India vs Pakistan: ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮಂಡಿಯೂರಿದ್ದು ಯಾಕೆ ಗೊತ್ತಾ?

India vs Pakistan, T20 World Cup: ಕಳೆದ ವರ್ಷ ಅಮೆರಿಕದಲ್ಲಿ ನಡೆದ ಕಪ್ಪು ವರ್ಣದ ಜಾರ್ಜ್​ ಫ್ಲಾಯ್ಡ್​ ಎನ್ನುವ ವ್ಯಕ್ತಿಯನ್ನು ಅಲ್ಲಿನ ಬಿಳಿ ವರ್ಣದ ಪೊಲೀಸ್ ಒಬ್ಬ ನಡುರಸ್ತೆಯಲ್ಲಿ ಮೊಣಕಾಲಿನಿಂದ ಕುತ್ತಿಗೆ ಅದುಮಿ ಉಸಿರುಗಟ್ಟಿಸಿ ಕೊಲೆ ಸಾಯಿಸಿದ್ದರು.

India vs Pakistan: ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮಂಡಿಯೂರಿದ್ದು ಯಾಕೆ ಗೊತ್ತಾ?
Team India

ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ವೇಳೆ ಟೀಮ್ ಇಂಡಿಯಾ ಆಟಗಾರರು ಬ್ಲ್ಯಾಕ್ ಲೈವ್ಸ್​ ಮ್ಯಾಟರ್ ಚಳುವಳಿಗೆ ಬೆಂಬಲ ಸೂಚಿಸಿದರು. ಇದಕ್ಕೂ ಮುನ್ನ ಟಾಸ್ ಗೆದ್ದ ಪಾಕಿಸ್ತಾನ್ ನಾಯಕ ಬಾಬರ್ ಆಜಂ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಲು ಬಂದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಮೈದಾನದಲ್ಲೇ ಬ್ಲ್ಯಾಕ್ ಲೈವ್ಸ್​ ಮ್ಯಾಟರ್ ( BLM) ಚಳುವಳಿಗೆ ಬೆಂಬಲ ಸೂಚಿಸಿ ಮಂಡಿಯೂರಿದರು. ಇನ್ನು ಉಳಿದ ಟೀಮ್ ಇಂಡಿಯಾ ಆಟಗಾರರು ಡಗೌಟ್‌ನಲ್ಲಿ ಮಂಡಿಯೂರಿ ಬೆಂಬಲ ಪ್ರದರ್ಶಿಸಿದರು. ಇನ್ನು ಪಾಕಿಸ್ತಾನ್ ತಂಡವು ತಮ್ಮ ತಂಡದ ಆಟಗಾರರು ಬಲಗೈಯನ್ನು ಎದೆಯ ಮೇಲಿಟ್ಟು ಬ್ಲ್ಯಾಕ್ ಲೈವ್ಸ್​ ಮ್ಯಾಟರ್ ( BLM) ಚಳುವಳಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಕಳೆದ ವರ್ಷ ಅಮೆರಿಕದಲ್ಲಿ  ಕಪ್ಪು ವರ್ಣೀಯ ಜಾರ್ಜ್​ ಫ್ಲಾಯ್ಡ್​ ಎನ್ನುವ ವ್ಯಕ್ತಿಯನ್ನು ಅಲ್ಲಿನ ಬಿಳಿ ವರ್ಣದ ಪೊಲೀಸ್ ಒಬ್ಬ ನಡುರಸ್ತೆಯಲ್ಲಿ ಮೊಣಕಾಲಿನಿಂದ ಕುತ್ತಿಗೆ ಅದುಮಿ ಉಸಿರುಗಟ್ಟಿಸಿ  ಸಾಯಿಸಿದ್ದರು. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕಪ್ಪು ವರ್ಣಿಯರ ಮೇಲೆ ಬಿಳಿ ವರ್ಣದವರ ದೌರ್ಜನ್ಯ ಖಂಡಿಸಿ ವಿಶ್ವದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಇದಕ್ಕೆ ವಿಶ್ವದ ಖ್ಯಾತ ಸೆಲೆಬ್ರಿಟಿಗಳು, ಆಟಗಾರರು ಬೆಂಬಲ ವ್ಯಕ್ತಪಡಿಸಿದ್ದರು.

ಅದರಂತೆ ವೆಸ್ಟ್ ಇಂಡೀಸ್ ಆಟಗಾರರು ತಮ್ಮ ಪಂದ್ಯಗಳ ವೇಳೆ ಮೈದಾನದಲ್ಲಿ ಮಂಡಿಯೂರುವ ಮೂಲಕ ಬ್ಲ್ಯಾಕ್ ಲೈವ್ಸ್​ ಮ್ಯಾಟರ್ ( BLM) ಬೆಂಬಲ ಸೂಚಿಸಿದ್ದರು. ಇನ್ನು ಐಪಿಎಲ್​ನಲ್ಲೂ ಜೇಸನ್ ಹೋಲ್ಡರ್ ಹಾಗೂ ಹಾರ್ದಿಕ್ ಪಾಂಡ್ಯ ಪಂದ್ಯದ ನಡುವೆ ಮಂಡಿಯೂರುವ ಮುಖಾಂತರ ಪ್ರತಿಭಟನೆ ಬೆಂಬಲ ವ್ಯಕ್ತಪಡಿಸಿದ್ದರು.

ಈ ಬಾರಿ ಟಿ20 ವಿಶ್ವಕಪ್​ ಮೂಲಕ ಬ್ಲ್ಯಾಕ್ ಲೈವ್ಸ್​ ಮ್ಯಾಟರ್ ( BLM) ಚಳುವಳಿಗೆ ಬಹುತೇಕ ತಂಡಗಳು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ತನ್ನ ಮೊದಲ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಈ ಚಳುವಳಿಗೆ ಬೆಂಬಲ ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ: India vs Pakistan: 2007ರ ಟಿ20 ವಿಶ್ವಕಪ್ ಫೈನಲ್ ಆಡಿದ್ದ ಇಬ್ಬರು ಆಟಗಾರರ ಮುಖಾಮುಖಿ

ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(India vs Pakistan: Virat Kohli & co. bend the knee to support BLM)

Click on your DTH Provider to Add TV9 Kannada