Asia Cup 2023: ಏಷ್ಯಾಕಪ್​ನಲ್ಲಿಂದು ಬಾಂಗ್ಲಾದೇಶ-ಶ್ರೀಲಂಕಾ ಮುಖಾಮುಖಿ: ಯಾವ ತಂಡ ಬಲಿಷ್ಠ?

|

Updated on: Aug 31, 2023 | 7:15 AM

Bangladesh vs Sri Lanka, Asia 2nd Match Preview: ಎರಡೂ ತಂಡಗಳಲ್ಲಿ ಕೆಲ ಸ್ಟಾರ್ ಆಟಗಾರರ ಅಲಭ್ಯತೆ ಎದ್ದು ಕಾಣುತ್ತಿದೆ. 2018ರ ಏಷ್ಯಾಕಪ್​ನ ರನ್ನರ್ ಅಪ್ ಆಗಿರುವ ಬಾಂಗ್ಲಾದೇಶ, ಲಿಟ್ಟನ್ ದಾಸ್ ಸೇವೆ ಕಳೆದುಕೊಂಡಿದೆ. ಅತ್ತ ಕಳೆದ ವರ್ಷದ ಟಿ20 ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ, ದುಷ್ಮಂತ ಚಮೀರ, ಲಹಿರು ತಿರುಮನೆ ಅವರಂತಹ ಆಟಗಾರರನ್ನು ಮಿಸ್ ಮಾಡಿಕೊಳ್ಳಲಿದೆ.

Asia Cup 2023: ಏಷ್ಯಾಕಪ್​ನಲ್ಲಿಂದು ಬಾಂಗ್ಲಾದೇಶ-ಶ್ರೀಲಂಕಾ ಮುಖಾಮುಖಿ: ಯಾವ ತಂಡ ಬಲಿಷ್ಠ?
BAN vs SL Asia Cup 2023
Follow us on

ಏಷ್ಯಾಕಪ್ 2023 (Asia Cup 2023) ಟೂರ್ನಿಗೆ ಅದ್ಧೂರಿ ಚಾಲನೆ ದೊರಕಿದೆ. ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿ ಆಗಿದ್ದವು. ಇದರಲ್ಲಿ ಬಾಬರ್ ಅಜಮ್ ಪಡೆ ದಾಖಲೆಯ 238 ರನ್​​ಗಳ ಅಮೋಘ ಗೆಲುವು ಕಂಡಿದೆ. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇಂದು ಏಷ್ಯಾಕಪ್​ನಲ್ಲಿ ದ್ವಿತೀಯ ಪಂದ್ಯ ನಡೆಯಲಿದೆ. ಪಲ್ಲಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಸೆಣೆಸಾಟ ನಡೆಸಲಿದೆ.

ಎರಡೂ ತಂಡಗಳಲ್ಲಿ ಕೆಲ ಸ್ಟಾರ್ ಆಟಗಾರರ ಅಲಭ್ಯತೆ ಎದ್ದು ಕಾಣುತ್ತಿದೆ. 2018ರ ಏಷ್ಯಾಕಪ್​ನ ರನ್ನರ್ ಅಪ್ ಆಗಿರುವ ಬಾಂಗ್ಲಾದೇಶ, ಲಿಟ್ಟನ್ ದಾಸ್ ಸೇವೆ ಕಳೆದುಕೊಂಡಿದೆ. ಇವರು ಅನಾರೋಗ್ಯದಿಂದ ಬಳಲುತ್ತಿದ್ದಾರಂತೆ. ಅತ್ತ ಕಳೆದ ವರ್ಷದ ಟಿ20 ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ, ದುಷ್ಮಂತ ಚಮೀರ, ಲಹಿರು ತಿರುಮನೆ ಅವರಂತಹ ಆಟಗಾರರನ್ನು ಮಿಸ್ ಮಾಡಿಕೊಳ್ಳಲಿದೆ. ಕುಮಾರ, ದಿಲ್ಶನ್ ಮಧುಶಂಕ, ಮತ್ತು ವನಿಂದು ಹಸರಂಗ ಗಾಯಗೊಂಡಿದ್ದಾರೆ. ಹೀಗೆ ಎರಡು ತಂಡಗಳ ಯಾವ ಟೀಮ್ ಬಲಿಷ್ಠ ಎಂದು ಹೇಳಲು ಸಾಧ್ಯವಿಲ್ಲ.

A1 ಆದರೆ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಹೋಗಲಿದೆಯಾ?

ಇದನ್ನೂ ಓದಿ
ಭರ್ಜರಿ ಸೆಂಚುರಿಯೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ ಬಾಬರ್ ಆಝಂ
ದಾಖಲೆಯ ಗೆಲುವು ಸಾಧಿಸಿದ ಪಾಕಿಸ್ತಾನ್: ಟೀಮ್ ಇಂಡಿಯಾ ರೆಕಾರ್ಡ್ ಸೇಫ್
Babar Azam: ಬಾಬರ್ ಅಬ್ಬರಕ್ಕೆ ಕಿಂಗ್ ಕೊಹ್ಲಿಯ ದಾಖಲೆ ಉಡೀಸ್
ಪಾಕಿಸ್ತಾನದ ಪಂದ್ಯ ವೀಕ್ಷಿಸಲು ಪಾಕ್​ನಲ್ಲೇ ಜನರಿಲ್ಲ: ಸ್ಟೇಡಿಯಂ ಖಾಲಿ ಖಾಲಿ

ಬಾಂಗ್ಲಾದೇಶ ತಂಡದಲ್ಲಿ ಅನುಭವಿಗಳಾದ ಮುಶ್ಫಿಕರ್ ರಹೀಮ್ ಮತ್ತು ಶಕೀಬ್ ಅಲ್ ಹಸನ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಉಳಿದಂತೆ ತೌಹಿದ್ ಹೃದಯ್, ನಜ್ಮುಲ್ ಹೊಸೈನ್ ಶಾಂಟೊ, ಮೆಹಿದಿ ಹಸನ್ ಮಿರಾಜ್, ಹಸನ್ ಮಹಮೂದ್ ಇದ್ದಾರೆ. ಲಂಕಾ ತಂಡದಲ್ಲಿ ಪತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಚರಿತ್ ಅಸಲಂಕಾ, ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ದಸುನ್ ಶನಕ, ಮಹೇಶ್ ತೀಕ್ಷಣ ಮತ್ತು ಮತೀಶ ಪತಿರಣ ಇದ್ದಾರೆ.

ಬಾಂಗ್ಲಾ-ಶ್ರೀಲಂಕಾ ಲೈವ್ ಸ್ಟ್ರೀಮಿಂಗ್ ವಿವರ:

ಬಾಂಗ್ಲಾದೇಶ ಮತ್ತು ಶ್ರೀಲಂಕಾ ಏಷ್ಯಾಕಪ್ 2023 ರ ಪಂದ್ಯವನ್ನು ದೂರದರ್ಶನದಲ್ಲಿ, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ. ಡಿಜಿಟಲ್ ವೀಕ್ಷಣೆಗಾಗಿ ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ಇದರ ಅಧಿಕೃತ ವೆಬ್‌ಸೈಟ್ ಮೂಲಕ ಲೈವ್ ಸ್ಟ್ರೀಮಿಂಗ್ ಇರಲಿದೆ. ಗಮನಿಸಬೇಕಾದ ಸಂಗತಿಯೆಂದರೆ, ಮೊಬೈಲ್ ಬಳಕೆದಾರರು ಯಾವುದೇ ಶುಲ್ಕವಿಲ್ಲದೆ ಲೈವ್ ಕವರೇಜ್‌ಗೆ ಅನಿಯಂತ್ರಿತ ಪ್ರವೇಶವನ್ನು ಪಡೆಯಬಹುದು.

ಬಾಂಗ್ಲಾ-ಶ್ರೀಲಂಕಾ ಸಂಭಾವ್ಯ ಪ್ಲೇಯಿಂಗ್ XI:

ಬಾಂಗ್ಲಾದೇಶ: ತೌಹಿದ್ ಹೃದಯ್, ಮೊಹಮ್ಮದ್ ನಯಿಮ್, ನಜ್ಮುಲ್ ಹೊಸೈನ್ ಶಾಂಟೊ, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಶಮೀಮ್ ಹೊಸೈನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್.

ಶ್ರೀಲಂಕಾ: ಪತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಚರಿತ್ ಅಸಲಂಕಾ, ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ, ದಸುನ್ ಶನಕ (ನಾಯಕ), ದುಶನ್ ಹೇಮಂತ, ಕಸುನ್ ರಜಿತ, ಮಹೇಶ್ ತೀಕ್ಷಣ, ಮತೀಶ ಪತಿರಣ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ