Babar azam: 97 ರನ್​ಗೆ ಡಿಕ್ಲೇರ್ ಮಾಡಿದ ಆಸ್ಟ್ರೇಲಿಯಾ: ಶತಕ ಬಾರಿಸಿದ ಬಾಬರ್

| Updated By: ಝಾಹಿರ್ ಯೂಸುಫ್

Updated on: Mar 15, 2022 | 8:10 PM

Babar azam century: ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯವು ಇದೀಗ ಅತ್ಯಂತ ರೋಚಕಘಟ್ಟದತ್ತ ಸಾಗುತ್ತಿದೆ. ನಾಲ್ಕನೇ ದಿನದಾಂತ್ಯಕ್ಕೆ ಆಸ್ಟ್ರೇಲಿಯಾ ತಂಡವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 97 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.

Babar azam: 97 ರನ್​ಗೆ ಡಿಕ್ಲೇರ್ ಮಾಡಿದ ಆಸ್ಟ್ರೇಲಿಯಾ: ಶತಕ ಬಾರಿಸಿದ ಬಾಬರ್
Babar azam
Follow us on

ಕ್ರಿಕೆಟ್ ಅಂಗಳದ ಕವರ್​ ಡ್ರೈವ್ ಮಾಸ್ಟರ್ಸ್​ ಎಂದೇ ಗುರುತಿಸಿಕೊಂಡಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನ್ ನಾಯಕ ಬಾಬರ್ ಆಜಂ ಹೆಸರು ಇತ್ತೀಚೆಗಷ್ಟೇ ಬಾರೀ ಸುದ್ದಿಯಾಗಿತ್ತು. ಏಕೆಂದರೆ ಈ ಇಬ್ಬರು ಆಟಗಾರರು ಟೆಸ್ಟ್ ಕ್ರಿಕೆಟ್​ನಲ್ಲಿ ಶತಕ ಸಿಡಿಸಿ ವರ್ಷಗಳೇ ಕಳೆದಿದ್ದವು. ಇತ್ತ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ದ ಟೆಸ್ಟ್ ಸರಣಿ ಆರಂಭಿಸುತ್ತಿದ್ದಂತೆ ಎಲ್ಲರೂ ವಿರಾಟ್ ಕೊಹ್ಲಿ ಶತಕವನ್ನು ಎದುರು ನೋಡಿದ್ದರೆ, ಅತ್ತ ಪಾಕಿಸ್ತಾನ್ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್​ ಸರಣಿಯಲ್ಲಿ ಬಾಬರ್ ಬ್ಯಾಟ್​ನಿಂದ ಶತಕ ನಿರೀಕ್ಷಿಸಿದ್ದರು. ಇದೀಗ ಆ ನಿರೀಕ್ಷೆಯನ್ನು ಬಾಬರ್ ಪೂರ್ಣಗೊಳಿಸಿದ್ದಾರೆ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಕರಾಚಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಬರ್ ಆಜಂ ಶತಕ ಸಿಡಿಸಿದ್ದಾರೆ. ಈ ಮೂಲಕ 2 ವರ್ಷಗಳ ಬಳಿಕ ಶತಕ ಬಾರಿಸಿ ಸೆಂಚುರಿ ಬರವನ್ನು ನೀಗಿಸಿಕೊಂಡಿದ್ದಾರೆ.

ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯವು ಇದೀಗ ಅತ್ಯಂತ ರೋಚಕಘಟ್ಟದತ್ತ ಸಾಗುತ್ತಿದೆ. ನಾಲ್ಕನೇ ದಿನದಾಂತ್ಯಕ್ಕೆ ಆಸ್ಟ್ರೇಲಿಯಾ ತಂಡವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 97 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಆಸ್ಟ್ರೇಲಿಯಾ ಪಾಕಿಸ್ತಾನಕ್ಕೆ 506 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ. ಆದರೆ ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಪಾಕಿಸ್ತಾನ್ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ 2 ವಿಕೆಟ್‌ಗೆ 192 ರನ್ ಗಳಿಸಿದೆ. ತಂಡದ ನಾಯಕ ಬಾಬರ್ ಆಜಂ 197 ಎಸೆತಗಳಲ್ಲಿ 102 ರನ್​ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಹಾಗೆಯೇ ಅಬ್ದುಲ್ಲಾ ಶಫೀಕ್ ಕೂಡ ಅರ್ಧಶತಕ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಸದ್ಯ ಕೊನೆಯ ದಿನದಾಟದಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 8 ವಿಕೆಟ್​ಗಳ ಅವಶ್ಯಕತೆಯಿದ್ದರೆ, ಪಾಕಿಸ್ತಾನಕ್ಕೆ 314 ರನ್​ಗಳ ಅವಶ್ಯಕತೆಯಿದೆ. ಹೀಗಾಗಿ ಐದನೇ ದಿನದಾಟದಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. 8 ವಿಕೆಟ್​ ಹೊಂದಿರುವ ಪಾಕಿಸ್ತಾನ್ ಕೊನೆಯ ದಿನ 314 ರನ್​ಗಳ ಚೇಸ್ ಮಾಡಲಿದೆಯಾ ಅಥವಾ ಆಸ್ಟ್ರೇಲಿಯಾ ಆಲೌಟ್ ಮಾಡಲಿದೆಯಾ ಎಂಬ ಕುತೂಹಲಕ್ಕೆ ಕಾರಣವಾಗಿ ಕರಾಚಿ ಟೆಸ್ಟ್.

ಕ್ರೀಸ್​ನಲ್ಲಿ ಬಾಬರ್ ಅಜಂ-ಅಬ್ದುಲ್ಲಾ ಶಫೀಕ್:
506 ರನ್‌ಗಳ ಟಾರ್ಗೆಟ್​ ಅನ್ನು ಬೆನ್ನತ್ತುವುದು ಸುಲಭವಲ್ಲ. ಇದಾಗ್ಯೂ ಪಾಕಿಸ್ತಾನ್ ನಾಲ್ಕನೇ ದಿನದಾಟದಲ್ಲಿ ಗುರಿ ಮುಟ್ಟುವ ವಿಶ್ವಾಸದಲ್ಲಿ ಬ್ಯಾಟ್ ಬೀಸಿದ್ದಾರೆ., ಮೊದಲ ಇನ್ನಿಂಗ್ಸ್‌ನಲ್ಲಿ 148 ರನ್‌ಗಳಿಗೆ ಆಲೌಟ್ ಆಗಿದ್ದ ಪಾಕ್ ಎರಡನೇ ಇನಿಂಗ್ಸ್‌ನಲ್ಲಿ ಪಾಕಿಸ್ತಾನ ಭರ್ಜರಿ ಹೋರಾಟ ಪ್ರದರ್ಶಿಸಿತು. ಇಮಾಮ್-ಉಲ್-ಹಕ್ ಕೇವಲ 1 ರನ್ ಗಳಿಸಿ ಔಟಾದರೆ, ಅಜರ್ ಅಲಿ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ ಆ ಬಳಿಕ ಜೊತೆಯಾದ ಬಾಬರ್-ಶಫೀಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

361 ಎಸೆತಗಳನ್ನು ಎದುರಿಸಿದ ಈ ಜೋಡಿ 171 ರನ್‌ಗಳ ಜೊತೆಯಾಟವಾಡಿದರು. ಬಾಬರ್ ಕೇವಲ 83 ಎಸೆತಗಳಲ್ಲಿ ಅರ್ಧಶತಕ ಗಳಿಸಿದರೆ, ಅಬ್ದುಲ್ಲಾ ಶಫೀಕ್ 153 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದೀಗ 314 ರನ್​ಗಳ ಟಾರ್ಗೆಟ್​ನೊಂದಿಗೆ ಫಾರ್ಮ್​ನಲ್ಲಿರುವ ಇಬ್ಬರು ಬ್ಯಾಟ್ಸ್​ಮನ್ ಕ್ರೀಸ್ ಕಚ್ಚಿ ನಿಂತಿರುವುದು ಆಸ್ಟ್ರೇಲಿಯಾ ತಂಡಕ್ಕೆ ಸವಾಲಾಗಿ ಪರಿಣಮಿಸಿದೆ. ಇತ್ತ ಗೆಲುವನ್ನು ಎದುರು ನೋಡುತ್ತಿರುವ ಆಸ್ಟ್ರೇಲಿಯಾಗೆ ಬಾಬರ್ ಆಜಂ ವಿಕೆಟ್ ಬಹಳ ಮುಖ್ಯ. ಒಂದು ವೇಳೆ ಈ ಜೋಡಿ ಐದನೇ ದಿನದಾಟದಲ್ಲಿ ಕ್ರೀಸ್ ಕಚ್ಚಿ ನಿಂತರೆ ಪಂದ್ಯವು ಡ್ರಾ ಆಗುವ ಸಾಧ್ಯತೆಯಿದೆ.

4ನೇ ದಿನದಾಟದ ಅಂತ್ಯಕ್ಕೆ ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ- ಮೊದಲ ಇನಿಂಗ್ಸ್ 556/9 ಡಿಕ್ಲೇರ್ & ಎರಡನೇ ಇನಿಂಗ್ಸ್​  97/2 ಡಿಕ್ಲೇರ್
ಪಾಕಿಸ್ತಾನ್- ಮೊದಲ ಇನಿಂಗ್ಸ್ 148 ಆಲೌಟ್ & ಎರಡನೇ ಇನಿಂಗ್ಸ್​ 192/2

ಇದನ್ನೂ ಓದಿ: PSL vs IPL Prize Money: ಪಾಕಿಸ್ತಾನ್ ಸೂಪರ್ ಲೀಗ್ ಗೆದ್ರೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್