Babar azam: 97 ರನ್ಗೆ ಡಿಕ್ಲೇರ್ ಮಾಡಿದ ಆಸ್ಟ್ರೇಲಿಯಾ: ಶತಕ ಬಾರಿಸಿದ ಬಾಬರ್
Babar azam century: ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯವು ಇದೀಗ ಅತ್ಯಂತ ರೋಚಕಘಟ್ಟದತ್ತ ಸಾಗುತ್ತಿದೆ. ನಾಲ್ಕನೇ ದಿನದಾಂತ್ಯಕ್ಕೆ ಆಸ್ಟ್ರೇಲಿಯಾ ತಂಡವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 97 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.
ಕ್ರಿಕೆಟ್ ಅಂಗಳದ ಕವರ್ ಡ್ರೈವ್ ಮಾಸ್ಟರ್ಸ್ ಎಂದೇ ಗುರುತಿಸಿಕೊಂಡಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನ್ ನಾಯಕ ಬಾಬರ್ ಆಜಂ ಹೆಸರು ಇತ್ತೀಚೆಗಷ್ಟೇ ಬಾರೀ ಸುದ್ದಿಯಾಗಿತ್ತು. ಏಕೆಂದರೆ ಈ ಇಬ್ಬರು ಆಟಗಾರರು ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಸಿಡಿಸಿ ವರ್ಷಗಳೇ ಕಳೆದಿದ್ದವು. ಇತ್ತ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ದ ಟೆಸ್ಟ್ ಸರಣಿ ಆರಂಭಿಸುತ್ತಿದ್ದಂತೆ ಎಲ್ಲರೂ ವಿರಾಟ್ ಕೊಹ್ಲಿ ಶತಕವನ್ನು ಎದುರು ನೋಡಿದ್ದರೆ, ಅತ್ತ ಪಾಕಿಸ್ತಾನ್ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಬಾಬರ್ ಬ್ಯಾಟ್ನಿಂದ ಶತಕ ನಿರೀಕ್ಷಿಸಿದ್ದರು. ಇದೀಗ ಆ ನಿರೀಕ್ಷೆಯನ್ನು ಬಾಬರ್ ಪೂರ್ಣಗೊಳಿಸಿದ್ದಾರೆ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಕರಾಚಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಬರ್ ಆಜಂ ಶತಕ ಸಿಡಿಸಿದ್ದಾರೆ. ಈ ಮೂಲಕ 2 ವರ್ಷಗಳ ಬಳಿಕ ಶತಕ ಬಾರಿಸಿ ಸೆಂಚುರಿ ಬರವನ್ನು ನೀಗಿಸಿಕೊಂಡಿದ್ದಾರೆ.
ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯವು ಇದೀಗ ಅತ್ಯಂತ ರೋಚಕಘಟ್ಟದತ್ತ ಸಾಗುತ್ತಿದೆ. ನಾಲ್ಕನೇ ದಿನದಾಂತ್ಯಕ್ಕೆ ಆಸ್ಟ್ರೇಲಿಯಾ ತಂಡವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 97 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಆಸ್ಟ್ರೇಲಿಯಾ ಪಾಕಿಸ್ತಾನಕ್ಕೆ 506 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ. ಆದರೆ ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಪಾಕಿಸ್ತಾನ್ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ 2 ವಿಕೆಟ್‌ಗೆ 192 ರನ್ ಗಳಿಸಿದೆ. ತಂಡದ ನಾಯಕ ಬಾಬರ್ ಆಜಂ 197 ಎಸೆತಗಳಲ್ಲಿ 102 ರನ್ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಹಾಗೆಯೇ ಅಬ್ದುಲ್ಲಾ ಶಫೀಕ್ ಕೂಡ ಅರ್ಧಶತಕ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಸದ್ಯ ಕೊನೆಯ ದಿನದಾಟದಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 8 ವಿಕೆಟ್ಗಳ ಅವಶ್ಯಕತೆಯಿದ್ದರೆ, ಪಾಕಿಸ್ತಾನಕ್ಕೆ 314 ರನ್‌ಗಳ ಅವಶ್ಯಕತೆಯಿದೆ. ಹೀಗಾಗಿ ಐದನೇ ದಿನದಾಟದಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. 8 ವಿಕೆಟ್ ಹೊಂದಿರುವ ಪಾಕಿಸ್ತಾನ್ ಕೊನೆಯ ದಿನ 314 ರನ್‌ಗಳ ಚೇಸ್ ಮಾಡಲಿದೆಯಾ ಅಥವಾ ಆಸ್ಟ್ರೇಲಿಯಾ ಆಲೌಟ್ ಮಾಡಲಿದೆಯಾ ಎಂಬ ಕುತೂಹಲಕ್ಕೆ ಕಾರಣವಾಗಿ ಕರಾಚಿ ಟೆಸ್ಟ್.
ಕ್ರೀಸ್ನಲ್ಲಿ ಬಾಬರ್ ಅಜಂ-ಅಬ್ದುಲ್ಲಾ ಶಫೀಕ್: 506 ರನ್‌ಗಳ ಟಾರ್ಗೆಟ್ ಅನ್ನು ಬೆನ್ನತ್ತುವುದು ಸುಲಭವಲ್ಲ. ಇದಾಗ್ಯೂ ಪಾಕಿಸ್ತಾನ್ ನಾಲ್ಕನೇ ದಿನದಾಟದಲ್ಲಿ ಗುರಿ ಮುಟ್ಟುವ ವಿಶ್ವಾಸದಲ್ಲಿ ಬ್ಯಾಟ್ ಬೀಸಿದ್ದಾರೆ., ಮೊದಲ ಇನ್ನಿಂಗ್ಸ್‌ನಲ್ಲಿ 148 ರನ್‌ಗಳಿಗೆ ಆಲೌಟ್ ಆಗಿದ್ದ ಪಾಕ್ ಎರಡನೇ ಇನಿಂಗ್ಸ್‌ನಲ್ಲಿ ಪಾಕಿಸ್ತಾನ ಭರ್ಜರಿ ಹೋರಾಟ ಪ್ರದರ್ಶಿಸಿತು. ಇಮಾಮ್-ಉಲ್-ಹಕ್ ಕೇವಲ 1 ರನ್ ಗಳಿಸಿ ಔಟಾದರೆ, ಅಜರ್ ಅಲಿ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ ಆ ಬಳಿಕ ಜೊತೆಯಾದ ಬಾಬರ್-ಶಫೀಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
361 ಎಸೆತಗಳನ್ನು ಎದುರಿಸಿದ ಈ ಜೋಡಿ 171 ರನ್‌ಗಳ ಜೊತೆಯಾಟವಾಡಿದರು. ಬಾಬರ್ ಕೇವಲ 83 ಎಸೆತಗಳಲ್ಲಿ ಅರ್ಧಶತಕ ಗಳಿಸಿದರೆ, ಅಬ್ದುಲ್ಲಾ ಶಫೀಕ್ 153 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದೀಗ 314 ರನ್‌ಗಳ ಟಾರ್ಗೆಟ್ನೊಂದಿಗೆ ಫಾರ್ಮ್ನಲ್ಲಿರುವ ಇಬ್ಬರು ಬ್ಯಾಟ್ಸ್ಮನ್ ಕ್ರೀಸ್ ಕಚ್ಚಿ ನಿಂತಿರುವುದು ಆಸ್ಟ್ರೇಲಿಯಾ ತಂಡಕ್ಕೆ ಸವಾಲಾಗಿ ಪರಿಣಮಿಸಿದೆ. ಇತ್ತ ಗೆಲುವನ್ನು ಎದುರು ನೋಡುತ್ತಿರುವ ಆಸ್ಟ್ರೇಲಿಯಾಗೆ ಬಾಬರ್ ಆಜಂ ವಿಕೆಟ್ ಬಹಳ ಮುಖ್ಯ. ಒಂದು ವೇಳೆ ಈ ಜೋಡಿ ಐದನೇ ದಿನದಾಟದಲ್ಲಿ ಕ್ರೀಸ್ ಕಚ್ಚಿ ನಿಂತರೆ ಪಂದ್ಯವು ಡ್ರಾ ಆಗುವ ಸಾಧ್ಯತೆಯಿದೆ.
4ನೇ ದಿನದಾಟದ ಅಂತ್ಯಕ್ಕೆ ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ- ಮೊದಲ ಇನಿಂಗ್ಸ್ 556/9 ಡಿಕ್ಲೇರ್ & ಎರಡನೇ ಇನಿಂಗ್ಸ್ 97/2 ಡಿಕ್ಲೇರ್ ಪಾಕಿಸ್ತಾನ್- ಮೊದಲ ಇನಿಂಗ್ಸ್ 148 ಆಲೌಟ್ & ಎರಡನೇ ಇನಿಂಗ್ಸ್ 192/2
ಇದನ್ನೂ ಓದಿ: PSL vs IPL Prize Money: ಪಾಕಿಸ್ತಾನ್ ಸೂಪರ್ ಲೀಗ್ ಗೆದ್ರೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್