AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BAN vs AFG: ತವರಿನಲ್ಲಿ ವೈಟ್​ ವಾಶ್ ಮುಖಭಂಗದಿಂದ ಪಾರಾದ ಬಾಂಗ್ಲಾ; ಅಫ್ಘಾನಿಸ್ತಾನಕ್ಕೆ ಏಕದಿನ ಸರಣಿ

BAN vs AFG: ಸತತ ಎರಡು ಪಂದ್ಯಗಳನ್ನು ಸೋತು ಸರಣಿ ಕಳೆದುಕೊಂಡಿದ್ದ ಬಾಂಗ್ಲಾ ತಂಡ ಅಂತಿಮ ಪಂದ್ಯವನ್ನು 7 ವಿಕೆಟ್​ಗಳಿಂದ ಗೆದ್ದು ಸರಣಿಯನ್ನು 1-2 ಅಂತರದಿಂದ ಅಂತ್ಯಗೊಳಿಸಿದೆ.

BAN vs AFG: ತವರಿನಲ್ಲಿ ವೈಟ್​ ವಾಶ್ ಮುಖಭಂಗದಿಂದ ಪಾರಾದ ಬಾಂಗ್ಲಾ; ಅಫ್ಘಾನಿಸ್ತಾನಕ್ಕೆ ಏಕದಿನ ಸರಣಿ
ಬಾಂಗ್ಲಾದೇಶ- ಅಫ್ಘಾನಿಸ್ತಾನ
ಪೃಥ್ವಿಶಂಕರ
|

Updated on:Jul 12, 2023 | 7:52 AM

Share

ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾ (Afghanistan vs Bangladesh) ತಂಡ ವೈಟ್​ವಾಶ್ ಮುಖಭಂಗದಿಂದ ಪಾರಾಗಿದೆ. ಸತತ ಎರಡು ಪಂದ್ಯಗಳನ್ನು ಸೋತು ಸರಣಿ ಕಳೆದುಕೊಂಡಿದ್ದ ಬಾಂಗ್ಲಾ ತಂಡ ಅಂತಿಮ ಪಂದ್ಯವನ್ನು 7 ವಿಕೆಟ್​ಗಳಿಂದ ಗೆದ್ದು ಸರಣಿಯನ್ನು 1-2 ಅಂತರದಿಂದ ಅಂತ್ಯಗೊಳಿಸಿದೆ. ಇತ್ತ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ (Cleansweep) ಮಾಡುವ ಉದ್ದೇಶದಿಂದ ಮೂರನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಅಫ್ಘಾನಿಸ್ತಾನ ತಂಡ ಕೇವಲ 126 ರನ್​ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು. ಇನ್ನು ಈ ಗುರಿ ಬೆನ್ನಟ್ಟಿದ ಆತಿಥೇಯ ಬಾಂಗ್ಲಾ ತಂಡ ನಾಯಕ ಲಿಟನ್ ದಾಸ್ (Litton Das) ಅವರ ಅಜೇಯ ಅರ್ಧಶತಕದ ಇನ್ನಿಂಗ್ಸ್​ನಿಂದಾಗಿ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಆದರೆ ಮೊದಲೆರಡು ಪಂದ್ಯಗಳನ್ನು ಗೆದ್ದು ಬೀಗಿದ್ದ ಅಫ್ಘಾನಿಸ್ತಾನ 2-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿತು. ಇದೀಗ ಉಭಯ ತಂಡಗಳ ನಡುವೆ ಜುಲೈ 14 ರಿಂದ ಎರಡು ಪಂದ್ಯಗಳ ಟಿ20 ಸರಣಿ (T20 Series) ಆರಂಭವಾಗಲಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಅಫ್ಘಾನಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅಜ್ಮತುಲ್ಲಾ ಹೊರತುಪಡಿಸಿದರೆ ಬಾಂಗ್ಲಾದೇಶದ ಬೌಲರ್‌ಗಳು ಯಾರನ್ನೂ ಹೆಚ್ಚು ಹೊತ್ತು ನಿಲ್ಲಲು ಬಿಡಲಿಲ್ಲ. ಅಫ್ಘಾನಿಸ್ತಾನ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಅಜ್ಮತುಲ್ಲಾ 56 ರನ್​ಗಳ ಇನ್ನಿಂಗ್ಸ್ ಆಡಿದರು. ಇವರನ್ನು ಹೊರತುಪಡಿಸಿದರೆ ನಾಯಕ ಹಶ್ಮತುಲ್ಲಾ ಶಾಹಿದಿ 22 ರನ್ ಕೊಡುಗೆ ನೀಡಿದರು. ಇವರಿಬ್ಬರ ಇನ್ನಿಂಗ್ಸ್‌ನಿಂದಾಗಿ ಅಫ್ಘಾನಿಸ್ತಾನ 45.2 ಓವರ್‌ಗಳಲ್ಲಿ 126 ರನ್​ಗಳಿಗೆ ಸರ್ವಪತನವಾಯಿತು.

AFG vs BAN: ಬಾಂಗ್ಲಾ ನೆಲದಲ್ಲಿ ಈ ದಾಖಲೆ ಬರೆದ 2ನೇ ತಂಡ ಅಫ್ಘಾನಿಸ್ತಾನ..!

ಬಾಂಗ್ಲಾ ಪರ ಮಾರಕ ದಾಳಿ ನಡೆಸಿದ ಶೋರಿಫುಲ್ ಇಸ್ಲಾಂ 4 ವಿಕೆಟ್ ಪಡೆದರೆ, ತಸ್ಕಿನ್ ಅಹ್ಮದ್ ಮತ್ತು ತೈಜುಲ್ ಇಸ್ಲಾಂ ಇಬ್ಬರೂ ತಲಾ 2 ವಿಕೆಟ್ ಕಬಳಿಸಿದರು. ಉಳಿದಂತೆ ಶಕಿಬ್ ಅಲ್ ಹಸನ್ ಮತ್ತು ಮೆಹದಿ ಹಸನ್ ಇಬ್ಬರೂ ತಲಾ ಒಂದೊಂದು ವಿಕೆಟ್ ಪಡೆಯುವ ಮೂಲಕ ಅಫ್ಘಾನಿಸ್ತಾನ ತಂಡವನ್ನು ಅಲ್ಪ ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಬಾಂಗ್ಲಾ ಆರಂಭವೂ ಕಳಪೆಯಾಗಿತ್ತು

ಈಗಾಗಲೇ ತವರಿನಲ್ಲಿ ಏಕದಿನ ಸರಣಿ ಕಳೆದುಕೊಂಡ ಮುಜುಗರಕ್ಕೊಳಗಾಗಿದ್ದ ಬಾಂಗ್ಲಾ ತಂಡ ವೈಟ್​​ವಾಶ್ ಮುಖಭಂಗವನ್ನು ತಪ್ಪಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಹೀಗಾಗಿ 127 ರನ್‌ಗಳ ಸಾಧಾರಣ ಸವಾಲು ಬೆನ್ನಟ್ಟಲು ಆರಂಭಿಸಿದ ಬಾಂಗ್ಲಾದೇಶದ ಆರಂಭವೂ ವಿಶೇಷವಾಗಿರಲಿಲ್ಲ. ಬಾಂಗ್ಲಾ ತಂಡ ಕೇವಲ 2 ರನ್​ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡರೆ, 28 ರನ್‌ಗಳಿಗೆ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ನಯೀಮ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ನಜ್ಮುಲ್ ಶಾಂಟೋ ಕೇವಲ 11 ರನ್​ಗಳಿಗೆ ಸುಸ್ತಾದರು. ನಂತರ ನಾಯಕ ಲಿಟನ್ ದಾಸ್​ಗೆ ಸಾಥ್ ನೀಡಿದ ಶಕೀಬ್ ಅಲ್ ಹಸನ್ 39 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 39 ರನ್ ಬಾರಿಸಿ ಔಟಾದರು. ಹೀಗಾಗಿ ಬಾಂಗ್ಲಾದೇಶ 17.1 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 89 ರನ್‌ ಗಳಿಸಿತು. ಆದರೆ ತಂಡದ ಗೆಲುವಿಗಾಗಿ ಹೋರಾಡಿದ ನಾಯಕ ಲಿಟನ್ ದಾಸ್ ಬಾಂಗ್ಲಾದೇಶವನ್ನು ಗೆಲುವಿನ ದಡ ಸೇರಿಸಿದರು..

ಲಿಟನ್ 60 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿ ಅಜೇಯ ಅರ್ಧಶತಕ ಬಾರಿಸಿದರು. ಅವರಲ್ಲದೆ ತೋಹಿದ್ 19 ಎಸೆತಗಳಲ್ಲಿ ಔಟಾಗದೆ 22 ರನ್ ಕಲೆಹಾಕಿದರು. ಅಫ್ಘಾನಿಸ್ತಾನ ಪರ ಫಜಲ್ಹಕ್ ಫಾರೂಕಿ 2 ಹಾಗೂ ಮೊಹಮ್ಮದ್ ನಬಿ 1 ವಿಕೆಟ್ ಪಡೆದರು.

ಅಫ್ಘಾನಿಸ್ತಾನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ರಹಮತ್ ಷಾ, ಮೊಹಮ್ಮದ್ ನಬಿ, ನಜಿಬುಲ್ಲಾ ಝದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರೆಹಮಾನ್, ಫಜಲ್ಹಕ್ ಫಾರೂಕಿ, ಅಬ್ದುಲ್ ರೆಹಮಾನ್ ಮತ್ತು ಜಿಯಾ-ಉರ್-ರೆಹಮಾನ್.

ಬಾಂಗ್ಲಾದೇಶ ತಂಡ: ಲಿಟನ್ ದಾಸ್ (ನಾಯಕ), ಮೊಹಮ್ಮದ್ ನಯೀಮ್, ನಜ್ಮುಲ್ ಹುಸೇನ್ ಶಾಂಟೊ, ತೋಹಿದ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಅಫೀಫ್ ಹುಸೇನ್, ಶರೀಫುಲ್ ಇಸ್ಲಾಂ, ಮೆಹದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್ ಮತ್ತು ತೈಜುಲ್ ಇಸ್ಲಾಂ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:50 am, Wed, 12 July 23

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ