ಪಾಕಿಸ್ತಾನದ ಪಂದ್ಯ ವೀಕ್ಷಿಸಲು ಪಾಕ್ನಲ್ಲೇ ಜನರಿಲ್ಲ: ಸ್ಟೇಡಿಯಂ ಖಾಲಿ ಖಾಲಿ
Asia Cup 2023: ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಉತ್ತಮ ಆರಂಭ ಪಡೆಯಲಿಲ್ಲ. ನೇಪಾಳ ತಂಡದ ಸಾಂಘಿಕ ಪ್ರದರ್ಶನದ ಮುಂದೆ ಮಂಕಾದಂತೆ ಕಂಡು ಬಂದ ಪಾಕ್ ಬ್ಯಾಟರ್ಗಳು ನಿಧಾನಗತಿಯಲ್ಲಿ ರನ್ ಕಲೆಹಾಕಿದರು.
16ನೇ ಆವೃತ್ತಿಯ ಏಷ್ಯಾಕಪ್ಗೆ ಚಾಲನೆ ದೊರೆತಿದೆ. ಮುಲ್ತಾನ್ನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023 ರ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಿದೆ. ಆದರೆ ಪಾಕಿಸ್ತಾನ್ ತಂಡದ ತವರಿನಲ್ಲಿ ನಡೆಯುತ್ತಿರುವ ಮೊದಲ ಪಂದ್ಯಕ್ಕೆ ಕ್ರಿಕೆಟ್ ಪ್ರೇಮಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
15 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಯೋಜನೆಗೊಳ್ಳುತ್ತಿದ್ದು, ಹೀಗಾಗಿ ಸ್ಟೇಡಿಯಂ ತುಂಬಾ ಪ್ರೇಕ್ಷಕರನ್ನು ನಿರೀಕ್ಷಿಸಲಾಗಿತ್ತು. ಅದರಲ್ಲೂ ಉದ್ಘಾಟನಾ ಸಮಾರಂಭ ಇದ್ದಿದ್ದರಿಂದ ಹೆಚ್ಚಿನ ಜನರು ಬರುವ ನಿರೀಕ್ಷೆಯಲ್ಲಿತ್ತು.
ಆದರೆ ಉದ್ಘಾಟನಾ ಸಮಾರಂಭದಲ್ಲಿ ಗಾಯಕರಾದ ಐಮಾ ಬೇಗ್ ಮತ್ತು ತ್ರಿಶಾಲಾ ಗುರುಂಗ್ ಖಾಲಿ ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡಬೇಕಾಯಿತು. ಇನ್ನು ಪಂದ್ಯ ಆರಂಭವಾದ ಬಳಿಕ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿರುವುದು ಬೆರಳಿಕೆಯಷ್ಟು ಪ್ರೇಕ್ಷಕರು ಮಾತ್ರ.
Nepali players are used to playing around thousands of fans 👀👀#crickettwitter #AsiaCup23 #Pakistan #Nepal pic.twitter.com/IP9wLa38M5
— InsideSport (@InsideSportIND) August 30, 2023
ಇತ್ತ ಪ್ರೇಕರಿಗಿಂತ ಖಾಲಿ ಕುರ್ಚಿಗಳೇ ಕಂಡು ಬಂದಿರುವುದನ್ನು ಇದೀಗ ಟ್ರೋಲ್ ಮಾಡಲಾಗುತ್ತಿದೆ. ಕೆಲವರು ಈ ಪಂದ್ಯವನ್ನು ನೇಪಾಳದಲ್ಲಿ ಆಯೋಜಿಸಿದರೆ ಇದಕ್ಕಿಂತ ಹೆಚ್ಚು ಪ್ರೇಕ್ಷಕರು ಸೇರುತ್ತಿದ್ದರು ಎಂದು ಟ್ರೋಲ್ ಮಾಡಿದರೆ, ಮತ್ತೆ ಕೆಲವರು ಇದು ಪಾಕ್ ತಂಡ ಜನಪ್ರಿಯತೆಯನ್ನು ತೋರಿಸುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
Crazy Crowd in #PAKvsNEP Game🤣🤣 And they wanted Asia cup to happen in Pakistan, thank god it got Shifted in srilanka! pic.twitter.com/h0KTRZuZym
— ᴘʀᴀᴛʜᴍᴇsʜ⁴⁵ (@45Fan_Prathmesh) August 30, 2023
ಒಟ್ಟಿನಲ್ಲಿ ಏಷ್ಯಾಕಪ್ನ 4 ಪಂದ್ಯಗಳಿಗೆ ಪಾಕಿಸ್ತಾನ್ ಆತಿಥ್ಯವಹಿಸುತ್ತಿದ್ದು, ಇದೀಗ ಮೊದಲ ಪಂದ್ಯಕ್ಕೆ ಪ್ರೇಕ್ಷಕರು ನಿರಾಸಕ್ತಿ ತೋರಿಸಿರುವುದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಚಿಂತೆಯನ್ನು ಹೆಚ್ಚಿಸಿದೆ.
ಟಾಸ್ ಗೆದ್ದ ಪಾಕಿಸ್ತಾನ್:
ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಉತ್ತಮ ಆರಂಭ ಪಡೆಯಲಿಲ್ಲ. ನೇಪಾಳ ತಂಡದ ಸಾಂಘಿಕ ಪ್ರದರ್ಶನದ ಮುಂದೆ ಮಂಕಾದಂತೆ ಕಂಡು ಬಂದ ಪಾಕ್ ಬ್ಯಾಟರ್ಗಳು ನಿಧಾನಗತಿಯಲ್ಲಿ ರನ್ ಕಲೆಹಾಕಿದರು.
ಅಲ್ಲದೆ ಮೊದಲ 10 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 44 ರನ್ಗಳಿಸಲಷ್ಟೇ ಶಕ್ತರಾದರು. ಇನ್ನು 30 ಓವರ್ ಮುಕ್ತಾಯದ ವೇಳೆ 4 ವಿಕೆಟ್ ಕಳೆದುಕೊಂಡ ಪಾಕಿಸ್ತಾನ್ ತಂಡವು 139 ರನ್ ಕಲೆಹಾಕಿದೆ.
ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್ , ಇಮಾಮ್-ಉಲ್-ಹಕ್ , ಬಾಬರ್ ಆಝಮ್ (ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್) , ಅಘಾ ಸಲ್ಮಾನ್ , ಇಫ್ತಿಕರ್ ಅಹ್ಮದ್ , ಶಾದಾಬ್ ಖಾನ್ , ಮೊಹಮ್ಮದ್ ನವಾಜ್ , ಶಾಹೀನ್ ಅಫ್ರಿದಿ , ನಸೀಮ್ ಶಾ , ಹರಿಸ್ ರೌಫ್.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
ನೇಪಾಳ ಪ್ಲೇಯಿಂಗ್ 11: ಕುಶಾಲ್ ಭುರ್ಟೆಲ್ , ಆಸಿಫ್ ಶೇಖ್ (ವಿಕೆಟ್ ಕೀಪರ್) , ರೋಹಿತ್ ಪೌಡೆಲ್ (ನಾಯಕ) , ಆರಿಫ್ ಶೇಖ್ , ಕುಶಾಲ್ ಮಲ್ಲಾ , ದೀಪೇಂದ್ರ ಸಿಂಗ್ ಐರಿ , ಗುಲ್ಸನ್ ಝಾ , ಸೋಂಪಾಲ್ ಕಾಮಿ , ಕರಣ್ ಕೆಸಿ , ಸಂದೀಪ್ ಲಮಿಚಾನೆ , ಲಲಿತ್ ರಾಜಬನ್ಶಿ.