T20 World Cup 2021: ನ್ಯೂಜಿಲೆಂಡ್ ತಂಡಕ್ಕೆ ಬಿಗ್ ಶಾಕ್: ವಿಶ್ವಕಪ್​ನಿಂದ ಪ್ರಮುಖ ಆಟಗಾರ ಹೊರಕ್ಕೆ

Lockie Ferguson: 2019 ರ ಏಕದಿನ ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ಫೈನಲ್ ಪ್ರವೇಶಿಸುವಲ್ಲಿ ಲಾಕಿ ಫರ್ಗುಸನ್ ಪ್ರಮುಖ ಪಾತ್ರವಹಿಸಿದ್ದರು. 9 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಫರ್ಗುಸನ್ 19 ರ ಸರಾಸರಿಯಲ್ಲಿ 21 ವಿಕೆಟ್​ ಉರುಳಿಸಿ ನ್ಯೂಜಿಲೆಂಡ್ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.

T20 World Cup 2021: ನ್ಯೂಜಿಲೆಂಡ್ ತಂಡಕ್ಕೆ ಬಿಗ್ ಶಾಕ್: ವಿಶ್ವಕಪ್​ನಿಂದ ಪ್ರಮುಖ ಆಟಗಾರ ಹೊರಕ್ಕೆ
ನ್ಯೂಜಿಲೆಂಡ್ ತಂಡ: ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಜೇಮ್ಸ್ ನೀಶಮ್, ಡೆವೊನ್ ಕಾನ್ವೇ, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಆಡಮ್ ಮಿಲ್ನ್, ಟ್ರೆಂಟ್ ಬೌಲ್ಟ್, ಟಿಮ್ ಸೌಥಿ

ಟಿ20 ವಿಶ್ವಕಪ್​ನಲ್ಲಿ (T20 World Cup 2021) ನ್ಯೂಜಿಲೆಂಡ್ (New Zealand) ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ತಂಡದಲ್ಲಿದ್ದ ಪ್ರಮುಖ ಬೌಲರ್ ಲಾಕಿ ಫರ್ಗುಸನ್ (Lockie Ferguson) ಗಾಯದ ಕಾರಣ ಟೂರ್ನಿಯಿಂದ ಹೊರ ನಡೆದಿದ್ದಾರೆ. ಕಾಲಿನ ಹಿಂಭಾಗದ ಸ್ನಾಯು ಸಮಸ್ಯೆಯಿಂದ ಫರ್ಗುಸನ್ ಬಳಲುತ್ತಿದ್ದು, ಹೀಗಾಗಿ ವಿಶ್ವಕಪ್​ನಿಂದ ಹಿಂದೆ ಸರಿದಿದ್ದಾರೆ. ಐಪಿಎಲ್​ನಲ್ಲಿ ಕೆಕೆಆರ್ ಪರ ಭರ್ಜರಿ ಬೌಲಿಂಗ್ ನಡೆಸಿದ್ದ ಫರ್ಗುಸನ್ ನ್ಯೂಜಿಲೆಂಡ್ ತಂಡದ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದರು. ಇದೀಗ ಗಾಯದ ಕಾರಣ ಹೊರನಡೆದಿದ್ದು, ಹೀಗಾಗಿ ನ್ಯೂಜಿಲೆಂಡ್ ಮತ್ತೋರ್ವ ವೇಗಿಯನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅದರಂತೆ ಮುಂಬೈ ಇಂಡಿಯನ್ಸ್ ಪರ ಐಪಿಎಲ್​ನಲ್ಲಿ ಕಣಕ್ಕಿಳಿದಿದ್ದ ಆ್ಯಡಂ ಮಿಲ್ನ್​ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಐಪಿಎಲ್ 2021 ರಲ್ಲಿ ಲಾಕಿ ಫರ್ಗುಸನ್ ಕೆಕೆಆರ್ ಪರ 8 ಪಂದ್ಯಗಳನ್ನು ಆಡಿದ್ದರು. ಅದರಲ್ಲೂ ಯುಎಇಯಲ್ಲಿ ನಡೆದ ಎರಡನೇ ಲೆಗ್‌ನಲ್ಲಿ 7 ಪಂದ್ಯಗಳಲ್ಲೂ ಕಣಕ್ಕಿಳಿದಿದ್ದರು. ಅಷ್ಟೇ ಅಲ್ಲದೆ 17 ಸರಾಸರಿಯಲ್ಲಿ 13 ವಿಕೆಟ್‌ಗಳನ್ನು ಉರುಳಿಸಿ ಮಿಂಚಿದ್ದರು. ಓವರ್​ಗೆ 7.46 ಸರಾಸರಿಯಲ್ಲಿ ರನ್ ನೀಡಿದ್ದ ಫರ್ಗುಸನ್ ಈ ಬಾರಿ ನ್ಯೂಜಿಲೆಂಡ್ ಪರ ವಿಶ್ವಕಪ್​ನಲ್ಲಿ ಪ್ರಮುಖ ಬೌಲರ್ ಆಗಿ ಕಾಣಿಸಿಕೊಳ್ಳಬೇಕಿತ್ತು.

ಏಕೆಂದರೆ 2019 ರ ಏಕದಿನ ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ಫೈನಲ್ ಪ್ರವೇಶಿಸುವಲ್ಲಿ ಲಾಕಿ ಫರ್ಗುಸನ್ ಪ್ರಮುಖ ಪಾತ್ರವಹಿಸಿದ್ದರು. 9 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಫರ್ಗುಸನ್ 19 ರ ಸರಾಸರಿಯಲ್ಲಿ 21 ವಿಕೆಟ್​ ಉರುಳಿಸಿ ನ್ಯೂಜಿಲೆಂಡ್ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಇಡೀ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಉರುಳಿಸಿದ ಎರಡನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಈ ಎಲ್ಲಾ ಕಾರಣದಿಂದ ಫರ್ಗುಸನ್ ಈ ಬಾರಿ ಕೂಡ ಟ್ರಂಪ್ ಕಾರ್ಡ್ ಆಗಿದ್ದರು. ಆದರೀಗ ಗಾಯಗೊಂಡು ಹೊರ ನಡೆದಿರುವುದು ನ್ಯೂಜಿಲೆಂಡ್​ ತಂಡಕ್ಕೆ ಹಿನ್ನಡೆಯಾಗಿದೆ.

ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮಂಡಿಯೂರಿದ್ದು ಯಾಕೆ ಗೊತ್ತಾ?

ಇದನ್ನೂ ಓದಿ:  Virat Kohli: ಸೋತರೂ ಟಿ20 ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(T20 World Cup 2021: New Zealand pacer Lockie Ferguson out of T20 World Cup)

Click on your DTH Provider to Add TV9 Kannada