Asia Cup 2025: ಏಷ್ಯಾಕಪ್​ಗೆ ಮತ್ತೆರಡು ತಂಡಗಳು ಪ್ರಕಟ

Asia Cup 2025: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಮತ್ತು ಯುಎಇ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಹಾಂಗ್​ ಕಾಂಗ್ ಹಾಗೂ ಶ್ರೀಲಂಕಾ ಬಿ ಗ್ರೂಪ್​ನಲ್ಲಿದೆ. ಹೀಗಾಗಿ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಮುಖಾಮುಖಿಯನ್ನು ಎದುರು ನೋಡಬಹುದು.

Asia Cup 2025: ಏಷ್ಯಾಕಪ್​ಗೆ ಮತ್ತೆರಡು ತಂಡಗಳು ಪ್ರಕಟ
Asia Cup 2025

Updated on: Aug 23, 2025 | 7:41 AM

ಬಹುನಿರೀಕ್ಷಿತ ಏಷ್ಯಾಕಪ್ (Asia Cup 2025) ಟಿ20 ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಯುಎಇ ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಈಗಾಗಲೇ 5 ಟೀಮ್​ಗಳ ಘೋಷಣೆಯಾಗಿದೆ. ಈ ಮೊದಲು ಭಾರತ, ಪಾಕಿಸ್ತಾನ್, ಅಫ್ಘಾನಿಸ್ತಾನ್ ತಂಡಗಳ ಘೋಷಣೆಯಾದರೆ, ಇದೀಗ ಬಾಂಗ್ಲಾದೇಶ್ ಹಾಗೂ ಹಾಂಗ್​ ಕಾಂಗ್ ತಂಡಗಳನ್ನು ಸಹ ಹೆಸರಿಸಲಾಗಿದೆ. ಅದರಂತೆ ಏಷ್ಯಾಕಪ್​ನಲ್ಲಿ ಕಣಕ್ಕಿಳಿಯಲಿರುವ 5 ತಂಡಗಳಲ್ಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

ಹಾಂಗ್​ಕಾಂಗ್ ತಂಡ: ಯಾಸಿಮ್ ಮುರ್ತುಝ (ನಾಯಕ), ಝೀಶಾನ್ ಅಲಿ, ಶಾಹಿದ್ ವಾಸಿಫ್, ನಿಝಾಕತ್ ಖಾನ್, ನಸ್ರುಲ್ಲಾ ರಾಣಾ, ಮಾರ್ಟಿನ್ ಕೋಟ್ಜಿ, ಅಂಶುಮಾನ್ ರಾತ್, ಬಾಬರ್ ಹಯಾತ್, ಎಹ್ಸಾನ್ ಖಾನ್, ಕಲ್ಹನ್ ಚಲ್ಲು, ಆಯುಷ್ ಶುಕ್ಲಾ, ಐಜಾಝ್ ಖಾನ್, ಅತೀಕ್ ಇಕ್ಬಾಲ್, ಕಿಂಚಿತ್ ಶಾ, ಆದಿಲ್ ಮೆಹಮೂದ್, ಅನಾಸ್, ಹರುದ್, ಅನಾಸ್ ಗಜನ್ಫರ್, ಎಂಡಿ. ವಹೀದ್.

ಬಾಂಗ್ಲಾದೇಶ್ ತಂಡ: ಲಿಟ್ಟನ್ ದಾಸ್ (ನಾಯಕ), ತಂಜಿದ್ ಹಸನ್, ಪರ್ವೇಝ್ ಹೊಸೈನ್ ಎಮನ್, ಸೈಫ್ ಹಸನ್, ತೌಹಿದ್ ಹೃದೋಯ್, ಝಾಕರ್ ಅಲಿ, ಶಮೀಮ್ ಹೊಸೈನ್, ಕಾಜಿ ನೂರುಲ್ ಹಸನ್ ಸೋಹನ್, ಸಾಕಿಬ್ ಮಹೇದಿ ಹಸನ್, ರಿಶಾದ್ ಹೊಸೈನ್, ನಸುಮ್ ಅಹ್ಮದ್, ಮುಸ್ತಾಫಿಝುರ್ ರಹಮಾನ್, ತನ್ಜಿ ಶೈಫ್ ಉದ್ದೀನ್.

ಅಫ್ಘಾನಿಸ್ತಾನ್ ಪ್ರಾಥಮಿಕ ತಂಡ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಸೇದಿಖುಲ್ಲಾ ಅಟಲ್, ವಫಿವುಲ್ಲಾ ತಾರಖಿಲ್, ಇಬ್ರಾಹಿಂ ಝದ್ರಾನ್, ದರ್ವಿಶ್ ರಸೂಲಿ, ಮೊಹಮ್ಮದ್ ಇಶಾಕ್, ಮೊಹಮ್ಮದ್ ನಬಿ, ನಂಗ್ಯಾಲ್ ಖರೋಟಿ, ಶರಫುದ್ದೀನ್ ಅಶ್ರಫ್, ಕರೀಮ್ ಜನ್ನತ್, ಅಝ್ಮತ್ ಒಮರ್​ಝಾಹಿ, ಗುಲ್ಬದ್ದೀನ್ ನೈಬ್, ಮುಜೀಬ್ ಝದ್ರಾನ್, ಅಲ್ಲಾ ಗಝನ್​ಫರ್, ನೂರ್ ಅಹ್ಮದ್, ಫಝಲ್ಹಕ್ ಫಾರೂಖಿ, ನವೀನ್ ಉಲ್ ಹಕ್, ಫರೀದ್ ಮಲಿಕ್, ಸಲೀಮ್ ಸಫಿ, ಅಬ್ದುಲ್ಲಾ ಅಹ್ಮದ್​ಝಾಹಿ, ಬಶೀರ್ ಅಹ್ಮದ್.

ಪಾಕಿಸ್ತಾನ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್​ಝಾದ್ ಫರ್ಹಾನ್, ಶಾಹೀನ್ ಅಫ್ರಿದಿ, ಸಲ್ಮಾನ್ ಮಿರ್ಝಾ, ಸೈಮ್ ಅಯ್ಯೂಬ್ ಮತ್ತು ಸುಫಿಯಾನ್ ಮುಖಿಮ್.

ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ),  ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.

ಇದನ್ನೂ ಓದಿ: IPL 2026: 6 ಆಟಗಾರರನ್ನು ಕೈ ಬಿಡಲಿದೆ RCB

ಇನ್ನು ಒಮಾನ್, ಶ್ರೀಲಂಕಾ  ಹಾಗೂ ಯುಎಇ ತಂಡಗಳ ಘೋಷಣೆಯಾಗಬೇಕಿದೆ. ಈ ಮೂರು ತಂಡಗಳನ್ನು ಇದೇ ವಾರ ಪ್ರಕಟಿಸುವ ಸಾಧ್ಯತೆಯಿದ್ದು, ಈ ಮೂಲಕ ಏಷ್ಯಾಕಪ್​ಗಾಗಿ ಭರ್ಜರಿ ತಯಾರಿಗಳನ್ನು ಆರಂಭಿಸಲಿದ್ದಾರೆ.