IND vs BAN: ಭಾರತದ ವಿರುದ್ಧದ ಸರಣಿಗೆ ಬಲಿಷ್ಠ ಬಾಂಗ್ಲಾದೇಶ್ ತಂಡ ಪ್ರಕಟ

|

Updated on: Sep 12, 2024 | 1:01 PM

India vs Bangladesh: ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿರುವ ಬಾಂಗ್ಲಾದೇಶ್ ತಂಡವು ಇದೀಗ ಟೀಮ್ ಇಂಡಿಯಾ ವಿರುದ್ಧದ ಸರಣಿಗಾಗಿ ಸಜ್ಜಾಗುತ್ತಿದೆ. ಈ ಸರಣಿಗಾಗಿ ಪಾಕ್ ವಿರುದ್ಧ ಆಯ್ಕೆ ಮಾಡಲಾದ ತಂಡವನ್ನೇ ಮುಂದುವರೆಸಲಾಗಿದೆ. ಹೀಗಾಗಿ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿಯಲ್ಲಿ ಉತ್ತಮ ಪೈಪೋಟಿ ನಿರೀಕ್ಷಿಸಬಹುದು.

IND vs BAN: ಭಾರತದ ವಿರುದ್ಧದ ಸರಣಿಗೆ ಬಲಿಷ್ಠ ಬಾಂಗ್ಲಾದೇಶ್ ತಂಡ ಪ್ರಕಟ
IND vs BAN
Follow us on

ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಬಾಂಗ್ಲಾದೇಶ್ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರ ಈ ತಂಡವನ್ನು ನಜ್ಮುಲ್ ಹೊಸೈನ್ ಶಾಂತೊ ಮುನ್ನಡೆಸಲಿದ್ದಾರೆ. ಹಾಗೆಯೇ ತಂಡದಲ್ಲಿ ಅನುಭವಿ ಆಟಗಾರರಾಗಿ ಶಕೀಬ್ ಅಲ್ ಹಸನ್ ಹಾಗೂ ಮುಶ್ಫಿಕುರ್ ರಹೀಮ್ ಕಾಣಿಸಿಕೊಂಡಿದ್ದಾರೆ. ಇನ್ನು ಪಾಕಿಸ್ತಾನ್ ವಿರುದ್ಧದ ಟೆಸ್ಟ್​ನಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಲಿಟ್ಟನ್ ಕುಮಾರ್ ದಾಸ್ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆಯಾಗಿದ್ದಾರೆ.

ಮತ್ತೊಂದೆಡೆ ತೊಡೆಸಂಧು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬಾಂಗ್ಲಾ ವೇಗಿ ಶೋರಿಫುಲ್ ಇಸ್ಲಾಂ ಈ ಸರಣಿಯಿಂದ ಹೊರಗುಳಿಯಲಿದ್ದಾರೆ. ಅದರಂತೆ ಬಾಂಗ್ಲಾದೇಶ್ ಟೆಸ್ಟ್ ತಂಡ ಈ ಕೆಳಗಿನಂತಿದೆ..

ಬಾಂಗ್ಲಾದೇಶ್ ಟೆಸ್ಟ್ ತಂಡ: ನಜ್ಮುಲ್ ಹೊಸೈನ್ ಶಾಂತೊ (ನಾಯಕ), ಮಹಮ್ಮದುಲ್ ಹಸನ್ ಜಾಯ್, ಝಾಕಿರ್ ಹಸನ್, ಶದ್ಮಾನ್ ಇಸ್ಲಾಂ, ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟ್ಟನ್ ಕುಮಾರ್ ದಾಸ್, ಮೆಹಿದಿ ಹಸನ್ ಮಿರಾಝ್, ತೈಜುಲ್ ಇಸ್ಲಾಂ, ನಯೀಮ್ ಹಸನ್, ನಹಿದ್ ರಾಣಾ, ಹಸನ್ ಮಹಮ್ಮದ್, ತಸ್ಕಿನ್ ಅಹ್ಮದ್, ಸೈಯದ್ ಖಾಲಿದ್ ಅಹ್ಮದ್, ಜಾಕರ್ ಅಲಿ.

ಇದನ್ನೂ ಓದಿ: IPL 2025: ಈ ಸಲ ಕಪ್ ನಮ್ದೆ… ಇದುವೇ ಕೆಎಲ್ ರಾಹುಲ್ ಇಚ್ಛೆ..!

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಝ್ ಖಾನ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ , ಆಕಾಶ್ ದೀಪ್ ಮತ್ತು ಯಶ್ ದಯಾಳ್.

ಭಾರತ ಮತ್ತು ಬಾಂಗ್ಲಾದೇಶ್ ಸರಣಿ ಯಾವಾಗ ಶುರು?

ಭಾರತ-ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿಯು ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ 2 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತಿದ್ದು, ಇದಾದ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದೀಗ ಚೆನ್ನೈ ಹಾಗೂ ಕಾನ್ಪುರದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಗಳಿಗೆ ಭಾರತ ಮತ್ತು ಬಾಂಗ್ಲಾದೇಶ್ ತಂಡಗಳನ್ನು ಘೋಷಿಸಲಾಗಿದೆ.

ಭಾರತ vs ಬಾಂಗ್ಲಾದೇಶ್ ಸರಣಿ ವೇಳಾಪಟ್ಟಿ:

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟೆಸ್ಟ್, ಭಾರತ vs ಬಾಂಗ್ಲಾದೇಶ ಗುರುವಾರ, 19 ಸೆಪ್ಟೆಂಬರ್ 2024 9:30 AM ಚೆನ್ನೈ
2ನೇ ಟೆಸ್ಟ್, ಭಾರತ vs ಬಾಂಗ್ಲಾದೇಶ ಶುಕ್ರವಾರ, 27 ಸೆಪ್ಟೆಂಬರ್ 2024 9:30 AM ಕಾನ್ಪುರ
1ನೇ ಟಿ20, ಭಾರತ vs ಬಾಂಗ್ಲಾದೇಶ ಸೋಮವಾರ, 7 ಅಕ್ಟೋಬರ್ 2024 7 PM ಗ್ವಾಲಿಯರ್
2ನೇ ಟಿ20, ಭಾರತ vs ಬಾಂಗ್ಲಾದೇಶ ಗುರುವಾರ, 10 ಅಕ್ಟೋಬರ್ 2024 7 PM ದೆಹಲಿ
3ನೇ ಟಿ20, ಭಾರತ vs ಬಾಂಗ್ಲಾದೇಶ ಭಾನುವಾರ, 13 ಅಕ್ಟೋಬರ್ 2024 7 PM ಹೈದರಾಬಾದ್