Asia cup 2023 Pakistan vs Nepal Live Score: ಪಾಕಿಸ್ತಾನ್ ತಂಡಕ್ಕೆ ಭರ್ಜರಿ ಜಯ

TV9 Web
| Updated By: ಝಾಹಿರ್ ಯೂಸುಫ್

Updated on:Aug 30, 2023 | 9:33 PM

Asia cup 2023 PAK vs NEP Match Live Score in Kannada: ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕ್ ಪರ ನಾಯಕ ಬಾಬರ್ ಆಝಂ (151) ಭರ್ಜರಿ ಶತಕ ಸಿಡಿಸಿ ಮಿಂಚಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಇಫ್ತಿಕರ್ ಅಹ್ಮದ್ ಕೇವಲ 71 ಎಸೆತಗಳಲ್ಲಿ ಅಜೇಯ 109 ರನ್ ಬಾರಿಸಿದರು.

Asia cup 2023 Pakistan vs Nepal Live Score: ಪಾಕಿಸ್ತಾನ್ ತಂಡಕ್ಕೆ ಭರ್ಜರಿ ಜಯ
Asia cup 2023 Pakistan vs Nepal Image Credit source: insidesport.in

ಮುಲ್ತಾನ್​ನಲ್ಲಿ ನಡೆದ ಏಷ್ಯಾಕಪ್​ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 6 ವಿಕೆಟ್ ನಷ್ಟಕ್ಕೆ 342 ರನ್​ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ನೇಪಾಳ ಬ್ಯಾಟರ್​ಗಳು ಪಾಕ್​ ತಂಡದ ಮಾರಕ ಬೌಲಿಂಗ್ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದರು. ಅಲ್ಲದೆ 23.4 ಓವರ್​ಗಳಲ್ಲಿ 104 ರನ್​ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲನುಭವಿಸಿದೆ. ಇದರೊಂದಿಗೆ ಮೊದಲ ಪಂದ್ಯದಲ್ಲಿ ಬರೋಬ್ಬರಿ 238 ರನ್​ಗಳ ಭರ್ಜರಿ ಜಯ ಸಾಧಿಸಿ ಪಾಕಿಸ್ತಾನ್ ಏಷ್ಯಾಕಪ್ ಅಭಿಯಾನ ಆರಂಭಿಸಿದೆ.

ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್ , ಇಮಾಮ್-ಉಲ್-ಹಕ್ , ಬಾಬರ್ ಆಝಮ್ (ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್) , ಅಘಾ ಸಲ್ಮಾನ್ , ಇಫ್ತಿಕರ್ ಅಹ್ಮದ್ , ಶಾದಾಬ್ ಖಾನ್ , ಮೊಹಮ್ಮದ್ ನವಾಜ್ , ಶಾಹೀನ್ ಅಫ್ರಿದಿ , ನಸೀಮ್ ಶಾ , ಹರಿಸ್ ರೌಫ್.

ನೇಪಾಳ ಪ್ಲೇಯಿಂಗ್ 11: ಕುಶಾಲ್ ಭುರ್ಟೆಲ್ , ಆಸಿಫ್ ಶೇಖ್ (ವಿಕೆಟ್ ಕೀಪರ್) , ರೋಹಿತ್ ಪೌಡೆಲ್ (ನಾಯಕ) , ಆರಿಫ್ ಶೇಖ್ , ಕುಶಾಲ್ ಮಲ್ಲಾ , ದೀಪೇಂದ್ರ ಸಿಂಗ್ ಐರಿ , ಗುಲ್ಸನ್ ಝಾ , ಸೋಂಪಾಲ್ ಕಾಮಿ , ಕರಣ್ ಕೆಸಿ , ಸಂದೀಪ್ ಲಮಿಚಾನೆ , ಲಲಿತ್ ರಾಜಬನ್ಶಿ.

LIVE Cricket Score & Updates

The liveblog has ended.
  • 30 Aug 2023 09:25 PM (IST)

    Pakistan vs Nepal Live Score: 23.4 ಓವರ್​ಗಳಲ್ಲಿ ನೇಪಾಳ ತಂಡ ಆಲೌಟ್

    ಪಾಕಿಸ್ತಾನ್ ನೀಡಿದ 343 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ನೇಪಾಳ ತಂಡವು ಕೇವಲ 104 ರನ್​ಗಳಿಗೆ ಸರ್ವಪತನ ಕಂಡಿದೆ. ಇದರೊಂದಿಗೆ ಪಾಕಿಸ್ತಾನ್ ತಂಡವು 238 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಅಮೋಘ ಗೆಲುವಿನೊಂದಿಗೆ ಪಾಕಿಸ್ತಾನ್ ತಂಡವು ಏಷ್ಯಾಕಪ್ ಅಭಿಯಾನ ಆರಂಭಿಸಿರುವುದು ವಿಶೇಷ.

    PAK 342/6 (50)

    NEP 104 (23.4)

      

      

  • 30 Aug 2023 09:22 PM (IST)

    Pakistan vs Nepal Live Score: ನೇಪಾಳ ತಂಡದ 9ನೇ ವಿಕೆಟ್ ಪತನ

    ನವಾಝ್ ಎಸೆತದಲ್ಲಿ ಸಿಕ್ಸ್ ಸಿಡಿಸಿದ ಕುಶಾಲ್ ಶಾದಾಬ್ ಎಸೆತದಲ್ಲಿ ಔಟ್. 24ನೇ ಓವರ್​ನ 2ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಇಫ್ತಿಕರ್ ಅಹ್ಮದ್​ಗೆ ಕ್ಯಾಚ್ ನೀಡಿದ ಕುಶಾಲ್. ಇದರೊಂದಿಗೆ ನೇಪಾಳ ತಂಡದ 9ನೇ ವಿಕೆಟ್ ಪತನ.

    NEP 104/9 (23.2)

      

  • 30 Aug 2023 09:20 PM (IST)

    Pakistan vs Nepal Live Score: ಭರ್ಜರಿ ಸಿಕ್ಸ್ ಸಿಡಿಸಿದ ಕುಶಾಲ್

    ಮೊಹಮ್ಮದ್ ನವಾಝ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕುಶಾಲ್. 23ನೇ ಓವರ್​ನ 5ನೇ ಎಸೆತದಲ್ಲಿ ಲೆಗ್​ ಸೈಡ್​ನತ್ತ ಸಿಕ್ಸ್ ಬಾರಿಸಿ ತಂಡದ ಮೊತ್ತವನ್ನು 100 ರ ಗಡಿದಾಟಿಸಿದರು. ಇನ್ನು 27 ಓವರ್​ಗಳಲ್ಲಿ ನೇಪಾಳ ತಂಡಕ್ಕೆ 239 ರನ್​ಗಳ ಅವಶ್ಯಕತೆಯಿದೆ. ಆದರೆ ಅತ್ತ ಪಾಕಿಸ್ತಾನ್ ತಂಡಕ್ಕೆ ಗೆಲ್ಲಲು ಕೇವಲ 2 ವಿಕೆಟ್​ಗಳ ಅವಶ್ಯಕತೆ.

    NEP 103/8 (23)

      

  • 30 Aug 2023 09:13 PM (IST)

    Asia cup 2023 Pakistan vs Nepal Live Score: ಪಾಕ್ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ವಿಕೆಟ್

    ಅತ್ಯದ್ಭುತ ಕ್ಯಾಚ್ ಹಿಡಿದ ಫಖರ್ ಝಮಾನ್. ಶಾದಾಬ್ ಖಾನ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಬಾರಿಸಿದ ಗುಲ್ಶಾನ್. ಬೌಂಡರಿ ಲೈನ್​ನಿಂದ ಓಡಿ ಬಂದು ಫಾವರ್ಡ್​ ಡೈವಿಂಗ್ ಕ್ಯಾಚ್ ಹಿಡಿದಿದ ಫಖರ್ ಝಮಾನ್. ನೇಪಾಳ ತಂಡದ 7ನೇ ವಿಕೆಟ್ ಪತನ. ಇದರ ಬೆನ್ನಲ್ಲೇ ಶಾದಾಬ್ ಎಸೆತದಲ್ಲಿ ಸಂದೀಪ್ ಲಾಮಿಚಾನೆ (0) ಕ್ಲೀನ್ ಬೌಲ್ಡ್. ನೇಪಾಳ ತಂಡದ 8 ವಿಕೆಟ್ ಪತನ.

    NEP 91/8 (21.5)

      

      

  • 30 Aug 2023 09:09 PM (IST)

    Pakistan vs Nepal Live Score: ಪಾಕ್ ತಂಡಕ್ಕೆ 6ನೇ ಯಶಸ್ಸು

    ಮೊಹಮ್ಮದ್ ನವಾಝ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ದೀಪೇಂದ್ರ ಸಿಂಗ್. 21ನೇ ಓವರ್​ನ 5ನೇ ಎಸೆತದಲ್ಲಿ ಪಾಕಿಸ್ತಾನ್ ತಂಡಕ್ಕೆ 6ನೇ ಯಶಸ್ಸು ತಂದುಕೊಟ್ಟ ನವಾಝ್. ಆರು ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ ನೇಪಾಳ ತಂಡ.

    NEP 90/6 (20.5)

      

  • 30 Aug 2023 09:05 PM (IST)

    Pakistan vs Nepal Live Score: 20 ಓವರ್ ಮುಕ್ತಾಯ: ನೇಪಾಳ ತಂಡದ 5 ವಿಕೆಟ್ ಪತನ

    ನೇಪಾಳ ಇನಿಂಗ್ಸ್​ನ 20 ಓವರ್​ಗಳು ಮುಕ್ತಾಯಗೊಂಡಿವೆ. 120 ಎಸೆತಗಳಲ್ಲಿ ನೇಪಾಳ ತಂಡವು 88 ರನ್​ ಕಲೆಹಾಕಿದೆ. ಇದೇ ವೇಳೆ 5 ವಿಕೆಟ್ ಕಳೆದುಕೊಂಡಿದೆ. ಇನ್ನು 30 ಓವರ್​ಗಳಲ್ಲಿ ಗೆಲ್ಲಲು 255 ರನ್ ಕಲೆಹಾಕಬೇಕಿದೆ.

    NEP 88/5 (20)

      

  • 30 Aug 2023 08:50 PM (IST)

    Pakistan vs Nepal Live Score: 5ನೇ ವಿಕೆಟ್ ಪತನ: ರೌಫ್ ಮಾರಕ ಬೌಲಿಂಗ್

    ನೇಪಾಳ ತಂಡದ 5ನೇ ವಿಕೆಟ್ ಪತನಗೊಂಡಿದೆ. ಪಾಕ್ ವೇಗಿ ಹ್ಯಾರಿಸ್ ರೌಫ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಸೋಂಪಲ್ (28) ನಿರ್ಗಮಿಸಿದ್ದಾರೆ. ಇದು ಹ್ಯಾರಿಸ್ ರೌಫ್​ಗೆ 2ನೇ ವಿಕೆಟ್. ಇದಕ್ಕೂ ಮುನ್ನ ಆರಿಫ್ ಶೇಖ್ ವಿಕೆಟ್ ಕಬಳಿಸಿದ್ದರು.

    NEP 82/5 (17)

      

  • 30 Aug 2023 08:39 PM (IST)

    Pakistan vs Nepal Live Score: ನೇಪಾಳ ತಂಡದ 4ನೇ ವಿಕೆಟ್ ಪತನ

    ಹ್ಯಾರಿಸ್ ರೌಫ್ ಬೆಂಕಿ ಬೌಲಿಂಗ್​ಗೆ ಆರಿಫ್ ಶೇಖ್ ಕ್ಲೀನ್ ಬೌಲ್ಡ್​. 15ನೇ ಓವರ್​ನ 4 ಎಸೆತದಲ್ಲಿ ಮಿಡಲ್ ಸ್ಟಂಪ್​ ಎಗರಿಸಿದ ರೌಫ್. 38 ಎಸೆತಗಳಲ್ಲಿ 24 ರನ್​ಗಳಿಸಿ ನಿರ್ಗಮಿಸಿದ ಆರಿಫ್ ಶೇಖ್. 4 ವಿಕೆಟ್ ಕಳೆದುಕೊಂಡು 73 ರನ್ ಕಲೆಹಾಕಿರುವ ನೇಪಾಳ ತಂಡ.

    NEP 73/4 (14.4)

      

  • 30 Aug 2023 08:29 PM (IST)

    Pakistan vs Nepal Live Score: ವೆಲ್ಕಂ ಬೌಂಡರಿ: ಆಕರ್ಷಕ ಫೋರ್

    ಸ್ಪಿನ್ನರ್ ಶಾದಾಬ್ ಖಾನ್ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಸೋಂಪಲ್.  ಈ ಫೋರ್​ನೊಂದಿಗೆ ನೇಪಾಳ ತಂಡದ ಮೊತ್ತ 72 ಕ್ಕೇರಿದರು. ಸದ್ಯ ಕ್ರೀಸ್​ನಲ್ಲಿ ಆರಿಫ್ ಶೇಖ್ ಹಾಗೂ ಸೋಂಪಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

    NEP 72/3 (13.3)

      

  • 30 Aug 2023 08:15 PM (IST)

    Pakistan vs Nepal Live Score: ಮೊದಲ 10 ಓವರ್ ಮುಕ್ತಾಯ: ನೇಪಾಳ ನಿಧಾನಗತಿಯ ಬ್ಯಾಟಿಂಗ್

    ನೇಪಾಳ ಇನಿಂಗ್ಸ್​ನ ಮೊದಲ 10 ಓವರ್ ಮುಕ್ತಾಯವಾಗಿದೆ. 60 ಎಸೆತಗಳಲ್ಲಿ 3 ವಿಕೆಟ್ ಕಳೆದುಕೊಂಡು 47 ರನ್​ ಕಲೆಹಾಕಲಷ್ಟೇ ಶಕ್ತರಾಗಿದ್ದಾರೆ. ಅತ್ತ ಪಾಕಿಸ್ತಾನ್ ಪರ ಶಾಹೀನ್ ಅಫ್ರಿದಿ ಹಾಗೂ ನಸೀಮ್ ಶಾ ಕ್ರಮವಾಗಿ 2 ಹಾಗೂ 1 ವಿಕೆಟ್ ಕಬಳಿಸಿದ್ದಾರೆ. ಸದ್ಯ ಕ್ರೀಸ್​ನಲ್ಲಿ ಆರಿಫ್ ಶೇಖ್ ಹಾಗೂ ಸೋಂಪಲ್ ಬ್ಯಾಟಿಂಗ್ ಮಾಡುತ್ತಿದ್ದು, ಗೆಲ್ಲಲು 40 ಓವರ್​ಗಳಲ್ಲಿ 296 ರನ್​ಗಳ ಅವಶ್ಯಕತೆಯಿದೆ.

    PAK 342/6 (50)

    NEP 47/3 (10)

      

  • 30 Aug 2023 08:06 PM (IST)

    Asia cup 2023 Pakistan vs Nepal Live Score: ಪಾಕಿಸ್ತಾನ್ ಉತ್ತಮ ಬೌಲಿಂಗ್

    8 ಓವರ್​ ಮುಕ್ತಾಯದ ವೇಳೆಗೆ 42 ರನ್​ ಕಲೆಹಾಕಿದ ನೇಪಾಳ ತಂಡ. ಶಾಹೀನ್ ಅಫ್ರಿದಿ ಹಾಗೂ ನಸೀಮ್ ಶಾ ರಿಂದ ತಲಾ 4 ಓವರ್​ಗಳನ್ನು ಮಾಡಿಸಿದ ಬಾಬರ್ ಆಝಂ. 4 ಓವರ್​ಗಳಲ್ಲಿ 2 ವಿಕೆಟ್ ಕಬಳಿಸಿದ ಎಡಗೈ ವೇಗಿ ಶಾಹೀನ್ ಅಫ್ರಿದಿ. 1 ವಿಕೆಟ್ ಪಡೆದಿರು ನಸೀಮ್ ಶಾ. ಕ್ರೀಸ್​ನಲ್ಲಿ ಆರಿಫ್ ಶೇಖ್ (10) ಹಾಗೂ ಸೋಂಪಲ್ (14) ಬ್ಯಾಟಿಂಗ್.

    NEP 42/3 (8)

      

  • 30 Aug 2023 07:50 PM (IST)

    Pakistan vs Nepal Live Score: 5 ಓವರ್ ಮುಕ್ತಾಯ: ನೇಪಾಳ ತಂಡಕ್ಕೆ ಆರಂಭಿಕ ಆಘಾತ

    ಮೊದಲ ಐದು ಓವರ್​ಗಳಲ್ಲೇ ಅಗ್ರ ಕ್ರಮಾಂಕದ ಮೂರು ವಿಕೆಟ್​ಗಳನ್ನು ಕಳೆದುಕೊಂಡ ನೇಪಾಳ ತಂಡ. ಶಾಹೀನ್ ಅಫ್ರಿದಿ 2 ವಿಕೆಟ್ ಪಡೆದರೆ, ನಸೀನ್ ಶಾ 1 ವಿಕೆಟ್ ಕಬಳಿಸಿದ್ದಾರೆ. ಇದೀಗ ಕ್ರೀಸ್​ನಲ್ಲಿ ಆರಿಫ್ ಶೇಖ್ ಹಾಗೂ ಸೋಂಪಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

    NEP 27/3 (5)

      

  • 30 Aug 2023 07:39 PM (IST)

    Pakistan vs Nepal Live Score: 2ನೇ ಓವರ್​ನಲ್ಲಿ 3ನೇ ವಿಕೆಟ್ ಪತನ

    ನಸೀಮ್ ಶಾ ಎಸೆದ 2ನೇ ಓವರ್​ನಲ್ಲಿ ಸ್ಲಿಪ್​ನಲ್ಲಿ ಕ್ಯಾಚ್ ನೀಡಿ ಹೊರನಡೆದ ಆಸಿಫ್ ಶೇಖ್. ಕೇವಲ 4 ರನ್ ನೀಡಿ ಪಾಕಿಸ್ತಾನ್ ತಂಡಕ್ಕೆ ಮೂರನೇ ಯಶಸ್ಸು ತಂದುಕೊಟ್ಟ ಯುವ ವೇಗಿ ನಸೀಮ್ ಶಾ. ಮೊದಲ 2 ಓವರ್​ಗಳಲ್ಲೇ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿರುವ ನೇಪಾಳ ತಂಡ.

    NEP 14/3 (2)

      

  • 30 Aug 2023 07:26 PM (IST)

    Pakistan vs Nepal Live Score: ನೇಪಾಳ ತಂಡದ ಬ್ಯಾಟಿಂಗ್ ಶುರು

    ಮೊದಲ ಓವರ್​ನಲ್ಲೇ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಕುಶಾಲ್. ಶಾಹೀನ್ ಅಫ್ರಿದಿ ಎಸೆದ ಮೊದಲ ಓವರ್​ನ ಎಸೆತದಲ್ಲೇ ಫೋರ್ ಬಾರಿಸಿ ತಂಡದ ಖಾತೆ ತೆರೆದರು. ಇದರ ಬೆನ್ನಲ್ಲೇ ಮತ್ತೊಂದು ಬೌಂಡರಿ ಸಿಡಿಸಿದರು. ಆದರೆ ಕುಶಾಲ್ (8) ವಿಕೆಟ್ ಪಡೆಯುವಲ್ಲಿ ಅಫ್ರಿದಿ ಯಶಸ್ವಿಯಾದರು. ಇನ್ನು ಕೊನೆಯ ಎಸೆತದಲ್ಲಿ ರೋಹಿತ್ ಪೌಡೆಲ್​ (0) ರನ್ನು ಎಲ್​ಬಿ ಬಲೆಗೆ ಕೆಡವಿದ ಶಾಹೀನ್ ಪಾಕ್ ತಂಡಕ್ಕೆ 2ನೇ ಯಶಸ್ಸು ತಂದುಕೊಟ್ಟರು.

    NEP 10/2 (1)

      

  • 30 Aug 2023 07:10 PM (IST)

    Pakistan vs Nepal Live Score: ಪಾಕಿಸ್ತಾನ್ ಬ್ಯಾಟರ್​ಗಳ ಅಬ್ಬರಕ್ಕೆ ನಲುಗಿದ ನೇಪಾಳ

    ಏಷ್ಯಾಕಪ್​ನಲ್ಲಿನ ತನ್ನ ಚೊಚ್ಚಲ ಪಂದ್ಯದಲ್ಲೇ 343 ರನ್​ಗಳ ಕಠಿಣ ಗುರಿ ಪಡೆದ ನೇಪಾಳ ತಂಡ. ಈ ಗುರಿ ಬೆನ್ನತ್ತಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಆದರೆ ಅನಾನುಭವಿ ಆಟಗಾರರನ್ನು ಒಳಗೊಂಡಿರುವ ನೇಪಾಳ ತಂಡವು ಪಾಕ್​ ಬೌಲರ್​ಗಳ ಮುಂದೆ ಕ್ರೀಸ್ ಕಚ್ಚಿ ನಿಲ್ಲುವುದೇ ದೊಡ್ಡ ಸವಾಲಾಗಿ ಪರಿಣಮಿಸಲಿದೆ.

  • 30 Aug 2023 07:03 PM (IST)

    Pakistan vs Nepal Live Score: ನೇಪಾಳ ತಂಡಕ್ಕೆ ಕಠಿಣ ಗುರಿ ನೀಡಿದ ಪಾಕಿಸ್ತಾನ್

    ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡದ ಪರ ನಾಯಕ ಬಾಬರ್ ಆಝಂ 131 ಎಸೆತಗಳಲ್ಲಿ 151 ರನ್​ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದ ಬ್ಯಾಟರ್ ಇಫ್ತಿಕರ್ ಅಹ್ಮದ್ ಕೇವಲ 71 ಎಸೆತಗಳಲ್ಲಿ ಅಜೇಯ 109 ರನ್ ಸಿಡಿಸಿದರು. ಈ ಎರಡು ಭರ್ಜರಿ ಶತಕಗಳ ನೆರವಿನಿಂದ ಪಾಕಿಸ್ತಾನ್ ತಂಡವು ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 342 ರನ್​ ಪೇರಿಸಿದೆ.

    PAK 342/6 (50)

      

  • 30 Aug 2023 05:55 PM (IST)

    ಆಕರ್ಷಕ ಬೌಂಡರಿ

    ರಾಜಬನ್ಶಿ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಫೋರ್ ಬಾರಿಸಿದ ಇಫ್ತಿಕರ್

    PAK 212/4 (39.1)

     

  • 30 Aug 2023 05:45 PM (IST)

    ಶತಕದತ್ತ ಬಾಬರ್ ಆಝಂ

    98 ಎಸೆತಗಳಲ್ಲಿ 93 ರನ್​ಗಳಿಸಿ ಕ್ರೀಸ್​ನಲ್ಲಿರುವ ಬಾಬರ್ ಆಝಂ

    PAK 196/4 (37)

      

  • 30 Aug 2023 05:36 PM (IST)

    35 ಓವರ್ ಮುಕ್ತಾಯ

    PAK 180/4 (35)

      

    ಕ್ರೀಸ್​ನಲ್ಲಿ ಬಾಬರ್ ಆಝಂ (81) ಹಾಗೂ ಇಫ್ತಿಕರ್ ಅಹ್ಮದ್ (24) ಬ್ಯಾಟಿಂಗ್

  • 30 Aug 2023 05:32 PM (IST)

    ಮೊದಲ ಸಿಕ್ಸ್

    ಸೊಂಪಲ್ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಇಫ್ತಿಕರ್

    PAK 174/4 (34.2)

      

  • 30 Aug 2023 05:30 PM (IST)

    ಇಫ್ತಿ-ಶಾಟ್

    ಕುಶಾಲ್ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಇಫ್ತಿಕರ್ ಅಹ್ಮದ್

    PAK 162/4 (33.4)

     

  • 30 Aug 2023 05:25 PM (IST)

    PAK 157/4 (33)

    33 ಓವರ್​ಗಳ ಮುಕ್ತಾಯದ ವೇಳೆ 157 ರನ್​ ಕಲೆಹಾಕಿದ ಪಾಕಿಸ್ತಾನ್

    ಅರ್ಧಶತಕ ಪೂರೈಸಿ ಬ್ಯಾಟಿಂಗ್ ಮುಂದುವರೆಸಿರುವ ಬಾಬರ್ ಆಝಂ ಕ್ರೀಸ್​ನಲ್ಲಿದ್ದಾರೆ.

    ನಾಯಕನಿಗೆ ಉತ್ತಮ ಸಾಥ್ ನೀಡುತ್ತಾ ಇಫ್ತಿಕರ್ ಅಹ್ಮದ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.

    PAK 157/4 (33)

     

  • 30 Aug 2023 05:10 PM (IST)

    30 ಓವರ್ ಮುಕ್ತಾಯ

    ಪಾಕಿಸ್ತಾನ್- 139/4 (30)

      

    ಕ್ರೀಸ್​ನಲ್ಲಿ ಬಾಬರ್ ಆಝಂ (61) ಹಾಗೂ ಇಫ್ತಿಕರ್ (3) ಬ್ಯಾಟಿಂಗ್

  • 30 Aug 2023 05:08 PM (IST)

    ಬಾಬರ್ ಹಿಟ್

    ರಾಜ್​ಬನ್ಶಿ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಬಾಬರ್ ಆಝಂ

    PAK 137/4 (29.2)

      

  • 30 Aug 2023 05:04 PM (IST)

    ಬಾಬರ್ ಫಿಫ್ಟಿ

    73 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಾಬರ್ ಆಝಂ

    ತಮ್ಮ ಇನಿಂಗ್ಸ್​ನಲ್ಲಿ ಕೇವಲ 4 ಫೋರ್​ಗಳನ್ನು ಬಾರಿಸಿರುವ ಬಾಬರ್

    PAK 128/4 (28.3)

     

  • 30 Aug 2023 04:59 PM (IST)

    ನೇಪಾಳ ತಂಡಕ್ಕೆ 4ನೇ ಯಶಸ್ಸು

    ಸಂದೀಪ್ ಲಾಮಿಚಾನೆ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಸಲ್ಮಾನ್ ಆಘಾ (5)

    PAK 124/4 (27.5)

      

  • 30 Aug 2023 04:46 PM (IST)

    3ನೇ ವಿಕೆಟ್ ಪತನ

    ದೀಪೇಂದ್ರ ಸಿಂಗ್ ಉತ್ತಮ ಫೀಲ್ಡಿಂಗ್…ವಿಕೆಟ್​ಗೆ ಡೈರೆಕ್ಟ್ ಹಿಟ್​….ಮೊಹಮ್ಮದ್ ರಿಝ್ವಾನ್ ಔಟ್

    PAK 111/3 (23.4)

     50 ಎಸೆತಗಳಲ್ಲಿ 44 ರನ್ ಬಾರಿಸಿ ನಿರ್ಗಮಿಸಿದ ರಿಝ್ವಾನ್

  • 30 Aug 2023 04:44 PM (IST)

    ಫುಲ್ ಟಾಸ್-ಫೋ್ರ್

    ಲಾಮಿಚಾನೆ ಎಸೆದ ಫುಲ್ ಟಾಸ್ ಎಸೆತವನ್ನು ಮಿಡ್ ಆನ್​ನತ್ತ ಬೌಂಡರಿಗೆ ತಲುಪಿಸಿದ ರಿಝ್ವಾನ್

    PAK 111/2 (23.3)

      

  • 30 Aug 2023 04:36 PM (IST)

    ಪಾಕಿಸ್ತಾನ್ ಸ್ಕೋರ್-100/2

    ದೀಪೇಂದ್ರ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ತಂಡದ ಮೊತ್ತವನ್ನು 100 ಕ್ಕೇರಿಸಿದ ಬಾಬರ್ ಆಝಂ

    PAK 100/2 (21.3)

     

  • 30 Aug 2023 04:32 PM (IST)

    ಆಕರ್ಷಕ ಬೌಂಡರಿ

    ದೀಪೇಂದ್ರ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿ 20ನೇ ಓವರ್​ ಕೊನೆಗೊಳಿಸಿದ ರಿಝ್ವಾನ್

    PAK 91/2 (20)

    20 ಓವರ್​ಗಳಲ್ಲಿ 4.55 ರ ಸರಾಸರಿಯಲ್ಲಿ ರನ್ ಕಲೆಹಾಕಿದ ಪಾಕಿಸ್ತಾನ್

    ಕ್ರೀಸ್​ನಲ್ಲಿ ಬಾಬರ್-ರಿಝ್ವಾನ್ ಬ್ಯಾಟಿಂಗ್

      

  • 30 Aug 2023 04:19 PM (IST)

    15 ಓವರ್ ಮುಕ್ತಾಯ

    15 ಓವರ್​ಗಳಲ್ಲಿ 72 ರನ್ ಕಲೆಹಾಕಿದ ಪಾಕಿಸ್ತಾನ್

    PAK 72/2 (15)

     ಕ್ರೀಸ್​ನಲ್ಲಿ ಬಾಬರ್ ಆಝಂ ಹಾಗೂ ರಿಝ್ವಾನ್ ಬ್ಯಾಟಿಂಗ್

    ಫಖರ್ ಝಮಾನ್ (14) ಹಾಗೂ ಇಮಾಮ್ ಉಲ್ ಜಕ್ (5) ಔಟ್

  • 30 Aug 2023 04:05 PM (IST)

    ವೆಲ್ಕಂ ಬೌಂಡರಿ

    ಲಲಿತ್ ಎಸೆತದಲ್ಲಿ ಫೈನ್​ ಲೆಗ್​ನತ್ತ ಬೌಂಡರಿ ಬಾರಿಸಿದ ರಿಝ್ವಾನ್

    PAK 55/2 (11.5)

      

  • 30 Aug 2023 03:57 PM (IST)

    ಪವರ್​ಪ್ಲೇ ಮುಕ್ತಾಯ

    PAK 44/2 (10)

     ಮೊದಲ 10 ಓವರ್​ಗಳಲ್ಲಿ ಕೇವಲ 44 ರನ್ ನೀಡಿದ ನೇಪಾಳ

    ಕ್ರೀಸ್​ನಲ್ಲಿ ಬಾಬರ್ 12  ಹಾಗೂ ರಿಝ್ವಾನ್ 7 ಬ್ಯಾಟಿಂಗ್

    ಇಮಾಮ್ ಉಲ್ ಹಕ್ ಹಾಗೂ ಫಖರ್ ಝಮಾನ್ ಔಟ್

  • 30 Aug 2023 03:48 PM (IST)

    ನೇಪಾಳ ಅತ್ಯುತ್ತಮ ಬೌಲಿಂಗ್

    PAK 36/2 (8)

    ಮೊದಲ 8 ಓವರ್​ಗಳಲ್ಲಿ ಕೇವಲ 36 ರನ್​ ನೀಡಿದ ನೇಪಾಳ ಬೌಲರ್​ಗಳು

    ಕ್ರೀಸ್​ನಲ್ಲಿ ಬಾಬರ್ ಹಾಗೂ ರಿಝ್ವಾನ್ ಬ್ಯಾಟಿಂಗ್

    ತವರು ಪಿಚ್​ನಲ್ಲಿ ರನ್​ಗಳಿಸಲು ಪರದಾಡುತ್ತಿರುವ ಪಾಕಿಸ್ತಾನ್ ಬ್ಯಾಟರ್​ಗಳು

      

  • 30 Aug 2023 03:40 PM (IST)

    7 ಓವರ್ ಮುಕ್ತಾಯ

    PAK 29/2 (7)

    ಕ್ರೀಸ್​ನಲ್ಲಿ ಬಾಬರ್ ಆಝಂ ಹಾಗೂ ರಿಝ್ವಾನ್ ಬ್ಯಾಟಿಂಗ್

    ನೇಪಾಳ ತಂಡದ ಉತ್ತಮ ಬೌಲಿಂಗ್ ಪ್ರದರ್ಶನ

      

  • 30 Aug 2023 03:34 PM (IST)

    2ನೇ ವಿಕೆಟ್ ಪತನ

    ನಾಯಕ ರೋಹಿತ್ ಪೌಡೆಲ್ ಅದ್ಭುತ ಫೀಲ್ಡಿಂಗ್…ವಿಕೆಟ್​ಗೆ ನೇರ ಎಸೆತ….ಇಮಾಮ್ ಉಲ್ ಹಕ್ (5) ರನೌಟ್

    PAK 25/2 (6.1)

      

  • 30 Aug 2023 03:30 PM (IST)

    ನೇಪಾಳ ತಂಡಕ್ಕೆ ಮೊದಲ ಯಶಸ್ಸು

    ಕರಣ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಫಖರ್ ಝಮಾನ್ (14)

    PAK 21/1 (5.3)

     ನೇಪಾಳ ಪರ ಏಷ್ಯಾಕಪ್​ನಲ್ಲಿ ಮೊದಲ ವಿಕೆಟ್ ಪಡೆದ ದಾಖಲೆ ಕರಣ್ ಕೆಸಿ ಹೆಸರಿಗೆ ಸೇರ್ಪಡೆ

    ನೇಪಾಳ ಪರ ಏಷ್ಯಾಕಪ್​ನಲ್ಲಿ ಮೊದಲ ಕ್ಯಾಚ್ ಹಿಡಿದ ದಾಖಲೆ ವಿಕೆಟ್ ಕೀಪರ್ ಆಸಿಫ್ ಶೇಖ್​ ಪಾಲು

  • 30 Aug 2023 03:24 PM (IST)

    ಇಮಾಮ್ ಮಾರ್ಕ್​

    ಸೊಂಪಲ್ ಎಸೆತದಲ್ಲಿ ಮಿಡ್ ಆನ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಇಮಾಮ್ ಉಲ್ ಹಕ್

    PAK 21/0 (4.3)

      

  • 30 Aug 2023 03:21 PM (IST)

    ನೇಪಾಳ ಉತ್ತಮ ಬೌಲಿಂಗ್

    ಮೊದಲ 4 ಓವರ್​ಗಳಲ್ಲಿ ಕೇವಲ 16 ರನ್​ ನೀಡಿದ ನೇಪಾಳ ಬೌಲರ್​ಗಳು

    ಫಖರ್ ಝಮಾನ್ ಒಟ್ಟು 3 ಫೋರ್​ಗಳನ್ನು ಬಾರಿಸಿದ್ದಾರೆ.

    PAK 16/0 (4)

     ಕ್ರೀಸ್​ನಲ್ಲಿ ಫಖರ್ – ಇಮಾಮ್ ಬ್ಯಾಟಿಂಗ್

  • 30 Aug 2023 03:16 PM (IST)

    ಮೂರು ಓವರ್ ಮುಕ್ತಾಯ

    PAK 11/0 (3)

     ಕ್ರೀಸ್​ನಲ್ಲಿ ಫಖರ್ ಝಮಾನ್ ಹಾಗೂ ಇಮಾಮ್ ಉಲ್ ಹಕ್ ಬ್ಯಾಟಿಂಗ್

  • 30 Aug 2023 03:15 PM (IST)

    ಬೌಂಡರಿಯೊಂದಿಗೆ ಶುಭಾರಂಭ

    ಸೊಂಪಲ್ ಕಮಿ ಎಸೆದ ಮೊದಲ ಓವರ್​ನಲ್ಲೇ ಎರಡು ಫೋರ್​ ಬಾರಿಸಿ ಶುಭಾರಂಭ ಮಾಡಿದ ಫಖರ್ ಝಮಾನ್

    ಮೊದಲ ಓವರ್​ನಲ್ಲಿ 9 ರನ್​ ಕಲೆಹಾಕಿದ ಪಾಕಿಸ್ತಾನ್

    ಕ್ರೀಸ್​ನಲ್ಲಿ ಫಖರ್ ಝಮಾನ್ ಹಾಗೂ ಇಮಾಮ್ ಉಲ್ ಹಕ್ ಬ್ಯಾಟಿಂಗ್

  • 30 Aug 2023 03:14 PM (IST)

    ಉಭಯ ತಂಡಗಳು ಹೀಗಿವೆ

    ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್ , ಇಮಾಮ್-ಉಲ್-ಹಕ್ , ಬಾಬರ್ ಆಝಮ್ (ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್) , ಅಘಾ ಸಲ್ಮಾನ್ , ಇಫ್ತಿಕರ್ ಅಹ್ಮದ್ , ಶಾದಾಬ್ ಖಾನ್ , ಮೊಹಮ್ಮದ್ ನವಾಜ್ , ಶಾಹೀನ್ ಅಫ್ರಿದಿ , ನಸೀಮ್ ಶಾ , ಹರಿಸ್ ರೌಫ್.

    ನೇಪಾಳ ಪ್ಲೇಯಿಂಗ್ 11: ಕುಶಾಲ್ ಭುರ್ಟೆಲ್ , ಆಸಿಫ್ ಶೇಖ್ (ವಿಕೆಟ್ ಕೀಪರ್) , ರೋಹಿತ್ ಪೌಡೆಲ್ (ನಾಯಕ) , ಆರಿಫ್ ಶೇಖ್ , ಕುಶಾಲ್ ಮಲ್ಲಾ , ದೀಪೇಂದ್ರ ಸಿಂಗ್ ಐರಿ , ಗುಲ್ಸನ್ ಝಾ , ಸೋಂಪಾಲ್ ಕಾಮಿ , ಕರಣ್ ಕೆಸಿ , ಸಂದೀಪ್ ಲಮಿಚಾನೆ , ಲಲಿತ್ ರಾಜಬನ್ಶಿ.

  • 30 Aug 2023 03:13 PM (IST)

    ಟಾಸ್ ಗೆದ್ದ ಪಾಕಿಸ್ತಾನ್

    ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

  • Published On - Aug 30,2023 3:12 PM

    Follow us
    ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
    ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
    ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
    ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
    ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
    ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
    ‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
    ‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
    ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
    ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
    ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
    ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
    ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
    ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
    ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
    ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
    ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
    ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
    ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
    ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ