India vs England: ಬಿಸಿಸಿಐಗೆ ತಲೆನೋವಾದ ರೋಹಿತ್, ಜಡೇಜಾ ಸೇರಿ ಟೀಮ್ ಇಂಡಿಯಾದ 6 ಸ್ಟಾರ್ ಆಟಗಾರರು

TV9 Digital Desk

| Edited By: Vinay Bhat

Updated on: Sep 11, 2021 | 8:42 AM

ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಚೇತೇಶ್ವರ್ ಪೂಜಾರ, ಮೊಹಮ್ಮದ್ ಶಮಿ ಸಂಕಷ್ಟಕ್ಕೆ ಸಿಲುಕಿದ್ದು, ಬಿಸಿಸಿಐ ಸೂಕ್ಷ್ಮವಾಗಿ ಇವರನ್ನು ಗಮನಿಸುತ್ತಿದೆ.

India vs England: ಬಿಸಿಸಿಐಗೆ ತಲೆನೋವಾದ ರೋಹಿತ್, ಜಡೇಜಾ ಸೇರಿ ಟೀಮ್ ಇಂಡಿಯಾದ 6 ಸ್ಟಾರ್ ಆಟಗಾರರು
Team India

ಮ್ಯಾಂಚೆಸ್ಟರ್​ನಲ್ಲಿ ಸೆ. 10 ಶುಕ್ರವಾರದಂದು ಆರಂಭವಾಗಬೇಕಿದ್ದ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಅಂತಿಮ ಐದನೇ ಟೆಸ್ಟ್ (5th test) ಪಂದ್ಯ ರದ್ದಾಗಿರುವುದು ಬಿಸಿಸಿಐಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಿರಾಟ್ ಕೊಹ್ಲಿ (Virat Kohli) ಹಾಗೂ ತಂಡ ಕೊನೆಯ ಕ್ಷಣಗಳಲ್ಲಿ ಕೋವಿಡ್-19 (Covid 19) ಸೋಂಕು ಹರಡುವ ಆತಂಕ ವ್ಯಕ್ತಪಡಿಸಿದ್ದರಿಂದಾಗಿ ಪಂದ್ಯ ರದ್ದುಗೊಳಿಸಲು ಬಿಗಿ ಪಟ್ಟು ಹಿಡಿದಿದ್ದರಿಂದ ಇಸಿಬಿಯೊಂದಿಗೆ ಚರ್ಚಿಸಿ ಬಿಸಿಸಿಐ ಪಂದ್ಯ ರದ್ದುಗೊಳಿಸಿದೆ. ಇದರ ಬೆನ್ನಲ್ಲೇ ಮತ್ತೊಂದು ಸಂಕಷ್ಟ ಕೂಡ ಎದುರಾಗಿದೆ. ರೋಹಿತ್ ಶರ್ಮಾ (Rohit Sharma), ರವೀಂದ್ರ ಜಡೇಜಾ ಸೇರಿ ಟೀಮ್ ಇಂಡಿಯಾದ ಒಟ್ಟು 6 ಆಟಗಾರರ ಮೇಲೆ ಬಿಸಿಸಿಐ ಹದ್ದಿನ ಕಣ್ಣಿಟ್ಟಿದೆ.

ಹೌದು, ನಾಲ್ಕನೇ ಟೆಸ್ಟ್‌ ಪಂದ್ಯದ ವೇಳೆ ಟೀಮ್ ಇಂಡಿಯಾದ ಮುಖ್ಯ ಕೋಚ್‌ ರವಿ ಶಾಸ್ತ್ರಿ, ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಆರ್‌ ಶ್ರೀಧರ್‌ ಅವರಿಗೆ ಕೋವಿಡ್‌-19 ಪಾಸಿಟಿವ್ ಬಂದಿತ್ತು. ಇದರ ನಡುವೆ ಇನ್ನೇನೇ ಶುಕ್ರವಾರ ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಮ್ಯಾಂಚೆಸ್ಟರ್‌ನಲ್ಲಿ ಐದನೇ ಟೆಸ್ಟ್‌ ಆರಂಭವಾಗಬೇಕಿತ್ತು. ಆದರೆ, ಗುರುವಾರ ಟೀಮ್‌ ಇಂಡಿಯಾ ಕ್ಯಾಂಪ್‌ನಲ್ಲಿ ಮತ್ತೊಂದು ಕೋವಿಡ್‌ -19 ಪ್ರಕರಣ ದಾಖಲಾಯಿತು. ಫಿಜಿಯೋ ಯೋಗೇಶ್‌ ಪರ್ಮಾರ್‌ ಅವರಿಗೆ ಸೋಂಕು ತಗುಲಿದ್ದು, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಯಿತು.

ಹೀಗಾಗಿ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಚೇತೇಶ್ವರ್ ಪೂಜಾರ, ಮೊಹಮ್ಮದ್ ಶಮಿ ಸಂಕಷ್ಟಕ್ಕೆ ಸಿಲುಕಿದ್ದು, ಬಿಸಿಸಿಐ ಸೂಕ್ಷ್ಮವಾಗಿ ಇವರನ್ನು ಗಮನಿಸುತ್ತಿದೆ. ಈಗಗಲೇ ತಿಳಿದಿರುವಂತೆ ಭಾರತ ತಂಡ ಇದ್ದ ಹೋಟೆಲ್​ನಲ್ಲಿ ರವಿಶಾಸ್ತ್ರಿ ಅವರಿಂದ ಪುಸ್ತಕ ಬಿಡುಗಡೆ ಸಮಾರಂಭ ನಡೆದಿತ್ತು. ಇಲ್ಲಿಗೆ ಹೊರಗಿನಿಂದ ಅತಿಥಿಗಳು ಬಂದಿದ್ದರು. ಇಲ್ಲಿಯೇ ರವಿಶಾಸ್ತ್ರಿ ಅವರಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಮೊಹಮ್ಮದ್ ಸಿರಾಜ್ ಕೂಡ ಹಾಜರಾಗಿದ್ದರು. ಇತ್ತ ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಇಂಜುರಿಗೆ ತುತ್ತಾಗಿದ್ದ ಪರಿಣಾಮ ಫಿಜಿಯೋ ಯೋಗೇಶ್‌ ಪರ್ಮಾರ್‌ ಅವರೊಂದಿಗೆ ಇದ್ದರು. ಫಿಜಿಯೋ ಯೋಗೇಶ್‌ ಅವರಿಗೆ ಕೊರೊನಾ ಬಂದ ಕಾರಣ ಸದ್ಯ ಈ ಎಲ್ಲ ಆಟಗಾರರ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ.

ಇನ್ನೂ ರದ್ದಾಗಿರುವ ಅಂತಿಮ ಟೆಸ್ಟ್ ಯಾವಾಗ ನಡೆಯಲಿದೆ ಎಂಬುದು ಅಂತಕಮವಾಗಿಲ್ಲ. ಹೀಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಸೆಪ್ಟೆಂಬರ್‌ 22 ಅಥವಾ 23ರಂದು ಇಂಗ್ಲೆಂಡ್ ಆಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಾಮ್ ಹ್ಯಾರಿಸನ್ ಮತ್ತು ಐಯಾನ್ ವಾಟ್‌ಮೋರ್ ಅವರನ್ನು ಭೇಟಿಯಾಗಿ9 ಚರ್ಚಿಸಲಿದ್ದಾರೆ.

ಸೆಪ್ಟೆಂಬರ್‌ 22ರಿಂದ ವೈಯಕ್ತಿಕ ವಿಚಾರವಾಗಿ ಯುನೈಟೆಡ್ ಕಿಂಗ್ಡಮ್‌ಗೆ ಬರಲಿರುವ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಟಾಮ್ ಹ್ಯಾರಿಸನ್ ಮತ್ತು ಐಯಾನ್ ವಾಟ್‌ಮೋರ್ ಅವರನ್ನು ಭೇಟಿಯಾಗಿ ಮುಂದಿನ ವರ್ಷ ಉಳಿದಿರುವ ಈ ಒಂದು ಟೆಸ್ಟ್‌ ಪಂದ್ಯವನ್ನು ನಡೆಸಲು ಅವಕಾಶವಿದೆಯೇ ಎಂದು ಚರ್ಚಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

India vs England: ಭಾರತ-ಇಂಗ್ಲೆಂಡ್ 5ನೇ ಟೆಸ್ಟ್ ರದ್ದಾಗಲು ಕೋವಿಡ್ ಕಾರಣವಲ್ಲ: ಇಲ್ಲಿದೆ ನೋಡಿ ಅಸಲಿ ವಿಚಾರ

ಮಹೇಂದ್ರ ಸಿಂಗ್ ಧೋನಿಯನ್ನು ಮೆಂಟರ್ ಆಗಿ ನೇಮಕ ಮಾಡಿರುವುದು ಒಳ್ಳೆಯ ಕ್ರಮವೆಂದ ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್

(India vs England Include Rohit Sharma and Jadeja BCCI and franchises to keep close eye on these top players)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada