ಕಂಠಪೂರ್ತಿ ಕುಡಿದು ರಸ್ತೆಯಲ್ಲೇ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ರಂಪಾಟ! ವಿಡಿಯೋ ಸಖತ್ ವೈರಲ್

Vinod kambli: ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯ ಮತ್ತು ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರು ಕ್ರಿಕೆಟ್‌ಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಭಾನುವಾರ ಮಧ್ಯಾಹ್ನ, ಮುಂಬೈನ ತನ್ನ ಸೊಸೈಟಿಯ ಗೇಟ್‌ನಲ್ಲಿ ಕಾಂಬ್ಳಿ ಒಂದು ಕಾರಿಗೆ ಡಿಕ್ಕಿ ಹೊಡೆದು, ಅಲ್ಲಿನ ನಾಗರೀಕರೊಂದಿಗೆ ರಂಪಾಟ ಮಾಡಿದ್ದರು.

ಕಂಠಪೂರ್ತಿ ಕುಡಿದು ರಸ್ತೆಯಲ್ಲೇ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ರಂಪಾಟ! ವಿಡಿಯೋ ಸಖತ್ ವೈರಲ್
ವಿನೋದ್ ಕಾಂಬ್ಳಿ
Follow us
TV9 Web
| Updated By: ಪೃಥ್ವಿಶಂಕರ

Updated on: Mar 02, 2022 | 6:03 PM

ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಬಾಲ್ಯದ ಗೆಳೆಯ ಮತ್ತು ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ (Vinod Kambli) ಅವರು ಕ್ರಿಕೆಟ್‌ಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಭಾನುವಾರ ಮಧ್ಯಾಹ್ನ, ಮುಂಬೈನ ತನ್ನ ಸೊಸೈಟಿಯ ಗೇಟ್‌ನಲ್ಲಿ ಕಾಂಬ್ಳಿ ಒಂದು ಕಾರಿಗೆ ಡಿಕ್ಕಿ ಹೊಡೆದು, ಅಲ್ಲಿನ ನಾಗರೀಕರೊಂದಿಗೆ ರಂಪಾಟ ಮಾಡಿದ್ದರು. ಅದೇ ಆರೋಪದ ಮೇಲೆ ಕಾಂಬ್ಳಿ ಅವರನ್ನು ಮುಂಬೈ ಪೊಲೀಸರು (Mumbai Police) ಭಾನುವಾರ ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ನಡುವೆ ವಿನೋದ್ ಕಾಂಬ್ಳಿ ಅಂದಿನ ಪರಿಸ್ಥಿತಿಯನ್ನು ತೋರಿಸುವ ವಿಡಿಯೋ ಇದೀಗ ವೈರಲ್ ಆಗಿದೆ. ಕೆಂಪು ಟಿ-ಶರ್ಟ್ ಮತ್ತು ಹಾಫ್ ಪ್ಯಾಂಟ್ ಧರಿಸಿರುವ ಕಾಂಬ್ಳಿ ಅವರ ರಂಪಾಟವನ್ನು ಈ ವೀಡಿಯೊದಲ್ಲಿ ನೋಡಬಹುದಾಗಿದೆ. ವಿನೋದ್ ಕುಡಿದ ಅಮಲಿನಲ್ಲಿ ಕಾರೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಕಂಠಪೂರ್ತಿ ಕುಡಿದಿದ್ದ ವಿನೋದ್‌ಗೆ ಸರಿಯಾಗಿ ನಡೆಯಲು ಕೂಡ ಸಾಧ್ಯವಾಗುತ್ತಿರಲಿಲ್ಲ ಎಂಬುದು ವಿಡಿಯೋದಲ್ಲಿ ಸೆರೆಯಾಗಿದೆ.

ವಿನೋದ್ ಕಾಂಬ್ಳಿ ವಿರುದ್ಧ ಐಪಿಸಿಯ ಸೆಕ್ಷನ್ 279 (ಅಜಾಗರೂಕತೆಯಿಂದ ಚಾಲನೆ), ಸೆಕ್ಷನ್ 336 ಮತ್ತು ಸೆಕ್ಷನ್ 427 ರ ಅಡಿಯಲ್ಲಿ ಇನ್ನೊಬ್ಬರ ಜೀವಕ್ಕೆ ಅಪಾಯವನ್ನುಂಟುಮಾಡುವ ಆರೋಪ ಹೊರಿಸಲಾಗಿದೆ. ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿ ಈ ಮಾಹಿತಿ ನೀಡಿದ್ದರು. ಈ ಬಗ್ಗೆ ಪಿಟಿಐ ಮಾಹಿತಿ ನೀಡಿತ್ತು. ಬಂಧನದ ನಂತರ ಕಾಂಬ್ಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಮುಂಬೈ ಪೊಲೀಸರು, ವಿನೋದ್ ಕಾಂಬ್ಳಿ ಅವರನ್ನು ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಅವರ ವೈದ್ಯಕೀಯ ಪರೀಕ್ಷೆಯನ್ನು ಭಾಭಾ ಆಸ್ಪತ್ರೆಯಲ್ಲಿ ನಡೆಸಲಾಗಿದೆ ಮತ್ತು ಅವರ ರಕ್ತದ ಮಾದರಿಯನ್ನು ಸಿಎಗೆ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು.

ವಾಚ್‌ಮನ್ ಮತ್ತು ನಿವಾಸಿಗಳೊಂದಿಗೆ ರಂಪಾಟ

ಕಾರು ಅಪಘಾತವಾದ ನಂತರ ವಿನೋದ್ ಕಾಂಬ್ಳಿ ವಾಚ್‌ಮನ್ ಮತ್ತು ಕಾಂಪ್ಲೆಕ್ಸ್‌ನ ಕೆಲವು ನಿವಾಸಿಗಳೊಂದಿಗೆ ವಾಗ್ವಾದ ನಡೆಸಿದ ವಿಡಿಯೋ ಕೂಡ ಸಖತ್ ವೈರಲ್ ಆಗುತ್ತಿದೆ.

ಸೈಬರ್ ವಂಚನೆ

ಕೆಲ ತಿಂಗಳ ಹಿಂದೆಯಷ್ಟೇ ಕಾಂಬ್ಳಿ ಬೇರೆ ಕಾರಣಕ್ಕೆ ಸುದ್ದಿಯಾಗಿದ್ದರು. ಡಿಸೆಂಬರ್ 2021 ರಲ್ಲಿ, ಸೈಬರ್ ವಂಚನೆಗೆ ಮಾಜಿ ಎಡಗೈ ಬ್ಯಾಟ್ಸ್‌ಮನ್ ಕಾಂಬ್ಳಿ ಬಲಿಯಾಗಿದ್ದರು. ತಮ್ಮ ಖಾತೆಯಿಂದ ಒಂದು ಲಕ್ಷ ರೂಪಾಯಿ ಹಣ ಡ್ರಾ ಆಗಿದೆ ಎಂದು ಹೇಳಿ ಕಾಂಬ್ಳಿ ಬಾಂದ್ರಾ ಪೊಲೀಸರಿಗೆ ದೂರು ನೀಡಿದ್ದರು.

ಕಾಂಬ್ಳಿ ಅವರ ವೃತ್ತಿಜೀವನ

ವಿನೋದ್ ಕಾಂಬ್ಳಿ 1990 ರ ದಶಕದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು ಮತ್ತು ದೀರ್ಘಕಾಲದವರೆಗೆ ತಂಡದ ಭಾಗವಾಗಿದ್ದರು. ಅವರು 17 ಟೆಸ್ಟ್‌ಗಳಲ್ಲಿ 54 ರ ಸರಾಸರಿಯಲ್ಲಿ 1084 ರನ್ ಗಳಿಸಿದರು, ಇದರಲ್ಲಿ 4 ಶತಕಗಳು ಸೇರಿವೆ. ಅದೇ ಸಮಯದಲ್ಲಿ, 104 ODIಗಳಲ್ಲಿ, ಅವರ ಬ್ಯಾಟ್‌ನಿಂದ 2477 ರನ್ ಹರಿದುಬಂದಿವೆ. ಇದರಲ್ಲಿ ಅವರು 2 ಶತಕ ಮತ್ತು 14 ಅರ್ಧ ಶತಕಗಳನ್ನು ಗಳಿಸಿದರು.

ಇದನ್ನೂ ಓದಿ:ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಸಚಿನ್ ಬಾಲ್ಯ ಸೇಹಿತ ವಿನೋದ್ ಕಾಂಬ್ಳಿಯನ್ನು ಬಂಧಿಸಿದ ಮುಂಬೈ ಪೊಲೀಸರು..!

ರಾತ್ರಿ ಬಾರ್​ಗೆ ಕನ್ನ ಹಾಕಿ 2 ಆಲ್ಕೋಹಾಲ್ ಬಾಟಲಿಯನ್ನು ಕದ್ದ ಕಳ್ಳ!
ರಾತ್ರಿ ಬಾರ್​ಗೆ ಕನ್ನ ಹಾಕಿ 2 ಆಲ್ಕೋಹಾಲ್ ಬಾಟಲಿಯನ್ನು ಕದ್ದ ಕಳ್ಳ!
ರಂಗಾಯಣ ರಘು ಪಾತ್ರಕ್ಕೆ ಹೊಸ ಭಾಷೆ ಸೃಷ್ಟಿ ಮಾಡಿದ ಯೋಗರಾಜ್​ ಭಟ್
ರಂಗಾಯಣ ರಘು ಪಾತ್ರಕ್ಕೆ ಹೊಸ ಭಾಷೆ ಸೃಷ್ಟಿ ಮಾಡಿದ ಯೋಗರಾಜ್​ ಭಟ್
ಸಿಎಂ, ಡಿಸಿಎಂ ಸಿಡಬ್ಲ್ಯೂಸಿ ಸಭೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದಾರೆ: ಜಮೀರ್
ಸಿಎಂ, ಡಿಸಿಎಂ ಸಿಡಬ್ಲ್ಯೂಸಿ ಸಭೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದಾರೆ: ಜಮೀರ್
ನಂಜನಗೂಡು ಶ್ರೀಕಂಠೇಶ್ವರ ಕೋಟಿ ಒಡೆಯ, ನಾಲ್ಕೈದು ದೇಶ ಕರೆನ್ಸಿ ಪತ್ತೆ!
ನಂಜನಗೂಡು ಶ್ರೀಕಂಠೇಶ್ವರ ಕೋಟಿ ಒಡೆಯ, ನಾಲ್ಕೈದು ದೇಶ ಕರೆನ್ಸಿ ಪತ್ತೆ!
ಶೋಷಿತ ಸಮುದಾಯಗಳ ಒಕ್ಕೂಟ ಮತ್ತು ಕೆಪಿಸಿಸಿ ಸಂಯುಕ್ತ ಆಶ್ರಯದಲ್ಲಿ ಸಮಾವೇಶ
ಶೋಷಿತ ಸಮುದಾಯಗಳ ಒಕ್ಕೂಟ ಮತ್ತು ಕೆಪಿಸಿಸಿ ಸಂಯುಕ್ತ ಆಶ್ರಯದಲ್ಲಿ ಸಮಾವೇಶ
ಸಿದ್ದರಾಮಯ್ಯ ಸರ್ಕಾರಕ್ಕೆ ಹಿಂದೂಗಳನ್ನು ಕಂಡರಾಗಲ್ಲ, ಅಲರ್ಜಿ: ಅಶೋಕ
ಸಿದ್ದರಾಮಯ್ಯ ಸರ್ಕಾರಕ್ಕೆ ಹಿಂದೂಗಳನ್ನು ಕಂಡರಾಗಲ್ಲ, ಅಲರ್ಜಿ: ಅಶೋಕ
ಬಾಯ್ಮುಚ್ಚಿಕೊಂಡಿರುವಂತೆ ಬಸನಗೌಡ ಯತ್ನಾಳ್​ರನ್ನು ಎಚ್ಚರಿಸಿದ ರೇಣುಕಾಚಾರ್ಯ
ಬಾಯ್ಮುಚ್ಚಿಕೊಂಡಿರುವಂತೆ ಬಸನಗೌಡ ಯತ್ನಾಳ್​ರನ್ನು ಎಚ್ಚರಿಸಿದ ರೇಣುಕಾಚಾರ್ಯ
ಅಂಗವಿಕಲರ ಅನುದಾನ ಗ್ಯಾರಂಟಿಗಳಿಗೆ ಬಳಕೆ: ಸರ್ಕಾರದ ವಿರುದ್ಧ ಮತ್ತೊಂದು ಆರೋಪ
ಅಂಗವಿಕಲರ ಅನುದಾನ ಗ್ಯಾರಂಟಿಗಳಿಗೆ ಬಳಕೆ: ಸರ್ಕಾರದ ವಿರುದ್ಧ ಮತ್ತೊಂದು ಆರೋಪ
ಮಂಜು ವಿರುದ್ಧ ತಂತ್ರ ರೂಪಿಸಿದ ರಜತ್, ತ್ರಿವಿಕ್ರಮ್; ಸಾಥ್ ಕೊಟ್ಟ ಭವ್ಯಾ
ಮಂಜು ವಿರುದ್ಧ ತಂತ್ರ ರೂಪಿಸಿದ ರಜತ್, ತ್ರಿವಿಕ್ರಮ್; ಸಾಥ್ ಕೊಟ್ಟ ಭವ್ಯಾ
ಸಾಲ ಸಿಗದಿದ್ದರೆ ರೈತ ಸಂಕಷ್ಟ ಮತ್ತು ಶೋಷಣೆಗೆ ಒಳಗಾಗುತ್ತಾನೆ: ಸಿದ್ದರಾಮಯ್ಯ
ಸಾಲ ಸಿಗದಿದ್ದರೆ ರೈತ ಸಂಕಷ್ಟ ಮತ್ತು ಶೋಷಣೆಗೆ ಒಳಗಾಗುತ್ತಾನೆ: ಸಿದ್ದರಾಮಯ್ಯ