ಮಹೇಂದ್ರ ಸಿಂಗ್ ಧೋನಿಯನ್ನು ಮೆಂಟರ್ ಆಗಿ ನೇಮಕ ಮಾಡಿರುವುದು ಒಳ್ಳೆಯ ಕ್ರಮವೆಂದ ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್

ಧೋನಿ ಕೇವಲ ಒಂದು ವರ್ಷದ ಹಿಂದೆ ಮಾತ್ರ ಅಂತರರಾಷ್ಟ್ರೀಯ ಸೀಮಿತ ಓವರ್ಗಳ ಕ್ರಿಕೆಟ್ ಗೆ ವಿದಾಯ ಹೇಳಿ ಈಗ ಪುನಃ ರಾಷ್ಟ್ರೀಯ ಕ್ರಿಕೆಟ್ ಸೆಟಪ್​ಗೆ  ವಾಪಸ್ಸಾಗಿರುವುದರಿಂದ ಅವರನ್ನು ಮೆಂಟರ್ ಅಗಿ ನೇಮಕ ಮಾಡಿರುವುದು ವಿಶೇಷ ಪ್ರಕರಣವಾಗಿದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಮಹೇಂದ್ರ ಸಿಂಗ್ ಧೋನಿಯನ್ನು ಮೆಂಟರ್ ಆಗಿ ನೇಮಕ ಮಾಡಿರುವುದು ಒಳ್ಳೆಯ ಕ್ರಮವೆಂದ ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್
ಕಪಿಲ್ ದೇವ್ ಮತ್ತು ಎಮ್​ ಎಸ್​ ಧೋನಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 11, 2021 | 1:45 AM

ಭಾರತೀಯ ಕ್ರಿಕೆಟ್ ಟೀಮಿನ ಮಾಜಿ ನಾಯಕ ಮತ್ತು ಇಂಡಿಯನ್ ಪ್ರಿಮೀಯರ್ ಲೀಗ್ ಫ್ರಾಂಚೈಸಿ ಚೆನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇದ್ರ ಸಿಂಗ್ ಧೋನಿ ಅವರನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಭಾರತೀಯ ಟೀಮಿನ ಮೆಂಟರ್ ಆಗಿ ಆಯ್ಕೆ ಮಾಡಿರುವುದು ಕೆಲವರು ಹುಬ್ಬೇರಿಸುವಂತೆ ಮಾಡಿದ್ದರೆ, ಮತ್ತೇ ಕೆಲವರು ಈ ನಡೆಯನ್ನು ಸ್ವಾಗತಿಸಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕ್ರಮವನ್ನು ಸ್ವಾಗತಿಸಿದವರಲ್ಲಿ ಭಾರತಕ್ಕೆ ಮೊಟ್ಟಮೊದಲ ಬಾರಿಗೆ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್ ದೇವ್ ನಿಖಂಜ್ ಒಬ್ಬರಾಗಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಕೇವಲ ಒಂದು ವರ್ಷದ ಹಿಂದೆ ಮಾತ್ರ ಅಂತರರಾಷ್ಟ್ರೀಯ ಸೀಮಿತ ಓವರ್ಗಳ ಕ್ರಿಕೆಟ್ ಗೆ ವಿದಾಯ ಹೇಳಿ ಈಗ ಪುನಃ ರಾಷ್ಟ್ರೀಯ ಕ್ರಿಕೆಟ್ ಸೆಟಪ್​ಗೆ  ವಾಪಸ್ಸಾಗಿರುವುದರಿಂದ ಅವರನ್ನು ಮೆಂಟರ್ ಅಗಿ ನೇಮಕ ಮಾಡಿರುವುದು ವಿಶೇಷ ಪ್ರಕರಣವಾಗಿದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಶುಕ್ರವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಗವಹಿಸಿ ಮಾತಾಡಿದ ಕಪಿಲ್ ದೇವ್ ಅವರು, ‘ಭಾರತಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಸೇವೆ ಸಲ್ಲಿಸಿದ ಆಟಗಾರನೊಬ್ಬನನ್ನು ಪುನಃ ರಾಷ್ಟ್ರೀಯ ಸೆಟಪ್​ನಲ್ಲಿ ಯಾವುದಾದರೊಂದು ಜವಾಬ್ದಾರಿ ನೀಡಿ ವಾಪಸ್ಸು ತರಬೇಕಾದರೆ ಕನಿಷ್ಟ ಮೂರ್ನಾಲ್ಕು ವರ್ಷಗಳ ಅಂತರವಿರಬೇಕು. ಅದರೆ ಧೋನಿಯನ್ನು ಕೇವಲ ಒಂದು ವರ್ಷದ ನಂತರ ವಾಪಸ್ಸು ತಂದಿರೋದು ಒಂದು ವಿಶೇಷ ಪ್ರಕರಣವಾಗಿದೆ ಅಂತ ನಾನು ಹೇಳುತ್ತಿದ್ದೇನೆ,’ ಅಂತ ಹಿಂದೊಮ್ಮೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡಿದ್ದ ಕಪಿಲ್ ಹೇಳಿದರು.

‘ಆದರೆ, ಕ್ರಿಕೆಟ್ ಮಂಡಳಿಯ ನಿರ್ಧಾರ ಸ್ವಾಗತಾರ್ಹವಾಗಿದೆ. ವಿಶ್ವಕಪ್ ಬಹಳ ದೂರವೇನೂ ಇಲ್ಲ ಮತ್ತು ಹೆಡ್ ಕೋಚ್ ರವಿ ಶಾಸ್ತ್ರಿ ಸಹ ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಧೋನಿ ಅವರನ್ನು ಮೆಂಟರ್ ಆಗಿ ನೇಮಕ ಮಾಡಿರುವುದು, ಒಂದು ಉತ್ತಮ ಕ್ರಮ’ ಎಂದು ಕಪಿಲ್ ಹೇಳಿದರು.

ಸೌರವ್ ಗಂಗೂಲಿ ಅಧ್ಯಕ್ಷರಾಗಿರುವ ಬಿಸಿಸಿಯ ಬುಧವಾರದಂದು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಹವಹಿಸುವ ಟೀಮಿನ ಆಟಗಾರರ ಹೆಸರನ್ನು ಪ್ರಕಟಿಸಿದ ನಂತರ ಧೋನಿ ಅವರು ಮೆಂಟರ್ ಅಗಿ ಟೀಮಿನೊಂದಿಗೆ ಹೋಗಲಿದ್ದಾರೆ ಎಂದು ಘೋಷಿಸಿ ಕ್ರಿಕೆಟ್ ಪ್ರೇಮಿಗಳನ್ನು ಆಶ್ಚರ್ಯಚಕಿತರನ್ನಾಗಿಸಿತು.

ಧೋನಿ ಅವರನ್ನು ಆಯ್ಕೆ ಮಾಡಿರುವುದಕ್ಕೆ ಕಾರಣಗಳು ಹಲವಿರಬಹುದು. ಅದರೆ, ಅವರ ಜವಾಬ್ದಾರಿಯ ಸ್ವರೂಪ ಹೇಗಿರುತ್ತದೆ ಅನ್ನೋದು ಗೊಂದಲ ಹುಟ್ಟಿಸುತ್ತಿದೆ. ಯಾಕೆಂದರೆ ಟೀಮಿನ ಹೆಡ್ ಕೋಚ್ ರವಿ ಶಾಸ್ತ್ರೀ ಅವರಿರುತ್ತಾರೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ವಿಭಾಗಗಳಿಗೆ ಬೇರೆ ಬೇರೆ ಕೋಚ್ಗಳಿದ್ದಾರೆ. ಕೋಚ್ ಗಳಾಗಲೀ, ಮೆಂಟರ್ಗಳಾಗಲೀ ಮೈದಾನದ ಹೊರಗಡೆ ಮಾತ್ರ ಕರ್ತವ್ಯ ನಿರ್ವಹಿಸಬೇಕು. ಈ ಹಿನ್ನೆಲೆಯಲ್ಲಿ ಮೆಂಟರ್ ಮತ್ತು ಹೆಡ್ ಕೋಚ್ ನಡುವೆ ಹೆಚ್ಚಿನ ಸಮನ್ವಯತೆ ಬೇಕಾಗುತ್ತದೆ. ಹೆಡ್ ಕೋಚ್ ಮತ್ತು ಮೆಂಟರ್-ಈ ಜವಾಬ್ದಾರಿಗಳು ಹೇಗೆ ಒಂದು ಮತ್ತೊಂದಕ್ಕಿಂತ ಭಿನ್ನ ಅನ್ನೋದರ ಬಗ್ಗೆಯೂ ಗೊಂದಲವಿದೆ.

ವಿರಾಟ್ ಕೊಹ್ಲಿ- ರವಿ ಶಾಸ್ತ್ರೀ ನಡುವೆ ಒಳ್ಳೆಯ ಹೊಂದಾಣಿಕೆ ಇದೆ. ಅದರಲ್ಲೇನೂ ಸಂಶಯವಿಲ್ಲ. ಹಾಗೆಯೇ, ಕೊಹ್ಲಿ ಮತ್ತು ಧೋನಿ ನಡುವೆಯೂ ಅದ್ಭುತವಾದ ಕೆಮಿಸ್ಟ್ರಿ ಇದೆ. ಹಾಗಾಗಿ, ಯಾವುದೋ ಸಂದರ್ಭದಲ್ಲಿ ರವಿ ಶಾಸ್ತ್ರೀ ಮತ್ತು ಧೋನಿ ಬೇರೆ ಬೇರೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಕೊಹ್ಲಿ ಇಬ್ಬಂದಿತನಕ್ಕೆ ಬೀಳಬೇಕಾಗುತ್ತದೆ. ಶಾಸ್ತ್ರೀ ಮತ್ತು ಧೋನಿಯ ನಡುವೆ ಸಂಬಂಧ ಚೆನ್ನಾಗಿಯೇ ಇದ್ದೀತು, ಅದರೆ ನಿರ್ಧಾರಗಳನ್ನು ತೆಗೆದುಕೊಳ್ಳವುವಾಗ ಒಮ್ಮತದ ಅಗತ್ಯವಿರುತ್ತದೆ. ನಾನು ಹೇಳಿದ್ದೇ ಸರಿ ಅಂತ ಇಬ್ಬರಲ್ಲಿ ಒಬ್ಬ ಹೇಳಿದರೆ ಅಂತ ಕೊಹ್ಲಿಗೆ ತಲೆನೋವಾಗಿ ಪರಿಣಮಿಸಲಿದೆ.

ಇಂಥದಕ್ಕೆಲ್ಲ ಅವಕಾಶ ನೀಡಬಾರದೆಂದರೆ, ಟೀಮಿನ ಜೊತೆ ಶಾಸ್ತ್ರೀ ಯನ್ನು ಕಳಿಸದೆ ಕೇವಲ ಧೋನಿಯನ್ನು ಮಾತ್ರ ಕಳಿಸಿದರೆ, ಟೀಮಿಗೆ ಒಳ್ಳೆಯದಾಗಬಹುದು.

ಇದನ್ನೂ ಓದಿ:  Rashid Khan: ಟಿ20 ವಿಶ್ವಕಪ್​ಗೆ ಅಫ್ಘಾನ್ ತಂಡ ಪ್ರಕಟ: ನಾಯಕತ್ವಕ್ಕೆ ರಶೀದ್ ಖಾನ್ ರಾಜೀನಾಮೆ

ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು