19 ಸಿಕ್ಸ್, 192 ರನ್​: ಅಬ್ಬರಿಸಿದ ಸುನಿಲ್ ನರೈನ್-ಜೇಸನ್ ಮೊಹಮ್ಮದ್..!

Sunil Narine-Jason Mohammed: ಈ ಬೃಹತ್ ಗುರಿ ಬೆನ್ನತ್ತಿದ ಕೊಕಿರೊ ಕ್ಯಾವಲಿಯರ್ಸ್ ತಂಡವು ಬಿರುಸಿನ ಆರಂಭ ಪಡೆದಿತ್ತು. ಇದಾಗ್ಯೂ ಅಂತಿಮವಾಗಿ 10 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 107 ರನ್​ಗಳಿಸಲಷ್ಟೇ ಶಕ್ತರಾದರು.

19 ಸಿಕ್ಸ್, 192 ರನ್​: ಅಬ್ಬರಿಸಿದ ಸುನಿಲ್ ನರೈನ್-ಜೇಸನ್ ಮೊಹಮ್ಮದ್..!
Sunil Narine-Jason Mohammed
Follow us
TV9 Web
| Updated By: ಝಾಹಿರ್ ಯೂಸುಫ್

Updated on: Mar 02, 2022 | 5:23 PM

ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿರುವ ಟ್ರಿನಿಡಾಡ್ ಟಿ10 ಬ್ಲಾಸ್ಟ್​ ಟೂರ್ನಿಯಲ್ಲಿ ಸ್ಟಾರ್ ಆಟಗಾರ ಸುನಿಲ್ ನರೈನ್ ಹಾಗೂ ಜೇಸನ್ ಮೊಹಮ್ಮದ್ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಕೊಕಿರೊ ಕ್ಯಾವಲಿಯರ್ಸ್ ತಂಡದ ವಿರುದ್ದದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕೋವಾ ಕಿಂಗ್ಸ್ ಪರ ಸುನಿಲ್ ನರೈನ್ ಹಾಗೂ ಜೇಸನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ನರೈನ್ ಕ್ಯಾವಲಿಯರ್ಸ್ ಬೌಲರುಗಳ ಬೆಂಡೆತ್ತಿದರು. ಮತ್ತೊಂದಡೆ ಜೇಸನ್ ಮೊಹಮ್ಮದ್ 33 ಎಸೆತಗಳಲ್ಲಿ 11 ಸಿಕ್ಸರ್​ ಸಿಡಿಸುವ ಮೂಲಕ 93 ರನ್​ ಬಾರಿಸಿ ಅಬ್ಬರಿಸಿದರು. ಇನ್ನು ಕೇವಲ 22 ಎಸೆತಗಳಲ್ಲಿ 6 ಸಿಕ್ಸ್​ ಹಾಗೂ 3 ಬೌಂಡರಿಯೊಂದಿಗೆ ಅಜೇಯ 68 ರನ್ ಬಾರಿಸುವ ಮೂಲಕ ಸುನಿಲ್ ನರೈನ್ ತಂಡದ ಮೊತ್ತವನ್ನು 10 ಓವರ್​ಗಳಲ್ಲಿ ಒಂದು ವಿಕೆಟ್​ ನಷ್ಟಕ್ಕೆ ತಂಡದ ಮೊತ್ತವನ್ನು 192 ಕ್ಕೆ ತಂದು ನಿಲ್ಲಿಸಿದರು.

ಈ ಬೃಹತ್ ಗುರಿ ಬೆನ್ನತ್ತಿದ ಕೊಕಿರೊ ಕ್ಯಾವಲಿಯರ್ಸ್ ತಂಡವು ಬಿರುಸಿನ ಆರಂಭ ಪಡೆದಿತ್ತು. ಇದಾಗ್ಯೂ ಅಂತಿಮವಾಗಿ 10 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 107 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ 85 ರನ್​ಗಳ ಭರ್ಜರಿ ಜಯ ಸಾಧಿಸಿತು. ಸ್ಕೋವಾ ಕಿಂಗ್ಸ್ ಪರ ಚೆಡಿಯನ್ ರೇಮಂಡ್ 2 ಓವರ್ ಗಳಲ್ಲಿ 13 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.

ನಿಕೋಲಸ್ ಪೂರನ್-ಎವಿನ್ ಲೆವಿಸ್ ಅಬ್ಬರ: ಸುನಿಲ್ ನರೈನ್ ಮತ್ತು ಜೇಸನ್ ಮೊಹಮ್ಮದ್ ಮೊದಲು, ನಿಕೋಲಸ್ ಪೂರನ್ ಮತ್ತು ಎವಿನ್ ಲೆವಿಸ್ ಕೂಡ T10 ಬ್ಲಾಸ್ಟ್‌ನಲ್ಲಿ ಅಬ್ಬರಿಸಿದ್ದಾರೆ. ಲೆದರ್‌ಬ್ಯಾಕ್ ಜೈಂಟ್ಸ್ ಪರ ಆಡುತ್ತಿರುವ ನಿಕೋಲಸ್ ಪೂರನ್ ಕೇವಲ 37 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿ ಮಿಂಚಿದ್ದರು. ಈ ವೇಳೆ ಪೂರನ್ 10 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಬಾರಿಸಿದ್ದರು. ಇನ್ನು ಟಿ10 ಬ್ಲಾಸ್ಟ್‌ನಲ್ಲಿ ಎವಿನ್ ಲೂಯಿಸ್ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(Sunil Narine-Jason Mohammed smashed 19 sixes scores 165 runs in just 48 balls Trinidad T10 Blast)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ