- Kannada News Photo gallery Cricket photos Icc t20 world cup the surprising packages of all teams squads
T20 World Cup 2021: 12 ತಂಡಗಳಲ್ಲಿ 12 ಆಟಗಾರರು: ಟಿ20 ವಿಶ್ವಕಪ್ ತಂಡಗಳ ಅಚ್ಚರಿಯ ಆಯ್ಕೆಗಳು
ಟಿ20 ವಿಶ್ವಕಪ್ ಗೆ ಅಫ್ಘಾನಿಸ್ತಾನ ಆಯ್ಕೆ ಮಾಡಿರುವ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ಶಹಜಾದ್ ಅವರು ಸ್ಥಾನ ಪಡೆದಿದ್ದಾರೆ.
Updated on: Sep 11, 2021 | 2:40 PM

ದುಬೈನಲ್ಲಿ ಇಂದು (ನವೆಂಬರ್ 14) ನಡೆಯಲಿರುವ 7ನೇ ಆವೃತ್ತಿ ಟಿ20 ವಿಶ್ವಕಪ್ನ ಫೈನಲ್ನಲ್ಲಿ ನ್ಯೂಜಿಲೆಂಡ್-ಆಸ್ಟ್ರೇಲಿಯಾ ಮುಖಾಮುಖಿಯಾಗಲಿದ್ದು, ಈ ಬಾರಿ ಯಾರು ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರೆ ಕಾದು ನೋಡಬೇಕಿದೆ.

ರವಿಚಂದ್ರನ್ ಅಶ್ವಿನ್: ಭಾರತದ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಏಕೆಂದರೆ ಅಶ್ವಿನ್ ಟಿ20 ತಂಡದಿಂದ ಹೊರಬಿದ್ದಿದ್ದು ಅದಾಗಲೇ 4 ವರ್ಷಗಳಾಗಿತ್ತು. ಅದಾಗ್ಯೂ ಟೀಮ್ ಇಂಡಿಯಾ ಆಯ್ಕೆ ಸಮಿತಿ ಅನುಭವಕ್ಕೆ ಮಣೆಹಾಕಿ ಅಶ್ವಿನ್ ಅವರನ್ನು ಆಯ್ಕೆ ಮಾಡಿದೆ. ಟೀಮ್ ಇಂಡಿಯಾ ಪರ ಇದುವರೆಗೆ 46 ಟಿ20 ಪಂದ್ಯಗಳನ್ನು ಆಡಿರುವ ಅಶ್ವಿನ್ 52 ವಿಕೆಟ್ ಪಡೆದಿದ್ದಾರೆ.

ರಯಾನ್ ಟೆನ್: ನೆದರ್‌ಲ್ಯಾಂಡ್ಸ್ ತಂಡವು ತಮ್ಮ 41 ವರ್ಷದ ಅನುಭವಿ ಆಟಗಾರ ರಯಾನ್ ಟೆನ್ ಅವರಿಗೆ ಸ್ಥಾನ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಸಾಮಾನ್ಯವಾಗಿ ಯುವ ಕ್ರಿಕೆಟಿಗ ಫಾರ್ಮಾಟ್ ಎನ್ನಲಾಗುವ ಟಿ20 ಯಲ್ಲಿ ರಯಾನ್ ಅದ್ಭುತ ಪ್ರದರ್ಶನ ನೀಡುತ್ತಿರುವುದು ಅವರ ಆಯ್ಕೆಗೆ ಕಾರಣ. ಅದರಲ್ಲೂ 2019 ರಲ್ಲಿ ನಡೆದ ಟಿ20 ವಿಶ್ವಕಪ್ ಕ್ವಾಲಿಫೈಯರ್‌ನಲ್ಲಿ ರಯಾನ್ ತಮ್ಮ ತಂಡದ ಪರ ಎರಡನೇ ಅತಿ ಹೆಚ್ಚು ರನ್ ಆಟಗಾರರಾಗಿದ್ದರು. ಹೀಗಾಗಿ ವಯಸ್ಸನ್ನು ಬದಿಗಿರಿಸಿ ರಯಾನ್ ಟೆನ್ಗೆ ಅವಕಾಶ ನೀಡಲಾಗಿದೆ.

ಡೇವಿಡ್ ವೈಸ್: ಅರ್ಹತಾ ಸುತ್ತಿನಲ್ಲಿ ಆಡುತ್ತಿರುವ ನಮೀಬಿಯಾ ತಂಡದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದಾರೆ. ಹೌದು, ಸೌತ್ ಆಫ್ರಿಕಾದ ಮಾಜಿ ಆಟಗಾರ ಡೇವಿಡ್ ವೈಸ್ ಈಗ ನಮೀಬಿಯಾ ಪರ ಆಡುತ್ತಿದ್ದಾರೆ. ಆಲ್ ರೌಂಡರ್ ಆಗಿರುವ ವೈಸ್ ಆರು ಏಕದಿನ ಮತ್ತು 20 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದೀಗ ನಮೀಯಾ ತಂಡದ ಅನುಭವಿ ಆಟಗಾರನಾಗಿ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ.

ಜೋಶ್ ಇಂಗ್ಲಿಸ್: ಆಸ್ಟ್ರೇಲಿಯಾದ ಟಿ20 ವಿಶ್ವಕಪ್ ತಂಡದಲ್ಲಿ ಜೋಶ್ ಇಂಗ್ಲಿಸ್ ಸ್ಥಾನ ಪಡೆದಿದ್ದಾರೆ. ಅತ್ತ ಅಲೆಕ್ಸ್ ಕ್ಯಾರಿಯನ್ನು ಕೈ ಬಿಟ್ಟಿರುವ ಆಸ್ಟ್ರೇಲಿಯಾ ಯುವ ದಾಂಡಿಗ ಜೋಶ್ ಇಂಗ್ಲಿಸ್ಗೆ ಸ್ಥಾನ ನೀಡಿದೆ. ಅಂದಹಾಗೆ ಆಸ್ಟ್ರೇಲಿಯಾ ತಂಡದಲ್ಲಿ ಇದೇ ಮೊದಲ ಬಾರಿಗೆ ಜೋಶ್ ಇಂಗ್ಲಿಸ್ ಸ್ಥಾನ ಪಡೆದಿದ್ದಾರೆ.

ರವಿ ರಾಂಪಾಲ್: 6 ವರ್ಷಗಳ ನಂತರ, 36 ವರ್ಷ ವಯಸ್ಸಿನ ರವಿ ರಾಂಪಾಲ್ ವೆಸ್ಟ್ ಇಂಡೀಸ್ ತಂಡಕ್ಕೆ ಮರಳಿದ್ದಾರೆ. ಟಿ20 ವಿಶ್ವಕಪ್‌ಗೆ ಆಯ್ಕೆಯಾದ ರವಿ ರಾಂಪಾಲ್ ಕೊನೆಯ ಬಾರಿ 2015ರಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಇದೀಗ ಸಿಪಿಎಲ್ನ ಅದ್ಭುತ ಫಾರ್ಮ್ ಪರಿಗಣಿಸಿ ರಾಂಪಾಲ್ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಕೇಶವ್ ಮಹಾರಾಜ್: ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಶುಕ್ರವಾರ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಇದರ ಬೆನ್ನಲ್ಲೇ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಟೈಮಲ್ ಮಿಲ್ಸ್: ಇಂಗ್ಲೆಂಡ್ ವೇಗದ ಬೌಲರ್ ಟೈಮಲ್ ಮಿಲ್ಸ್ ಇಯೊನ್ ಮಾರ್ಗನ್ ನೇತೃತ್ವದ ತಂಡಕ್ಕೆ ಮರಳಿದ್ದಾರೆ. ಟಿ20 ಬ್ಲಾಸ್ಟ್‌ನ ಫೈನಲ್‌ಗೆ ಸಸೆಕ್ಸ್ ಪರ ಮಿಂಚಿದ್ದ ಮಿಲ್ಸ್, ದಿ ಹಂಡ್ರೆಡ್ ಲೀಗ್ನಲ್ಲಿ ' ಸದರ್ನ್ ಬ್ರೇವ್ಸ್‌ಗೆ ಪ್ರಶಸ್ತಿ ಗೆಲ್ಲುವಲ್ಲಿ ಮಿಲ್ಸ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಸೌಮ್ಯ ಸರ್ಕಾರ್: ಬಾಂಗ್ಲಾದೇಶ ಟಿ20 ತಂಡದಲ್ಲಿ ಸೌಮ್ಯ ಸರ್ಕಾರ್ ಸ್ಥಾನ ಪಡೆದಿದ್ದಾರೆ. ಕಳೆದ ಕೆಲ ಸರಣಿಗಳಿಂದ ಕಳಪೆ ಫಾರ್ಮ್ ಪ್ರದರ್ಶಿಸುತ್ತಿರುವ ಸರ್ಕಾರ್ ಆಯ್ಕೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇದಾಗ್ಯೂ ಉತ್ತಮ ಫಾರ್ಮ್ನಲ್ಲಿರುವ ರೂಬೆಲ್ ಹೊಸೈನ್ ಅವರನ್ನು ಮೀಸಲು ಆಟಗಾರನಾಗಿ ಆಯ್ಕೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಖುಷ್ದಿಲ್ ಶಾ: ದೇಶೀಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಸಿಫ್ ಅಲಿ ಮತ್ತು ಖುಷ್ದಿಲ್ ಶಾ ಅವರಿಗೆ ಪಾಕಿಸ್ತಾನ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಎಡಗೈ ಬ್ಯಾಟ್ಸ್‌ಮನ್ ಖುಷ್ದಿಲ್ ಶಾ ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ತವರು ಸರಣಿಯಲ್ಲಿ ತಮ್ಮ ಕೊನೆಯ ಟಿ20 ಪಂದ್ಯವನ್ನು ಆಡಿದರು. ಇದುವರೆಗೆ 9 ಟಿ20 ಪಂದ್ಯಗಳನ್ನು ಆಡಿರುವ ಖುಷ್ಧಿಲ್ ಕಲೆಹಾಕಿರುವುದು ಕೇವಲ 130 ರನ್ ಮಾತ್ರ. ಇದಾಗ್ಯೂ ಪಾಕ್ ತಂಡದಲ್ಲಿ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದಾರೆ.

ಮೊಹಮ್ಮದ್ ಶಹಜಾದ್: ಟಿ 20 ವಿಶ್ವಕಪ್ ಗೆ ಅಫ್ಘಾನಿಸ್ತಾನ ಆಯ್ಕೆ ಮಾಡಿರುವ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ಶಹಜಾದ್ ಅವರು ಸ್ಥಾನ ಪಡೆದಿದ್ದಾರೆ. ಶಹಜಾದ್ ಎರಡು ವರ್ಷಗಳಿಂದ ತಂಡದಿಂದ ಹೊರಗುಳಿದಿದ್ದರು. ಇಂಗ್ಲೆಂಡ್‌ನಲ್ಲಿ ನಡೆದ 2019 ರ ವಿಶ್ವಕಪ್ ಬಳಿಕ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಇದೀಗ ಟಿ20 ವಿಶ್ವಕಪ್ ಮೂಲಕ ಮತ್ತೆ ತಂಡಕ್ಕೆ ಮರಳಿದ್ದಾರೆ.

ಮಹಿಶ್ ತೀಕ್ಷ್ಣ: ಶ್ರೀಲಂಕಾದ ವಿಶ್ವಕಪ್ ತಂಡದಲ್ಲಿ ಅತ್ಯಂತ ಆಶ್ಚರ್ಯಕರ ಹೆಸರೆಂದರೆ ಮಹಿಶ್ ತೀಕ್ಷ್ಣ. ದೇಶೀಯ ಅಂಗಳದಲ್ಲಿ ಮಿಸ್ಟರಿ ಸ್ಪಿನ್ನರ್ ಆಗಿರುವ ಗುರುತಿಸಿಕೊಂಡಿರುವ ಮಹಿಶ್ ಈ ಹಿಂದೆ ಶ್ರೀಲಂಕಾ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದಾಗ್ಯೂ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಇದೀಗ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಟಾಡ್ ಆಸ್ಟ್ಲೆ: ನ್ಯೂಜಿಲ್ಯಾಂಡ್ ತನ್ನ ಟಿ20 ವಿಶ್ವಕಪ್ ತಂಡದಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಆಡಿದ ಟಾಡ್ ಆಸ್ಟ್ಲೆ ಸ್ಥಾನ ಪಡೆದಿದ್ದಾರೆ. 2016 ರಲ್ಲಿ ಪಾದಾರ್ಪಣೆ ಮಾಡಿದರೂ, ಅಂದಿನಿಂದಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ ನ್ಯೂಜಿಲೆಂಡ್ ಪರ ಆಡಿದ್ದರು. ಇದಾಗ್ಯೂ ಪ್ರಮುಖ ಟೂರ್ನಿಗೆ ಆಯ್ಕೆಯಾಗುವಲ್ಲಿ ಟಾಡ್ ಆಸ್ಟ್ಲೆ ಯಶಸ್ವಿಯಾಗಿದ್ದಾರೆ.



















