Virat Kohli 100th Test: ಕೊಹ್ಲಿ ಆಟ ಬದಲಾಗಿದ್ದು ಆ ಪ್ರವಾಸದಿಂದ; ವಿರಾಟ್ ವೃತ್ತಿ ಬದುಕಿನ​ ಬಗ್ಗೆ ಗಂಗೂಲಿ ಮಾತು

Virat Kohli 100th Test: ಕಳೆದ ಎರಡು ವರ್ಷಗಳಿಂದ ಅವರು ಶತಕ ಬಾರಿಸಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂದು ನನಗೆ ತಿಳಿದಿದೆ. ಆದರೆ ಅವರೊಬ್ಬ ಶ್ರೇಷ್ಠ ಆಟಗಾರ, ಅವರು ಶೀಘ್ರದಲ್ಲೇ ಈ ಬರವನ್ನು ನಿವಾರಿಸಲಿದ್ದಾರೆ. ಅವರಿಗೆ ಹೇಗೆ ಶತಕ ಬಾರಿಸಬೇಕೆಂಬುದು ಗೊತ್ತು, ಇಲ್ಲದಿದ್ದರೆ 70 ಶತಕಗಳನ್ನು ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

Virat Kohli 100th Test: ಕೊಹ್ಲಿ ಆಟ ಬದಲಾಗಿದ್ದು ಆ ಪ್ರವಾಸದಿಂದ; ವಿರಾಟ್ ವೃತ್ತಿ ಬದುಕಿನ​ ಬಗ್ಗೆ ಗಂಗೂಲಿ ಮಾತು
ಕೊಹ್ಲಿ, ಗಂಗೂಲಿ
Follow us
TV9 Web
| Updated By: ಪೃಥ್ವಿಶಂಕರ

Updated on: Mar 02, 2022 | 8:10 PM

ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ವಿರಾಟ್ ಕೊಹ್ಲಿಗೆ ತುಂಬಾ ವಿಶೇಷವಾಗಿದೆ. ವಾಸ್ತವವಾಗಿ ವಿರಾಟ್ ಕೊಹ್ಲಿ (Virat Kohli) ಕನಸು ಮೊಹಾಲಿಯಲ್ಲಿ ನನಸಾಗಲಿದೆ. ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ 100 ನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಪ್ರತಿಯೊಬ್ಬ ಆಟಗಾರನ ಕನಸು 100 ಟೆಸ್ಟ್ ಪಂದ್ಯಗಳನ್ನು ಆಡಬೇಕೆಂಬುದಾಗಿದ್ದು ವಿರಾಟ್ ಕೊಹ್ಲಿಯ ಆ ಕನಸು ಈಗ ನನಸಾಗುತ್ತಿದೆ. ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮೊಹಾಲಿಯಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಬರಲು ಅವಕಾಶ ನೀಡಲಾಗಿದೆ ಎಂಬ ಶುಭ ಸುದ್ದಿಯೂ ಬಂದಿದೆ. ಈ ಮೊದಲು ಮೊಹಾಲಿ ಟೆಸ್ಟ್‌ನಲ್ಲಿ ಪ್ರೇಕ್ಷಕರ ಮೇಲೆ ನಿಷೇಧವಿತ್ತು ಆದರೆ ಬಿಸಿಸಿಐ (BCCI) ಮುಖ್ಯಸ್ಥ ಸೌರವ್ ಗಂಗೂಲಿ (Sourav Ganguly) ಅದನ್ನು ಬದಲಾಯಿಸಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಸೌರವ್ ಗಂಗೂಲಿ ಕೂಡ ಒಂದು ದೊಡ್ಡ ಮಾತನ್ನು ಹೇಳಿದ್ದಾರೆ.

ವಿರಾಟ್ ಕೊಹ್ಲಿಗೆ 100 ನೇ ಟೆಸ್ಟ್ ನಿಜವಾದ ಅನನ್ಯ ಮತ್ತು ಎಂದಿಗೂ ಮರೆಯಲಾಗದ ಕ್ಷಣವಾಗಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಇದರೊಂದಿಗೆ ಈ ದಿಗ್ಗಜ ಆಟಗಾರನ ಶತಕಗಳ ಬರ ಕೂಡ ಶೀಘ್ರವೇ ನೀಗಲಿದೆ ಎಂದು ಗಂಗೂಲಿ ಭರವಸೆ ವ್ಯಕ್ತಪಡಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಜೊತೆಗಿನ ಸಂವಾದದಲ್ಲಿ ಸೌರವ್ ಗಂಗೂಲಿ, ‘ವಿರಾಟ್ ಕೊಹ್ಲಿ ಶೀಘ್ರದಲ್ಲೇ ಶತಕ ಬಾರಿಸುತ್ತಾರೆ. ಕಳೆದ ಎರಡು ವರ್ಷಗಳಿಂದ ಅವರು ಶತಕ ಬಾರಿಸಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂದು ನನಗೆ ತಿಳಿದಿದೆ. ಆದರೆ ಅವರೊಬ್ಬ ಶ್ರೇಷ್ಠ ಆಟಗಾರ, ಅವರು ಶೀಘ್ರದಲ್ಲೇ ಈ ಬರವನ್ನು ನಿವಾರಿಸಲಿದ್ದಾರೆ. ಅವರಿಗೆ ಹೇಗೆ ಶತಕ ಬಾರಿಸಬೇಕೆಂಬುದು ಗೊತ್ತು, ಇಲ್ಲದಿದ್ದರೆ 70 ಶತಕಗಳನ್ನು ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

ವಿರಾಟ್ ಕೊಹ್ಲಿಯ ವೃತ್ತಿಜೀವನ ಬದಲಾಗಿದ್ದು ಆ ಪಂದ್ಯದಿಂದ ಮುಂದುವರೆದು ಮಾತನಾಡಿದ ಗಂಗೂಲಿ, ವಿರಾಟ್ ಜೊತೆ ಆಡಿಲ್ಲ ಆದರೆ ಅವರ ಆಟವನ್ನು ಹತ್ತಿರದಿಂದ ನೋಡಿದ್ದೇನೆ. ನಾನು ವಿರಾಟ್ ಜೊತೆ ಆಡಿಲ್ಲ ಆದರೆ ಅವರ ಆಟವನ್ನು ನೋಡಿದ್ದೇನೆ. ನಾನು ಅವರ ವೃತ್ತಿಜೀವನದ ಆರಂಭವನ್ನು ನೋಡಿದ್ದೇನೆ. ಜೊತೆಗೆ ಈಗ ಅವರು ಹೇಗೆ ಶ್ರೇಷ್ಠ ಆಟಗಾರರಾದರು ಎಂಬುದರ ಸಂಪೂರ್ಣ ಪ್ರಯಾಣವನ್ನು ನಾನು ನೋಡಿದೆ. ಅವರ ತಂತ್ರಗಾರಿಕೆ, ಸಕಾರಾತ್ಮಕತೆ, ಕಾಲ್ಚಳಕ, ಸಮತೋಲನ ನಿಜಕ್ಕೂ ಅದ್ಭುತ. 2014ರ ಇಂಗ್ಲೆಂಡ್ ಪ್ರವಾಸದ ನಂತರ ವಿರಾಟ್ ಕೊಹ್ಲಿ ಆಟ ಸಂಪೂರ್ಣ ಬದಲಾಗಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಗಂಗೂಲಿ, 2014ರ ಇಂಗ್ಲೆಂಡ್ ಪ್ರವಾಸದ ನಂತರ ವಿರಾಟ್ ಕೊಹ್ಲಿ ತಮ್ಮ ಆಟವನ್ನು ಬದಲಾಯಿಸಿದರು. ಕೊಹ್ಲಿ ಇಂಗ್ಲೆಂಡ್‌ ಪ್ರವಾಸದಲ್ಲಿ ಎಷ್ಟು ಕಷ್ಟಪಡುತ್ತಿದ್ದರು ಎಂಬುದನ್ನು ನಾನು ನೋಡಿದ್ದೆ, ಏಕೆಂದರೆ ನಾನು ಆ ಸರಣಿಯಲ್ಲಿ ಕಾಮೆಂಟೇಟರ್ ಆಗಿದ್ದೆ. ಇದಾದ ನಂತರ ವಿರಾಟ್ ಕೊಹ್ಲಿ ಮುಂದಿನ ಐದು ವರ್ಷಗಳ ಕಾಲ ವಿಶ್ವ ಕ್ರಿಕೆಟ್ ಅನ್ನು ಆಳಿದರು. ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಕೂಡ ತಮ್ಮ ವೃತ್ತಿ ಜೀವನದಲ್ಲಿ ಇಂತಹ ಅದ್ಭುತ ದಿನಗಳನ್ನು ಕಂಡಿದ್ದಾರೆ ಎಂದಿದ್ದಾರೆ.

ವಿರಾಟ್ ಕೊಹ್ಲಿ 100 ನೇ ಟೆಸ್ಟ್ ಅನ್ನು ವಿಶೇಷ ಮಾಡುತ್ತಾರೆಯೇ? ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಶತಕದ ಬರವನ್ನು ವಿರಾಟ್ ಕೊಹ್ಲಿ 100ನೇ ಟೆಸ್ಟ್ ನಲ್ಲಿ ಪೂರ್ಣಗೊಳಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ವಿರಾಟ್ ಅಭಿಮಾನಿಗಳು ಇದ್ದಾರೆ. ಇಲ್ಲಿಯವರೆಗೆ ಯಾವುದೇ ಭಾರತೀಯ ಕ್ರಿಕೆಟಿಗನು ತನ್ನ 100 ನೇ ಟೆಸ್ಟ್‌ನಲ್ಲಿ ಶತಕ ಗಳಿಸಿಲ್ಲ. ಆಸ್ಟ್ರೇಲಿಯಾ ಪರ ರಿಕಿ ಪಾಂಟಿಂಗ್, ಪಾಕಿಸ್ತಾನಕ್ಕೆ ಇಂಜಮಾಮ್ ಮತ್ತು ಜಾವೇದ್ ಮಿಯಾಂದಾದ್ ಈ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಜೋ ರೂಟ್ ತಮ್ಮ 100ನೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದರು.

ಇದನ್ನೂ ಓದಿ:ಕಂಠಪೂರ್ತಿ ಕುಡಿದು ರಸ್ತೆಯಲ್ಲೇ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ರಂಪಾಟ! ವಿಡಿಯೋ ಸಖತ್ ವೈರಲ್