ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಆತಿಥೇಯ ಬಾಂಗ್ಲಾದೇಶ ತಂಡ (Bangladesh vs New Zealand ) 3-2 ಅಂತರದಿಂದ ಗೆದ್ದು ಸರಣಿ ವಶಪಡಿಸಿಕೊಂಡಿದೆ. ಈ ಮೂಲಕ ವಿಶೇಷ ಸಾಧನೆ ಮಾಡಿದೆ. ನಿನ್ನೆ ಕೊನೆಗೊಂಡ ಅಂತಿಮ ಐದನೇ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್ 27 ರನ್ಗಳ ಗೆಲುವು ಸಾಧಿಸಿತು. ಆದರೂ ಬಾಂಗ್ಲಾ ಮೊದಲ ಪಂದ್ಯ, ಎರಡನೇ ಮತ್ತು ನಾಲ್ಕನೇ ಪಂದ್ಯದಲ್ಲಿ ಗೆದ್ದು ಬೀಗುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ.
ಶುಕ್ರವಾರ ನಡೆದ ಐದನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಓಪನರ್ಗಳಾದ ಫಿಲ್ ಅಲೆನ್ (41) ಹಾಗೂ ರಚಿನಾ ರವೀಂದ್ರ (17) ಅರ್ಧಶತಕದ ಭರ್ಜರಿ ಆರಂಭ ಒದಗಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಟಾಮ್ ಲಾಥಮ್ ಅಜೇಯ ಆಟವಾಡಿದರು. 37 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಸಿಡಿಸಿ ಅಜೇಯ 50 ರನ್ ಬಾರಿಸಿದರು.
ಆದರೆ, ಇದರ ನಡುವೆ ಬಂದ ಬ್ಯಾಟ್ಸ್ಮನ್ಗಳು ಯಾರೂ ಹೆಚ್ಚು ಪರಿಣಾಮಕಾರಿಯಾಗಿ ಗೋಚರಿಸಿಲ್ಲ. ಅಂತಿಮ ಹಂತದಲ್ಲಿ ಹೆನ್ರಿ ನಿಕೋಲ್ಸ್ 20 ಹಾಗೂ ಮೆಕ್ ಕಾನ್ಚಿ ಅಜೇಯ 17 ರನ್ ಬಾರಿಸಿದರು. ಪರಿಣಾಮ ಇಂಗ್ಲೆಂಡ್ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿತು.
ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾದೇಶ ಈ ಬಾರಿ ನಿಧಾನಗತಿಯ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಮೊಹಮ್ಮದ್ ನೈಮ್ 21 ಎಸೆತಗಳಲ್ಲಿ 23 ರನ್ ಹಾಗೂ ಲಿಟನ್ ದಾಸ್ 12 ಎಸೆತಗಳಲ್ಲಿ 10 ರನ್ ಗಳಿಸಿ ಔಟ್ ಆದರು.
ಮಧ್ಯಮ ಕ್ರಮಾಂಕದಲ್ಲಿ ಅಸಿಫ್ ಹುಸೈನ್ 33 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಬಾರಿಸಿ ಅಜೇಯ 49 ರನ್ ಸಿಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾಯಕ ಮೊಹಮ್ಮದುಲ್ಲಾ 23 ರನ್ ಕೂಡ ಉಪಯೋಗಕ್ಕೆ ಬರಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ 8 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ನ್ಯೂಜಿಲೆಂಡ್ ಐದನೇ ಟಿ-20 ಪಂದ್ಯದಲ್ಲಿ 27 ರನ್ಗಳ ಗೆಲುವು ಸಾಧಿಸಿತಾದರೂ ಬಾಂಗ್ಲಾ 2-3 ಅಂತರದ ಮುನ್ನಡೆಯಿದ್ದರಿಂದ ಸರಣಿ ವಶಪಡಿಸಿಕೊಂಡಿತು. ಈ ಮೂಲಕ ಬಾಂಗ್ಲಾದೇಶ ಒಂದೇ ತಿಂಗಳಲ್ಲಿ 3 ಸರಣಿಯನ್ನ ವಶಪಡಿಸಿಕೊಂಡು ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ.
ಇದಕ್ಕೂ ಮುನ್ನ ಬಾಂಗ್ಲಾದೇಶ ಟಿ-20 ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಈ ವೇಳೆ 3-0 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಬಾಂಗ್ಲಾ ಹುಲಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಇನ್ನೂ ಈ ಟೂರ್ನಿಯ ನಂತರ ತವರಿನಲ್ಲೇ ಆಸ್ಪ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಬಾಂಗ್ಲಾದೇಶ 4-1 ಅಂತರದಲ್ಲಿ ಭಾರೀ ಜಯಭೇರಿ ಭಾರಿಸಿತ್ತು.
Virat Kohli: ಟೆಸ್ಟ್ ಪಂದ್ಯ ರದ್ದು: ವಿರಾಟ್ ಕೊಹ್ಲಿಗಾಗಿ ಮ್ಯಾಂಚೆಸ್ಟರ್ಗೆ ಬರಲಿದೆ ಆರ್ಸಿಬಿಯ ವಿಶೇಷ ವಿಮಾನ
India vs England: ಬಿಸಿಸಿಐಗೆ ತಲೆನೋವಾದ ರೋಹಿತ್, ಜಡೇಜಾ ಸೇರಿ ಟೀಮ್ ಇಂಡಿಯಾದ 6 ಸ್ಟಾರ್ ಆಟಗಾರರು