AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ರದ್ದು! ಕಾರಣ ವಿವರಿಸಿದ ಬಿಸಿಬಿ ಅಧ್ಯಕ್ಷ

Bangladesh Premier League 2026 Cancelled:ಐಪಿಎಲ್ ಮಾದರಿಯಲ್ಲಿ ಆರಂಭವಾದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್, ಆರ್ಥಿಕ ನಷ್ಟ ಮತ್ತು ಭ್ರಷ್ಟಾಚಾರದಿಂದಾಗಿ ಈ ವರ್ಷ ರದ್ದಾಗಿದೆ. ಬಾಂಗ್ಲಾ ಕ್ರಿಕೆಟ್ ಮಂಡಳಿ (BCB) ಕಳೆದ ಎರಡು ವರ್ಷಗಳಲ್ಲಿ 3.3 ಮಿಲಿಯನ್ ಡಾಲರ್ ನಷ್ಟ ಅನುಭವಿಸಿದೆ. ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿ, ಬದಲಾವಣೆಗಳೊಂದಿಗೆ ಲೀಗ್ ಅನ್ನು ಪುನರಾರಂಭಿಸಲು ಮಂಡಳಿ ನಿರ್ಧರಿಸಿದೆ. ಫಿಕ್ಸಿಂಗ್ ಹಾವಳಿಯೂ ರದ್ದತಿಗೆ ಪ್ರಮುಖ ಕಾರಣವಾಗಿದೆ.

ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ರದ್ದು! ಕಾರಣ ವಿವರಿಸಿದ ಬಿಸಿಬಿ ಅಧ್ಯಕ್ಷ
Bpl
ಪೃಥ್ವಿಶಂಕರ
|

Updated on:Aug 21, 2026 | 7:33 PM

Share

ಐಪಿಎಲ್​ನ (IPL) ಜನಪ್ರಿಯತೆಯನ್ನು ಕಂಡು ಹಲವು ದೇಶಗಳಲ್ಲಿ ಟಿ20 ಲೀಗ್​ಗಳನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಕೆಲವು ದೇಶಗಳು ಕೊಂಚ ಲಾಭ ಮಾಡಿಕೊಂಡರೂ ಇನ್ನು ಕೆಲವು ದೇಶಗಳ ಲೀಗ್​ಗಳು ಲಾಭ ತಂದುಕೊಟ್ಟಿದ್ದಕ್ಕಿಂತ ಹೆಚ್ಚು ನಷ್ಟವನ್ನುಂಟು ಮಾಡಿದವು. ಅಂತಹ ಲೀಗ್​ಗಳಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (Bangladesh Premier League) ಕೂಡ ಒಂದು. ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಆರಂಭವಾದಗಿನಿಂದ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಲಾಭವಾಗಿದ್ದಕ್ಕಿಂತ ನಷ್ಟವಾಗಿದ್ದೇ ಹೆಚ್ಚು. ಇದರ ಜೊತೆಗೆ ಭ್ರಷ್ಟಚಾರ, ಮ್ಯಾಚ್ ಫಿಕ್ಸಿಂಗ್ ಭೂತ ಬಾಂಗ್ಲಾ ಪ್ರೀಮಿಯರ್ ಲೀಗ್​ ಅನ್ನು ಕಾಡುತ್ತಿದೆ. ಇದರಿಂದ ರೋಸಿ ಹೋಗಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು ಈ ಟಿ20 ಲೀಗ್ ಅನ್ನು ಈ ವರ್ಷ ನಡೆಸದಿರಲು ನಿರ್ಧರಿಸಿದೆ.

3.3 ಮಿಲಿಯನ್ ನಷ್ಟ

ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಅನ್ನು ಈ ವರ್ಷ ನಡೆಸಲಾಗುವುದಿಲ್ಲ ಎಂದು ಘೋಷಿಸಿದೆ. ಅಲ್ಲದೆ ಈ ಬಗ್ಗೆ ಮಾಹಿತಿ ನೀಡಿರುವ ಮಂಡಳಿಯ ಅಧ್ಯಕ್ಷ ತಮೀಮ್ ಇಕ್ಬಾಲ್, ಈ ಲೀಗ್ ಅನ್ನು ಕೆಲವು ಬದಲಾವಣೆಗಳನ್ನು ಮಾಡಿ ಮತ್ತೆ ಆರಂಭಿಸಲಾಗುವುದು. ಅಲ್ಲದೆ ಆಂತರಿಕ ಸಮಸ್ಯೆಗಳು ಬಗೆಹರಿದ ನಂತರವೇ ಲೀಗ್ ಅನ್ನು ಪುನರಾರಂಭಿಸಲಾಗುವುದು. ಕಳೆದ ಎರಡು ವರ್ಷಗಳಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಿಂದಾಗಿ ಮಂಡಳಿಯು 3.3 ಮಿಲಿಯನ್ ನಷ್ಟವನ್ನು ಅನುಭವಿಸಿದೆ.

ಬಿಪಿಎಲ್ ಒಂದು ಉತ್ತಮ ಪಂದ್ಯಾವಳಿ ಮತ್ತು ಜನರು ಇದನ್ನು ತುಂಬಾ ಇಷ್ಟಪಟ್ಟಿದ್ದಾರೆ. ನಾವು ಅದನ್ನು ಸರಿಯಾಗಿ ಆಯೋಜಿಸಲು ಸಾಧ್ಯವಾದರೆ, ಅದರ ಬಗ್ಗೆ ಆಸಕ್ತಿ ಇನ್ನಷ್ಟು ಹೆಚ್ಚಾಗುತ್ತದೆ. ಫ್ರಾಂಚೈಸ್ ಕ್ರಿಕೆಟ್ ಮಂಡಳಿಗೆ ಲಾಭದಾಯಕವಾಗಿರಬೇಕು, ನಷ್ಟವಾಗಬಾರದು. ಆದ್ದರಿಂದ, ನಾವು ಸಮಸ್ಯೆಗಳನ್ನು ಪರಿಹರಿಸುವವರೆಗೆ ನಷ್ಟದಲ್ಲಿರುವ ಪಂದ್ಯಾವಳಿಯನ್ನು ಸ್ಥಗಿತಗೊಳಿಸುವುದು ತಪ್ಪಲ್ಲ ಎಂದು ತಮೀಮ್ ಇಕ್ಬಾಲ್ ಹೇಳಿದ್ದಾರೆ.

IND vs SL: ಐಪಿಎಲ್‌ನಲ್ಲಿ ಆಡಿಸುವ ಆಮಿಷ; ವಿಕೆಟ್ ಕೈಚೆಲ್ಲಿದ ಲಂಕಾ ಬ್ಯಾಟರ್

2012 ರಲ್ಲಿ ಪ್ರಾರಂಭ

2012 ರಲ್ಲಿ ಪ್ರಾರಂಭವಾದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ 12 ಸೀಸನ್‌ಗಳನ್ನು ಆಡಲಾಗಿದೆ. ರಾಜಕೀಯ ಬಿಕ್ಕಟ್ಟಿನಿಂದಾಗಿ 2014 ರಲ್ಲಿ ಬಿಪಿಎಲ್ ನಡೆಯಲಿಲ್ಲ, ಹಾಗೆಯೇ 2020 ಮತ್ತು 2021 ಸೀಸನ್‌ಗಳನ್ನು ಕೊರೊನಾದಿಂದಾಗಿ ಮುಂದೂಡಲಾಯಿತು. ಈ ಲೀಗ್​ನ ಅತ್ಯಂತ ಯಶಸ್ವಿ ಬಿಪಿಎಲ್ ತಂಡವೆಂದರೆ ಕೊಮಿಲ್ಲಾ ವಿಕ್ಟೋರಿಯನ್ಸ್ ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದಿದ್ದರೆ, ಢಾಕಾ ಗ್ಲಾಡಿಯೇಟರ್ಸ್, ರಾಜ್‌ಶಾಹಿ ವಾರಿಯರ್ಸ್ ಮತ್ತು ಫಾರ್ಚೂನ್ ಬರಿಶಾಲ್ ತಲಾ ಎರಡು ಬಾರಿ ಟ್ರೋಫಿಯನ್ನು ಗೆದ್ದಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:32 pm, Fri, 21 August 26

Follow Us