್ಸ್​, ಫೋರ್: ಮುಂದಿನ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಭರ್ಜರಿ ಪ್ಲ್ಯಾನ್

ನಿಕೋಲಸ್ ಪೂರನ್ 172 ಸ್ಟ್ರೈಕ್ ರೇಟ್‌ನಲ್ಲಿ 12 ರನ್ ಗಳಿಸಿದರೆ, ಕ್ರಿಸ್ ಗೇಲ್ 100 ಸ್ಟ್ರೈಕ್ ರೇಟ್‌ನಲ್ಲಿ 12 ರನ್ ಮಾತ್ರ ಬಾರಿಸಿದ್ದರು. ಇನ್ನು ಕೀರನ್ ಪೊಲಾರ್ಡ್ 130 ಸ್ಟ್ರೈಕ್ ರೇಟ್‌ನಲ್ಲಿ 26 ರನ್ ಗಳಿಸಿದರೆ, ಆಂಡ್ರೆ ರಸೆಲ್ 125 ಸ್ಟ್ರೈಕ್ ರೇಟ್‌ನಲ್ಲಿ 5 ರನ್ ಗಳಿಸಿ ಔಟ್ ಆಗಿದ್ದರು.

T20 World cup 2021: ನೋ ಸಿಕ್ಸ್​, ಫೋರ್: ಮುಂದಿನ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಭರ್ಜರಿ ಪ್ಲ್ಯಾನ್
Team India

ಟಿ20 ವಿಶ್ವಕಪ್​ನಲ್ಲಿ (T20 World cup 2021) ಮೊದಲ ಪಂದ್ಯದಲ್ಲಿ ಸೋತಿರುವ ಭಾರತ (India vs New Zealand) ಇದೀಗ 2ನೇ ಪಂದ್ಯಕ್ಕಾಗಿ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ. ಅದರಲ್ಲೂ ನ್ಯೂಜಿಲೆಂಡ್ ವಿರುದ್ದ ಗೆಲ್ಲಲೇಬೇಕಾದ ಅನಿವಾರ್ಯತೆ ಇರುವ ಕಾರಣ ಆ ಪಂದ್ಯಕ್ಕಾಗಿ ವಿಶೇಷ ತಂತ್ರಗಳನ್ನು ಹೆಣೆಯುತ್ತಿದೆ. ಅದರಂತೆ ಟೀಮ್ ಇಂಡಿಯಾ ಮುಂದಿನ ಪಂದ್ಯದಲ್ಲಿ ಸ್ಟ್ರೈಕ್ ರೇಟ್ ಹೊರತಾಗಿ, ಸ್ಟ್ರೈಕ್ ರೊಟೇಟ್​ಗೆ ಹೆಚ್ಚಿನ ಮಹತ್ವ ನೀಡಲಿದೆ. ಅಂದರೆ ಟೀಮ್ ಇಂಡಿಯಾ ಬ್ಯಾಟರುಗಳು ದೊಡ್ಡ ಹೊಡೆತಗಳ ಬದಲಾಗಿ, ಒಂದೊಂದು ರನ್​ ಕಲೆಹಾಕುವತ್ತ ಹೆಚ್ಚಿನ ಗಮನ ಹರಿಸಲಿದೆ.

ಏಕೆಂದರೆ ದುಬೈ ಮೈದಾನದಲ್ಲಿ ಸ್ಟ್ರೈಕ್ ರೊಟೇಟ್ ಮಾಡುವ ತಂಡಗಳು ಗೆಲುವು ಸಾಧಿಸುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಪಾಕಿಸ್ತಾನ್ ತಂಡದ ಪ್ರದರ್ಶನ. ಏಕೆಂದರೆ ಟೀಮ್ ಇಂಡಿಯಾ ವಿರುದ್ದ ಪಾಕ್ ಆರಂಭಿಕರು ಆರಂಭದಲ್ಲೇ ಬಿರುಸಿನ ಆಟಕ್ಕೆ ಮುಂದಾಗಿರಲಿಲ್ಲ. ಬದಲಾಗಿ ಒಂದು ಹಾಗೂ ಎರಡು ರನ್​ಗಳತ್ತ ಹೆಚ್ಚಿನ ಗಮನ ಹರಿಸಿದ್ದರು. ಅದರಂತೆ ಇನಿಂಗ್ಸ್​ ಕಟ್ಟಿದ ಬಳಿಕ ಬಿರುಸಿನ ಆಟವಾಡಿದ್ದರು.

ಇನ್ನೊಂದೆಡೆ ಇದೇ ಮೈದಾನದಲ್ಲಿ ವೆಸ್ಟ್ ಇಂಡೀಸ್​ ತಂಡ ಕೇವಲ 55 ರನ್​ಗೆ ಆಲೌಟ್ ಆಗಿತ್ತು. ಅಂದರೆ ಕೆರಿಬಿಯನ್ ಆಟಗಾರರು ಸ್ಟ್ರೈಕ್ ರೊಟೇಟ್ ಮಾಡುವುದಕ್ಕಿಂತ ಸ್ಟ್ರೈಕ್ ರೇಟ್​ನತ್ತ ಹೆಚ್ಚು ಗಮನ ನೀಡಿದ್ದರು. ದೊಡ್ಡ ಹೊಡೆತಗಳಿಗೆ ಮುಂದಾದ ವಿಂಡೀಸ್ ಆಟಗಾರರು ಬೇಗನೆ ವಿಕೆಟ್ ಕೈಚೆಲ್ಲಿದ್ದರು. ಇನ್ನು ದಕ್ಷಿಣ ಆಫ್ರಿಕಾ ವಿರುದ್ದದ ಎರಡನೇ ಪಂದ್ಯದಲ್ಲೂ ವೆಸ್ಟ್ ಇಂಡೀಸ್ ಆಟಗಾರರು ಬಿರುಸಿನ ಆಟಕ್ಕೆ ಮುಂದಾಗಿದ್ದರು.

ನಿಕೋಲಸ್ ಪೂರನ್ 172 ಸ್ಟ್ರೈಕ್ ರೇಟ್‌ನಲ್ಲಿ 12 ರನ್ ಗಳಿಸಿದರೆ, ಕ್ರಿಸ್ ಗೇಲ್ 100 ಸ್ಟ್ರೈಕ್ ರೇಟ್‌ನಲ್ಲಿ 12 ರನ್ ಮಾತ್ರ ಬಾರಿಸಿದ್ದರು. ಇನ್ನು ಕೀರನ್ ಪೊಲಾರ್ಡ್ 130 ಸ್ಟ್ರೈಕ್ ರೇಟ್‌ನಲ್ಲಿ 26 ರನ್ ಗಳಿಸಿದರೆ, ಆಂಡ್ರೆ ರಸೆಲ್ 125 ಸ್ಟ್ರೈಕ್ ರೇಟ್‌ನಲ್ಲಿ 5 ರನ್ ಗಳಿಸಿ ಔಟ್ ಆಗಿದ್ದರು. ಅಂತಿಮ ಹಂತದಲ್ಲಿ ಕಣಕ್ಕಿಳಿದ ಡ್ವೇನ್ ಬ್ರಾವೋ 160 ಸ್ಟ್ರೈಕ್ ರೇಟ್‌ನಲ್ಲಿ 8 ರನ್ ಗಳಿಸಿದರು. ಅಂದರೆ, 6 ಬ್ಯಾಟ್ಸ್‌ಮನ್‌ಗಳು 100 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರೂ ಕಲೆಹಾಕಿದ್ದು 143 ರನ್ ಮಾತ್ರ.

ಇತ್ತ ದೊಡ್ಡ ಹೊಡೆತಗಳಿಗೆ ಮುಂದಾಗಿ ವೆಸ್ಟ್ ಇಂಡೀಸ್​ 56 ಎಸೆತಗಳನ್ನು ಡಾಟ್ ಮಾಡಿದ್ದರು. ಆದರೆ ವಿಂಡೀಸ್​ ನೀಡಿದ 144 ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಸ್ಟ್ರೈಕ್ ರೊಟೇಟ್ ಮೂಲಕ ರನ್​ಗಳಿಸುತ್ತಾ ಸಾಗಿತು. ಅದರಂತೆ 18.2 ಓವರ್​ನಲ್ಲಿ ಗುರಿ ಮುಟ್ಟಿತು. ಇಲ್ಲಿ ದಕ್ಷಿಣ ಆಫ್ರಿಕಾ ಕೇವಲ 34 ಡಾಟ್ ಬಾಲ್​ಗಳನ್ನು ಮಾತ್ರ ಆಡಿದ್ದರು.

ಹೀಗಾಗಿ ಯುಎಇ ಪಿಚ್​ನಲ್ಲಿ ದೊಡ್ಡ ಹೊಡೆತಗಳಿಗಿಂತಲೂ ಸ್ಟ್ರೈಕ್ ರೊಟೇಟ್ ಮೂಲಕ ರನ್​ಗಳಿಸಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸಿದೆ. ಅದರಂತೆ ಅಂತಿಮ ಕೆಲ ಓವರ್​ಗಳಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ರನ್​ ಗತಿ ಹೆಚ್ಚಿಸುವ ಇರಾದೆಯಲ್ಲಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪವರ್​ಪ್ಲೇನಲ್ಲೂ ಬಾಲ್ ಟು ಬಾಲ್ ರನ್ ಗಳಿಸಲು ಹೆಚ್ಚಿನ ಆಸಕ್ತಿವಹಿಸಲಿದೆ.

ಏಕೆಂದರೆ ಪಾಕಿಸ್ತಾನ್ ವಿರುದ್ದ ವಿರಾಟ್ ಕೊಹ್ಲಿ ಇದೇ ಮಾದರಿಯನ್ನು ಅನುಸರಿಸಿ 57 ರನ್ ಕಲೆಹಾಕಿದ್ದರು. ಇದರ ಹೊರತಾಗಿ ಟೀಮ್ ಇಂಡಿಯಾದ ಯಾವುದೇ ಬ್ಯಾಟ್ಸ್​ಮನ್​ಗಳು ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಿಲ್ಲ. ಹೀಗಾಗಿ ಆರಂಭದಲ್ಲಿ ಸ್ಟ್ರೈಕ್ ರೇಟ್​ಗಿಂತ ಸ್ಟ್ರೈಕ್ ರೊಟೇಟ್ ತಂತ್ರಕ್ಕೆ ಟೀಮ್ ಇಂಡಿಯಾ ಮಹತ್ವ ನೀಡಲಿದೆ. ಆ ಬಳಿಕ ಅಂತಿಮ 5 ಓವರ್​ಗಳ ವೇಳೆ ಬಿರುಸಿನ ಆಟಕ್ಕೆ ಒತ್ತು ನೀಡಲು ಪ್ಲ್ಯಾನ್ ರೂಪಿಸಲಿದೆ.

ಇದನ್ನೂ ಓದಿ: T20 World Cup 2021: ನ್ಯೂಜಿಲೆಂಡ್ ತಂಡಕ್ಕೆ ಬಿಗ್ ಶಾಕ್: ವಿಶ್ವಕಪ್​ನಿಂದ ಪ್ರಮುಖ ಆಟಗಾರ ಹೊರಕ್ಕೆ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

ಇದನ್ನೂ ಓದಿ: T20 World Cup 2021: 90 ಕೆ.ಜಿ ವಿಕೆಟ್ ಕೀಪರ್: ಅದ್ಭುತ ಕ್ಯಾಚ್​ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಶಹಝಾದ್

(India will focus on strike rotation against New Zealand match T20 World cup 2021)

Click on your DTH Provider to Add TV9 Kannada