AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

A1 ಆದರೆ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಹೋಗಲಿದೆಯಾ?

Asia Cup 2023: ಈ ಬಾರಿಯ ಏಷ್ಯಾಕಪ್​ನಲ್ಲಿ 6 ತಂಡಗಳು 2 ಗುಂಪುಗಳಲ್ಲಿ ಕಣಕ್ಕಿಳಿಯುತ್ತಿದೆ. ಇಲ್ಲಿ ಎ ಗ್ರೂಪ್​ನಲ್ಲಿ ಭಾರತ, ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳಿವೆ. ಹಾಗೆಯೇ ಬಿ ಗ್ರೂಪ್​ನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ್ ಹಾಗೂ ಅಫ್ಘಾನಿಸ್ತಾನ್ ತಂಡಗಳಿವೆ. ಮೊದಲ ಸುತ್ತಿನಲ್ಲಿ ಆಯಾ ಗ್ರೂಪ್​ನ ಇತರೆ ತಂಡಗಳ ವಿರುದ್ಧ ಒಂದೊಂದು ಪಂದ್ಯವನ್ನಾಡಲಿದೆ. ಅಂದರೆ ಭಾರತ ತಂಡದ ಎದುರಾಳಿ ಪಾಕಿಸ್ತಾನ್ ಹಾಗೂ ನೇಪಾಳ.

A1 ಆದರೆ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಹೋಗಲಿದೆಯಾ?
India vs Pakistan
TV9 Web
| Edited By: |

Updated on:Aug 30, 2023 | 4:18 PM

Share

ಬಹುನಿರೀಕ್ಷಿತ ಏಷ್ಯಾಕಪ್ ಶುರುವಾಗಿದೆ. 6 ತಂಡಗಳ ನಡುವಣ ಈ ಕ್ರಿಕೆಟ್​ ಕದನದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಗಾಗಿವೆ. ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಸೆಪ್ಟೆಂಬರ್ 4 ರಂದು ಭಾರತ ತಂಡ ನೇಪಾಳ ವಿರುದ್ಧ ತನ್ನ 2ನೇ ಪಂದ್ಯವಾಡಲಿದೆ.

ಟೀಮ್ ಇಂಡಿಯಾದ ಈ ಎರಡು ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಅಂದರೆ ಈ ಬಾರಿಯ ಏಷ್ಯಾಕಪ್ ಅನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿದೆ. ಆದರೆ ಪಾಕ್​ನಲ್ಲಿ ಟೂರ್ನಿ ನಡೆದರೆ ಟೀಮ್ ಇಂಡಿಯಾ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಹೀಗಾಗಿ ಏಷ್ಯಾಕಪ್​ನ್ನು ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತಿದೆ.

ಇಲ್ಲಿ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಉಳಿದ 9 ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯವಹಿಸಲಿದೆ. ಆದರೆ ಇಂಟ್ರೆಸ್ಟಿಂಗ್ ವಿಷಯ ಎಂದರೆ ಪಾಕ್ ಆತಿಥ್ಯವಹಿಸಲಿರುವ 4 ಪಂದ್ಯಗಳಲ್ಲಿ ಸೂಪರ್​-4 ಹಂತದ ಮೊದಲ ಪಂದ್ಯ ಕೂಡ ಸೇರಿದೆ.

ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಹೋಗಲಿದೆಯಾ?

ಈ ಬಾರಿಯ ಏಷ್ಯಾಕಪ್​ನಲ್ಲಿ 6 ತಂಡಗಳು 2 ಗುಂಪುಗಳಲ್ಲಿ ಕಣಕ್ಕಿಳಿಯುತ್ತಿದೆ. ಇಲ್ಲಿ ಎ ಗ್ರೂಪ್​ನಲ್ಲಿ ಭಾರತ, ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳಿವೆ. ಹಾಗೆಯೇ ಬಿ ಗ್ರೂಪ್​ನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ್ ಹಾಗೂ ಅಫ್ಘಾನಿಸ್ತಾನ್ ತಂಡಗಳಿವೆ. ಮೊದಲ ಸುತ್ತಿನಲ್ಲಿ ಆಯಾ ಗ್ರೂಪ್​ನ ಇತರೆ ತಂಡಗಳ ವಿರುದ್ಧ ಒಂದೊಂದು ಪಂದ್ಯವನ್ನಾಡಲಿದೆ. ಅಂದರೆ ಭಾರತ ತಂಡದ ಎದುರಾಳಿ ಪಾಕಿಸ್ತಾನ್ ಹಾಗೂ ನೇಪಾಳ.

ಇನ್ನು ಮೊದಲ ಸುತ್ತಿನ ಪಾಯಿಂಟ್ಸ್​ ಟೇಬಲ್​ನಲ್ಲಿ ಪ್ರತಿ ಗ್ರೂಪ್​ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೂಪರ್-4 ಹಂತಕ್ಕೇರಲಿದೆ. ಇಲ್ಲಿ ಗ್ರೂಪ್ ಎ ನಲ್ಲಿ ಅಗ್ರಸ್ಥಾನ ಅಲಂಕರಿಸುವ ತಂಡ A1 ಹಾಗೂ 2ನೇ ಸ್ಥಾನ ಅಲಂಕರಿಸುವ A2 ಆಗಿ ಗುರುತಿಸಿಕೊಳ್ಳಲಿದೆ. ಒಂದು ವೇಳೆ ಭಾರತ ತಂಡವು ಗ್ರೂಪ್ ಎ ನಲ್ಲಿ ಮೊದಲ ಸ್ಥಾನ ಅಲಂಕರಿಸಿದರೆ ಎಂಬುದೇ ಈಗ ಪ್ರಶ್ನೆ.

ಏಕೆಂದರೆ ಗ್ರೂಪ್ ಎ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸುವ ತಂಡ ಪಾಕಿಸ್ತಾನದಲ್ಲಿ ತನ್ನ ಮೊದಲ ಸೂಪರ್- ಪಂದ್ಯವಾಡಬೇಕಿದೆ. ಅಂದರೆ ಭಾರತ ತಂಡವು A1 ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯಾ?

ಈ ಪ್ರಶ್ನೆಗೆ ಉತ್ತರ ಇಲ್ಲ. ಭಾರತ ತಂಡವು A1 ಆಗಿ ಹೊರಹೊಮ್ಮಿದ್ದರೂ ಲಾಹೋರ್‌ನಲ್ಲಿ ನಡೆಯಲಿರುವ ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ. ಬದಲಾಗಿ A2 ಸ್ಥಾನದೊಂದಿಗೆ ಟೂರ್ನಿಯಲ್ಲಿ ಮುಂದುವರೆಯಲಿದೆ.

ಅಂದರೆ ಮೊದಲ ಸ್ಥಾನವನ್ನು ತ್ಯಾಗ ಮಾಡಿ ಭಾರತ A2 ಸ್ಥಾನದೊಂದಿಗೆ ಶ್ರೀಲಂಕಾದಲ್ಲೇ ಸೂಪರ್-4 ಪಂದ್ಯಗಳನ್ನಾಡಲಿದೆ. ಈ ಮೂಲಕ ಲಾಹೋರ್​ನಲ್ಲಿ ಪಂದ್ಯವಾಡುವುದನ್ನು ತಪ್ಪಿಸಿಕೊಳ್ಳಲಿದೆ.

ಇದನ್ನು ಓದಿ: ಏಷ್ಯಾಕಪ್​ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1

ಸೂಪರ್​-4 ನಲ್ಲಿ 3 ಪಂದ್ಯಗಳು:

ಮೊದಲ ಸುತ್ತಿನಲ್ಲಿ ಅಗ್ರಸ್ಥಾನ ಅಲಂಕರಿಸಿದರೂ, ದ್ವಿತೀಯ ಸ್ಥಾನ ಅಲಂಕರಿಸಿದರೂ ಸೂಪರ್​-4 ಹಂತದಲ್ಲಿ ಅದು ಪರಿಗಣನೆಗೆ ಬರುವುದಿಲ್ಲ. ಬದಲಾಗಿ ದ್ವಿತೀಯ ಸುತ್ತಿನಲ್ಲಿ ಪ್ರತಿ ತಂಡಗಳು ಉಳಿದ ತಂಡಗಳ ವಿರುದ್ಧ ಒಂದೊಂದು ಪಂದ್ಯವಾಡಬೇಕಿದೆ. ಹೀಗಾಗಿ ಇಲ್ಲಿ ಮೊದಲ ಸುತ್ತಿನ ಪಾಯಿಂಟ್ಸ್​​ ಟೇಬಲ್​ನ ಲೆಕ್ಕಾಚಾರ ಬರುವುದಿಲ್ಲ. ಅದರಂತೆ ಟೀಮ್ ಇಂಡಿಯಾ ಸೂಪರ್-4 ಹಂತಕ್ಕೇರಿದರೆ ತನ್ನೆಲ್ಲಾ ಪಂದ್ಯಗಳನ್ನು ಕೊಲಂಬೊದಲ್ಲೇ ಆಡಲಿದೆ.

ಏಷ್ಯಾಕಪ್​ನ ಸಂಪೂರ್ಣ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

Published On - 4:15 pm, Wed, 30 August 23

Follow Us
TV9 Web
TV9 Web

TV9 Kannada

Read More
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!