AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BAN vs NZ: ನ್ಯೂಜಿಲೆಂಡ್ ವಿರುದ್ಧದ ಸರಣಿಯೂ ವಶ: ಒಂದೇ ತಿಂಗಳಲ್ಲಿ ಮೂರು ಸರಣಿ ಗೆದ್ದ ಬಾಂಗ್ಲಾದೇಶ

ನ್ಯೂಜಿಲೆಂಡ್ ಐದನೇ ಟಿ-20 ಪಂದ್ಯದಲ್ಲಿ 27 ರನ್​ಗಳ ಗೆಲುವು ಸಾಧಿಸಿತಾದರೂ ಬಾಂಗ್ಲಾ 2-3 ಅಂತರದ ಮುನ್ನಡೆಯಿದ್ದರಿಂದ ಸರಣಿ ವಶಪಡಿಸಿಕೊಂಡಿತು.

BAN vs NZ: ನ್ಯೂಜಿಲೆಂಡ್ ವಿರುದ್ಧದ ಸರಣಿಯೂ ವಶ: ಒಂದೇ ತಿಂಗಳಲ್ಲಿ ಮೂರು ಸರಣಿ ಗೆದ್ದ ಬಾಂಗ್ಲಾದೇಶ
BAN vs NZ
TV9 Web
| Updated By: Vinay Bhat|

Updated on: Sep 11, 2021 | 10:18 AM

Share

ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಆತಿಥೇಯ ಬಾಂಗ್ಲಾದೇಶ ತಂಡ (Bangladesh vs New Zealand ) 3-2 ಅಂತರದಿಂದ ಗೆದ್ದು ಸರಣಿ ವಶಪಡಿಸಿಕೊಂಡಿದೆ. ಈ ಮೂಲಕ ವಿಶೇಷ ಸಾಧನೆ ಮಾಡಿದೆ. ನಿನ್ನೆ ಕೊನೆಗೊಂಡ ಅಂತಿಮ ಐದನೇ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್ 27 ರನ್​ಗಳ ಗೆಲುವು ಸಾಧಿಸಿತು. ಆದರೂ ಬಾಂಗ್ಲಾ ಮೊದಲ ಪಂದ್ಯ, ಎರಡನೇ ಮತ್ತು ನಾಲ್ಕನೇ ಪಂದ್ಯದಲ್ಲಿ ಗೆದ್ದು ಬೀಗುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ.

ಶುಕ್ರವಾರ ನಡೆದ ಐದನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಓಪನರ್​ಗಳಾದ ಫಿಲ್ ಅಲೆನ್ (41) ಹಾಗೂ ರಚಿನಾ ರವೀಂದ್ರ (17) ಅರ್ಧಶತಕದ ಭರ್ಜರಿ ಆರಂಭ ಒದಗಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಟಾಮ್ ಲಾಥಮ್ ಅಜೇಯ ಆಟವಾಡಿದರು. 37 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಸಿಡಿಸಿ ಅಜೇಯ 50 ರನ್ ಬಾರಿಸಿದರು.

ಆದರೆ, ಇದರ ನಡುವೆ ಬಂದ ಬ್ಯಾಟ್ಸ್​ಮನ್​ಗಳು ಯಾರೂ ಹೆಚ್ಚು ಪರಿಣಾಮಕಾರಿಯಾಗಿ ಗೋಚರಿಸಿಲ್ಲ. ಅಂತಿಮ ಹಂತದಲ್ಲಿ ಹೆನ್ರಿ ನಿಕೋಲ್ಸ್ 20 ಹಾಗೂ ಮೆಕ್ ಕಾನ್ಚಿ ಅಜೇಯ 17 ರನ್ ಬಾರಿಸಿದರು. ಪರಿಣಾಮ ಇಂಗ್ಲೆಂಡ್ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿತು.

ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾದೇಶ ಈ ಬಾರಿ ನಿಧಾನಗತಿಯ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಮೊಹಮ್ಮದ್ ನೈಮ್ 21 ಎಸೆತಗಳಲ್ಲಿ 23 ರನ್ ಹಾಗೂ ಲಿಟನ್ ದಾಸ್ 12 ಎಸೆತಗಳಲ್ಲಿ 10 ರನ್ ಗಳಿಸಿ ಔಟ್ ಆದರು.

ಮಧ್ಯಮ ಕ್ರಮಾಂಕದಲ್ಲಿ ಅಸಿಫ್ ಹುಸೈನ್ 33 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಬಾರಿಸಿ ಅಜೇಯ 49 ರನ್ ಸಿಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾಯಕ ಮೊಹಮ್ಮದುಲ್ಲಾ 23 ರನ್ ಕೂಡ ಉಪಯೋಗಕ್ಕೆ ಬರಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ 8 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ನ್ಯೂಜಿಲೆಂಡ್ ಐದನೇ ಟಿ-20 ಪಂದ್ಯದಲ್ಲಿ 27 ರನ್​ಗಳ ಗೆಲುವು ಸಾಧಿಸಿತಾದರೂ ಬಾಂಗ್ಲಾ 2-3 ಅಂತರದ ಮುನ್ನಡೆಯಿದ್ದರಿಂದ ಸರಣಿ ವಶಪಡಿಸಿಕೊಂಡಿತು. ಈ ಮೂಲಕ ಬಾಂಗ್ಲಾದೇಶ ಒಂದೇ ತಿಂಗಳಲ್ಲಿ 3 ಸರಣಿಯನ್ನ ವಶಪಡಿಸಿಕೊಂಡು ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ.

ಇದಕ್ಕೂ ಮುನ್ನ ಬಾಂಗ್ಲಾದೇಶ ಟಿ-20 ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಈ ವೇಳೆ 3-0 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಬಾಂಗ್ಲಾ ಹುಲಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಇನ್ನೂ ಈ ಟೂರ್ನಿಯ ನಂತರ ತವರಿನಲ್ಲೇ ಆಸ್ಪ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಬಾಂಗ್ಲಾದೇಶ 4-1 ಅಂತರದಲ್ಲಿ ಭಾರೀ ಜಯಭೇರಿ ಭಾರಿಸಿತ್ತು.

Virat Kohli: ಟೆಸ್ಟ್ ಪಂದ್ಯ ರದ್ದು: ವಿರಾಟ್ ಕೊಹ್ಲಿಗಾಗಿ ಮ್ಯಾಂಚೆಸ್ಟರ್​​ಗೆ ಬರಲಿದೆ ಆರ್​ಸಿಬಿಯ ವಿಶೇಷ ವಿಮಾನ

India vs England: ಬಿಸಿಸಿಐಗೆ ತಲೆನೋವಾದ ರೋಹಿತ್, ಜಡೇಜಾ ಸೇರಿ ಟೀಮ್ ಇಂಡಿಯಾದ 6 ಸ್ಟಾರ್ ಆಟಗಾರರು

ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ