BCCI contracts: ರಹಾನೆ, ಪೂಜಾರ, ಹಾರ್ದಿಕ್​ಗೆ ಎ ಗ್ರೇಡ್​ನಿಂದ ಹಿಂಬಡ್ತಿ! ಉಳಿದಂತೆ ಗ್ರೇಡ್ ಲೆಕ್ಕಾಚಾರ ಹೀಗಿದೆ

| Updated By: ಪೃಥ್ವಿಶಂಕರ

Updated on: Mar 02, 2022 | 10:05 PM

BCCI contracts: ಈ ಹೊಸ ಒಪ್ಪಂದದಿಂದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಹಾರ್ದಿಕ್ ಈ ಹಿಂದೆ ಎ ಗ್ರೇಡ್‌ನಲ್ಲಿದ್ದರು. ಆದರೆ, ಈಗ ಅವರನ್ನು ಗ್ರೇಡ್ ಸಿಯಲ್ಲಿ ಇರಿಸಲಾಗಿದೆ.

BCCI contracts: ರಹಾನೆ, ಪೂಜಾರ, ಹಾರ್ದಿಕ್​ಗೆ ಎ ಗ್ರೇಡ್​ನಿಂದ ಹಿಂಬಡ್ತಿ! ಉಳಿದಂತೆ ಗ್ರೇಡ್ ಲೆಕ್ಕಾಚಾರ ಹೀಗಿದೆ
Follow us on

ಬಿಸಿಸಿಐ ಪ್ರತಿ ವರ್ಷ ಆಟಗಾರರೊಂದಿಗಿನ ವಾರ್ಷಿಕ ಒಪ್ಪಂದಗಳನ್ನು ಪ್ರಕಟಿಸುತ್ತದೆ. ಆದರೆ ಈ ಬಗ್ಗೆ ಬಿಸಿಸಿಐ (BCCI) ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, ಮೂಲಗಳ ಪ್ರಕಾರ ಎ+ ವರ್ಗದ ಆಟಗಾರರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ, ಟೆಸ್ಟ್ ತಂಡದ ದಿಗ್ಗಜ ಆಟಗಾರರಾದ ಚೇತೇಶ್ವರ್ ಪೂಜಾರ (Cheteshwar Pujara), ಅಜಿಂಕ್ಯ ರಹಾನೆ (Ajinkya Rahane) ಮತ್ತು ವೃದ್ಧಿಮಾನ್ ಸಹಾ (Wriddhiman Saha) ಈ ವಾರ್ಷಿಕ ಒಪ್ಪಂದದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಈ ಮೂವರು ಆಟಗಾರರ ಜತೆಗೆ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಎಲ್ಲಾ ಆಟಗಾರರು ಸದ್ಯ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ.

ಆಟಗಾರರನ್ನು 4 ಗ್ರೇಡ್‌ಗಳಾಗಿ ವಿಂಗಡಿಸಿದ ಬಿಸಿಸಿಐ
ವಾಸ್ತವವಾಗಿ ಬಿಸಿಸಿಐ ಆಟಗಾರರನ್ನು 4 ಗ್ರೇಡ್​ಗಳಾಗಿ ವಿಂಗಡಿಸುತ್ತದೆ. ಇದರಲ್ಲಿ ಗ್ರೇಡ್ ಎ+, ಗ್ರೇಡ್ ಎ, ಗ್ರೇಡ್ ಬಿ ಮತ್ತು ಗ್ರೇಡ್ ಸಿ ಎಂಬ ವಿಭಾಗಗಳಿವೆ. ಎಲ್ಲಾ ನಾಲ್ಕು ಗ್ರೇಡ್‌ಗಳ ಮೊತ್ತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಗ್ರೇಡ್ A+ ನಲ್ಲಿ ಮೂವರು ಆಟಗಾರರಿದ್ದಾರೆ. ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ವೇಗದ ಬೌಲರ್ ಬುಮ್ರಾ ಇದರಲ್ಲಿ ಸೇರಿದ್ದಾರೆ. ಇವರಿಗೆ ವಾರ್ಷಿಕ 7 ಕೋಟಿ ರೂ. ಸಂಭಾವನೆ ನೀಡಲಾಗುತ್ತದೆ. ನಂತರದ ಸ್ಥಾನದಲ್ಲಿರುವ ಎ ಗ್ರೇಡ್ ಆಟಗಾರರು 5 ಕೋಟಿ ರೂ. ಪಡೆಯಲಿದ್ದಾರೆ. ಹಾಗೆಯೇ ಬಿ ಗ್ರೇಡ್‌ನಲ್ಲಿರುವ ಆಟಗಾರರು 3 ಕೋಟಿ ರೂ. ಸಂಬಳ ಪಡೆಯುತ್ತಾರೆ. ಇದೇ ವೇಳೆ ಸಿ ಗ್ರೇಡ್ ಆಟಗಾರರಿಗೆ ಒಂದು ಕೋಟಿ ರೂ ಸಂಭಾವನೆ ನೀಡಲಾಗುತ್ತದೆ. ಜೊತೆಗೆ ಈ ಎಲ್ಲಾ ಆಟಗಾರರ ಹೊಸ ಒಪ್ಪಂದವು 1 ಅಕ್ಟೋಬರ್ 2021 ರಿಂದ ಸೆಪ್ಟೆಂಬರ್ 2022 ರವರೆಗೆ ಇರುತ್ತದೆ.

ಈ ಆಟಗಾರರಿಗೆ ನಷ್ಟ
ಕಳೆದ ವರ್ಷ ಬಿಸಿಸಿಐ ವಾರ್ಷಿಕ ಒಪ್ಪಂದವನ್ನು ಪ್ರಕಟಿಸಿದಾಗ ಪೂಜಾರ ಮತ್ತು ರಹಾನೆ ಗ್ರೇಡ್ ಎ ನಲ್ಲಿದ್ದರು. ಆದರೆ, ಹೊಸ ಒಪ್ಪಂದದಲ್ಲಿ ಇಬ್ಬರನ್ನೂ ಬಿ ಗ್ರೇಡ್‌ಗೆ ಸೇರಿಸಲಾಗಿದೆ. ಪೂಜಾರ ಮತ್ತು ರಹಾನೆ ಕೆಲವು ಸಮಯದಿಂದ ಕಳಪೆ ಫಾರ್ಮ್‌ನಲ್ಲಿ ಹೋರಾಡುತ್ತಿದ್ದಾರೆ. ಅಲ್ಲದೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಆಯ್ಕೆಯಾಗಿಲ್ಲ. ಇತ್ತೀಚೆಗಷ್ಟೇ ವಿವಾದಕ್ಕೆ ಸಿಲುಕಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅವರನ್ನು ಬಿಸಿಸಿಐ ಕೆಳಗಿಳಿಸಿದೆ. ಈ ಹೊಸ ಒಪ್ಪಂದದಿಂದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಹಾರ್ದಿಕ್ ಈ ಹಿಂದೆ ಎ ಗ್ರೇಡ್‌ನಲ್ಲಿದ್ದರು. ಆದರೆ, ಈಗ ಅವರನ್ನು ಗ್ರೇಡ್ ಸಿಯಲ್ಲಿ ಇರಿಸಲಾಗಿದೆ. ಹಾರ್ದಿಕ್ ಗಾಯದ ಕಾರಣ ತಂಡದಿಂದ ಬಹಳ ಸಮಯದಿಂದ ಹೊರಗುಳಿದಿದ್ದಾರೆ. ಟೀಂ ಇಂಡಿಯಾದಲ್ಲಿ ಹಾರ್ದಿಕ್ ಬದಲಿಗೆ ವೆಂಕಟೇಶ್ ಅಯ್ಯರ್ ಆಲ್ ರೌಂಡರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:IND vs SL: ಐತಿಹಾಸಿಕ ಮೊಹಾಲಿ ಟೆಸ್ಟ್​ನಲ್ಲಿ ಕಪಿಲ್​ ದೇವ್ ದಾಖಲೆ ಮುರಿಯಲು ಸಜ್ಜಾದ ಅಶ್ವಿನ್.!