AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL vs PSL: ಐಪಿಎಲ್​ಗೆ ಕಠಿಣ ಪೈಪೋಟಿ ನೀಡಲು ಪಾಕ್ ಕ್ರಿಕೆಟ್​ ಮಂಡಳಿ ಮಾಸ್ಟರ್ ಪ್ಲ್ಯಾನ್

IPL vs PSL: ಪಿಎಸ್‌ಎಲ್​ನಿಂದ ಪಾಕ್ ಕ್ರಿಕೆಟ್ ಮಂಡಳಿಗೆ ಉತ್ತಮ ಆದಾಯ ಬರುತ್ತಿದೆ. ಈ ಟೂರ್ನಿಯಿಂದ ದೇಶದ ಘನತೆಯೂ ಹೆಚ್ಚುತ್ತಿದೆ.

IPL vs PSL: ಐಪಿಎಲ್​ಗೆ ಕಠಿಣ ಪೈಪೋಟಿ ನೀಡಲು ಪಾಕ್ ಕ್ರಿಕೆಟ್​ ಮಂಡಳಿ ಮಾಸ್ಟರ್ ಪ್ಲ್ಯಾನ್
IPL vs PSL
TV9 Web
| Updated By: ಝಾಹಿರ್ ಯೂಸುಫ್|

Updated on: Mar 15, 2022 | 5:39 PM

Share

IPL vs PSL: ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಸ್ಫೂರ್ತಿ ಪಡೆದು ಶುರುವಾದ ಪಾಕಿಸ್ತಾನ್ ಸೂಪರ್ ಲೀಗ್ ಇದೀಗ ಹರಾಜು ಪ್ರಕ್ರಿಯೆಯತ್ತ ಮುಖ ಮಾಡುವ ಸೂಚನೆ ನೀಡಿದೆ. ಐಪಿಎಲ್​ನಲ್ಲಿ ಹರಾಜು ಪ್ರಕ್ರಿಯೆಯಿದ್ದರೆ, ಪಿಎಸ್​ಎಲ್​ನಲ್ಲಿ ದ್ರಾಫ್ಟ್ ಮಾಡಲಾಗುತ್ತದೆ. ಅಂದರೆ ಪ್ಲಾಟಿನಂ, ಗೋಲ್ಡ್, ಡೈಮಂಡ್ ಮತ್ತು ಸಿಲ್ವರ್ ವಿಭಾಗಗಳನ್ನು ಮಾಡಿ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಆ ಬಳಿಕ ಆಯಾ ವಿಭಾಗಗಳಿಂದ ಆಟಗಾರರೊಂದಿಗೆ ಒಪ್ಪಂದ ಮಾಡಲಾಗುತ್ತದೆ. ಅದರಂತೆ ಪ್ಲಾಟಿನಂನಲ್ಲಿರುವ ಆಟಗಾರಿಗೆ ಹೆಚ್ಚಿನ ಮೊತ್ತ, ಆ ಬಳಿಕ ಉಳಿದ ಆಟಗಾರರಿಗೆ ಮೊತ್ತ ನಿಗದಿ ಮಾಡಲಾಗುತ್ತದೆ. ಆದರೆ ಇದೀಗ ಐಪಿಎಲ್​ ಮಾದರಿಯಲ್ಲೇ ಆಟಗಾರರ ಹರಾಜು ನಡೆಸಲು ಚಿಂತಿಸಿರುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ತಿಳಿಸಿದ್ದಾರೆ.

ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ಉತ್ಸುಕರಾಗಿದ್ದೇವೆ. ಪಿಎಸ್‌ಎಲ್‌ನಲ್ಲಿನ ಈ ದೊಡ್ಡ ಬದಲಾವಣೆಗಳಿಂದ ಹೆಚ್ಚಿನ ಆದಾಯ ಸಿಗುವ ನಿರೀಕ್ಷೆಯಿದೆ. ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ, ಪ್ರಸ್ತುತ ಪಿಎಸ್‌ಎಲ್‌ನಲ್ಲಿ ಹರಾಜು ಪ್ರಕ್ರಿಯೆಯೊಂದಿಗೆ ಕರಡು ವ್ಯವಸ್ಥೆಯನ್ನು ಬದಲಾಯಿಸುವ ಬಗ್ಗೆ ಚಿಂತಿಸಲಾಗಿದೆ. ಪಾಕಿಸ್ತಾನ ಸೂಪರ್ ಲೀಗ್ ಆರಂಭದಿಂದಲೂ ಡ್ರಾಫ್ಟ್ ವ್ಯವಸ್ಥೆ ಜಾರಿಯಲ್ಲಿದೆ. ಮುಂಬರುವ ಸೀಸನ್​ಗಳಿಗೆ ಹರಾಜು ನಡೆಸಲು ಬಯಸುವುದಾಗಿ ರಮೀಜ್ ರಾಜಾ ಹೇಳಿದ್ದಾರೆ.

‘ಪಿಎಸ್‌ಎಲ್​ನಿಂದ ಪಾಕ್ ಕ್ರಿಕೆಟ್ ಮಂಡಳಿಗೆ ಉತ್ತಮ ಆದಾಯ ಬರುತ್ತಿದೆ. ಈ ಟೂರ್ನಿಯಿಂದ ದೇಶದ ಘನತೆಯೂ ಹೆಚ್ಚುತ್ತಿದೆ. ಎಲ್ಲವೂ ಸರಿಯಾಗಿ ನಡೆದರೆ, ಪಾಕಿಸ್ತಾನ್ ಸೂಪರ್ ಲೀಗ್ ಐಪಿಎಲ್‌ನ ಪ್ರಮುಖ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ ಅಭಿಪ್ರಾಯಪಟ್ಟಿದ್ದಾರೆ.

ಅಷ್ಟೇ ಅಲ್ಲದೆ ಹರಾಜು ಪ್ರಕ್ರಿಯೆನ್ನು ಜಾರಿಗೊಳಿಸಿದರೆ ಹೆಚ್ಚಿನ ಕ್ರಿಕೆಟಿಗರು IPL ಗಿಂತ PSL ನಲ್ಲಿ ಭಾಗವಹಿಸಲು ಬಯಸುತ್ತಾರೆ. ಸದ್ಯಕ್ಕೆ ನಮಗೆ ಪಿಎಸ್ಎಲ್ ಮತ್ತು ಐಸಿಸಿಯಿಂದ ಆದಾಯ ಬರುತ್ತಿದೆ. ಮುಂಬರುವ ದಿನಗಳಲ್ಲಿ ಪಿಎಸ್​ಎಲ್​ ಅನ್ನು ಮತ್ತಷ್ಟು ಬ್ರಾಂಡ್ ಮಾಡುವ ಮೂಲಕ ಹೆಚ್ಚಿನ ಆದಾಯಗಳಿಸಲು ಸಾಧ್ಯವಾಗುತ್ತದೆ. ಈ ಮೂಲಕ ಐಪಿಎಲ್​ಗೆ ಪ್ರತಿಸ್ಫರ್ಧಿಯಾಗಿ ಪಿಎಸ್​ಎಲ್​ ಅನ್ನು ರೂಪಿಸಬಹುದು ಎಂದು ರಮೀಜ್ ರಾಜಾ ತಿಳಿಸಿದ್ದಾರೆ.

ಇದನ್ನೂ ಓದಿ: PSL vs IPL Prize Money: ಪಾಕಿಸ್ತಾನ್ ಸೂಪರ್ ಲೀಗ್ ಗೆದ್ರೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್

(Pakistan Cricket Board Chief Ramiz Raja Wants PSL To Adopt Auction Model)