ಆಸ್ಟ್ರೇಲಿಯಾವನ್ನು ಅಭಿನಂದಿಸಿ ಕೊಹ್ಲಿ ವಿರುದ್ಧ ಸೇಡು ತೀರಿಸಿಕೊಂಡ ಬಾಬರ್ ಆಝಂ..!

|

Updated on: Nov 20, 2023 | 8:52 AM

ICC World Cup 2023: ವಿಶ್ವ ಚಾಂಪಿಯನ್ನರಿಗೆ ಅಭಿನಂದನೆ ಸಲ್ಲಿಸಿರುವ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ, ವಿರಾಟ್ ಕೊಹ್ಲಿ ವಿರುದ್ಧ ತಮ್ಮ ಹಳೆಯ ಸೇಡನ್ನು ತೀರಿಸಿಕೊಂಡಿದ್ದಾರೆ. ಇದೀಗ ಬಾಬರ್ ಅವರ ಈ ಇನ್​ಸ್ಟಾಗ್ರಾಮ್ ಪೋಸ್ಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಬಣ್ಣ ಹಚ್ಚಲಾಗುತ್ತಿದೆ.

ಆಸ್ಟ್ರೇಲಿಯಾವನ್ನು ಅಭಿನಂದಿಸಿ ಕೊಹ್ಲಿ ವಿರುದ್ಧ ಸೇಡು ತೀರಿಸಿಕೊಂಡ ಬಾಬರ್ ಆಝಂ..!
ವಿರಾಟ್ ಕೊಹ್ಲಿ, ಬಾಬರ್ ಆಝಂ
Follow us on

2023 ರ ಏಕದಿನ ವಿಶ್ವಕಪ್ (ICC World Cup 2023) ಚಾಂಪಿಯನ್ ಪಟ್ಟಕ್ಕೇರಿದ ಆಸ್ಟ್ರೇಲಿಯಾ ತಂಡಕ್ಕೆ ವಿಶ್ವದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ವಿಶ್ವ ಕ್ರಿಕೆಟ್​ನ ದಿಗ್ಗಜರು ಕಾಂಗರೂಗಳ ಆಟಕ್ಕೆ ಶಹಬ್ಬಾಸ್​ಗಿರಿ ನೀಡುತ್ತಿದ್ದಾರೆ. ಇದೇ ವೇಳೆ ವಿಶ್ವ ಚಾಂಪಿಯನ್ನರಿಗೆ ಅಭಿನಂದನೆ ಸಲ್ಲಿಸಿರುವ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ (Babar Azam), ವಿರಾಟ್ ಕೊಹ್ಲಿ (Virat Kohli) ವಿರುದ್ಧ ತಮ್ಮ ಹಳೆಯ ಸೇಡನ್ನು ತೀರಿಸಿಕೊಂಡಿದ್ದಾರೆ. ಇದೀಗ ಬಾಬರ್ ಅವರ ಈ ಇನ್​ಸ್ಟಾಗ್ರಾಮ್ (Instagram) ಪೋಸ್ಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಬಣ್ಣ ಹಚ್ಚಲಾಗುತ್ತಿದೆ.

ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆ

ವಾಸ್ತವವಾಗಿ ಆಸ್ಟ್ರೇಲಿಯಾ ತಂಡ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಮಣಿಸಿದ ಬಳಿಕ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿರುವ ಬಾಬರ ಆಝಂ, ತಮ್ಮ ಪೋಸ್ಟ್​ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇಲ್ಲಿ ಬಾಬರ್ ಅವರ ಉದ್ದೇಶ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆ ಸಲ್ಲಿಸುವುದು ಮಾತ್ರವೇ ಆಗಿದ್ದರು. ಅಭಿಮಾನಿಗಳು ಮಾತ್ರ ಈ ಪೋಸ್ಟ್ ಅನ್ನು 2022 ರ ಟಿ20 ವಿಶ್ವಕಪ್‌ಗೆ ಲಿಂಕ್ ಮಾಡಿದ್ದಾರೆ.

ICC World Cup 2023: ರೋಹಿತ್ ಪಡೆ ಮಾಡಿದ ಈ 5 ತಪ್ಪುಗಳಿಂದ ವಿಶ್ವಕಪ್ ಕೈಜಾರಿತು..!

ಇಂಗ್ಲೆಂಡ್ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದ ವಿರಾಟ್

ಅಷ್ಟಕ್ಕೂ 2022 ರ ಟಿ20 ವಿಶ್ವಕಪ್​ಗೂ ಬಾಬರ್ ಆಝಂ ಈಗ ಈ ರೀತಿಯ ಪೋಸ್ಟ್ ಹಾಕಿರುವುದಕ್ಕೂ ಏನು ಸಂಬಂಧ ಎಂಬುದು ನಿಮ್ಮನ್ನೆಲ್ಲ ಕಾಡುತ್ತಿರುವ ಪ್ರಶ್ನೆಯಾಗಿರಬಹುದು. ವಾಸ್ತವವಾಗಿ 2022ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಪಾಕ್ ತಂಡವನ್ನು ಮಣಿಸಿದ್ದ ಇಂಗ್ಲೆಂಡ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದೇ ವೇಳೆ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಗೆಲುವಿಗೆ ಅಭಿನಂದನೆ ಸಲ್ಲಿಸಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಾಕಿದ್ದರು.

ರಿವೇಂಜ್ ಎಂದ ಫ್ಯಾನ್ಸ್

ಕೊಹ್ಲಿ ಆ ಪೋಸ್ಟ್​ನಲ್ಲಿ ‘ಇಂಗ್ಲೆಂಡ್ ತಂಡಕ್ಕೆ ಅಭಿನಂದನೆಗಳು. ನೀವು ಈ ಗೆಲುವಿಗೆ ಅರ್ಹರು’ ಎಂದು ಬರೆದುಕೊಂಡಿದ್ದರು. ಆದರೆ ಪಾಕ್ ತಂಡದ ಬಗ್ಗೆ ಒಂದೇ ಒಂದು ಪದವನ್ನು ಬರೆದಿರಲಿಲ್ಲ. ಇದೀಗ ಆಸ್ಟ್ರೇಲಿಯಾ ತಂಡದ ಗೆಲುವಿಗೆ ಅಭಿನಂದನೆ ಸಲ್ಲಿಸಿರುವ ಬಾಬರ್ ಕೂಡ ಟೀಂ ಇಂಡಿಯಾದ ಬಗ್ಗೆ ಒಂದೇ ಒಂದು ಪದವನ್ನು ಪೋಸ್ಟ್ ಮಾಡಿಲ್ಲ. ಹೀಗಾಗಿ ಅಂದು ಕೊಹ್ಲಿ ಹಾಕಿದ್ದ ಪೋಸ್ಟ್​ಗೆ ತಿರುಗೇಟಾಗಿ ಇಂದು ಬಾಬರ್ ಈ ಪೋಸ್ಟ್ ಹಾಕಿದ್ದಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.

ಪಂದ್ಯ ಹೀಗಿತ್ತು

ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಕಾಂಗರೂಗಳು ಆರನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 240 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. ಟ್ರಾವಿಸ್ ಹೆಡ್ ಅವರ ಪ್ರಬಲ ಶತಕದ ಆಧಾರದ ಮೇಲೆ ಆಸ್ಟ್ರೇಲಿಯಾ ಈ ಸ್ಕೋರ್ ಅನ್ನು ಸುಲಭವಾಗಿ ಬೆನ್ನಟ್ಟಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:49 am, Mon, 20 November 23